• Home
  • »
  • News
  • »
  • lifestyle
  • »
  • Dementia Signs: ಈ ಸಮಸ್ಯೆಗಳು ಕಾಣಿಸಿಕೊಂಡ್ರೆ ತಕ್ಷಣ ಡಾಕ್ಟರ್ ಹತ್ರ ಹೋಗಿ, ಬುದ್ಧಿಮಾಂದ್ಯತೆಯ ಲಕ್ಷಣಗಳಿವು

Dementia Signs: ಈ ಸಮಸ್ಯೆಗಳು ಕಾಣಿಸಿಕೊಂಡ್ರೆ ತಕ್ಷಣ ಡಾಕ್ಟರ್ ಹತ್ರ ಹೋಗಿ, ಬುದ್ಧಿಮಾಂದ್ಯತೆಯ ಲಕ್ಷಣಗಳಿವು

ಬುದ್ಧಿಮಾಂದ್ಯತೆ

ಬುದ್ಧಿಮಾಂದ್ಯತೆ

Early Signs of Dementia: ಕೇಂಬ್ರಿಡ್ಜ್ ಯೂನಿವರ್ಸಿಟಿ ಮತ್ತು ಕೇಂಬ್ರಿಡ್ಜ್ ಯೂನಿವರ್ಸಿಟಿ ಹಾಸ್ಪಿಟಲ್ಸ್ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್‌ನ ಸಂಶೋಧಕರು ಅಂಕಿಅಂಶವನ್ನು ಬಳಸಿಕೊಂಡಿದ್ದು ಇದು 40-69 ವರ್ಷ ವಯಸ್ಸಿನ ಅರ್ಧ ಮಿಲಿಯನ್ ಯುಕೆಯ ಪಾಲ್ಗೊಂಡವರ ಅನುವಂಶಿಕ, ಜೀವನಶೈಲಿ ಮತ್ತು ಆರೋಗ್ಯ ಮಾಹಿತಿಯ ವಿವರಗಳನ್ನು ಒಳಗೊಂಡಿದೆ.

ಮುಂದೆ ಓದಿ ...
  • Share this:

ವಯಸ್ಸಾದವರಲ್ಲಿ ಬುದ್ಧಿಮಾಂದ್ಯತೆಯು (Dementia) ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆನಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (World Health Organization) ತಿಳಿಸಿರುವಂತೆ ಪ್ರಸ್ತುತ 55 ಮಿಲಿಯನ್‌ಗಿಂತಲೂ ಹೆಚ್ಚಿನ ಜನರು ವಿಶ್ವಾದ್ಯಂತ ಬುದ್ಧಿಮಾಂದ್ಯತೆಯ ಸಮಸ್ಯೆಯನ್ನು ಹೊಂದಿದ್ದಾರೆ ಹಾಗೂ ಈ ಸಂಖ್ಯೆ ಪ್ರತೀ ವರ್ಷ ಏರಿಕೆಯಾಗುತ್ತಿದ್ದು 10 ಮಿಲಿಯನ್ ಹೊಸ ಪ್ರಕರಣಗಳು ಈ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದೆ ಎಂಬುದು ವರದಿಯಾಗಿದೆ. ಮೆದುಳಿನ (Brain) ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಅಡಚಣೆಯನ್ನು ಸೂಚಿಸುವ ರೋಗಲಕ್ಷಣಗಳ ಸಮೂಹವಾಗಿ ಬುದ್ಧಿಮಾಂದ್ಯತೆಯನ್ನು ಹೆಸರಿಸಲಾಗಿದೆ. ಬುದ್ಧಿಮಾಂದ್ಯತೆಯ ಸಮಯದಲ್ಲಿ ರೋಗಿಗೆ ಸೂಕ್ತ ವೈದ್ಯಕೀಯ ಆರೈಕೆಯನ್ನು ನೀಡಬೇಕು ಹಾಗೂ ಬುದ್ಧಿಮಾಂದ್ಯತೆಯ ಆರಂಭಿಕ ಚಿಹ್ನೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.


ಆಲ್ಝೈಮರ್ಸ್ & ಡಿಮೆನ್ಶಿಯಾ: ದಿ ಜರ್ನಲ್ ಆಫ್ ದಿ ಆಲ್ಝೈಮರ್ಸ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನಾ ಅಧ್ಯಯನವು ರೋಗಿಗಳಲ್ಲಿ ಮೆದುಳಿನ ದುರ್ಬಲತೆಯ ಸಂಕೇತಗಳನ್ನು ಗುರುತಿಸಲು ಸಾಧ್ಯವಿದೆ ಎಂಬುದನ್ನು ಒಂಭತ್ತು ವರ್ಷಗಳ ಹಿಂದೆಯೇ ಪತ್ತೆಮಾಡಿದೆ.


ಅಧ್ಯಯನ ಏನು ಹೇಳುತ್ತದೆ


ಕೇಂಬ್ರಿಡ್ಜ್ ಯೂನಿವರ್ಸಿಟಿ ಮತ್ತು ಕೇಂಬ್ರಿಡ್ಜ್ ಯೂನಿವರ್ಸಿಟಿ ಹಾಸ್ಪಿಟಲ್ಸ್ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್‌ನ ಸಂಶೋಧಕರು ಅಂಕಿಅಂಶವನ್ನು ಬಳಸಿಕೊಂಡಿದ್ದು ಇದು 40-69 ವರ್ಷ ವಯಸ್ಸಿನ ಅರ್ಧ ಮಿಲಿಯನ್ ಯುಕೆಯ ಪಾಲ್ಗೊಂಡವರ ಅನುವಂಶಿಕ, ಜೀವನಶೈಲಿ ಮತ್ತು ಆರೋಗ್ಯ ಮಾಹಿತಿಯ ವಿವರಗಳನ್ನು ಒಳಗೊಂಡಿದೆ. ಸಮಸ್ಯೆಗೆ ಪರಿಹಾರ ನೀಡುವ ಚಟುವಟಿಕೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಭಾಗವಹಿಸುವವರ ಯೋಚನಾ ಮಟ್ಟವನ್ನು ನಿರ್ಧರಿಸಿದೆ.


ಸಂಶೋಧನಾ ತಂಡವು ಕಂಡುಹಿಡಿದ ಆರಂಭಿಕ ಚಿಹ್ನೆಗಳು ಯಾವುವು?


ಸಮಸ್ಯೆ ಪರಿಹಾರ


ಪ್ರತಿಕ್ರಿಯೆ ಸಮಯ


ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು


ಚಟುವಟಿಕೆಗಳನ್ನು ನೆನಪಿಸಿಕೊಳ್ಳುವುದು


ಹೊಂದಿಸುವಿಕೆ


ಈ ಮೇಲಿನ ಮೊದಲಾದ ಚಟುವಟಿಕೆಗಳಲ್ಲಿ ವ್ಯಕ್ತಿಗಳು ನೀರಸವಾಗಿ ಪ್ರತಿಕ್ರಿಯಿಸಿದ್ದರು ಹಾಗೂ ಅವರ ಬುದ್ಧಿಮತ್ತೆ ಕ್ಷೀಣವಾಗಿತ್ತು ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಯುಕೆ ಬಯೋಬ್ಯಾಂಕ್, ಆರೋಗ್ಯ ಮತ್ತು ರೋಗದ ಡೇಟಾದೊಂದಿಗೆ ಪ್ರತಿಕ್ರಿಯೆ ಸಮಯ, ಸಮಸ್ಯೆ ಪರಿಹಾರ ಮತ್ತು ಇತರ ಪರೀಕ್ಷೆಗಳ ಡೇಟಾವನ್ನು ಸಂಗ್ರಹಿಸಿದೆ. ಭಾಗವಹಿಸುವವರ ಡೇಟಾಗಳು ಅವರಲ್ಲಿರುವ ರೋಗಲಕ್ಷಣಗಳನ್ನು ಪರಿಶೀಲಿಸಲು ಸಂಶೋಧಕರಿಗೆ ನೆರವು ನೀಡಿದೆ.


ಬುದ್ಧಿಮಾಂದ್ಯತೆ ಕಾಯಿಲೆ ಇರುವವರು ಕಳಪೆ ಅಂಕಗಳನ್ನು ಗಳಿಸಿದರು


ಸಮಸ್ಯೆ ಪರಿಹರಿಸುವ ಕಾರ್ಯಗಳು, ಪ್ರತಿಕ್ರಿಯೆ ಸಮಯಗಳು, ಸಂಖ್ಯೆಗಳ ಪಟ್ಟಿಗಳನ್ನು ನೆನಪಿಟ್ಟುಕೊಳ್ಳುವುದು, ನಿರೀಕ್ಷಿತ ಸ್ಮರಣೆ (ನಂತರ ಏನನ್ನಾದರೂ ಮಾಡಲು ನೆನಪಿಡುವ ನಮ್ಮ ಸಾಮರ್ಥ್ಯ) ಮತ್ತು ನಂತರ ಆಲ್ಝೈಮರ್‌ನ ಕಾಯಿಲೆ ಇರುವವರಲ್ಲಿ ಹೊಂದಾಣಿಕೆಯಾಗುವ ಅಂಶವು ಆರೋಗ್ಯವಂತ ವ್ಯಕ್ತಿಗಳಿಗೆ ಹೋಲಿಸಿದರೆ ಹೆಚ್ಚು ಕಳಪೆ ಅಂಕಗಳನ್ನು ಗಳಿಸಿದೆ ಹಾಗೂ ದುರ್ಬಲವಾಗಿದ್ದವು ಎಂದು ಅಧ್ಯಯನವು ಕಂಡುಹಿಡಿದಿದೆ.


ಈ ವ್ಯಕ್ತಿಗಳು ಕಳೆದ ಕೆಲವು ತಿಂಗಳುಗಳಲ್ಲಿ ಕುಸಿತವನ್ನು ಕಂಡಿದ್ದಾರೆ


ನಂತರದಲ್ಲಿ ಆಲ್ಝೈಮರ್ ಕಾಯಿಲೆಯನ್ನು ಹೊಂದಿದ ಜನರು ಕಳೆದ 12 ತಿಂಗಳುಗಳಲ್ಲಿ ಸಾಕಷ್ಟು ಕೆಳಕ್ಕೆ ಬಿದ್ದಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಪ್ರಗತಿಶೀಲ ಸುಪ್ರಾನ್ಯೂಕ್ಲಿಯರ್ ಪಾಲ್ಸಿ (PSP) ಎಂದು ಕರೆಯಲ್ಪಡುವ ಅಪರೂಪದ ನರವೈಜ್ಞಾನಿಕ ಸ್ಥಿತಿ ಕಂಡುಬಂದ ಜನರಲ್ಲಿ ಬೀಳುವ ಸಾಧ್ಯತೆಗಳು ಎರಡು ಪಟ್ಟು ಹೆಚ್ಚು ಎಂಬುದಾಗಿ ಸಂಶೋಧನೆ ತಿಳಿಸಿದೆ.


ಇದನ್ನೂ ಓದಿ: ಮೂಳೆ ಕ್ಯಾನ್ಸರ್‌ಗೆ ಈ ಹೊಸ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಂತೆ, ಅಧ್ಯಯನದಲ್ಲಿ ಬಹಿರಂಗ


ಕಳಪೆ ಆರೋಗ್ಯ ಮಟ್ಟ


ಪಾರ್ಕಿನ್ಸನ್ ಕಾಯಿಲೆ ಹಾಗೂ ಲೆವಿ ದೇಹಗಳನ್ನು ಹೊಂದಿರುವ (ಇದೊಂದು ರೀತಿಯ ಕಾಯಿಲೆಯಾಗಿದ್ದು ನರಕೋಶಗಳಲ್ಲಿ ಲೆವಿ ದೇಹಗಳು ಎಂದು ಕರೆಯಲಾದ ಪ್ರೋಟೀನ್‌ಗಳ ಸಣ್ಣ ಗುಂಪುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಗುರುತಿಸಿದ ಜರ್ಮನ್ ವೈದ್ಯರಾದ ಎಫ್‌ಎಚ್ ಲೆವಿಯವರ ಹೆಸರನ್ನೇ ಈ ರೋಗಕ್ಕೆ ಇರಿಸಲಾಯಿತು) ಹಾಗೂ ಇತರೆ ಪರಿಸ್ಥಿತಿಗಳನ್ನು ಹೊಂದಿದ್ದು ಭಾಗವಹಿಸಿದವರ 5-9 ವರ್ಷಗಳ ಹಿಂದೆ ಯುಕೆ ಬಯೋಬ್ಯಾಂಕ್ ತಮ್ಮ ಡೇಟಾವನ್ನು ಸಂಗ್ರಹಿಸಿದಾಗ 'ದುರ್ಬಲ ಆರೋಗ್ಯವನ್ನು' ಸೂಚಿಸಿದೆ ಎನ್ನಲಾಗಿದೆ.


ದುರ್ಬಲತೆಗಳು ಸಾಮಾನ್ಯವಾಗಿ ಸೂಕ್ಷ್ಮವಾಗಿರುತ್ತವೆ


ರೋಗಿಗಳ ಇತಿಹಾಸಗಳನ್ನು ಪರಿಶೀಲನೆ ಮಾಡಿದಾಗ, ರೋಗನಿರ್ಣಯವನ್ನು ಪ್ರೇರೇಪಿಸುವಷ್ಟು ಸ್ಪಷ್ಟವಾಗುವುದಕ್ಕೆ ಹಲವಾರು ವರ್ಷಗಳ ಮೊದಲು ಅರಿವಿನ ದುರ್ಬಲತೆಯನ್ನು ಪ್ರದರ್ಶಿಸಿದ್ದರು ಎಂಬುದು ಸ್ಪಷ್ಟವಾಗಿದೆ. ಈ ದುರ್ಬಲತೆಗಳು ತುಂಬಾ ಸೂಕ್ಷ್ಮವಾಗಿರುತ್ತವೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಹಿರಿಯರಲ್ಲಿ ಹೆಚ್ಚಾಗ್ತಿದೆ ಕೊರೋನಾ ಸೋಂಕು, ಹೊರಗೆ ಹೋಗದಂತೆ ತಜ್ಞರ ಎಚ್ಚರಿಕೆ


50 ವರ್ಷಕ್ಕಿಂತ ಮೇಲ್ಪಟ್ಟವರು, ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು, ಸಾಕಷ್ಟು ವ್ಯಾಯಾಮ ಮಾಡದಂತಹ ಹೆಚ್ಚು ಅಪಾಯಕ್ಕೊಳಗಾದ ರೋಗಿಗಳನ್ನು ಸಂರಕ್ಷಿಸಲು ಇದು ಸಹಕಾರಿಯಾಗಿದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

Published by:Sandhya M
First published: