Marriage: ಮದುವೆಗೂ ಮುನ್ನ ತಪ್ಪದೇ ನಿಮ್ಮ ಸಂಗಾತಿ ಜೊತೆಗೆ ಈ ವಿಷಯ ಚರ್ಚಿಸಿ

Conversations Before Marriage: ಮದುವೆ ಆಗುವ ಮೊದಲು ಅಥವಾ ಮದುವೆಯ ಬಳಿಕ ಪ್ರಮುಖವಾಗಿ ತಲೆದೋರುವ ಸಮಸ್ಯೆ ಅಂದರೆ ಹಣಕಾಸಿನ ಸ್ಥಿತಿ.. ಹೀಗಾಗಿ ನೀವು ಮದುವೆಯಾಗುವ ಮೊದಲು ನಿಮ್ಮ ಸಂಗಾತಿಯೊಂದಿಗೆ ಹಣಕಾಸಿನ ಸ್ತಿತಿಯ ಬಗ್ಗೆ ಚರ್ಚೆ ನಡೆಸಲೇಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮದುವೆ (Marriage) ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಅಭೂತಪೂರ್ವ ಅನುಭವ.. ಒಮ್ಮೆ ವೈವಾಹಿಕ ಜೀವನಕ್ಕೆ (Life) ಒಳಪಟ್ಟರೆ ಸಾಕು ಜೀವನಪೂರ್ತಿ (Lifelong) ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾದ ಅನಿವಾರ್ಯತೆ ಇರುತ್ತದೆ.. ಹೀಗಾಗಿಯೇ ಕೆಲವರು ಮದುವೆ ಎಂದ ತಕ್ಷಣ ಹಿಂದೆ ಮುಂದೆ ಯೋಚನೆ (Think) ಮಾಡದೇ ಒಪ್ಪಿಗೆ ಆದವರನ್ನ ಮದುವೆಯಾಗಿ ಬಿಡುತ್ತಾರೆ.. ಆದರೆ ಈ ರೀತಿ ಮದುವೆಯಾಗದವರು ಜೀವನದಲ್ಲಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ.. ಮದುವೆಯಾದ ಹೊಸತರಲ್ಲಿ ಎಲ್ಲವೂ ಸರಿಯಾಗಿದೆ ಎಲ್ಲವೂ ಸರಾಗವಾಗಿ ಎಂದು ಅನಿಸುತ್ತಿರುವಾಗಲೇ ಏನೋ ಒಂದು ಹಾದಿ ತಪ್ಪಿದೆ ಎನ್ನುವ ಭಾವನೆ ಮೂಡಲು ಶುರುವಾಗುತ್ತದೆ.. ಹೀಗಾಗಿಯೇ ಮದುವೆಯಾಗುವ ಮುನ್ನ ಎಲ್ಲರೂ ಸಾಕಷ್ಟು ಎಚ್ಚರದಿಂದ ಇರಬೇಕು.. ಅಲ್ಲದೆ ತಮ್ಮ ಸಂಗಾತಿಯ (Couple) ಜೊತೆಗೆ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಿ ನಿರ್ಧಾರಗಳನ್ನು ತೆಗೆದುಕೊಂಡಾಗ ತಮ್ಮ ವೈವಾಹಿಕ ಜೀವನ ಸುಮಧುರವಾಗಿರುತ್ತದೆ. ಹೀಗಾಗಿ ಮದುವೆಗೂ ಮುನ್ನ ವಧು ಹಾಗೂ ಅವರ ಚರ್ಚೆ ಮಾಡಿ ಕೆಲವೊಂದಿಷ್ಟು ನಿರ್ಧಾರಗಳನ್ನು ತೆಗೆದುಕೊಂಡಾಗ ಮಾತ್ರ ಅವರ ವೈವಾಹಿಕ ಜೀವನ ಯಶಸ್ವಿಯಾಗಲು ಸಾಧ್ಯವಾಗಿರುತ್ತದೆ.. ಹೀಗಾಗಿ ನೀವು ಮದುವೆಯಾಗುವ ಯೋಚನೆ ಮಾಡಿದರೆ ನಿಮ್ಮ ಸಂಗಾತಿಯೊಂದಿಗೆ ಮೊದಲು ಈ ವಿಷಯಗಳ ಬಗ್ಗೆ ಚರ್ಚೆ ಮಾಡಿ.

    1) ಹಣಕಾಸಿನ ಸ್ಥಿತಿ: ಮದುವೆ ಆಗುವ ಮೊದಲು ಅಥವಾ ಮದುವೆಯ ಬಳಿಕ ಪ್ರಮುಖವಾಗಿ ತಲೆದೋರುವ ಸಮಸ್ಯೆ ಅಂದರೆ ಹಣಕಾಸಿನ ಸ್ಥಿತಿ.. ಹೀಗಾಗಿ ನೀವು ಮದುವೆಯಾಗುವ ಮೊದಲು ನಿಮ್ಮ ಸಂಗಾತಿಯೊಂದಿಗೆ ಹಣಕಾಸಿನ ಸ್ತಿತಿಯ ಬಗ್ಗೆ ಚರ್ಚೆ ನಡೆಸಲೇಬೇಕು. ನೀವು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಹಣಕಾಸಿನ ಸ್ತಿತಿಯ ಬಗ್ಗೆ ಚರ್ಚೆ ನಡೆಸಬೇಕು,  ಮುಂದಿನ ಜೀವನವನ್ನು ರೂಪಿಸಿಕೊಳ್ಳುವ ಬಗ್ಗೆ ಅದು ಸಹಕಾರಿ ಆಗಲಿದೆ.. ಅಲ್ಲದೆ ಉಳಿತಾಯ ಖರ್ಚು-ವೆಚ್ಚದ ಬಗ್ಗೆ ಮೊದಲೇ ಸರಿಯಾದ ರೀತಿಯಲ್ಲಿ ಪರಸ್ಪರ ಮಾತನಾಡಿಕೊಳ್ಳುವುದು ಉತ್ತಮ.

    ಇದನ್ನೂ ಓದಿ:  =ತಂದೆಯ ಫ್ರೆಂಡ್ ಜೊತೆ ಮಗಳ ಲವ್ವಿ-ಡವ್ವಿ, ಅಪ್ಪಂಗೆ ಹೇಳೋ ಹಾಗಿಲ್ಲ - ಅಂಕಲ್​ನ ಮದ್ವೆ ಆಗಲ್ಲ... ಏನಪ್ಪಾ ರಗಳೆ?

    2) ಲೈಂಗಿಕ ದೃಷ್ಟಿಕೋನ: ನಿಮ್ಮ ಮದುವೆಯಲ್ಲಿ ಲೈಂಗಿಕ ವಿಚಾರಗಳು ಸಹ ನಿರ್ಣಾಯಕ ಅಂಶವಾಗಿದೆ. ನಿಮ್ಮ ಲೈಂಗಿಕ ಹೊಂದಾಣಿಕೆ ಹೇಗಿದೆ? ನಿಮ್ಮ ಅಗತ್ಯಗಳು ಮತ್ತು ಬಯಕೆಗಳು ಪರಸ್ಪರ ಚೆನ್ನಾಗಿ ಹೊಂದಿಕೊಳ್ಳುತ್ತವೆಯೇ? ಎಂಬುದು ಪರಸ್ಪರ ಮೊದಲೇ ಮಾತನಾಡಿಕೊಂಡು, ತಿಳಿದುಕೊಳ್ಳಬೇಕು. ಮದುವೆಗೂ ಮುನ್ನ ಈ ವಿಚಾರ ಮಾತನಾಡುವುದು ಕೆಲವರಿಗೆ ಆಗದಿದ್ದರೂ, ಇದು ತಿಳಿದುಕೊಳ್ಳುವುದು ತುಂಬಾ ಮುಖ್ಯ.

    3) ಮಕ್ಕಳನ್ನು ಬೆಳೆಸುವ ಕುರಿತು: ಕೆಲವೊಂದು ಜೋಡಿಗಳು ಮದುವೆಯಾದ ಹೊಸತರಲ್ಲಿ ಮಗು ಮಾಡಿಕೊಳ್ಳುವುದು ಯಾಕೆ ಎಂಬ ಯೋಜನೆಯಲ್ಲಿ ಇರುತ್ತಾರೆ ಹೀಗಾಗಿ ಅವರು ಫ್ಯಾಮಿಲಿ ಪ್ಲಾನಿಂಗ್ ಕೂಡ ಮಾಡಿರುತ್ತಾರೆ. ಆದರೆ ಇನ್ನೂ ಕೆಲವರು ಇದರ ಬಗ್ಗೆ ಯಾವುದೇ ರೀತಿಯ ಯೋಜನೆ ಮಾಡಿರುವುದಿಲ್ಲ. ನೀವು ಮದುವೆಗೆ ಮೊದಲೇ ನಿಮ್ಮ ಮಗುವನ್ನು ಹೇಗೆ ಬೆಳೆಸುವುದು ಎಂಬುದರ ಕುರಿತು ನಿಮ್ಮ ಸಂಗಾತಿಯ ಜೊತೆ ಸಂಭಾಷಣೆ ನಡೆಸುವುದು ಅಗತ್ಯ. ನಿಮ್ಮ ಸಂಗಾತಿಯು ನಿಮ್ಮಂತೆ ಮಗು ಮಾಡಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಕುಟುಂಬ ವಿಸ್ತರಣೆ ಬಗ್ಗೆ ಚಿಂತೆ ಮಾಡಿ. ಬಳಿಕ ನಿಮ್ಮ ಮದುವೆಯಾದ ಎಷ್ಟು ಸಮಯದ ಬಳಿಕ ನೀವು ಮಗು ಮಾಡಿಕೊಳ್ಳುವ ಆಲೋಚನೆ ಮಾಡುವುದು ಉತ್ತಮ. ಇಲ್ಲವಾದಲ್ಲಿ ಮುಂದೆ ಇದೇ ವಿಚಾರಕ್ಕಾಗಿ ನಿಮ್ಮಿಬ್ಬರ ನಡುವೆ ವಾದಗಳು ಹುಟ್ಟಿಕೊಳ್ಳಬಹುದು.

    4) ಕೆಲಸದ ಹೊರೆ ಬಗ್ಗೆ: ಬಹುತೇಕರು ಮದುವೆಗೆ ಮೊದಲು ಜಗಳಹಾಡುವುದು ಕಡಿಮೆ..
    ಆದರೆ ಮದುವೆಯಾದ ಬಳಿಕ ಸಂಗಾತಿಯ ಮೇಲೆ ಹೆಚ್ಚಿನ ಕೆಲಸದ ಒತ್ತಡ ಬೀಳುವುದರಿಂದ ಜಗಳಗಳು ಸರ್ವೇಸಾಮಾನ್ಯವಾಗಿ ಶುರುವಾಗುತ್ತದೆ. ಇದರಿಂದ ಅಸಮಾಧಾನ ಬೆಳೆಯಲು ಶುರುವಾಗಿ ನಿಮ್ಮ ಸಂಬಂಧದಲ್ಲಿ ಬಿರುಕು ಬಿಡಬಹುದು.. ಹೀಗಾಗಿ ಏನೂ ಮದುವೆಯ ಮೊದಲು ನಿಮ್ಮ ಕೆಲಸವನ್ನು ಹೇಗೆ ಹಂಚಿಕೊಳ್ಳಬೇಕು ನಿಮ್ಮ ಸಂಗಾತಿ ನಿಮ್ಮ ಕೆಲಸದಲ್ಲಿ ಸಹಾಯ ಮಾಡುವ ಮನಸ್ಥಿತಿ ಉಳ್ಳವರಾ ಎಂಬ ವಿಷಯದ ಬಗ್ಗೆ ಚರ್ಚಿಸಿ ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ, ಮುಂದೆ ನೀವೊಬ್ಬರೇ ಕೆಲಸ ಮಾಡಿಕೊಂಡು, ನಿಮ್ಮ ಸಂಗಾತಿ ಸುಮ್ಮನೇ ಕೂತಿದ್ದನ್ನು ಸಹಿಸಲಾರದೇ, ಜಗಳಗಳು ಹುಟ್ಟಿಕೊಳ್ಳುತ್ತದೆ.

    ಇದನ್ನೂ ಓದಿ: ವಿವಾಹಿತರಿಗೆ ಪ್ರತಿ 5 ಸಾವಿರ ರೂ. ಯೋಜನೆ ಬಗ್ಗೆ ನಿಮಗೆ ಗೊತ್ತಾ?

    5) ಪೋಷಕರ ಬಗ್ಗೆ: ಬಹುತೇಕ ದಂಪತಿಗಳು ಮದುವೆಯಾದಾಗ ಕೇವಲ ತಾವು ತನ್ನ ಗಂಡ ಅಥವಾ ಹೆಂಡತಿ ಇರಬೇಕು ಎಂಬ ಭಾವನೆ ಇಟ್ಟುಕೊಂಡಿರುತ್ತಾರೆ.. ಹೀಗಾಗಿ ಪೋಷಕರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಮದುವೆಗೂ ಮೊದಲು ನಿಮ್ಮ ಪೋಷಕರ ಕುರಿತು ನೀವು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ ಉತ್ತಮವಾದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಇಲ್ಲದಿದ್ದರೆ ಇದು ಕುಟುಂಬದಲ್ಲಿ ಮುಂದೆ ಸಮಸ್ಯೆಗೆ ಕಾರಣವಾಗಿ ಬಿರುಕು ಮೂಡಬಹುದು.
    Published by:ranjumbkgowda1 ranjumbkgowda1
    First published: