Healthy Food: ಈ ಐದು ಆಹಾರ ಸೇವನೆ ಮಾಡಿದ್ರೆ ಸಾಕು; ಕೊಬ್ಬು, ಹೃದ್ರೋಗಗಳನ್ನು ನಿಮ್ಮ ಬಳಿ ಬರೋಕೆ ಬಿಡಲ್ಲ

ಆರೋಗ್ಯಕ ಆಹಾರಗಳ ಆಯ್ಕೆಯ ಪಟ್ಟಿಯಲ್ಲಿ ಏನೆಲ್ಲಾ ಇವೆ? ಕರಗಬಲ್ಲ ಫೈಬರ್‍ಗಳು, ಹಣ್ಣುಗಳು ಮತ್ತು ತರಕಾರಿಗಳು, ಸಸ್ಯ ಆಧಾರಿತ ಪ್ರೊಟೀನ್ ಹಾಗೂ ಸಂಪೂರ್ಣ ಧಾನ್ಯಗಳ ವಸ್ತು ಇತ್ಯಾದಿಗಳು ಈ ಪಟ್ಟಿಯಲ್ಲಿವೆ. ನಾವು ಪಟ್ಟಿ ಮಾಡಬಹುದಾದ ಆರೋಗ್ಯಕರ ಆಹಾರದ ಆಯ್ಕೆಗಳು ಬಹಳಷ್ಟು ಇದ್ದರೂ, ಪ್ರಸ್ತುತ ಇಲ್ಲಿ ಅಧಿಕ ಕೊಲೆಸ್ಟ್ರಾಲ್ ಉಳ್ಳ ತಿನಿಸುಗಳ ಬದಲಿಗೆ ಉಪಯೋಗಿಸಬಹುದಾದ 5 ಆಹಾರಗಳ ಆಯ್ಕೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ನಿತ್ಯವೂ ಸೇರಿಸುವ ಆಹಾರಗಳು (Food) ಆರೋಗ್ಯಕರವಾಗಿದ್ದರೆ, ನಮ್ಮ ದೇಹವನ್ನು ಬಹಳಷ್ಟು ಕಾಯಿಲೆಗಳಿಂದ (Disease) ದೂರವಿಡಬಹುದು. ಅದರಲ್ಲೂ ನಮ್ಮ ಆಹಾರಗಳು ಕೊಲೆಸ್ಟ್ರಾಲ್ (Cholesterol) ಮುಕ್ತವಾಗಿದ್ದರಂತೂ, ಹೃದಯದ ಕಾಯಿಲೆಗಳು ಹತ್ತಿರವೇ ಸುಳಿಯದಂತೆ ನೋಡಿಕೊಳ್ಳಬಹುದು. ಆದರೆ ನಾಲಗೆ ಚಪಲಕ್ಕೆ ಸೋತು ಬಹಳಷ್ಟು ಮಂದಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ತಿನಿಸುಗಳನ್ನು ಬಿಡಲು ಕೇಳುವುದಿಲ್ಲ. ಅಂತಹ ತಿಂಡಿಗಳ ಬದಲಿಗೆ ಆರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಲಾಭಗಳಿವೆ. ಅಧಿಕ ಪ್ರಮಾಣದಲ್ಲಿ ಕರಗುವ ಫೈಬರ್‍ಗಳನ್ನು (Fiber) ಹೊಂದಿರುವ ಆಹಾರಗಳು, ದೇಹದಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮಾತ್ರವಲ್ಲ, ಜೊತೆಗೆ ಆ ಜಿಡ್ಡಿನ ವಸ್ತುವನ್ನು ದೇಹದಿಂದ ಹೊರ ಹಾಕುವ ಪ್ರಕ್ರಿಯೇಗೂ ಸಹಾಯ ಮಾಡುತ್ತದೆ.

ಹಾಗಾದರೆ ಆರೋಗ್ಯಕ ಆಹಾರಗಳ ಆಯ್ಕೆಯ ಪಟ್ಟಿಯಲ್ಲಿ ಏನೆಲ್ಲಾ ಇವೆ? ಕರಗಬಲ್ಲ ಫೈಬರ್‍ಗಳು, ಹಣ್ಣುಗಳು ಮತ್ತು ತರಕಾರಿಗಳು, ಸಸ್ಯ ಆಧಾರಿತ ಪ್ರೊಟೀನ್ ಹಾಗೂ ಸಂಪೂರ್ಣ ಧಾನ್ಯಗಳ ವಸ್ತು ಇತ್ಯಾದಿಗಳು ಈ ಪಟ್ಟಿಯಲ್ಲಿವೆ. ನಾವು ಪಟ್ಟಿ ಮಾಡಬಹುದಾದ ಆರೋಗ್ಯಕರ ಆಹಾರದ ಆಯ್ಕೆಗಳು ಬಹಳಷ್ಟು ಇದ್ದರೂ, ಪ್ರಸ್ತುತ ಇಲ್ಲಿ ಅಧಿಕ ಕೊಲೆಸ್ಟ್ರಾಲ್ ಉಳ್ಳ ತಿನಿಸುಗಳ ಬದಲಿಗೆ ಉಪಯೋಗಿಸಬಹುದಾದ 5 ಆಹಾರಗಳ ಆಯ್ಕೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

1) ಒಣ ಬೀಜಗಳೊಂದಿಗೆ ಸೇಬು ಸೇವನೆ
ಒಲೆ ಉರಿಸಿ, ಅಡುಗೆ ಮಾಡಿಕೊಂಡು ತಿನ್ನಲು ಸಮಯ ಇಲ್ಲವೇ? ಚಿಂತಿಸಬೇಡಿ. ಬೇಯಿಸದೆಯೂ, ಹೊಟ್ಟೆ ತುಂಬುವಂತಹ , ಅತ್ಯಧಿಕ ಉತ್ತಮ ಕೊಬ್ಬು ಮತ್ತು ಫೈಬರನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ತಯಾರಿಸಬಹುದು. ಮತ್ತು ಅದಕ್ಕೆ ಹೆಚ್ಚು ಸಮಯವೂ ಬೇಕಾಗುವುದಿಲ್ಲ. ಒಂದು ಸೇಬು ಜೊತೆಗೆ ಒಂದಿಷ್ಟು ಬಾದಾಮಿ ಬೀಜಗಳು, ವಾಲ್‍ನಟ್‍ಗಳು ಮತ್ತು ಒಣ ದ್ರಾಕ್ಷಿಗಳನ್ನು ಜೊತೆಯಾಗಿ ಸೇವಿಸಿ. ನೋಡಲು ಸರಳವಾಗಿದ್ದರೂ, ಅತ್ಯಂತ ಆರೋಗ್ಯಕರ ಮತ್ತು ಸಮೃದ್ಧ ಆಹಾರವಿದು. ಅತ್ಯಧಿಕ ಕರಗುವ ಫೈಬರ್, ಆರೋಗ್ಯಕರ ಕೊಬ್ಬು, ಒಮೆಗಾ 3 ಮತ್ತು ಹೇರಳ ಆ್ಯಂಟಿಆಕ್ಸಿಡೆಂಟ್‍ಗಳನ್ನು ಹೊಂದಿದೆ ಇದು.

ಇದನ್ನೂ ಓದಿ:  Health Tips: ರೋಗ ನಿರೋಧಕ ಶಕ್ತಿ, ಉತ್ತಮ ಜೀರ್ಣಕ್ರಿಯೆಗೆ ಸಹಕರಿಸುವ ಈ ಆಹಾರಗಳನ್ನು ಮಿಸ್ ಮಾಡಬೇಡಿ

ಬೆಳಗ್ಗಿನ ಉಪಹಾರದ ಸಮಯದಲ್ಲಿ ಇದನ್ನು ಸೇವಿಸಿರಿ ಎಂದಾದಲ್ಲಿ, ಮಧ್ಯಾಹ್ನದ ಊಟದ ಸಮಯದ ವರೆಗೆ ನಿಮಗೆ ಹಸಿವೇ ಆಗದಂತೆ ನೋಡಿಕೊಳ್ಳುತ್ತದೆ. ಕೆಲಸದ ನಡುವೆ ನಿಮಗೆ ಮಧ್ಯ ಮಧ್ಯೆ ಹಸಿವಾದರೆ, ಆ ಹಸಿವನ್ನು ದೂರ ಓಡಿಸಲಿಕ್ಕೂ ಇದು ಸೂಕ್ತ ಆಹಾರ. ಹಸಿವಾದಾಗ ಇದರ ಬದಲಿಗೆ ನೀವು ಪ್ರೊಟೀನ್, ಮಲ್ಟಿಗ್ರೈನ್ ಬಾರ್‍ಗಳ ಮೊರೆ ಹೋಗಬಹುದು, ಆದರೆ ಅದರಲ್ಲಿ ಕೃತಕ ಸಿಹಿ ಅಥವಾ ಸಕ್ಕರೆಯ ಬದಲಿಗೆ , ಅದರಲ್ಲಿ ಹೆಚ್ಚಿನ ಪ್ರೊಟೀನ್ ಇದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ.

ಸಾಧಕ -ಬಾಧಕಗಳು : ಅತ್ಯಧಿಕ ಕಾರ್ಬ್‍ಗಳು ಮತ್ತು ಉತ್ತಮ ಕೊಬ್ಬುಗಳು; ಆದರೂ ಫೈಬರ್ ಅಂಶ ಅಷ್ಟೊಂದು ಉತ್ತಮವಾಗಿಲ್ಲ.

2) ಪಾಪ್ಡ್ ಆಲೂಗಡ್ಡೆ ಚಿಪ್ಸ್ ( 50 ಶೇಕಡಾ ಕಡಿಮೆ ಕೊಬ್ಬು)
ಆರೋಗ್ಯ ಪ್ರಜ್ಞೆ ಉಳ್ಳವರು ಮತ್ತು ಫಿಟ್‍ನೆಸ್ ಪ್ರಿಯರಿಗೆ ಸೂಕ್ತವಾದ ತಿನಿಸು ಇದು. ಆರೋಗ್ಯವಾದ ಆಹಾರಗಳನ್ನಷ್ಟೇ ತಿನ್ನಬೇಕು ಎಂದ ಕೂಡಲೇ, ನೀವು ನಿಮ್ಮ ಅಚ್ಚುಮೆಚ್ಚಿನ ಆಲೂಗಡ್ಡೆ ವೇಫರ್ಸ್ಗಳನ್ನು ತಿನ್ನವುದನ್ನೇ ಬಿಟ್ಟು ಬಿಡಬೇಕು ಎಂದು ಅರ್ಥವಲ್ಲ. ಅಚ್ಚರಿಯಾಯಿತೆ? ನಿಮ್ಮ ನೆಚ್ಚಿನ ಆಲೂಗಡ್ಡೆ ಚಿಪ್ಸ್ ಗಳನ್ನು ಆರೋಗ್ಯಕರ ರೀತಿಯಲ್ಲಿ ತಿನ್ನಲು ಕೂಡ ಆಯ್ಕೆ ಇದೆ. ಅಂದರೆ, ನೀವು ಕರಿದ ಚಿಪ್ಸ್ ಗಳನ್ನು ತಿನ್ನುವ ಬದಲು ಪಾಪ್ಡ್ ಚಿಪ್ಸ್ ಗಳನ್ನು ತಿನ್ನಬಹುದು.

ಸಾಮಾನ್ಯವಾಗಿ ಎಲ್ಲರೂ ಬಳಸುವ ಕರಿದ ಚಿಪ್ಸ್ ಗಳಿಗೆ ಹೋಲಿಸಿದರೆ, ಪಾಪ್ಡ್ ಚಿಪ್ಸ್ ಗಳಲ್ಲಿ ಶೇಕಡಾ 50 ರಷ್ಟು ಕೊಬ್ಬು ಕಡಿಮೆ ಇದೆ. ಹಾಗಾಗಿ ಯಾವುದೇ ಚಿಂತೆಯಿಲ್ಲದೆ ನೀವು ಅವುಗಳನ್ನು ಚಪ್ಪರಿಸಬಹುದು. ಅಷ್ಟೇ ಅಲ್ಲ, ನೀವು ಪಾಪ್ಟ್ ಚಿಪ್ಸ್ ಗಳಲ್ಲಿ ನಿಮಗಿಷ್ಟವಾದ ಫ್ಲೇವರ್‍ಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ಫಿಟ್‍ನೆಸ್ ಗುರಿಯನ್ನು ಮುರಿಯುತ್ತಿದ್ದೇವೆ ಎಂಬ ಅಪರಾಧ ಪ್ರಜ್ಞೆ ಇಲ್ಲದೆ ಸೇವಿಸಬಹುದಾದ ತಿನಿಸು ಇದು.

ಸಾಧಕ -ಬಾಧಕಗಳು : ಕೊಬ್ಬು ಗಣನೀಯವಾಗಿ ಕಡಿಮೆ ಇರುವ ಮತ್ತು ಚಿಂತೆಯಿಲ್ಲದೆ ತಿನ್ನಬಹುದಾದ ತಿನಿಸು.

ಇದನ್ನೂ ಓದಿ: Health Tips: ಮಲಬದ್ಧತೆ ಸಮಸ್ಯೆ ನಿವಾರಿಸಲು ಆಯುರ್ವೇದ ಔಷಧಿ!

3) ಬ್ರೋಕೊಲಿ ಸಲಾಡ್
ಬ್ರೋಕೊಲಿ ವಿಟಮಿನ್ ಮತ್ತು ಮಿನರಲ್‍ಗಳ ಅತ್ಯದ್ಭುತ ಖಜಾನೆಯೆಂದು ಪರಿಗಣಿಸಲಾಗಿರುವ ತರಕಾರಿ. ಅದರಲ್ಲಿ ಅತ್ಯಧಿಕ ಫೈಬರ್ ಕೂಡ ಇದೆ. ಆರೋಗ್ಯಕರ ಜೀವನಕ್ಕೆ , ನಮ್ಮ ಆಹಾರ ಕ್ರಮದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಅಂತಹ ಹಸಿರು ಸೊಪ್ಪು ತರಕಾರಿಗಳಲ್ಲಿ ಬ್ರೋಕೊಲಿ ಕೂಡ ಒಂದು. ಅದರಲ್ಲಿ ಅತ್ಯಧಿಕ ಫೈಬರ್ ಕೂಡ ಇದೆ. ತರಕಾರಿಗಳು ಕೊಲೆಸ್ಟ್ರಾಲನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ದೇಹದಿಂದ ವಿಷಕಾರಕಗಳನ್ನು ಹೊರ ಹಾಕಲು ಸಹಾಯ ಮಾಡುತ್ತವೆ.

ತ್ವರಿತ ತಿಂಡಿಗಳ ಆಯ್ಕೆ ಇದ್ದಲ್ಲಿ, ಬ್ರೋಕೊಲಿ ಸಲಾಡ್ ಅನ್ನು ಆರಿಸಿಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಅದಕ್ಕೆ ನೀವು ಕಾಲೆ, ಪಾಲಕ್ ಮುಂತಾದ ಕೆಲವು ತರಕಾರಿಗಳನ್ನು ಕೂಡ ಸೇರಿಸಿಕೊಳ್ಳಬಹುದು. ಒಂದಿಷ್ಟು ಹೆಚ್ಚಿದ ಈರುಳ್ಳಿ, ಟೋಮ್ಯಾಟೋ ಹೋಳುಗಳು, ಬೇಯಿಸಿದ ಕಾರ್ನ್ ಮತ್ತು ಒಂದು ಪುದೀನ ಸೇರಿಸಿದರೆ, ನಿಮ್ಮ ಬ್ರೋಕೊಲಿ ಸಲಾಡ್ ಇನ್ನಷ್ಟು ರುಚಿಕರವಾಗುತ್ತದೆ. ಈ ಸಲಾಡ್‍ಗೆ ನೀವು ಸಾಸಿ ಗಾರ್ಮೆಟ್ ಡಿಪ್ ಅನ್ನು ಸೇರಿಸಿ ತಿಂದರಂತೂ ಅದರ ರುಚಿ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ.

ಸಾಧಕ -ಬಾಧಕಗಳು : ಬ್ರೋಕೊಲಿ ಸಲಾಡ್‍ನಲ್ಲಿ ಆ್ಯಂಟಿಆಕ್ಸಿಡೆಂಟ್‍ಗಳು ಯಥೇಚ್ಛವಾಗಿವೆ. ಆದರೆ ಇದರ ರುಚಿ ಎಲ್ಲರಿಗೂ ಇಷ್ಟವಾಗುವ ಸಾಧ್ಯತೆಗಳು ಬಹಳ ಕಡಿಮೆ ಎನ್ನಬಹುದು.

4) ವೇಗನ್ ಮಿಲ್ಕ್ ಸ್ಮೂದಿ
ಆಗಾಗ್ಗೆ ಕಾಡುವ ಹಸಿವಿನ ಸಂಕಟವನ್ನು ದೂರವಿಡಲು ಅತ್ಯಂತ ಸೂಕ್ತ ಆಹಾರವಿದು. ಯಾವುದೇ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸ್ಮೂದಿಗಳಿಗೆ ವಿಶೇಷ ಸ್ಥಾನ ಇದ್ದೇ ಇರುತ್ತದೆ. ವಿವಿಧ ಬಗೆಯ ಹಣ್ಣು, ತರಕಾರಿ, ಒಣ ಬೀಜಗಳನ್ನು ಸೇರಿಸಿ ತಯಾರಿಸಲಾಗುವ ಸ್ಮೂದಿಯಲ್ಲಿ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶಗಳು ಯಥೇಚ್ಚವಾಗಿರುತ್ತವೆ.

ವೇಗನ್ ಮಿಲ್ಕ್ ಸ್ಮೂದಿ ಮಾಡಲು, ಒಂದಿಷ್ಟು ಬಾಳೆ ಹಣ್ಣಿನ ತುಂಡುಗಳು, ಬೆರ್ರಿಗಳು, ಒಣ ಬೀಜಗಳು ಮತ್ತು ಅರ್ಧ ಕಪ್ ವೇಗನ್ ಮಿಲ್ಕ್ ಇದ್ದರೆ ಸಾಕು, ಈ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್‍ನಲ್ಲಿ ಹಾಕಿ ರುಬ್ಬಿದರೆ, ಸಂಜೆಯ ಸ್ನ್ಯಾಕ್ಸ್‍ಗೆ ಹೇಳಿ ಮಾಡಿಸಿದಂತಹ ಆರೋಗ್ಯಕರ ಮತ್ತು ರುಚಿಕರ ಸ್ಮೂದಿ ಸಿದ್ಧವಾಗುತ್ತದೆ. ಹೇರಳವಾದ ಆ್ಯಂಟಿಆಕ್ಸಿಡೆಂಟ್‍ಗಳನ್ನು ಹೊಂದಿರುವ ಬೆರ್ರಿಗಳು ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತವೆ ಮತ್ತು ಬಾಳೆ ಹಣ್ಣು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇನ್ನು ವೇಗನ್ ಹಾಲು, ಮ್ಯಾಕ್ರೋ ಮತ್ತು ಮೈಕ್ರೋನ್ಯೂಟ್ರಿಯಂಟ್ ಅಗತ್ಯಗಳನ್ನು ಪೂರ್ಣಗೊಳಿಸಲು ಅತ್ಯಂತ ಅಗತ್ಯವಿರುವ ಪ್ರೊಟೀನನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸುತ್ತದೆ. ನಿಮ್ಮ ಸ್ಮೂದಿ ಇನ್ನಷ್ಟು ಸಿಹಿಯಾಗಿರಬೇಕು ಎಂದು ಅನಿಸಿದರೆ, ನೀವು ಅದಕ್ಕೊಂದಿಷ್ಟು ಚಾಕೋಲೇಟ್ ಸಿಗಾರ್‍ಗಳನ್ನು ಸೇರಿಸಬಹುದು.

ಇದನ್ನೂ ಓದಿ:  Diet Tips: ಅನಾರೋಗ್ಯಕರ ಎಂದು ಕರೆಯಿಸಿಕೊಳ್ಳುವ ಆಹಾರ ಪದಾರ್ಥಗಳಿಂದ ಇಷ್ಟೆಲ್ಲಾ ಅನುಕೂಲತೆಗಳಿವೆ !

ಸಾಧಕ ಮತ್ತು ಬಾಧಕಗಳು : ವೇಗನ್ ಮಿಲ್ಕ್ ಸ್ಮೂದಿ ನಾಲಗೆಗೆ ರುಚಿ ಎನಿಸುತ್ತದೆ ನಿಜ, ಆದರೆ ಇದರಲ್ಲಿ ಕಾರ್ಬೋಹೈಡ್ರೆಟ್‍ಗಳು ಮತ್ತು ಕ್ಯಾಲೋರಿಗಳ ಪ್ರಮಾಣ ಅಧಿಕವಿರುತ್ತದೆ.

5) ಹುರಿದ ಕಮಲದ ಬೀಜಗಳು
ಕಮಲದ ಬೀಜಗಳು ಪೌಷ್ಟಿಕಾಂಶಗಳ ಖಜಾನೆ ಇದ್ದಂತೆ. ಇದನ್ನು ವಿವಿಧ ರೀತಿಯ ಆರೋಗ್ಯಕರ ಅಂಶಗಳನ್ನು ಹೊಂದಿರುವ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಕಾರಣ, ಕಮಲದ ಬೀಜಗಳಲ್ಲಿ ಹೇರಳ ಕ್ಯಾಲ್ಸಿಯಂ ಇದೆ ಮತ್ತು ಅತ್ಯಧಿಕ ವಿಟಮಿನ್‍ಗಳಿವೆ. ಇದೊಂದು ಲಘು ತಿನಿಸಾಗಿದ್ದರೂ, ದೀರ್ಘಕಾಲದ ವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ.

ಸಂಜೆಯ ಸ್ನ್ಯಾಕ್ಸ್ ಗೆ ಮಾತ್ರವಲ್ಲ, ದಿನದ ಇತರ ವೇಳೆಯಲ್ಲಿ ಕೆಲಸದ ಮಧ್ಯೆ ಹಸಿವಾದಾಗಲೂ ಹುರಿದ ಕಮಲದ ಬೀಜಗಳನ್ನು ಸೇವಿಸಬಹುದು. ಕಮಲದ ಬೀಜದಿಂದ ಸ್ಮೂದಿ, ಲಡ್ಡು, ಪಾಯಸ, ಹಲ್ವಾ, ಚಾಟ್ಸ್ ಮುಂತಾದ ಅನೇಕ ರೀತಿಯ ತಿನಿಸುಗಳನ್ನು ತಯಾರಿಸಬಹುದು. ಆದರೆ ಕಮಲದ ಬೀಜಗಳಿಂದ ಆರೋಗ್ಯಕರ ಮತ್ತು ತ್ವರಿತವಾಗಿ ತಿನಿಸನ್ನು ತಯಾರಿಸಬೇಕು ಎಂದಿದ್ದರೆ ಹೀಗೆ ಮಾಡಿ - 100 ಗ್ರಾಂ ಕಮಲದ ಬೀಜಗಳನ್ನು ಒಂದು ಚಿಟಿಕೆ ದೇಸಿ ತುಪ್ಪದಲ್ಲಿ (ಎಣ್ಣೆಯಲ್ಲಿ ಬೇಡ) ಹುರಿಯಿರಿ. ಕಮಲದ ಬೀಜಗಳು ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದ ನಂತರ ಒಲೆಯನ್ನು ಆಫ್ ಮಾಡಿ. ಇದಕ್ಕೆ ಇನ್ನಷ್ಟು ಫ್ಲೇವರ್ ನೀಡಬೇಕು ಎಂದಿದ್ದರೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವಿನ ಸೊಪ್ಪಿನ ಪುಡಿ ಅಥವಾ ಪುದೀನ ಎಲೆಗಳನ್ನು ಸೇರಿಸಿ. ಇದನ್ನು ಹೀಗೆಯೇ ಸೇವಿಸಲು ಅಡ್ಡಿಯಿಲ್ಲ. ಆದರೆ ನಿಮ್ಮ ನಾಲಗೆ ಇನ್ನಷ್ಟು ರುಚಿ ನೀಡಬೇಕು ಎಂದರೆ, ಈ ಹುರಿದ ಕಮಲದ ಬೀಜಗಳ ಜೊತೆಗೆ , ನಿಯಂತ್ರಿತ ಕ್ಯಾಲೋರಿ ಕುಕಿಗಳನ್ನು ಕೂಡ ತಿನ್ನಬಹುದು.

ಸಾಧಕ -ಬಾಧಕಗಳು : ಅತ್ಯುತ್ತಮ ಪೌಷ್ಟಿಕಾಂಶಯುಕ್ತ ತಿನಿಸು ಆದರೆ ಕೊಂಚ ದುಬಾರಿ
Published by:Ashwini Prabhu
First published: