• Home
  • »
  • News
  • »
  • lifestyle
  • »
  • ಕಣ್ಣುಗಳ ಆರೋಗ್ಯ ಕಾಪಾಡಲು ಈ ಸಲಹೆಗಳನ್ನು ಪಾಲಿಸಿ

ಕಣ್ಣುಗಳ ಆರೋಗ್ಯ ಕಾಪಾಡಲು ಈ ಸಲಹೆಗಳನ್ನು ಪಾಲಿಸಿ

Eyes

Eyes

ಲ್ಯಾಪ್‌ಟಾಪ್ ಇತ್ಯಾದಿಗಳಲ್ಲಿ ಕೆಲಸ ಮಾಡುವ ಜನರು ಕಣ್ಣಿನ ರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಇದರೊಂದಿಗೆ, ಕಣ್ಣಿನಲ್ಲಿ ಬರುವ ಸಮಸ್ಯೆಗಳ ಬಗ್ಗೆ ನೀವು ಮೊದಲೇ ತಿಳಿಯುವಿರಿ.

  • Share this:

    ಕಣ್ಣುಗಳು...ಮನುಷ್ಯನ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದು. ಹೀಗಾಗಿಯೇ ಇದರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಅದರಲ್ಲೂ ಇಂದು ಮೊಬೈಲ್ ಮತ್ತು ಇತರೆ ಗ್ಯಾಜೆಟ್​ಗಳ ವೀಕ್ಷಣೆಯಿಂದ ಕಣ್ಣುಗಳ ಮೇಲೆ ದುಷ್ಫರಿಣಾಮಗಳೇ ಹೆಚ್ಚು. ಇಂತಹ ಸಮಯದಲ್ಲಿ ನಾವು ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಆರೋಗ್ಯಕರ ಜೀವನಶೈಲಿಯು ಕಣ್ಣಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಕೆಲವು ಪೋಷಕಾಂಶಗಳು ಬಹಳ ಮುಖ್ಯವಾದರೆ, ಕೆಲವು ಮುನ್ನೆಚ್ಚರಿಕೆಗಳು ಸಹ ಅಷ್ಟೇ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ ಕಣ್ಣುಗಳನ್ನು ಆರೋಗ್ಯವಾಗಿಡಲು ಕೆಲ ಸಲಹೆಗಳನ್ನು ಅನುಸರಿಸಬಹುದು.


    ಪೌಷ್ಠಿಕ ಆಹಾರ: ಆಧುನಿಕ ಜೀವನ ಶೈಲಿಯಲ್ಲಿ ಆಹಾರ ಪದ್ಧತಿಗಳೇ ಬದಲಾಗಿವೆ. ಅನೇಕ ರೀತಿಯ ಕಾಯಿಲೆಗಳಿಗೆ ತುತ್ತಾಗಲು ಇದು ಕಾರಣ. ಹಾಗೆಯೇ ಇಂತಹ ಜೀವನ ಶೈಲಿ ಕಣ್ಣುಗಳ ಮೇಲೂ ಪರಿಣಾಮ ಬೀರಲು ಪ್ರಾರಂಭಿಸಿದೆ. ಹೀಗಾಗಿ ಕಣ್ಣಿನ ಆರೋಗ್ಯಕ್ಕೆ ಪೌಷ್ಠಿಕ ಮತ್ತು ಸಮತೋಲಿತ ಆಹಾರವು ಬಹಳ ಮುಖ್ಯ. ನಿಮ್ಮ ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳು, ಮೀನು, ಮೊಟ್ಟೆ, ತುಪ್ಪ, ಬೀಜಗಳು, ಬೀನ್ಸ್, ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳನ್ನು ಸೇರಿಸಿ.


    ನೇರಳಾತೀತ ಕಿರಣ: ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದ್ದರಿಂದ, ನೀವು ಬಿಸಿಲಿನಲ್ಲಿದ್ದಾಗಲೆಲ್ಲಾ, ನಿಮ್ಮ ಕಣ್ಣುಗಳ ಕಾಳಜಿವಹಿಸಿ. ಮುಖ್ಯವಾಗಿ ಯುವಿ ಪ್ರೊಟೆಕ್ಟರ್ ಗ್ಲಾಸ್‌ಗಳನ್ನು ಬಳಸಿ. ಏಕೆಂದರೆ ಈ ಹಾನಿಕಾರಕ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಕಣ್ಣಿನ ಪೊರೆ ಮೇಲೆ ಪರಿಣಾಮ ಬೀರಬಹುದು.


    ಗೆಜೆಟ್​ಗಳಿಂದ ಸಾಧ್ಯವಾದಷ್ಟು ದೂರವಿರಿ: ನೀವು ಹೆಚ್ಚಿನ ಸಮಯವನ್ನು ಫೋನ್ ನೋಡುವುದರಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡಿ. ಮೊಬೈಲ್ ಡಿಸ್​ಪ್ಲೇ ಅನ್ನು ದೀರ್ಘಕಾಲದವರೆಗೆ ನೋಡುವುದರಿಂದ ದೃಷ್ಟಿ ಮಸುಕಾಗುತ್ತದೆ. ಮತ್ತೊಂದೆಡೆ, ನೀವು ಲ್ಯಾಪ್‌ಟಾಪ್‌ನಲ್ಲಿ ದೀರ್ಘಕಾಲ ಕೆಲಸ ಮಾಡುತ್ತಿದ್ದರೆ, ಇದಕ್ಕಾಗಿ ಆಂಟಿ-ಗ್ಲೇರ್ ಪರದೆಯನ್ನು ಬಳಸಿ. ಅದೇ ಸಮಯದಲ್ಲಿ, ನಡುವೆ ಕೆಲವು ನಿಮಿಷಗಳ ವಿರಾಮ ತೆಗೆದುಕೊಳ್ಳಿ.


    ಧೂಮಪಾನದಿಂದ ದೂರವಿರಿ: ಧೂಮಪಾನವು ಶ್ವಾಸಕೋಶದ ಜೊತೆಗೆ ಕಣ್ಣುಗಳ ದೃಷ್ಟಿ ಮೇಲೂ ಪರಿಣಾಮ ಬೀರುತ್ತದೆ. ನೀವು ನಿಯಮಿತವಾಗಿ ಧೂಮಪಾನ ಮಾಡಿದರೆ ಅದು ನಿಮ್ಮ ಕಣ್ಣುಗಳಿಗೆ ಹಾನಿ ಮಾಡುತ್ತದೆ. ಆದ್ದರಿಂದ ನೀವು ಕಣ್ಣುಗಳನ್ನು ಆರೋಗ್ಯವಾಗಿಡಲು ಬಯಸಿದರೆ ಧೂಮಪಾನದಿಂದ ದೂರವಿರಿ.


    ಕಣ್ಣುಗಳನ್ನು ಪರೀಕ್ಷಿಸಿ: ಲ್ಯಾಪ್‌ಟಾಪ್ ಇತ್ಯಾದಿಗಳಲ್ಲಿ ಕೆಲಸ ಮಾಡುವ ಜನರು ಕಣ್ಣಿನ ರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಇದರೊಂದಿಗೆ, ಕಣ್ಣಿನಲ್ಲಿ ಬರುವ ಸಮಸ್ಯೆಗಳ ಬಗ್ಗೆ ನೀವು ಮೊದಲೇ ತಿಳಿಯುವಿರಿ. ಇದರಿಂದ ಚಿಕಿತ್ಸೆ ಪಡೆಯುವುದು ಸುಲಭವಾಗುತ್ತದೆ.


    ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!

    Published by:zahir
    First published: