ಈ 5 ಆಹಾರ ಸೇವನೆಯಿಂದ ನಿಮ್ಮ ಆತಂಕ ಉಲ್ಭಣಗೊಳ್ಳಬಹುದು ಎಚ್ಚರ...!

news18
Updated:June 6, 2018, 4:28 PM IST
ಈ 5 ಆಹಾರ ಸೇವನೆಯಿಂದ ನಿಮ್ಮ ಆತಂಕ ಉಲ್ಭಣಗೊಳ್ಳಬಹುದು ಎಚ್ಚರ...!
news18
Updated: June 6, 2018, 4:28 PM IST
ನ್ಯೂಸ್ 18 ಕನ್ನಡ

ಅತಿಯಾದ ಆತಂಕ ಇತ್ತೀಚೆಗೆ ಒಂದು ಮನೋರೋಗವಾಗಿ ಕಾಡಲಾರಂಭಿಸಿದೆ. ಇದು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಎಲ್ಲರಲ್ಲೂ ಇರುವ ಈ ಆತಂಕವು, ಉಲ್ಭಣವಾಗಲು ನಾವು ಅನುಸರಿಸುವ ಆಹಾರ ಪದ್ಧತಿಯೂ ಕಾರಣವಾಗುತ್ತದೆ.

ಈ ಸಮಸ್ಯೆಯನ್ನು ಹೋಗಲಾಡಿಸಿ, ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಕೆಲ ಆಹಾರಗಳ ಮೇಲೆ ನಿಯಂತ್ರಣ ಹೊಂದಬೇಕಾಗುತ್ತದೆ. ಅತಿಯಾದ ಆತಂಕ ಸಮಸ್ಯೆಗೆ ಕಾರಣವಾಗುವ ಕೆಲ ಆಹಾರಗಳು ಹೀಗಿವೆ. ಇವುಗಳ ಮೇಲೆ ನಿಗಾ ವಹಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

1. ಸಕ್ಕರೆ

ಸಕ್ಕರೆಯು ದೇಹದಲ್ಲಿರುವ ಸೆರೊಟೊನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಸೆರೊಟೊನಿನ್ ಮಟ್ಟವು ಹೆಚ್ಚಾದಂತೆ ಆತಂಕ ಉಲ್ಬಣಗೊಳ್ಳುತ್ತದೆ ಹಾಗೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ, ಸಕ್ಕರೆಯುಕ್ತ ಪದಾರ್ಥಗಳ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿದರೆ ಆತಂಕಗೊಳ್ಳುವ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಕಾಣಬಹುದು. ಹಾಗೆಯೇ ಸಕ್ಕರೆ ಅಂಶ ಹೆಚ್ಚಿರುವ ಮಿಠಾಯಿ, ಲಾಲಿಪಾಪ್ ಮತ್ತು ಚಾಕೊಲೇಟ್​​ಗಳನ್ನು ತಿನ್ನುವುದರಿಂದ ಮಕ್ಕಳಲ್ಲಿ ಮೆದುಳಿಗೆ ಸಂಬಂಧಿಸಿದ ಎಡಿಹೆಚ್​ಡಿ (ADHD) ಸಮಸ್ಯೆಗಳು ಕಾಣಿಸುತ್ತದೆ.

2. ಟ್ರಾನ್ಸ್ ಕೊಬ್ಬು
ಕರಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ರಾನ್ಸ್​ ಫಾಟ್ಸ್​ ಅಥವಾ ಕೊಬ್ಬು ಕಂಡು ಬರುತ್ತದೆ. ಈ ಆಹಾರಗಳು ಖಿನ್ನತೆಯನ್ನು ಪ್ರಚೋದಿಸುವುದಲ್ಲದೆ, ಆತಂಕ ಉಲ್ಬಣಗೊಳ್ಳುವಂತೆ ಮಅಡುತ್ತದೆ. ಇದು ರಕ್ತ ಕಣಗಳನ್ನು ಬೇರ್ಪಡಿಸುವ ಎಂಡೊಥೆಲಿಯಾಲ್ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಟ್ರಾನ್ಸ್​ ಫಾಟ್ಸ್​ ಆಹಾರಗಳನ್ನು ಸೇವಿಸುವುದರಿಂದ ಉರಿಯೂತದ ಸಮಸ್ಯೆ ಕಾಣಿಸುತ್ತದೆ. ಕರಿದ ಆಹಾರಗಳಲ್ಲದೆ, ಕೆಚಪ್​ ಮತ್ತು ಕ್ರೀಂಗಳನ್ನು ಕೂಡ ಸಾಧ್ಯವಾದಷ್ಟು ಕಡಿಮೆಗೊಳಿಸುವುದು ಸಹ ಉತ್ತಮ.
Loading...

3. ಕೆಫೀನ್
ಕಾಫಿ, ಚಹಾ, ಚಾಕೊಲೇಟ್ ಅಥವಾ ಎನರ್ಜಿ ಪಾನೀಯಗಳು ದೇಹಕ್ಕೆ ಉತ್ತಮವಾಗಿದ್ದರೂ, ಇದರಲ್ಲಿರುವ ಕೆಫೀನ್ ಹಲವು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಕೆಫೀನ್ ಸೇವನೆಯು ಹೃದಯ ಬಡಿತ, ಹೆದರಿಕೆ, ದಿಗಿಲು ಮತ್ತು ತಲೆನೋವಿಗೆ ಕಾರಣವಾಗುತ್ತಲ್ಲದೆ, ಆತಂಕದ ಮಟ್ಟವನ್ನು ಪ್ರಚೋದಿಸಬಹುದು.

4. ಸಂಸ್ಕರಿಸಿದ ಆಹಾರ
ಸಂಸ್ಕರಿಸಿದ ಮಾಂಸ, ಧಾನ್ಯ, ಪೇಸ್ಟ್ರೀಸ್, ಕೇಕ್ಸ್​ ಮತ್ತು ಕೊಬ್ಬಿನಾಂಶವಿರುವ ಡೈರಿ ಉತ್ಪನ್ನಗಳನ್ನು ತಿನ್ನುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ. ಇದರಿಂದ ಗಾಬರಿ ಅಥವಾ ಆತಂಕಗೊಳ್ಳುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆ ಕಂಡು ಬಂದಲ್ಲಿ ತಾಜಾ ಹಣ್ಣು, ತರಕಾರಿ,ಧಾನ್ಯಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ

5. ಆಲ್ಕೋಹಾಲ್
ಆತಂಕದ ಸಮಸ್ಯೆಗಳು ತಲೆದೂರಿದಾಗ ಹೆಚ್ಚಿನವರು ಮದ್ಯದ ಮೊರೆ ಹೋಗುತ್ತಾರೆ. ಆದರೆ ಆಲ್ಕೋಹಾಲ್ ಸೇವನೆಯಿಂದ ಆತಂಕವು ಹೆಚ್ಚುವುದಲ್ಲದೆ, ದೀರ್ಘಕಾಲದವರೆಗೆ ಈ ಸಮಸ್ಯೆ ಉಳಿಯುವಂತೆ ಮಾಡುತ್ತದೆ ಎಂದು ಅಮೆರಿಕದ ಅಡಿಕ್ಷನ್ ಸೆಂಟರ್ಸ್ ತಿಳಿಸಿದೆ. ಆದರಿಂದ ಆತಂಕ ಅಥವಾ ಗಾಬರಿಯ ಸಮಸ್ಯೆಯು ಕಂಡು ಬರುತ್ತಿದ್ದರೆ ಮದ್ಯ ಸೇವನೆಯನ್ನು ನಿಲ್ಲಿಸಬೇಕಾಗುತ್ತದೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...