• Home
  • »
  • News
  • »
  • lifestyle
  • »
  • Zombie Virus: 48 ಸಾವಿರ ವರ್ಷಗಳಷ್ಟು ಹಳೆಯ ಅಪಾಯಕಾರಿ ಜೋಂಬಿ ವೈರಸ್​ಗೆ ಮರುಜೀವ, ವಿಶ್ವಕ್ಕೆ ಮತ್ತೊಂದು ಸಂಕಷ್ಟ?

Zombie Virus: 48 ಸಾವಿರ ವರ್ಷಗಳಷ್ಟು ಹಳೆಯ ಅಪಾಯಕಾರಿ ಜೋಂಬಿ ವೈರಸ್​ಗೆ ಮರುಜೀವ, ವಿಶ್ವಕ್ಕೆ ಮತ್ತೊಂದು ಸಂಕಷ್ಟ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Zombie Virus Revive: 48,500 ವರ್ಷಗಳಷ್ಟು ಸಮಯ ಕಳೆದರೂ ಸಹ ಈ ವೈರಸ್‌ಗಳು ಇನ್ನೂ ಕೂಡ ಸಾಂಕ್ರಾಮಿಕವಾಗಿ ಉಳಿದಿವೆ ಎಂದು ವಿಜ್ಞಾನಿಗಳು ಆತಂಕಕಾರಿ ವಿಚಾರವನ್ನು ಬಯಲು ಮಾಡಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ಜಾಗತಿಕ ತಾಪಮಾನ ಹೆಚ್ಚಾದಂತೆ ಹಲವಾರು ಹಿಮನದಿಗಳು ಮತ್ತು ಪರ್ಮಾಫ್ರಾಸ್ಟ್ ಕರಗುತ್ತಿವೆ. ಈ ಕರಗುವಿಕೆಯು ವಾತಾವರಣಕ್ಕೆ, ಮನುಷ್ಯರಿಗೆ (Human)  ಹಲವಾರು ಸಂಕಷ್ಟವನ್ನು ತಂದೊಡ್ಡಬಹುದು. ಇತ್ತೀಚಿನ ಸಂಶೋಧನೆಯಲ್ಲಿ ಪರ್ಮಾಫ್ರಾಸ್ಟ್ ಮಾನವ ಜಗತ್ತಿಗೆ ಮತ್ತೊಂದು ವೈರಸ್ (Virus)  ಭೀತಿಯನ್ನು ತಂದೊಡ್ಡಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹಿಮದಿಂದ ಹೆಪ್ಪುಗಟ್ಟಿದ ಸರೋವರದ ಅಡಿಯಲ್ಲಿ ಹೂತುಹೋಗಿದ್ದ ಅಂದಾಜು 48,500 ವರ್ಷಗಳಷ್ಟು ಹಳೆಯದಾದ ಜೋಂಬಿ ವೈರಸ್​ಗೆ (zombie virus) ವಿಜ್ಞಾನಿಗಳು ಮರುಜೀವ ನೀಡಿದ್ದಾರೆ. ಫ್ರೆಂಚ್ ವಿಜ್ಞಾನಿಗಳು ಜೋಂಬಿ ವೈರಸ್ ಅನ್ನು ಪುನರುಜ್ಜೀವನಗೊಳಿಸಿರುವ ಹಿನ್ನೆಲೆಯಲ್ಲಿ ಸಾವಿರಾರು ವರ್ಷಗಳಿಂದ ಹೆಪ್ಪುಗಟ್ಟಿದ ಪ್ರಾಚೀನ ವೈರಸ್‌ಗಳು ಸಾರ್ವಜನಿಕ ಆರೋಗ್ಯಕ್ಕೆ ಕಾಲಕ್ರಮೇಣ ಅಪಾಯ ತರುವ ಎಲ್ಲಾ ಸಾಧ್ಯತೆಗಳಿವೆ.


13 ಹೊಸ ರೋಗಕಾರಕಗಳಿಗೆ ಪುರ್ನಜನ್ಮ


ಜೋಂಬಿ ವೈರಸ್‌ಗಳು ಎಂದು ಕರೆಯುವ 13 ಹೊಸ ರೋಗಕಾರಕಗಳನ್ನು ಯುರೋಪಿಯನ್ ಸಂಶೋಧಕರು ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಪರ್ಮಾಫ್ರಾಸ್ಟ್ನಿಂದ (ಹಿಮನದಿಗಳು ಬಿದ್ದ ಮತ್ತು ಸಂಗ್ರಹವಾದ ಹಿಮದಿಂದ ರೂಪುಗೊಂಡ ಚಲಿಸುವ ಹಿಮದ ಬೃಹತ್ ದ್ರವ್ಯರಾಶಿಗಳು) ಸಂಗ್ರಹಿಸಲಾದ ಪ್ರಾಚೀನ ಮಾದರಿಗಳನ್ನು ಪರೀಶಿಲನೆ ನಡೆಸಿದಾಗ ಹೆಪ್ಪುಗಟ್ಟಿದ ಹಿಮದಲ್ಲಿ ಇವು ಕಂಡು ಬಂದಿವೆ.


ಅಚ್ಚರಿ ಏನೆಂದರೆ 48,500 ವರ್ಷಗಳಷ್ಟು ಸಮಯ ಕಳೆದರೂ ಸಹ ಈ ವೈರಸ್‌ಗಳು ಇನ್ನೂ ಕೂಡ ಸಾಂಕ್ರಾಮಿಕವಾಗಿ ಉಳಿದಿವೆ ಎಂದು ವಿಜ್ಞಾನಿಗಳು ಆತಂಕಕಾರಿ ವಿಚಾರವನ್ನು ಬಯಲು ಮಾಡಿದ್ದಾರೆ.


ಪಂಡೋರಾವೈರಸ್ ಯೆಡೋಮಾ ಎಂದು ಕರೆಯಲ್ಪಡುವ ಈ ವೈರಸ್‌ ಹತ್ತಿರತ್ತಿರ 50,000 ವರ್ಷಗಳಷ್ಟು ಹಳೆಯದು. ಈ ಹಿಂದೆ ಅಂದರೆ 2013 ರಲ್ಲಿ ಇದೇ ತಂಡವು 30,000 ವರ್ಷಗಳಷ್ಟು ಹಳೆಯದಾದ ಒಂದು ವೈರಸ್‌ ಅನ್ನು ಪತ್ತೆ ಮಾಡಿತ್ತು. ಆದಾದ ನಂತರ ಬಹಿರಂಗಪಡಿಸಿದ ಈ ಸಮೀಕ್ಷೆ ಹಿಂದಿನ ದಾಖಲೆಯನ್ನು ಮುರಿದಿದೆ.


ಇದನ್ನೂ ಓದಿ: ಮೂಗು ಕಟ್ಟಿ ಉಸಿರಾಡೋಕೆ ಕಷ್ಟ ಆಗ್ತಿದ್ರೆ, ತಜ್ಞರು​ ಹೇಳಿರೋ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ಸಾಕು


ಮನುಷ್ಯ ಹಾಗೂ ಪ್ರಾಣಿಗಳಿಗೂ ಸೋಂಕು ತಗುಲಿಸುತ್ತದೆ ವೈರಸ್


ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್‌ನ ಸಂಶೋಧಕರ ತಂಡವು ಅವರು ಅಧ್ಯಯನ ಮಾಡಿದ ವೈರಸ್‌ಗಳನ್ನು ಪುನಶ್ಚೇತನಗೊಳಿಸುವ ಜೈವಿಕ ಅಪಾಯವು ಸಂಪೂರ್ಣವಾಗಿ ನಗಣ್ಯ ಎಂದು ಗುರಿಪಡಿಸಿದ ತಳಿಗಳಿಂದಾಗಿ, ಪ್ರಮುಖವಾಗಿ ಅಮೀಬಾ ಸೂಕ್ಷ್ಮಜೀವಿಗಳಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಪ್ರಾಣಿಗಳು ಅಥವಾ ಮನುಷ್ಯರಿಗೆ ಸೋಂಕು ತಗುಲಿಸುವ ವೈರಸ್‌ನ ಸಂಭಾವ್ಯ ಮರುಜೀವವು ಹೆಚ್ಚು ಸಮಸ್ಯಾತ್ಮಕವಾಗಿದೆ ಎಂದು ಅವರು ಹೇಳಿದ್ದಾರೆ.


ಅಪಾಯದ ಪ್ರಮಾಣವನ್ನು ಅಂದಾಜು ಮಾಡಲು ಸಾಧ್ಯವಿಲ್ಲ.


"ಪ್ರಾಚೀನ ಪರ್ಮಾಫ್ರಾಸ್ಟ್ ಕರಗಿದ ನಂತರ ಈ ವೈರಸ್‌ಗಳು ಬಿಡುಗಡೆ ಆಗುವ ಸಾಧ್ಯತೆಯಿದೆ" ಎಂದು ಸಂಶೋಧಕರು  ಲೇಖನದಲ್ಲಿ ಬರೆದಿದ್ದಾರೆ. "ಒಮ್ಮೆ ಹಿಮರಾಶಿಯಿಂದ ಹೊರಬಂದ ನಂತರ ಹೊರಗಿನ ವಾತಾವರಣಕ್ಕೆ ಒಡ್ಡಿಕೊಂಡಾಗ ಈ ವೈರಸ್‌ಗಳು ಎಷ್ಟು ಸಮಯದವರೆಗೆ ಸಾಂಕ್ರಾಮಿಕವಾಗಿ ಉಳಿಯಬಹುದು ಮತ್ತು ಎಷ್ಟರ ಮಟ್ಟಿಗೆ ಸೋಂಕು ತಗುಲುತ್ತವೆ ಎಂಬುದನ್ನು ಅಂದಾಜು ಮಾಡುವುದು ಇನ್ನೂ ಸಾಧ್ಯವಾಗಿಲ್ಲ" ಎಂದು ವಿಜ್ಞಾನಿಗಳ ತಂಡ ಹೇಳಿದೆ.


ಎಲ್ಲಾ ಜೋಂಬಿ ವೈರಸ್‌ಗಳು ಸಾಂಕ್ರಾಮಿಕವಾಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ, ಹೀಗಾಗಿ ಇದು ಕೊರೋನಾ ವೈರಸ್‌ನಂತೆ ಸಾರ್ವಜನಿಕ ಆರೋಗ್ಯ ಅಪಾಯವನ್ನು ಎದುರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅಧ್ಯಯನ ಹೇಳಿದೆ.


ಮಂಜುಗಡ್ಡೆ ಕರಗುವಿಕೆ  ಅಪಾಯಕ್ಕೆ ದಾರಿ


ವಿಜ್ಞಾನಿಗಳ ಪ್ರಕಾರ, ಮಂಜುಗಡ್ಡೆಯ ದೊಡ್ಡ ಪ್ರಮಾಣದ ಕರಗುವಿಕೆಯ ಪ್ರಮಾಣವು ಪರಿಸರಕ್ಕೆ ಬಿಡುಗಡೆಯಾಗುವ ಸೂಕ್ಷ್ಮಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಅಪಾಯಕಾರಿಯಾದ ರೋಗಗಳನ್ನು ಒಳಗೊಂಡಿರಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ರವಾನಿಸಿದ್ದಾರೆ.


ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಎರಿಕ್ ಡೆಲ್ವಾರ್ಟ್, "ಪ್ರಾಚೀನ ಪರ್ಮಾಫ್ರಾಸ್ಟ್‌ನಿಂದ ಲೈವ್ ವೈರಸ್‌ಗಳನ್ನು ಪ್ರತ್ಯೇಕಿಸದಿದ್ದರೆ, ಇನ್ನೂ ಚಿಕ್ಕದಾದ, ಸರಳವಾದ ಸಸ್ತನಿ ವೈರಸ್‌ಗಳು ಯುಗಗಳವರೆಗೆ ಹೆಪ್ಪುಗಟ್ಟಿ ಉಳಿಯುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕಿಂಗ್ ಕೊಹ್ಲಿ ಫೇವರೇಟ್​ ಸಲಾಡ್​ ಇದು, ನೀವೂ ಮನೆಯಲ್ಲಿ ಮಾಡ್ಬೋದು ನೋಡಿ


ಕೋವಿಡ್‌ ಸಾಂಕ್ರಾಮಿಕ ರೋಗದಿಂದಲೇ ತತ್ತರಿಸಿದ ವಿಶ್ವಕ್ಕೆ ಇನ್ಯಾವುದೇ ವೈರಸ್‌ ಎಂಟ್ರಿಯಾಗದಿದ್ದರೆ ಸಾಕು ಎಂಬುದೇ ಎಲ್ಲರ ಆಶಯ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು