HOME » NEWS » Lifestyle » 48 THOUSANDS PATIENTS TO LEARN IF EXERCISE HELPS PROTECT AGAINST SEVERE COVID 19 STG HG

ವ್ಯಾಯಾಮ ಮಾಡಿದರೆ ಕೊರೊನಾ ಬರಲ್ವಾ? ಅಧ್ಯಯನ ಏನು ಹೇಳುತ್ತೆ

COVID-19: ಅಮೆರಿಕದ ಆಸ್ಪತ್ರೆಯೊಂದು ಜನವರಿ-ಅಕ್ಟೋಬರ್ 2020 ರಲ್ಲಿ ಕೋವಿಡ್ ರೋಗಿಗಳನ್ನು ಉಪಚರಿಸಿತ್ತು ಮತ್ತು ಸಮೀಕ್ಷೆಯೊಂದನ್ನು ನಡೆಸಿತ್ತು. ಇವರು 48,000 ರೋಗಿಗಳಿಂದ ಮಾಹಿತಿ ಕಲೆಹಾಕಿ ವ್ಯಾಯಾಮವು ಕೋವಿಡ್‌ನೊಂದಿಗೆ ಹೋರಾಡಲು ಪರಿಣಾಮಕಾರಿಯೇ ಎಂದು ಅಧ್ಯಯನ ನಡೆಸಿತು.

news18-kannada
Updated:June 18, 2021, 5:31 PM IST
ವ್ಯಾಯಾಮ ಮಾಡಿದರೆ ಕೊರೊನಾ ಬರಲ್ವಾ? ಅಧ್ಯಯನ ಏನು ಹೇಳುತ್ತೆ
Photo: google
  • Share this:

ಇಂದಿನ ದಿನಗಳಲ್ಲಿ ನಾವು ನಮ್ಮ ಉದ್ಯೋಗಕ್ಕೆ ಎಷ್ಟು ಅಂಟಿಕೊಂಡಿದ್ದೇವೆಂದರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಗಮನಿಸದಷ್ಟರ ಮಟ್ಟಿಗೆ ಎಂದರೆ ನೀವು ನಂಬುತ್ತೀರಾ?. ಹೌದು ಎಂದು ಹೇಳುತ್ತಿದೆ ಇತ್ತೀಚಿನ ಅಧ್ಯಯನ. ಬ್ಯುಸಿ ಜೀವನದಲ್ಲಿ ನಾವು ನಮ್ಮ ಆಹಾರ ಪದ್ಧತಿ ಮತ್ತು ವ್ಯಾಯಾಮಗಳಿಗೆ ಗಮನ ನೀಡುತ್ತಿಲ್ಲ ಇದರಿಂದಾಗಿಯೇ ಬೊಜ್ಜು, ಮಾನಸಿಕ ಅಸ್ವಸ್ಥತೆ, ರೋಗಗಳು ನಮ್ಮನ್ನು ಕಾಡುವುದು ಎಂಬುದಾಗಿ ಈ ಅಧ್ಯಯನ ತಿಳಿಸಿದೆ. ಕೋವಿಡ್‌ನಂತಹ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೂಡ ವ್ಯಾಯಾಮ ಮತ್ತು ಆಹಾರ ಪದ್ಧತಿಯೆಂಬ ಮಂತ್ರವನ್ನು ನಾವು ಜಪಿಸಲೇಬೇಕು.


ಅಮೆರಿಕದ ಆಸ್ಪತ್ರೆಯೊಂದು ಜನವರಿ-ಅಕ್ಟೋಬರ್ 2020 ರಲ್ಲಿ ಕೋವಿಡ್ ರೋಗಿಗಳನ್ನು ಉಪಚರಿಸಿತ್ತು ಮತ್ತು ಸಮೀಕ್ಷೆಯೊಂದನ್ನು ನಡೆಸಿತ್ತು. ಇವರು 48,000 ರೋಗಿಗಳಿಂದ ಮಾಹಿತಿ ಕಲೆಹಾಕಿ ವ್ಯಾಯಾಮವು ಕೋವಿಡ್‌ನೊಂದಿಗೆ ಹೋರಾಡಲು ಪರಿಣಾಮಕಾರಿಯೇ ಎಂದು ಅಧ್ಯಯನ ನಡೆಸಿತು. ಇದರಿಂದ ತಿಳಿದು ಬಂದ ಅಂಶವೇನೆಂದರೆ ವ್ಯಾಯಾಮವು ಕೋವಿಡ್‌ನಿಂದ ಸಂರಕ್ಷಣೆಯನ್ನು ನೀಡುವುದರ ಜೊತೆಗೆ ನಮ್ಮ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂದಾಗಿದೆ. ಬರೇ ಅರ್ಧಗಂಟೆಯ ಏರೋಬಿಕ್ ವ್ಯಾಯಾಮವನ್ನು ಮಾಡಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದಾಗಿ ಈ ಅಧ್ಯಯನವು ಮನದಟ್ಟು ಮಾಡಿದೆ.



ವ್ಯಾಯಾಮವು ಜೀವವನ್ನು ಉಳಿಸುತ್ತದೆ


ಹೆಚ್ಚು ಸಕ್ರಿಯವಾಗಿರದೇ ಇರುವವರು ಆಸ್ಪತ್ರೆಗಳಿಗೆ ದಾಖಲಾಗುವುದು, ಐಸಿಯುನಲ್ಲಿ ದಾಖಲಾಗುವುದು, ಕೋವಿಡ್-19 ನಿಂದ ಮರಣ ಮೊದಲಾದ ಕ್ಲಿಷ್ಟಕರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ಕೂಡ ವ್ಯಾಯಾಮ ಮತ್ತು ಆಹಾರ ಪದ್ಧತಿಯನ್ನು ತಮ್ಮದಾಗಿಸಿಕೊಳ್ಳಬೇಕು. ನಡಿಗೆ, ಏರೋಬಿಕ್ಸ್, ವ್ಯಾಯಾಮ, ಧ್ಯಾನ, ಬ್ರಿಸ್ಕ್ ವಾಕ್ ಮೊದಲಾದ ವ್ಯಾಯಾಮದ ವಿವಿಧ ಬಗೆಗಳನ್ನು ಅಳವಡಿಸಿಕೊಳ್ಳಬಹುದು. ವ್ಯಾಯಾಮವು ಕ್ಯಾಲೋರಿಗಳನ್ನು ಕರಗಿಸಲು ಸಹಕಾರಿಯಾಗಿದೆ. ಸೇವಿಸುವ ಆಹಾರಕ್ಕೆ ಅನುಗುಣವಾಗಿ ವ್ಯಾಯಾಮದ ಟೈಮ್ ಟೇಬಲ್ ರಚಿಸಬೇಕು. ಆಹಾರದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಅನುಸರಿಸಿ ವ್ಯಾಯಾಮ ಮಾಡುವುದರಿಂದ ಸಮಯದ ಅಭಾವ ಉಂಟಾಗುವುದಿಲ್ಲ.


ಈ 20 ಇಲ್ಲವೇ 30 ನಿಮಿಷದಲ್ಲಿ ನೀವು ಮಾಡುವ ವ್ಯಾಯಾಮ ದೇಹದ ಕೊಬ್ಬನ್ನು ಕರಗಿಸುವ ರೀತಿಯಲ್ಲಿರಬೇಕು. ರೆಸಿಸ್ಟೆಂಟ್ ಬ್ಯಾಂಡ್ ಮತ್ತು ಪಾಯಿಂಟ್ ಬಾಲ್‌ಗಳನ್ನು ಬಳಸಿ ಮಾಡುವ ವ್ಯಾಯಾಮದಿಂದ ಕೊಬ್ಬು ಸುಲಭವಾಗಿ ಕರಗಿ ಹೋಗುತ್ತದೆ.


ನಿಮಗೆ ಕೋವಿಡ್ ಇರಲಿ ಇಲ್ಲದೇ ಇರಲಿ, ನಿಯಮಿತ ವ್ಯಾಯಾಮವು ನಿಮ್ಮ ದೀರ್ಘಾಯುಷ್ಯಕ್ಕೆ ಕಾರಣವಾಗಿದೆ. ಇನ್ನು ಕೋವಿಡ್‌ನಿಂದ ಚೇತರಿಕೆ ಹೊಂದಿದವರೂ ಕೂಡ ವ್ಯಾಯಾಮವನ್ನು ಮಾಡುವುದರಿಂದ ರೋಗನಿರೋಧಕ ಶಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಬೆಳಗ್ಗೆ ವ್ಯಾಯಾಮ ಮಾಡಲು ಕಷ್ಟ ಎಂದು ಅಂದುಕೊಳ್ಳುವವರು ಸಂಜೆ ಹೊತ್ತು ವ್ಯಾಯಾಮವನ್ನು ಮಾಡಬಹುದಾಗಿದೆ. ಆದರೆ ಮಲಗಲು 4-5 ಗಂಟೆಗಳಿರುವಾಗ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮದ ಮೊದಲು ನಿಮ್ಮ ಆಹಾರ ಸೂಕ್ತವಾಗಿರಬೇಕು. ಇನ್ನಷ್ಟು ಶ್ರಮದ ವ್ಯಾಯಾಮ ಮಾಡಲು ಹೆಚ್ಚಿನ ಶಕ್ತಿಯ ಅಗತ್ಯವಿರುವುದರಿಂದ ಸೂಕ್ತವಾದ ಆಹಾರ ಸೇವಿಸುವುದು ಹೆಚ್ಚು ಮುಖ್ಯವಾಗಿದೆ.



Youtube Video

ವ್ಯಾಯಾಮದ ಜೊತೆಗೆ ಮಾನಸಿಕ ಸ್ವಾಸ್ಥ್ಯಕ್ಕಾಗಿ ಧ್ಯಾನವನ್ನು ಅನುಸರಿಸಬೇಕಾಗುತ್ತದೆ. ಇದರಿಂದ ಮನಸ್ಸಿನಲ್ಲಿ ಬರುವ ಚಿಂತೆಗಳನ್ನು ದೂರಮಾಡಬಹುದು ಮತ್ತು ನೆಮ್ಮದಿ ಕಂಡುಕೊಳ್ಳಬಹುದು.

First published: June 18, 2021, 5:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories