• Home
  • »
  • News
  • »
  • lifestyle
  • »
  • Healthy Hair: ನಿಮ್ಮ ಕೂದಲು ಆರೋಗ್ಯವಾಗಿ ಇರಬೇಕಾ? ಹಾಗಾದ್ರೆ ಈ 5 ಬಯೋಟಿನ್ ಭರಿತ ಆಹಾರಗಳನ್ನು ಸೇವಿಸಿ

Healthy Hair: ನಿಮ್ಮ ಕೂದಲು ಆರೋಗ್ಯವಾಗಿ ಇರಬೇಕಾ? ಹಾಗಾದ್ರೆ ಈ 5 ಬಯೋಟಿನ್ ಭರಿತ ಆಹಾರಗಳನ್ನು ಸೇವಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬಯೋಟಿನ್ ಅಂಶ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಹಾರದಲ್ಲಿ ನೀವು ಸೇರಿಸಬಹುದಾದ ಕೆಲವು ಬಯೋಟಿನ್ ಭರಿತ ಆಹಾರಗಳ ಬಗ್ಗೆ ನಾವು ಇಲ್ಲಿ ವಿವರಿಸಿದಿದ್ದೇವೆ ಓದಿ...

  • Share this:

ಸಾಮಾನ್ಯವಾಗಿ ನಾವು ನಮಗೆ ದೇಹದಲ್ಲಿ (Body) ಎಲ್ಲಾದರೂ ಗಾಯಗಳಾದರೂ ಅಷ್ಟಾಗಿ ತಲೆ ಕೆಡೆಸಿಕೊಳ್ಳುವುದಿಲ್ಲ, ಆದರೆ ನಮ್ಮ ಕೂದಲು ಉದುರುತ್ತಿರುವ (Hair Fall) ಸಮಸ್ಯೆಯ ಬಗ್ಗೆ ತುಂಬಾನೇ ಚಿಂತಿತರಾಗಿರುತ್ತೇವೆ. ಹೌದು..ಬಹುತೇಕರು ತಮ್ಮ ಕೂದಲ ಆರೋಗ್ಯದ (Health) ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ ಮತ್ತು ಕೂದಲಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ತಲೆದೂರಿದರೆ ನಮಗೆ ತುಂಬಾನೇ ಚಿಂತೆ ಶುರುವಾಗುತ್ತದೆ. ಅತಿಯಾದ ಕೂದಲು ಉದುರುವಿಕೆ ಮತ್ತು ಬೋಳು ತಲೆಯು ಗಂಡಸರಿಗೂ (Men) ಮತ್ತು ಮಹಿಳೆಯರಿಗೂ (Women) ಕೆಲವೊಮ್ಮೆ ತುಂಬಾನೇ ಮುಜುಗರ ಪಡುವಂತೆ ಸಹ ಮಾಡುತ್ತದೆ. ಯಾರಿಗೆ ತಾನೇ ತಮ್ಮ ಕೂದಲನ್ನು ಆರೋಗ್ಯವಾಗಿರಿಸಿಕೊಳ್ಳಬೇಕು ಅಂತ ಅನ್ನಿಸುವುದಿಲ್ಲ ಹೇಳಿ? ನಮ್ಮ ಕೂದಲಿನ ಆರೋಗ್ಯವನ್ನು ನಿರ್ಧರಿಸುವಲ್ಲಿ ನಮ್ಮ ಪೌಷ್ಟಿಕಾಂಶವು (Nutrition) ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಹುತೇಕರಿಗೆ ತಿಳಿದಿರುವುದಿಲ್ಲ.


ನಮ್ಮ ದೇಹದಂತೆಯೇ, ನಮ್ಮ ಕೂದಲಿಗೂ ಆರೋಗ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಕಾಪಾಡಿಕೊಳ್ಳಲು ಸಾಕಷ್ಟು ಪೌಷ್ಟಿಕಾಂಶದ ಅಗತ್ಯವಿದೆ. ಕೂದಲಿನ ಬೆಳವಣಿಗೆಗೆ ಅತ್ಯಂತ ನಿರ್ಣಾಯಕ ಪೋಷಕಾಂಶಗಳಲ್ಲಿ ಒಂದು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬಯೋಟಿನ್ ಅಂಶ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಹಾರದಲ್ಲಿ ನೀವು ಸೇರಿಸಬಹುದಾದ ಕೆಲವು ಬಯೋಟಿನ್ ಭರಿತ ಆಹಾರಗಳನ್ನು ನಾವು ಇಲ್ಲಿ ತಂದಿದ್ದೇವೆ ನೋಡಿ.


1. ನಟ್ಸ್ ಮತ್ತು ಬೀಜಗಳು
ಪ್ರತಿದಿನ ನಟ್ಸ್ ಮತ್ತು ಬೀಜಗಳನ್ನು ತಿನ್ನುವುದರ ಮಹತ್ವದ ಬಗ್ಗೆ ಬಹುತೇಕರಿಗೆ ಗೊತ್ತೇ ಇರುತ್ತದೆ. ಅವುಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದು ಮಾತ್ರವಲ್ಲದೆ, ಆರೋಗ್ಯಕರ ಕೂದಲ ಬೆಳವಣಿಗೆಗೂ ಸಹ ಸಹಾಯ ಮಾಡುತ್ತವೆ ಎಂದು ಹೇಳಬಹುದು. ಬಾದಾಮಿ, ವಾಲ್ನಟ್ ಗಳು, ಕಡಲೆಕಾಯಿ ಮತ್ತು ಸೂರ್ಯಕಾಂತಿ ಬೀಜಗಳನ್ನು ತಿಂಡಿಯಾಗಿ ಹಸಿಯಾಗಿ ತಿನ್ನಬಹುದು ಅಥವಾ ಸಲಾಡ್, ಸ್ಮೂಥಿಗಳು ಮತ್ತು ಸಿಹಿ ತಿಂಡಿಗಳಿಗೆ ಇವುಗಳನ್ನು ಸೇರಿಸಿಕೊಂಡು ತಿನ್ನಬಹುದು.


ಇದನ್ನೂ ಓದಿ: Burans Flower And Beauty: ಚರ್ಮದ ಸಮಸ್ಯೆಗೆ ಹೂವಿನಲ್ಲಿದೆ ಮದ್ದು! ಮುಖದ ಹೊಳಪು ಹೆಚ್ಚಿಸೋ ಬುರಾನ್ಶ್!


2. ಪಾಲಕ್ ಸೊಪ್ಪು
ಪಾಲಕ್ ಸೊಪ್ಪು ಪ್ರೋಟೀನ್ ಮತ್ತು ಕಬ್ಬಿಣದ ಶಕ್ತಿ ಕೇಂದ್ರ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಇದು ಬಯೋಟಿನ್ ನ ಅದ್ಭುತ ಮೂಲವೂ ಹೌದು ಎಂದು ನಿಮಗೆ ತಿಳಿದಿದೆಯೇ? ಆದ್ದರಿಂದ ಪಾಲಕ್ ಪನೀರ್, ದಾಲ್ ಪಾಲಕ್ ಮತ್ತು ಇತರ ಭಾರತೀಯ ಊಟಗಳನ್ನು ಪಾಲಕ್ ತಿನ್ನುವುದನ್ನು ಹಾಗೆಯೇ ಮುಂದುವರಿಸಿ. ಇದು ನಿಮ್ಮ ಬಾಯಿಯ ರುಚಿಗೂ ಒಳ್ಳೆಯದು ಮತ್ತು ನಿಮ್ಮ ಕೂದಲು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.


3. ಮೊಟ್ಟೆಯ ಹಳದಿ ಲೋಳೆ
ಪ್ರೋಟೀನ್ ಮತ್ತು ಬಯೋಟಿನ್ ಮೊಟ್ಟೆಯ ಹಳದಿ ಲೋಳೆಯಲ್ಲಿ ಕಂಡು ಬರುವ ಎರಡು ಅಗತ್ಯ ಘಟಕಗಳಾಗಿವೆ. ಇಂಟರ್ನ್ಯಾಷನಲ್ ಫುಡ್ ಇನ್ಫಾರ್ಮೇಶನ್ ಕೌನ್ಸಿಲ್ ಫೌಂಡೇಶನ್ ನ ಸಂಶೋಧನೆಯ ಪ್ರಕಾರ, ಹಳದಿ ಲೋಳೆ ಸೇರಿದಂತೆ ಸಂಪೂರ್ಣ ಮೊಟ್ಟೆಯಲ್ಲಿ 10 ಎಂಸಿಜಿ ಬಯೋಟಿನ್ ಅಂಶವು ಇರುತ್ತದೆ.


4. ಸಾಲ್ಮನ್ ಮೀನು ಸೇವಿಸಿ
ಈ ಸಾಲ್ಮನ್ ಮೀನು ಬಯೋಟಿನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಸಾಲ್ಮನ್ ಒಟ್ಟಾರೆ ಆರೋಗ್ಯಕ್ಕೆ ಮತ್ತು ಉದ್ದವಾದ, ಸುಂದರವಾದ ಕೂದಲಿಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇಂಟರ್ನ್ಯಾಷನಲ್ ಫುಡ್ ಇನ್ಫಾರ್ಮೇಶನ್ ಕೌನ್ಸಿಲ್ ಫೌಂಡೇಶನ್ ಪ್ರಕಾರ, ಮೂರು ಔನ್ಸ್ ಸಾಲ್ಮನ್ ಐದು ಎಂಸಿಜಿ ಬಯೋಟಿನ್ ಅನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: Feet Care: ಕೈ ಮತ್ತು ಪಾದಗಳ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಈ ಮನೆಮದ್ದು ಟ್ರೈ ಮಾಡಿ ನೋಡಿ


5. ಡೈರಿ ಉತ್ಪನ್ನಗಳು
ಕೊನೆಯದಾಗಿ ಈ ಡೈರಿ ಉತ್ಪನ್ನಗಳನ್ನು ಪ್ರತಿದಿನ ಸೇವಿಸುವುದರಿಂದ ಸಹ ನಮ್ಮ ಕೂದಲು ಆರೋಗ್ಯವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಡೈರಿ ಉತ್ಪನ್ನಗಳು ಎಂದರೆ ಹಾಲು, ಚೀಸ್ ಮತ್ತು ಮೊಸರು ಸೇರಿದಂತೆ ಎಲ್ಲಾ ಉತ್ಪನ್ನಗಳು ಗಣನೀಯ ಪ್ರಮಾಣದ ಬಯೋಟಿನ್ ಅನ್ನು ಹೊಂದಿರುತ್ತವೆ. ಉತ್ತಮ ಆರೋಗ್ಯ ಮತ್ತು ಸುಂದರವಾದ ಕೂದಲಿಗಾಗಿ, ನಿಮ್ಮ ಊಟದಲ್ಲಿ ಈ ಡೈರಿ ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

Published by:Ashwini Prabhu
First published: