Thyroid: ಆಹಾರದಿಂದ ಮಾತ್ರವಲ್ಲ ಈ ಕೆಳಗಿನ ವಸ್ತುಗಳಿಂದಲೂ ಕಾಣಿಸಿಕೊಳ್ಳುತ್ತೆ ಥೈರಾಯ್ಡ್..!

Thyroid Problems :ಆಹಾರ ಪದ್ಧತಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಆರೋಗ್ಯ ಸುಧಾರಣೆಯಲ್ಲಿ ಸಮಸ್ಯೆ ಉಂಟು ಮಾಡಬಹುದು. ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ಮತ್ತು ನಮ್ಮ ದೇಹದ ಬೆಳವಣಿಗೆಯನ್ನು ನಿಯಂತ್ರಣ ಮಾಡುವ ಕೆಲಸವನ್ನು ಥೈರಾಯಿಡ್ ಗ್ರಂಥಿ ಮಾಡುತ್ತದೆ.

ಥೈರಾಯ್ಡ್

ಥೈರಾಯ್ಡ್

 • Share this:
  ಜೀವನಶೈಲಿಯಲ್ಲಿನ(Life Style) ಕೆಲವು ಬದಲಾವಣೆಗಳು, ಆಹಾರ(Food) ಪದ್ಧತಿ ಮತ್ತು ನಿಯಮಿತವಾಗಿ ವ್ಯಾಯಾಮ(Exercise) ಮಾಡದಿರುವುದು ಆರೋಗ್ಯ ಸುಧಾರಣೆಯಲ್ಲಿ ಸಮಸ್ಯೆ (Health Problem)ಉಂಟು ಮಾಡಬಹುದು. ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ಮತ್ತು ನಮ್ಮ ದೇಹದ ಬೆಳವಣಿಗೆಯನ್ನು ನಿಯಂತ್ರಣ ಮಾಡುವ ಕೆಲಸವನ್ನು ಥೈರಾಯಿಡ್ ಗ್ರಂಥಿ ಮಾಡುತ್ತದೆ. ಈ ಪ್ರಕ್ರಿಯೆ ನಡೆಯದೆ ಹೋದಾಗ ಅದನ್ನು ಥೈರಾಯಿಡ್(Thyroid) ಕಾಯಿಲೆ ಎಂದು ಕರೆಯುತ್ತಾರೆ.. ಪ್ರತಿಯೊಬ್ಬರ ಕುತ್ತಿಗೆ ಭಾಗದಲ್ಲಿ ಕಂಡು ಬರುವ ಥೈರಾಯ್ಡ್ ಗ್ರಂಥಿ ದೇಹಕ್ಕೆ ಅಗತ್ಯವಾಗಿ ಬೇಕಾದ ಹಾರ್ಮೋನುಗಳನ್ನು ಸ್ರವಿಸಿ ತನ್ನ ಕೆಲಸವನ್ನು ಮುಂದುವರೆಸುತ್ತದೆ.. ಥೈರಾಯ್ಡ್​ನಲ್ಲಿ ಎರಡು ವಿಧಗಳಿವೆ. ಹೈಪೋಥೈರಾಯ್ಡಿಸಂ ಮತ್ತು ಹೈಪರ್ ಥೈರಾಯ್ಡಿಸಮ್. ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮ ಬೀರುವ ಮೂಲಕ ಈ ಸಮಸ್ಯೆ ಕಾಡತೊಡಗುತ್ತದೆ. ಆದ್ರೆ ಮುಖ್ಯವಾಗಿ ಥೈರಾಯ್ಡ್ ಸಮಸ್ಯೆಗೆ ಕಾರಣವಾಗಿರುವ ಆಹಾರಪದ್ಧತಿಯನ್ನು ಹೊರತುಪಡಿಸಿ ಈ ಕೆಲವು ಕಾರಣಗಳಿಂದಲೂ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳಬಹುದು..

  ಆಹಾರದಿಂದ ಮಾತ್ರವಲ್ಲ ಇದರಿಂದಲೂ ಬರುತ್ತೆ ಥೈರಾಯ್ಡ್ ಸಮಸ್ಯೆ

  ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನುಗಳು ಮೂಡ್ ಡಿಸಾರ್ಡರ್ಸ್, ತೂಕ ಬದಲಾವಣೆ, ಆಯಾಸದ ಮಟ್ಟ ಮತ್ತು ಚರ್ಮವನ್ನು ಆರೋಗ್ಯವಾಗಿಡಲು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಶಕ್ತಿಯ ಮಟ್ಟವನ್ನು ಹೆಚ್ಚಿಸುವ, ಹಾರ್ಮೋನ್ ಮಟ್ಟವನ್ನು ಹೆಚ್ಚಿಸುವ ಮತ್ತು ಕಾರ್ಯನಿರ್ವಹಣೆಯನ್ನು ಉಳಿಸಿಕೊಳ್ಳುವ ಆಹಾರವನ್ನು ಸೇವಿಸುವುದು ಸೂಕ್ತ. ಇದರ ಜೊತೆಜೊತೆಗೆ ಈ ಕೆಳಗಿನ ವಸ್ತುಗಳನ್ನು ಅವಾಯ್ಡ್ ಮಾಡುವುದರಿಂದ ಥೈರಾಯ್ಡ್ ನಿಂದ ರಕ್ಷಣೆ ಮಾಡಿಕೊಳ್ಳಬಹುದು.

  ಇದನ್ನೂ ಓದಿ :ಯಾರನ್ನ ಕೇಳಿದ್ರೂ ಥೈರಾಯ್ಡ್ ಸಮಸ್ಯೆ ಅಂತಿದ್ದಾರಲ್ಲಾ, ಭಾರತದಲ್ಲಿ ಇದು ಹೆಚ್ಚಾಗೋಕೆ ಏನು ಕಾರಣ? ತಡೆಯೋದು ಹೇಗೆ?

  1) ನಾನ್ ಸ್ಟಿಕ್ ಪ್ಯಾನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಅಡುಗೆಮನೆಯಲ್ಲಿ ನಾನ್ ಸ್ಟಿಕ್ ಪ್ಯಾನ್ ಇದ್ದೇ ಇರುತ್ತೆ.. ಆಮ್ಲೆಟ್ ದೋಸೆ, ಹಾಗೂ ಪ್ಯಾನ್ ಕೇಕ್ ಸುಲಭವಾಗಿ ಆಗಲು ನಾನ್ ಸ್ಟಿಕ್ ಪ್ಯಾನ್ ಬಳಕೆ ಮಾಡಲಾಗುತ್ತದೆ.. ಆದ್ರೆ ನಾನ್-ಸ್ಟಿಕ್ ಪ್ಯಾನ್‌ಗಳು ಮತ್ತು ಅಂತಹ ಇತರ ಪಾತ್ರೆಗಳು ಅವುಗಳ ಮೇಲೆ ಟೆಫ್ಲಾನ್ ಲೇಪನವನ್ನು ಹೊಂದಿರುತ್ತವೆ. ಈ ಹಾನಿಕಾರಕ ರಾಸಾಯನಿಕ ಲೇಪನವು ವ್ಯಕ್ತಿಯ ರಕ್ತದಲ್ಲಿ ಪರ್ಫ್ಲೋರೋಕ್ಟಾನೋಯಿಕ್ ಸಲ್ಫೋನೇಟ್‌ಗಳು ಮತ್ತು ಆಮ್ಲಗಳ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ರಕ್ತಪ್ರವಾಹದಲ್ಲಿ ಈ ರಾಸಾಯನಿಕಗಳ ಮಟ್ಟದಲ್ಲಿನ ಹೆಚ್ಚಳವು ಹಾರ್ಮೋನ್ ಅಸಮತೋಲನದಿಂದ ಥೈರಾಯ್ಡ್ ಸಮಸ್ಯೆಗಳಿಗೆ ಕಾರಣವಾಗುತ್ತದೆ.

  2)ಪಾಪ್‌ಕಾರ್ನ್‌ನ ಚೀಲ : ಸಿನಿಮಾಗೆ ಹೋದಾಗ ಪ್ರತಿಯೊಬ್ಬರ ಅಚ್ಚುಮೆಚ್ಚಿನ ವಸ್ತು ಅಂದ್ರೆ ಅದು ಪಾಪ್ಕಾರ್ನ್.. ಪಾಪ್‌ಕಾರ್ನ್‌ನ ಅತಿ ವೇಗವಾಗಿ ಮಾಡಲು ಮೈಕ್ರೋವೇವ್ ಬಳಕೆ ಮಾಡುವುದರಿಂದ ಬಿಸಿಯಾಗಿರುವ ಕಾರ್ನ್ ಗಳನ್ನ ಚೀಲಕ್ಕೆ ಹಾಕಿದಾಗ ಚೀಲದಲ್ಲಿರುವ ರಾಸಾಯನಿಕ ಲೇಪನ ಬಿಡುಗಡೆಯಾಗುತ್ತದೆ.. ಹೀಗಾಗಿ ಈ ರಾಸಾಯನಿಕ ಲೇಪನವನ್ನು ಸೇವನೆ ಮಾಡುವುದು ಥೈರಾಯ್ಡ್ ಕ್ಯಾನ್ಸರ್ ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ..

  3) ಬಿಸಾಡಬಹುದಾದ ಪ್ಲಾಸ್ಟಿಕ್ ಎಲೆಗಳು : ಹಬ್ಬ ಹರಿದಿನಗಳ ಸಮಯದಲ್ಲಿ ಇತ್ತೀಚಿನ ದಿನಗಳಲ್ಲಿ ಬಾಳೆಎಲೆಯ ಬದಲಾಗಿ ಹೆಚ್ಚು ಪ್ಲಾಸ್ಟಿಕ್ ಬಟ್ಟೆಗಳನ್ನು ಬಳಕೆ ಮಾಡಲಾಗುತ್ತಿದೆ.. ಅವುಗಳನ್ನು ಸುಲಭವಾಗಿ ವಿಲೇವಾರಿ ಮಾಡಬಹುದು ಎಂಬ ಕಾರಣಕ್ಕೆ ಬಹುತೇಕರು ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಎಲೆಗಳನ್ನು ಬಳಸುತ್ತಿದ್ದಾರೆ..ಆದರೆ ಹೀಗೆ ಮಾಡುತ್ತಿರುವುದು ಗೊತ್ತಿಲ್ಲದೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.. ಈ ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ಆಹಾರದ ಸೇವನೆಯು ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಗಳ ಕಾರ್ಯನಿರ್ವಹಣೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.

  ಇದನ್ನೂ ಓದಿ : ಥೈರಾಯ್ಡ್ – ಭಾರೀ ಪರಿಣಾಮ ಬೀರುವ ಒಂದು ಸಣ್ಣ ಗ್ರಂಥಿ

  4)ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್ ಹೊಂದಿರುವ ಉತ್ಪನ್ನಗಳು : ಆಂಟಿಬ್ಯಾಕ್ಟೀರಿಯಲ್ ಲೇಬಲ್ ಅನ್ನು ನೋಡಿದ ನಂತರ ನೀವು ಸೂಪರ್ ಮಾರ್ಕೆಟ್‌ನಲ್ಲಿ ಎಷ್ಟು ಬಾರಿ ಉತ್ಪನ್ನಗಳನ್ನು ಖರೀದಿಸಿದ್ದೀರಿ? ಟೂತ್‌ಪೇಸ್ಟ್‌ಗಳಿಂದ ಹಿಡಿದು ಪಾತ್ರೆ ತೊಳೆಯುವ ದ್ರವಗಳವರೆಗೆ, ಈ ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್‌ಗಳನ್ನು ಒಳಗೊಂಡಿರುವ ವಿವಿಧ ವಾಣಿಜ್ಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಬ್ಯಾಕ್ಟೀರಿಯಾ ವಿರೋಧಿ ಉತ್ಪನ್ನಗಳ ಪ್ರಮುಖ ಅಂಶವೆಂದರೆ ಟ್ರೈಕ್ಲೋಸನ್. ಈ ಆಂಟಿಬ್ಯಾಕ್ಟೀರಿಯಲ್ ಏಜೆಂಟ್ ಟ್ರೈಕ್ಲೋಸನ್ ಥೈರಾಯ್ಡ್ ಗ್ರಂಥಿಯ ಅಸಮರ್ಪಕ ಕ್ರಿಯೆಗೆ ಕಾರಣವಾಗಿದೆ

  5)ಮೊಬೈಲ್ ವಿಕಿರಣಗಳು : ನೀವು ಫೋನ್ ಅನ್ನು ನೋಡುವುದರ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುವವರಾಗಿದ್ದರೆ ಮತ್ತು ಅದೇ ರೀತಿ ಮಾಡುವ ಮೂಲಕ ಕೊನೆಗೊಳ್ಳುವವರಾಗಿದ್ದರೆ, ನಿಮ್ಮ ಈ ಅಭ್ಯಾಸವು ಥೈರಾಯ್ಡ್ ಕಾಯಿಲೆಗೆ ಕಾರಣವಾಗಲಿದೆ..ಮೊಬೈಲ್ ಫೋನ್ ಹೊರಸೂಸುವ ವಿದ್ಯುತ್ಕಾಂತೀಯ ವಿಕಿರಣವು ಥೈರಾಯ್ಡ್ ಕ್ಯಾನ್ಸರ್ಗೆ ಕಾರಣವಾಗಬಹುದು.
  Published by:ranjumbkgowda1 ranjumbkgowda1
  First published: