₹299 ಗಿಂತ ಕಡಿಮೆ ಬೆಲೆಗೆ ಸಿಗುವ ಈ ವಸ್ತುಗಳಿಂದ ಅಡುಗೆ ಮಾಡುವ ಕೆಲಸ ಬಹಳ ಸುಲಭವಾಗುತ್ತದೆ, ಬಳಸಿ ನೋಡಿ!

Kitchen Hacks: ಈ ದೈನಂದಿನ ಬಳಕೆಯ ಉತ್ಪನ್ನಗಳು ನಿಮ್ಮ ಅಡುಗೆಮನೆ ಸ್ಥಳವನ್ನು ಆಯೋಜಿಸಲು, ನಿಮ್ಮ ಅಮೂಲ್ಯವಾದ ಸಮಯವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ಮನೆಯಲ್ಲಿ ತುಂಬಾನೇ ಪ್ರಮುಖವಾದ ಭಾಗ (Important part) ಎಂದರೆ ಅದು ಅಡುಗೆಮನೆ (Kitchen) ಎಂದು ಹೇಳಬಹುದು. ಬಹುತೇಕ ಗೃಹಿಣಿಯರು (Housewives) ತಮ್ಮ ಅಡುಗೆಮನೆಯಲ್ಲಿ ದೈನಂದಿನ ಬಳಕೆಗೆ ಬೇಕಾಗುವ ಎಲ್ಲಾ ರೀತಿಯ ವಸ್ತುಗಳು (Appliances )ಇರಬೇಕೆಂದು ಬಯಸುತ್ತಾರೆ. ತಾವು ಅಡುಗೆ ಮಾಡುವಾಗ ತರಕಾರಿಗಳನ್ನು ಹೆಚ್ಚುವುದರಿಂದ ಹಿಡಿದು ಎಲ್ಲವೂ ಪರ್ಫೆಕ್ಟ್ (Perfect) ಆಗಿ ಇರಬೇಕೆಂದು ಬಯಸುತ್ತಾರೆ ಮತ್ತು ಅದಕ್ಕೆ ಸರಿ ಹೊಂದುವಂತೆ ಅನೇಕ ವಸ್ತುಗಳನ್ನು ಆದಷ್ಟು ಕಡಿಮೆ ಬೆಲೆಯಲ್ಲಿಯೇ( lowest possible price) ಖರೀದಿಸಲು ಗೃಹಿಣಿಯರು ಬಯಸುತ್ತಾರೆ.

ಇಲ್ಲಿ ನಾವು ಈಗ ಮಾರಾಟದಲ್ಲಿರುವ ಮತ್ತು ಕಡಿತಗೊಳಿಸಿದ ಬೆಲೆಗಳಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ನಿಮಗಾಗಿ ತಂದಿದ್ದೇವೆ. ಈ ದೈನಂದಿನ ಬಳಕೆಯ ಉತ್ಪನ್ನಗಳು ನಿಮ್ಮ ಅಡುಗೆಮನೆ ಸ್ಥಳವನ್ನು ಆಯೋಜಿಸಲು, ನಿಮ್ಮ ಅಮೂಲ್ಯವಾದ ಸಮಯವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Kitchen Hacks: ನಿಮ್ಮ ಅಡುಗೆ ಮನೆಯಲ್ಲಿ ಏನಿರಲಿ ಬಿಡಲಿ ಈ ವಸ್ತುಗಳಿರಬೇಕು

ಕ್ಲಿಪ್ ಸೀಲರ್ (ಗಾಳಿಯಾಡದಂತೆ ಮುಚ್ಚುವ ಕ್ಲಿಪ್)
ಇದು ಒಂದು ನವೀನ ಉತ್ಪನ್ನವಾಗಿದ್ದು, ಗಂಟೆಯಲ್ಲಿ ಒಂದು ಆಹಾರ ಪದಾರ್ಥ ಅಗತ್ಯವಿದ್ದು, ಅದನ್ನು ಹೊರಗೆ ಗಾಳಿಯಲ್ಲಿ ಇಡದೆ ಅದನ್ನು ಒಂದು ಗಾಳಿಯಾಡದ ಕಂಟೇನರ್ ಅಥವಾ ಚೀಲದಲ್ಲಿ ಹಾಕಿ ಅದಕ್ಕೆ ಕ್ಲಿಪ್ ಹಾಕುವುದಕ್ಕೆ ಬಳಕೆಯಾಗುತ್ತದೆ. ಈ ಸೀಲರ್‌ನೊಂದಿಗೆ, ನೀವು ಆಲೂಗಡ್ಡೆ ಚಿಪ್ಸ್, ತಿಂಡಿ ಪ್ಯಾಕೆಟ್, ಬ್ರೆಡ್, ಕಾಫಿ ಪ್ಯಾಕೆಟ್ ಹೀಗೆ ಎಲ್ಲಾ ರೀತಿಯ ಆಹಾರ ಪ್ಯಾಕೆಟ್‌ಗಳನ್ನು ಗಾಳಿಯಾಡದಂತೆ ನೋಡಿಕೊಳ್ಳಲು ಸೀಲ್ ಮಾಡಬಹುದು.

ಚಾಪರ್ (ತರಕಾರಿ ಕತ್ತರಿಸುವುದು)
ನೀವು ಮನೆಯಲ್ಲಿ ತರಕಾರಿಗಳನ್ನು ಕತ್ತರಿಸಲು ಸಾಕಷ್ಟು ಸಮಯ ಹಿಡಿಯುತ್ತದೆ, ತುಂಬಾನೇ ತಾಳ್ಮೆ ಬೇಕಾಗುತ್ತದೆ ಮತ್ತು ಇದನ್ನು ಅತ್ಯಂತ ದ್ವೇಷಿಸುವ ಅಡುಗೆಮನೆ ಕಾರ್ಯಗಳಲ್ಲಿ ಒಂದೆಂದು ಹೆಸರಿಸಬಹುದು. ಈ ಸೂಪರ್ ಫಾಸ್ಟ್ ಚಾಪರ್ ಯಂತ್ರದೊಂದಿಗೆ, ನೀವು ನಿಮ್ಮ ತರಕಾರಿಗಳನ್ನು ಬೇಗನೇ ಏಕರೂಪವಾಗಿ ಕತ್ತರಿಸಿಕೊಳ್ಳಬಹುದು.

ಕಂಟೇನರ್‌ಗಳು
ನಿಮ್ಮ ಅಡುಗೆ ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡಲು ಎಲ್ಲಾ ಪದಾರ್ಥಗಳನ್ನು ಹಾಗೆಯೇ ಪ್ಯಾಕೆಟ್‌ಗಳಲ್ಲಿ ಇಡದೆ ಅವುಗಳನ್ನು ಸುಂದರವಾದ ಕಂಟೇನರ್‌ಗಳಲ್ಲಿ ಸಂಗ್ರಹಿಸಿಡುವುದು ಒಳ್ಳೆಯದು. ಅದರಲ್ಲೂ ಈ ನಿಂಬೆ ಹಸಿರು ಬಹು ಉದ್ದೇಶಿತ ಶೇಖರಣಾ ಕಂಟೇನರ್‌ಗಳನ್ನು ನೀವು ಈಗ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

ಗ್ಯಾಸ್ ಲೈಟರ್
ಬಲವಾದ, ಬಾಳಿಕೆ ಬರುವ ಮತ್ತು ಪ್ರಕಾಶಮಾನವಾದ ಕಿತ್ತಳೆ ಬಣ್ಣದಲ್ಲಿ, ಈ ಗ್ಯಾಸ್ ಲೈಟರ್ ಅನ್ನು ನೀವು ನಿಮ್ಮ ಅಡುಗೆ ಮಾಡುವಾಗ ಸ್ಟೌ ಹಚ್ಚಲು ಬಳಸುತ್ತೀರಿ. ಅಲ್ಲದೆ, ಅದರೊಂದಿಗೆ ಉಚಿತ ಅಡುಗೆ ಮನೆಯ ಚಾಕುವನ್ನು ಸಹ ನೀವು ಪಡೆಯಬಹುದು.

ಮಿಲ್ಕ್ ವ್ಯಾಂಡ್ ಮಿಕ್ಸರ್
ನೊರೆಯುಕ್ತ ಕಾಫಿ ಮತ್ತು ರುಚಿಕರವಾದ ಮಿಲ್ಕ್ ಶೇಕ್‌ಗಳನ್ನು ನೀವು ಇಷ್ಟಪಡುತ್ತೀರಾ? ಹಾಗಾದರೆ ಈ ಹ್ಯಾಂಡ್ ಹೆಲ್ಡ್ ಎಲೆಕ್ಟ್ರಿಕ್ ಮಿಕ್ಸರ್ ನಿಮಗೆ 15 ಸೆಕೆಂಡುಗಳಲ್ಲಿ ನೊರೆಯುಕ್ತ ಪಾನೀಯಗಳನ್ನು ತಯಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸುಲಭ ಮತ್ತು ತ್ವರಿತವಾಗಿ ನೀವು ನಿಮ್ಮ ಪಾನೀಯಗಳನ್ನು ಮಾಡಿಕೊಳ್ಳಬಹುದು.
ಇವೆಲ್ಲವೂ ಅಡುಗೆಮನೆಗೆ ಬೇಕಾದ ವಸ್ತುಗಳೇ ಆಗಿದ್ದು, ಈಗ ಪ್ರತಿಯೊಂದು ವಸ್ತುಗಳ ಬೆಲೆಯೂ ಕೇವಲ 299 ರೂಪಾಯಿ ಮತ್ತು ಅದಕ್ಕೂ ಕಮ್ಮಿಯಾಗಿದ್ದು, ನೀವು ಬೇಗನೆ ಖರೀದಿಸುವ ಒಂದು ಸುವರ್ಣಾವಕಾಶ ಎಂದು ಹೇಳಬಹುದು.

ಇದನ್ನೂ ಓದಿ: Kitchen Hacks: ಅಪ್ಪಿ ತಪ್ಪಿ ಪ್ರೆಶರ್ ಕುಕ್ಕರ್​ನಲ್ಲಿ ಈ ವಸ್ತುಗಳನ್ನು ಬೇಯಿಸಬೇಡಿ

ಜಿರಳೆ ಕಾಟವೇ?
ಅಡುಗೆ ಮನೆಯ ಸಿಂಕ್, ಕ್ಯಾಬಿನೆಟ್ ಗಳು ಮನೆಯ ಮೂಲೆ ಮೂಲ, ಬೀರು ಕಪಾಟುಗಳಲ್ಲಿ ಜಿರಳೆಗಳ ಹಾವಳಿ ಹೆಚ್ಚಾಗಿ ಇರುತ್ತದೆ.. ಜಿರಳೆಗಳ ಸಂಖ್ಯೆ ಹೆಚ್ಚಾದಷ್ಟು ಅನಾರೋಗ್ಯಕ್ಕೆ ಕಾರಣ ಆಗುತ್ತವೆ.. ಹೀಗಾಗಿ ಜಿರಳೆಗಳನ್ನು ಮನೆಯಿಂದ ಹೊರಹಾಕಲು ಅತಿ ಹೆಚ್ಚು ಸ್ವಚ್ಛತೆ ಅಗತ್ಯ.

ಬಿಸಿ ನೀರಿನೊಂದಿಗೆ ವಿನೆಗರ್ ಬೆರೆಸಿ ಎಲ್ಲೆಲ್ಲಿ ಜಿರಳೆಗಳ ಹಾವಳಿ ಇದೆಯೋ ಅಲ್ಲೆಲ್ಲಾ ಸಿಂಪಡನೆ ಮಾಡಿದ್ರೆ ಜಿರಳೆಗಳಕಾಟದಿಂದ ಮುಕ್ತಿ ಪಡೆಯಬಹುದು. ಬೋರಿಕ್ ಪುಡಿ ಮತ್ತು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಜಿರಲೆಗಳಿರುವ ಮೂಲೆಗಳಲ್ಲಿ ಇರಿಸಿ. ವಿಶೇಷವಾಗಿ ಹೆಚ್ಚು ಕತ್ತಲೆ ಮತ್ತು ತೇವಾಂಶ ಇರುವ ಸ್ಥಳಗಳಲ್ಲಿ ಈ ಮಿಶ್ರಣವನ್ನು ಹಾಕಿದರೆ ಜಿರಲೆಗಳು ಓಡಿ ಹೋಗುತ್ತವೆ.
Published by:vanithasanjevani vanithasanjevani
First published: