Health Tips| ಕ್ಯಾನ್ಸರ್‌ನಿಂದ ದೂರವಿರಬೇಕೇ..? ಹಾಗಾದ್ರೆ ನೀವು ಈ ಕೆಳಗಿನ ಆಹಾರಗಳನ್ನು ತ್ಯಜಿಸಲೇಬೇಕು..!

ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು, ನೀವು ಈ ಕೆಳಗಿನ 5 ಆಹಾರಗಳಿಂದ ದೂರವಿರುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಕ್ಯಾನ್ಸರ್ (Cancer) ಎಂಬ ಮಹಾಮಾರಿ ಮಾನವರ ಬದುಕನ್ನು ಕಿತ್ತು ತಿನ್ನುತ್ತಿದೆ. ಯಾವ ಸಮಯದಲ್ಲಿ ಯಾವ ಅಂಗಾಂಗಗಳಲ್ಲಿ ಕ್ಯಾನ್ಸರ್ ಕೋಶಗಳು (Lungs) ಬೆಳೆಯುತ್ತದೆ ಎಂದು ಊಹಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ನಾವು ಏನು ತಿನ್ನುತ್ತಿದ್ದೇವೆ, ಯಾವ ರೀತಿಯ ಆಹಾರಗಳು ನಮ್ಮ ದಿನನಿತ್ಯದ ಆಹಾರ (Daily Foods) ಪಟ್ಟಿಯಲ್ಲಿವೆ ಎಂಬುದು ನಮ್ಮ ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ಅಸಮತೋಲಿತ, ಜಂಕ್ (Zink) ಆಹಾರಗಳು ರೋಗಗಳಿಗೆ ಆಹ್ವಾನ ನೀಡಿದಂತೆ. ಹಾಗಾಗಿ ಸಮತೋಲಿತ ಆಹಾರ ತಿನ್ನುವ ಮೂಲಕ ಆರೋಗ್ಯವಂತರಾಗಿರಲು, ಫಿಟ್ (Fit) ಆಗಿರಲು ಯೋಚಿಸಬೇಕು. ಇದೆಲ್ಲದರ ಹೊರತಾಗಿ ನಿಮ್ಮ ತಟ್ಟೆಯಲ್ಲಿ ಕೊಬ್ಬು (Fat) ಸಹಿತ ಆಹಾರಗಳು, ಸಂಸ್ಕರಿಸಿದ ಉತ್ಪನ್ನಗಳು ಯಥೇಚ್ಛವಾಗಿದ್ದರೆ ಖುದ್ದಾಗಿ ನೀವೇ ಕ್ಯಾನ್ಸರ್ ರೋಗವನ್ನು ಬರಮಾಡಿಕೊಂಡಂತಾಗುತ್ತದೆ.


  ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕಳಪೆ ಆಹಾರ ಆಯ್ಕೆಗಳು ಯಕೃತ್ತು, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗಬಹುದು. ಕೆಲವರಿಗೆ ಸಮಯಕ್ಕೆ ಸರಿಯಾಗಿ ಪತ್ತೆಯಾದರೆ ಚಿಕಿತ್ಸೆ ನೀಡಬಹುದಾದರೂ, ಕ್ಯಾನ್ಸರ್‌ನಂತಹ ರೋಗಗಳು ಜೀವಕ್ಕೆ ಅಪಾಯವನ್ನುಂಟು ಮಾಡುತ್ತವೆ.


  ನಿಮ್ಮ ಆಹಾರದ ಆಯ್ಕೆ ಹೇಗೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ?


  ವಿಶ್ವಾದ್ಯಂತ ಕ್ಯಾನ್ಸರ್ ಕೂಡ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ಆದರೆ ಇದನ್ನು ಸಂಬಂಧಿತ ಜೀವನಶೈಲಿ ಬದಲಾವಣೆ ಮಾಡುವುದರ ಮೂಲಕ ತಡೆಯಬಹುದು. ವಿವಿಧ ಕಾರಣಗಳಿಂದಾಗಿ ಕ್ಯಾನ್ಸರ್ ಕೋಶಗಳು ದೇಹದಲ್ಲಿ ಬೆಳೆಯುತ್ತವೆ, ಇದರಲ್ಲಿ ಅನಾರೋಗ್ಯಕರ ಆಹಾರವು ಕೂಡ ಒಂದು. ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ, ಬೊಜ್ಜು, ಮದ್ಯಪಾನ ಮತ್ತು UV ಕಿರಣಗಳಿಗೆ ಒಡ್ಡಿಕೊಳ್ಳುವುದು ಸೇರಿದಂತೆ ಇತರ ಕೆಲವು ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು. ನಮ್ಮ ಆಹಾರ ಪದ್ಧತಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂಬುದಕ್ಕೆ ಹಲವು ಪುರಾವೆಗಳಿವೆ.


  ಆದ್ದರಿಂದ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು, ನೀವು ಈ ಕೆಳಗಿನ 5 ಆಹಾರಗಳಿಂದ ದೂರವಿರುವುದು ಉತ್ತಮ.


  1. ಸಂಸ್ಕರಿಸಿದ ಮಾಂಸ


  ಮಾಂಸ, ಕೋಳಿ, ಮೀನು ಮತ್ತು ಮೊಟ್ಟೆ ಎಲ್ಲವನ್ನೂ ಸರಿಯಾಗಿ ಬೇಯಿಸಿ ಮತ್ತು ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮವಾಗಿದೆ. ಹೊಗೆ ಮತ್ತು ಉಪ್ಪಿನಿಂದ ಸಂರಕ್ಷಿಸಲಾಗಿರುವ ಯಾವುದೇ ಪ್ರಾಣಿ ಆಧಾರಿತ ಉತ್ಪನ್ನಗಳನ್ನು ತೆಗೆದುಕೊಳ್ಳುವುದು ಅನಾರೋಗ್ಯಕರವಾಗಿದೆ ಮತ್ತು ಇದು ತೂಕ ಹೆಚ್ಚಾಗುವುದರಿಂದ ಹಿಡಿದು ಕ್ಯಾನ್ಸರ್‌ವರೆಗಿನ ಕಾಯಿಲೆಗಳಿಗೆ ಕಾರಣವಾಗಬಹುದು. ಮಾಂಸದ ಸಂಸ್ಕರಣೆಯು ಕಾರ್ಸಿನೋಜೆನ್ ಆಗುವಂತಹ ಸಂಯುಕ್ತವನ್ನು ಉತ್ಪಾದಿಸುತ್ತದೆ ಮತ್ತು ಕೊಲೋರೆಕ್ಟಲ್ ಮತ್ತು ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಹಾಟ್ ಡಾಗ್ಸ್, ಸಲಾಮಿ ಮತ್ತು ಸಾಸೇಜ್‌ನಂತಹ ಸಂಸ್ಕರಿಸಿದ ಮಾಂಸದ ಬದಲಾಗಿ, ಮನೆಯಲ್ಲಿ ಮಾಂಸವನ್ನು ಬೇಯಿಸಿ ತಿನ್ನಿ.


  2. ಕರಿದ ಆಹಾರಗಳು


  ಕರಿದ ಆಹಾರಗಳ ಅತಿಯಾದ ಸೇವನೆ ದೇಹದಲ್ಲಿನ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವ ಇನ್ನೊಂದು ಅಂಶವಾಗಿದೆ. ಆಲೂಗಡ್ಡೆ ಅಥವಾ ಮಾಂಸದಂತಹ ಆಹಾರಗಳನ್ನು ಹೆಚ್ಚಿನ ತಾಪಮಾನದಲ್ಲಿ ಹುರಿದಾಗ, ಅಕ್ರಿಲಾಮೈಡ್ ಎಂಬ ಸಂಯುಕ್ತವು ರೂಪುಗೊಳ್ಳುತ್ತದೆ. ಅಧ್ಯಯನಗಳು ಈ ಸಂಯುಕ್ತವು ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಡಿಎನ್‍ಎಗೆ ಹಾನಿ ಮಾಡುತ್ತದೆ ಎಂದು ಸೂಚಿಸುತ್ತದೆ. ಇದಲ್ಲದೆ, ಹುರಿದ ಆಹಾರಗಳು ಆಕ್ಸಿಡೇಟಿವ್ ಒತ್ತಡ ಹೆಚ್ಚಿಸುತ್ತದೆ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆ ಹೆಚ್ಚಿಸುತ್ತದೆ. ಆಹಾರವನ್ನು ಫ್ರೈ ಮಾಡುವ ಬದಲು, ಅಡುಗೆಯಲ್ಲಿ ವಿವಿಧ ವಿಧಾನಗಳಲ್ಲಿ ಬಳಕೆ ಮಾಡಿ.


  3. ಸಂಸ್ಕರಿಸಿದ ಉತ್ಪನ್ನಗಳು


  ಸಂಸ್ಕರಿಸಿದ ಹಿಟ್ಟು, ಸಕ್ಕರೆ ಅಥವಾ ಎಣ್ಣೆಯಾಗಿರಲಿ, ಇವೆಲ್ಲವೂ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಹೆಚ್ಚು ಸಂಸ್ಕರಿಸಿದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‍ಗಳು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ದಾರಿ ಮಾಡಿಕೊಡುತ್ತದೆ. ಸಂಸ್ಕರಿಸಿದ ಉತ್ಪನ್ನಗಳ ಆಹಾರವನ್ನು ಅಧಿಕವಾಗಿ ಸೇವಿಸುವವರು ಅಂಡಾಶಯ, ಸ್ತನ ಮತ್ತು ಎಂಡೋಮೆಟ್ರಿಯಲ್ (ಗರ್ಭಾಶಯದ) ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಆದ್ದರಿಂದ ಸಂಸ್ಕರಿಸಿದ ಉತ್ಪನ್ನಗಳ ಸೇವನೆ ಕಡಿಮೆ ಮಾಡಲು ಪ್ರಯತ್ನಿಸಿ. ಸಕ್ಕರೆಗೆ ಬದಲಾಗಿ ಬೆಲ್ಲ ಅಥವಾ ಜೇನುತುಪ್ಪ, ಧಾನ್ಯಗಳು, ಸಂಸ್ಕರಿಸಿದ ಎಣ್ಣೆ ಬದಲು ಸಾಸಿವೆ ಎಣ್ಣೆ ಮತ್ತು ಬೆಣ್ಣೆಯನ್ನು ಅಡುಗೆಗಳಲ್ಲಿ ಬಳಸಿ.


  4. ಮದ್ಯ ಮತ್ತು ಕಾರ್ಬೊನೇಟೆಡ್ ಪಾನೀಯಗಳು


  ಆಲ್ಕೋಹಾಲ್ ಮತ್ತು ಕಾರ್ಬೊನೇಟೆಡ್ ಪಾನೀಯಗಳಲ್ಲಿ ಸಂಸ್ಕರಿಸಿದ ಸಕ್ಕರೆ ಮತ್ತು ಕ್ಯಾಲೋರಿ ಅಂಶ ಅಧಿಕವಾಗಿದೆ. ಎರಡು ದ್ರವಗಳಲ್ಲಿ ಯಾವುದನ್ನಾದರೂ ಅತಿಯಾಗಿ ಸೇವಿಸಿದರೆ ದೇಹದಲ್ಲಿ ಫ್ರೀ ರ‍್ಯಾಡಿಕಲ್‍ಗಳ ಸಂಖ್ಯೆ ಹೆಚ್ಚಿಸಬಹುದು, ಇದು ಉರಿಯೂತವನ್ನು ಉಂಟುಮಾಡಬಹುದು. ಆಲ್ಕೋಹಾಲ್ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇದರಿಂದ ಮೊದಲೇ ದೇಹದಲ್ಲಿನ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ.


  ಇದನ್ನೂ ಓದಿ:  ಈ 5 ಅಭ್ಯಾಸಗಳು ಇರೋ ಹುಡುಗರನ್ನು ಹುಡುಗಿಯರು ಎಂದಿಗೂ ಇಷ್ಟಪಡಲ್ವಂತೆ, ನಿಮಗೂ ಈ ಅಭ್ಯಾಸಗಳು ಇದ್ಯಾ?

  5. ಮೊದಲೇ ತಯಾರಿಸಿದ ಮತ್ತು ಪ್ಯಾಕ್ ಮಾಡಿದ ಆಹಾರಗಳು


  ಮುಂಚಿತವಾಗಿಯೇ ತಯಾರಿಸಿ ಪ್ಯಾಕ್ ಮಾಡಿದ ಆಹಾರಗಳ ಸೇವನೆ ಭಾರತದಲ್ಲಿ ನಿಧಾನವಾಗಿ ಹೆಚ್ಚಾಗುತ್ತಿದೆ. ಹೌದು ಇದನ್ನು ತಂದು ಪ್ಯಾಕ್ ಕತ್ತರಿಸಿ, ಬೇಯಿಸಿದರೆ ತಿಂಡಿ ಸಿದ್ಧವಾಗುತ್ತದೆ. ತತ್‍ಕ್ಷಣ ನೂಡಲ್ಸ್, ಇಡ್ಲಿ, ಉಪ್ಮಾ, ಪಾಸ್ತಾಗಳನ್ನು ಸೇವಿಸಬಹುದು. ಇದು ನಿಜವಾಗಿಯೂ ಅಡುಗೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆದರೆ ಇದು ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನೂ ಹೆಚ್ಚಿಸುತ್ತದೆ. ಇಂತಹ ಪ್ಯಾಕ್‍ಗಳಲ್ಲಿ ಬಿಸ್ಫೆನಾಲ್ ಎ (ಬಿಪಿಎ) ಎಂಬ ರಾಸಾಯನಿಕವಿದೆ. ಆಹಾರದಲ್ಲಿ ಕರಗುವ ಈ ಸಂಯುಕ್ತವು ಹಾರ್ಮೋನುಗಳ ಅಸಮತೋಲನ, ಡಿಎನ್‍ಎ ಬದಲಾವಣೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು.

  First published: