Life style: ಕಾಫಿಗೆ Bye bye ಹೇಳಿ, ಕಾಫಿ ಬದಲು ನಿಮ್ಮಲ್ಲಿ ಚೈತನ್ಯ ತುಂಬೋ 5 ಪರ್ಯಾಯಗಳು ಇಲ್ಲಿವೆ ನೋಡಿ

ಚಾಕೊಲೇಟ್ ನಿಮಗೆ ಇಷ್ಟವಾದಲ್ಲಿ ನಿಮ್ಮ ದೈನಂದಿನ ಶಕ್ತಿಯ ಅಗತ್ಯಕ್ಕಾಗಿ ಚಾಕೊಲೇಟ್ ಸೇರಿಸಿ. ನಿಮ್ಮ ಶಕ್ತಿಯ ಮಟ್ಟವನ್ನು ಕಾಫಿಗಿಂತ ಪರಿಣಾಮಕಾರಿಯಾಗಿ ಹೆಚ್ಚಿಸುವುದರ ಜೊತೆಗೆ, ಇದು ಆರೋಗ್ಯಕರ ಪರಿಣಾಮಗಳನ್ನು ಸಹ ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ನಮ್ಮ ಜೀವನಶೈಲಿಯ (Lifestyle) ಅಂತ್ಯವಿಲ್ಲದ ಒತ್ತಡ ಮತ್ತು ಆತಂಕದಿಂದಾಗಿ, ನಮ್ಮಲ್ಲಿ ಹಲವರು ಕಿರಿಕಿರಿಗೊಂಡ ಮನಸ್ಸು,(Irritated Mind) ಗಮನದ ಕೊರತೆ ಮತ್ತು ಆಯಾಸದಿಂದ ಎಚ್ಚರಗೊಳ್ಳುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೆ ಸಾಮಾನ್ಯವಾಗಿ ನಿದ್ರೆಯ ಕೊರತೆ ಮತ್ತು ಅದರಿಂದಾಗಿ ಬೆಳಗ್ಗೆ ಸುಸ್ತಾಗಿ ಎಚ್ಚರಗೊಳ್ಳುವುದು ಕಾರಣವಾಗಿರುತ್ತದೆ. ದಿನವನ್ನು ಪ್ರಾರಂಭಿಸುವ ಅತ್ಯತ್ತಮ ಮಾರ್ಗವೆಂದರೆ ಅದು ಕಾಫಿ. ದಿನವಿಡೀ ದಣಿವಾಗದೆ ಉತ್ಸಾಹದಿಂದ ಓಡಾಡಲು ದೇಹಕ್ಕೆ ಕೆಫೀನ್‌ನ(Caffeine) ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಆ ಚಟವನ್ನು(Addiction ) ನಮ್ಮ ದೈನಂದಿನ ಜೀವನದಲ್ಲಿ ಅಂಟಿಸಿಕೊಳ್ಳುತ್ತೇವೆ. ಒತ್ತಡದ ದಿನದ ನಂತರ ಒಂದು ಕಾಫಿ ನಮ್ಮಲ್ಲಿನ ಉಲ್ಲಾಸವನ್ನು ಮರುಕಳಿಸಲು ಸಹಾಯಕಾರಿ ಎಂಬುವುದು ಸಾಮಾನ್ಯ ನಂಬಿಕೆ.

ಅದೇನೇ ಇರಲಿ ಅಗತ್ಯಕ್ಕಿಂತ ಜಾಸ್ತಿ ಕಾಫಿ ಸೇವನೆ ದೇಹಕ್ಕೆ ಖಂಡಿತಾ ಒಳ್ಳೆಯದಲ್ಲ. ಮುಂಜಾನೆಯ ಕೆಫೀನ್ ಸೇವನೆ , ಎದೆಯುರಿ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು. ಹಾಗಾದರೆ ನಾವು ಅದರ ಬಗ್ಗೆ ಏನಾದರೂ ಮಾಡಬಹುದೇ? ಹೌದು, ನಮ್ಮನ್ನು ಹೆಚ್ಚಿನ ಚೈತನ್ಯದೊಂದಿಗೆ ಹಾಸಿಗೆಯಿಂದ ಎದ್ದೇಳುವಂತೆ ಮಾಡುವ ಹಾಗೂ ದಿನವಿಡೀ ಉಲ್ಲಾಸದಾಯಕವಾಗಿರಿಸುವಂತೆ ಇರಲು ಸಹಾಯ ಮಾಡುವ ಆರೋಗ್ಯಕರ ಪರ್ಯಾಯ ವ್ಯವಸ್ಥೆಗಳಿವೆ.

ಕಾಫಿಗೆ ಐದು ಅತ್ಯುತ್ತಮ ಪರ್ಯಾಯಗಳು ಇವು:

ಮಾಚ ಟೀ: ಪೂರ್ವ ಏಷ್ಯಾದಲ್ಲಿ ಸಾಂಪ್ರದಾಯಿಕವಾಗಿ ಸೇವಿಸಲಾಗುವ ಈ ಹಸಿರು ಪುಡಿ ಬೆಳಗ್ಗಿನ ನಿಮ್ಮ ಚೈತನ್ಯವನ್ನು ಹೆಚ್ಚಿಸುವ ಉತ್ತಮ ಮಾರ್ಗವಾಗಿದೆ. ಇದರಲ್ಲಿ ಕೆಫೀನ್ ಅಂಶ ಕಡಿಮೆ ಇರುವುದರಿಂದ , ಕಾಫಿಗಿಂತ ಉತ್ತಮ ಆಯ್ಕೆಯಾಗಿದೆ. ಎಲ್-ಥೈನೈನ್ ಅಂಶವನ್ನು ಒಳಗೊಂಡಿರುವುದರಿಂದ, ಈ ಚಹಾವು ನಿಮಗೆ ವಿಶ್ರಾಂತಿಯ ಜೊತೆಗೆ ನಿಮ್ಮ ಒತ್ತಡವನ್ನು ಕೂಡಾ ಕಡಿಮೆ ಮಾಡಲು ಸಹಾಯಕಾರಿ.

ಇದನ್ನೂ ಓದಿ: ಸದಾ ಹೆಡ್​ಫೋನ್ ಬಳಸುವವರು ಎಚ್ಚರದಿಂದಿರಿ, ಹೊಸಾ ಹೊಸಾ ಸಮಸ್ಯೆಗಳಿಗೆ ಅದೇ ಕಾರಣವಂತೆ!

ಆ್ಯಪಲ್ ಸೈಡರ್ ವಿನೆಗರ್: ಆ್ಯಪಲ್ ಸೈಡರ್ ವಿನೆಗರ್ ಸೇವನೆ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಮತ್ತಿದು ತುಂಬಾ ಆರೋಗ್ಯಕರ ಡ್ರಿಂಕ್ ಎಂದು ಕೂಡ ಸಾಬೀತಾಗಿದೆ. ಇಷ್ಟು ಮಾತ್ರವಲ್ಲದೆ , ಇದು ಮಧುಮೇಹವನ್ನು ತಡೆಯುತ್ತದೆ ಮತ್ತು ಉರಿಯೂತದ ವಿರುದ್ಧ ಕೂಡ ಹೋರಾಡುತ್ತದೆ.

ನಿಮ್ಮನ್ನು ಅರೆ ನಿದ್ರಾವಸ್ಥೆಯಿಂದ ಎಬ್ಬಿಸಲು ಫರ್ಮೆಂಟೆಡ್ ಸೇಬಿನ ಪಾನೀಯವು ತುಂಬಾ ಪ್ರಯೋಜನಕಾರಿ . ಒಂದು ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿಯಿರಿ. ನಿಮಗೆ ರುಚಿ ಇಷ್ಟವಿಲ್ಲದಿದ್ದರೆ, ಅದನ್ನು ಜೇನುತುಪ್ಪ ಮತ್ತು ತುಳಸಿ ಎಲೆಗಳೊಂದಿಗೆ ಸೇರಿಸಿ ಕೂಡಾ ಕುಡಿಯಬಹುದು .

ಅರಿಶಿನದ ಹಾಲು: ಸ್ವದೇಶೀ ಅರಿಶಿನ ಮಿಶ್ರಿತ ಹಾಲು ಕಾಫಿಗೆ ಪರ್ಯಾಯ ಆಯ್ಕೆಯಾಗಿದ್ದು ಇದೊಂದು ಮಾಂತ್ರಿಕ ಮಿಶ್ರಣವಾಗಿದೆ. ಇದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಅರಿಶಿನ ಹಾಲನ್ನು ಸೇವಿಸುವುದರಿಂದ ನೀವು ಶಕ್ತಿಯುತರಾಗುವುದರ ಜೊತೆಗೆ ಹೆಚ್ಚು ಪರಿಣಾಮಕಾರಿಯಾಗಿ ನಿಮ್ಮ ಕೆಲಸದಲ್ಲಿ ನಿಮ್ಮನ್ನು ತೊಡಗಿಸಬಲ್ಲಿರಿ . ಈ ಹಾಲನ್ನು ಶುಂಠಿ, ದಾಲ್ಚಿನ್ನಿ, ಅರಿಶಿನ, ಕರಿಮೆಣಸು ಮತ್ತು ಸಕ್ಕರೆ/ಬೆಲ್ಲದೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ .

ಸ್ಮೂದೀಸ್: ರುಚಿಕರವಾದ ಸ್ಮೂದಿಯನ್ನು ಸೇವಿಸಿದ ನಂತರ ಹೊಟ್ಟೆ ಮತ್ತು ಮೆದುಳು ಎರಡೂ ಉಲ್ಲಾಸದಾಯಕವಾಗಿರುತ್ತದೆ.ಬೆಳಗಿನ ಉಪಾಹಾರಕ್ಕೆ ಈ ಪಾನೀಯವನ್ನು ನೀವು ಇಷ್ಟಪಡುವ ಯಾವುದೇ ರೀತಿಯಲ್ಲಿ ಸೇವಿಸಬಹುದು. ದಿನವನ್ನು ಅತ್ಯತ್ತಮ ರೀತಿಯಲ್ಲಿ ಪ್ರಾರಂಭಿಸಲು ಕಾರ್ಬೋಹೈಡ್ರೇಟ್‌ಗಳು, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಪ್ರೋಟೀನ್‌ಗಳ ಪರಿಪೂರ್ಣ ಮಿಶ್ರಣ ಇದಾಗಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಂಗೀತ ಆಲಿಸುವುದರಿಂದ ಉಂಟಾಗುವ ಅದ್ಭುತ ಪರಿಣಾಮಗಳೇನು?

ಡಾರ್ಕ್ ಚಾಕೊಲೇಟ್ : ಚಾಕೊಲೇಟ್ ನಿಮಗೆ ಇಷ್ಟವಾದಲ್ಲಿ ನಿಮ್ಮ ದೈನಂದಿನ ಶಕ್ತಿಯ ಅಗತ್ಯಕ್ಕಾಗಿ ಚಾಕೊಲೇಟ್ ಸೇರಿಸಿ. ನಿಮ್ಮ ಶಕ್ತಿಯ ಮಟ್ಟವನ್ನು ಕಾಫಿಗಿಂತ ಪರಿಣಾಮಕಾರಿಯಾಗಿ ಹೆಚ್ಚಿಸುವುದರ ಜೊತೆಗೆ, ಇದು ಆರೋಗ್ಯಕರ ಪರಿಣಾಮಗಳನ್ನು ಸಹ ಹೊಂದಿದೆ. ಡಾರ್ಕ್ ಚಾಕೊಲೇಟ್ ಕಡಿಮೆ ಕೆಫೀನ್ ಅನ್ನು ಹೊಂದಿದ್ದು ಮೆದುಳಿನ ಕೋಶಗಳನ್ನು ಉತ್ತೇಜಿಸಿ ನಿಮ್ಮನ್ನು ದಿನವಿಡೀ ಶಕ್ತಿಯುತರನ್ನಾಗಿಸುತ್ತದೆ .
Published by:vanithasanjevani vanithasanjevani
First published: