Astrology: ಈ ರಾಶಿಯವರು ಸೇಡು ತೀರಿಸಿಕೊಳ್ಳದೇ ಬಿಡೋದೇ ಇಲ್ವಂತೆ

Zodiac Signs: ಆ ವ್ಯಕ್ತಿಯ ಮುಖವನ್ನು ಮತ್ತೆ ಜೀವನದಲ್ಲಿ ನೋಡಲು ಇಷ್ಟಪಡುವುದಿಲ್ಲ. ಸೇಡು ಹೆಚ್ಚಿರುತ್ತದೆ. ಸೇಡು ತೀರಿಸಿಕೊಳ್ಳುವ ಭಾವನೆ ಹೊಂದಿರುತ್ತಾರೆ. ಶತ್ರುಗಳ ಮೇಲೆ ದಾಳಿ ಮಾಡಲು ಸಿದ್ಧವಾಗಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ನೇಹಿತರಲ್ಲಷ್ಟೇ ಅಲ್ಲ ಸಂಬಂಧಿಕರ ನಡುವೆಯೂ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ(Fights), ಜಗಳಗಳು ನಡೆಯುತ್ತವೆ. ಅವರು ಯಾವುದಾದರೂ ಆಗಿರಬಹುದು ಯಾವುದೇ ಸಂದರ್ಭದಲ್ಲಿ ಸಹ ಆಗಿರಬಹುದು. ಆದರೆ, ಸ್ವಲ್ಪ ಸಮಯದವರೆಗೆ ಅಂತಹ ಘರ್ಷಣೆಯ ನಂತರ ಎಲ್ಲವೂ ಮರೆತು ಹೋಗುತ್ತದೆ. ಅವರು ಮತ್ತೆ ಒಟ್ಟಿಗೆ ಇರುತ್ತಾರೆ. ಒಂದು ಸಾರಿ ಎಲ್ಲವನ್ನು ಸರಿ ಮಾಡುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಇಂತಹ ಘರ್ಷಣೆಗಳು ನಡೆದರೆ ಮೂರು ರಾಶಿಯವರು(Zodiac Sign) ಸೇಡು ತೀರಿಸಿಕೊಳ್ಳುವ ಭಾವನೆಯನ್ನು ಹೊಂದಿರುತ್ತಾರಂತೆ. ಮನದಲ್ಲಿ ಜಿಜ್ಞಾಸೆ ಮತ್ತು ಒಳಸಂಚು ತುಂಬಿಕೊಂಡು ಅವಕಾಶಕ್ಕಾಗಿ ಕಾಯುತ್ತಿರುತ್ತಾರಂತೆ.

ಜೀವಮಾನವಿಡೀ ಸೇಡು ತೀರಿಸಿಕೊಂಡು ಬದುಕುವುದು ಸುಲಭ. ಆದರೆ ಇತರರು ಮಾಡಿದ ತಪ್ಪುಗಳನ್ನು ಕ್ಷಮಿಸಲು, ಮರೆಯಲು ತುಂಬಾ ಧೈರ್ಯ ಬೇಕು. ಈ ರೀತಿ ಸೇಡು ತೀರಿಸಿಕೊಳ್ಳುವವರು ಎಂತಹವರು ಎಂಬುದು ಇಲ್ಲಿದೆ. ಹೀಗೆ ಮಾಡುವವರು ಬಹಳ ಅಪರೂಪ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ರಾಶಿಯವರು ಆ  ಭಾವನೆಯನ್ನು ಹೊಂದಿರುತ್ತಾರೆ. ಹಾಗಾದ್ರೆ ಯಾವ ರಾಶಿಯವರು ಈ ಸೇಡಿನ ಮನೋಭಾವವನ್ನು ಹೊಂದಿರುತ್ತಾರೆ ಎಂಬುದು ಇಲ್ಲಿದೆ.

ಮಿಥುನ:

ಮಿಥುನ ರಾಶಿಯ ಜನರು ತುಂಬಾ ಕರುಣಾಮಯಿ ಅನಿಸುತ್ತದೆ. ಆದರೆ ಅವರು ಅನೇಕರೊಂದಿಗೆ ದ್ವೇಷವನ್ನು ಹೊಂದಿದ್ದಾರೆ. ಇಟ್ಟುಕೊಳ್ಳಲು ಮನಸ್ಸಿಲ್ಲದಿದ್ದರೂ ಸಹ ಹಾಗೆಯೇ ಬೆಳೆಯುತ್ತಲೇ ಇರುತ್ತದೆ. ಇತರರು ಮಾಡಿದ ದುಷ್ಕೃತ್ಯವನ್ನು ಇವರು ಎಂದಿಗೂ ಮರೆಯುವುದಿಲ್ಲ. ಅಂತಹ ಜನರನ್ನು ತಮ್ಮ ಜೀವನದಿಂದ ಅಳಿಸಲು ಅವರು ಬಯಸುತ್ತಾರೆ.

ಇದನ್ನೂ ಓದಿ: ಗ್ರಹಣಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು ? ಇಲ್ಲಿದೆ ಸಂಪೂರ್ಣ ವಿವರ

ಅವರ ಮಾತನ್ನು ಯಾರಾದರೂ ಹಗುರವಾಗಿ ತೆಗೆದುಕೊಂಡರೆ, ಅವರಿಗೆ ಕ್ಷಣಗಳಲ್ಲಿ ಕೋಪ ಬರುತ್ತದೆ. ಅವರು ಕೋಪಗೊಂಡಾಗ, ಯಾರಿಗೂ ಏನು ಹೇಳಬೇಕು ಹೇಗೆ ವರ್ತಿಸಬೇಕು ಎಂದು ಅವರಿಗೆ ತಿಳಿಯುವುದಿಲ್ಲ. ತಮ್ಮ ಅಹಂಕಾರಕ್ಕೆ ತೃಪ್ತಿಯಾಗುವವರೆಗೂ ಅವರಿಗೆ ನಿದ್ರೆ ಬರುವುದಿಲ್ಲ. ತಪ್ಪು ಮಾಡಿದವರು ಅಂತಿಮವಾಗಿ ಕ್ಷಮಿಸಿ ಎಂದು ಹೇಳುವವರೆಗೂ ಅವರು ಸೇಡು ತೀರಿಸಿಕೊಳ್ಳುತ್ತಾರೆ.

ವೃಷಭ ರಾಶಿ:

ವೃಷಭ ರಾಶಿಯವರು ಹಠಮಾರಿ ಎಂಬ ಖ್ಯಾತಿಯನ್ನು ಸುಮ್ಮನೆ ಪಡೆಯಲಿಲ್ಲ. ವೃಷಭ ರಾಶಿಯವರು ನಿಮ್ಮನ್ನು ನಂಬುವ ಮೊದಲು ನಿಜವಾಗಿಯೂ ತಮ್ಮ ಸಮಯವನ್ನು ತೆಗೆದುಕೊಳ್ಳುತ್ತಾರೆ ಮತ್ತು ನೀವು ಆ ನಂಬಿಕೆಯನ್ನು ಮುರಿದರೆ, ಅವರು ಅದನ್ನು ವೈಯಕ್ತಿಕವಾಗಿ ದ್ವೇಷಿಸುತ್ತಾರೆ. ವೃಷಭ ರಾಶಿಯವರು ನಿಮ್ಮನ್ನು ಕ್ಷಮಿಸಲು ಬಯಸಿದ್ದರೂ ಸಹ, ನೀವು ಮಾಡಿದ್ದನ್ನು ಮರೆತುಬಿಡುವುದು ಅವರಿಗೆ ತುಂಬಾ ಕಷ್ಟ. ಎಷ್ಟು ಸಮಯ ಕಳೆದರೂ ಅದು ಯಾವಾಗಲೂ ಅವರ ಮನಸ್ಸಿನ ಹಿಂಭಾಗದಲ್ಲಿ ಇರುತ್ತದೆ.

ವೃಷಭ ರಾಶಿಯವರು ತಮ್ಮನ್ನು ನೋಯಿಸುವವರನ್ನು ಕ್ಷಮಿಸುವುದಿಲ್ಲ. ಅವರು ಉದ್ದೇಶಪೂರ್ವಕವಾಗಿ ಇತರರಿಂದ ಬೇರರೆಯಾಗಲು ಸಿದ್ಧರಿದ್ದಾರೆ. ಆ ವ್ಯಕ್ತಿಯ ಮುಖವನ್ನು ಮತ್ತೆ ಜೀವನದಲ್ಲಿ ನೋಡಲು ಇಷ್ಟಪಡುವುದಿಲ್ಲ. ಸೇಡು ಹೆಚ್ಚಿರುತ್ತದೆ. ಸೇಡು ತೀರಿಸಿಕೊಳ್ಳುವ ಭಾವನೆ ಹೊಂದಿರುತ್ತಾರೆ. ಶತ್ರುಗಳ ಮೇಲೆ ದಾಳಿ ಮಾಡಲು ಸಿದ್ಧವಾಗಿರುತ್ತಾರೆ.

ಮಕರ ರಾಶಿ

ಮಕರ ರಾಶಿಯವರು ಯಾರನ್ನೂ ಸುಲಭವಾಗಿ ಕ್ಷಮಿಸುವುದಿಲ್ಲ. ಒಮ್ಮೆ ನೀವು ಅವರ ನಂಬಿಕೆಯನ್ನು ಕಳೆದುಕೊಂಡರೆ, ಅದನ್ನು ಮರಳಿ ಪಡೆಯಲು ನಿಮಗೆ ಜೀವಮಾನ ತೆಗೆದುಕೊಳ್ಳಬಹುದು. ಸ್ನೇಹಿತರನ್ನು ಮಾಡಿಕೊಂಡರೆ ಜೀವನ ಪೂರ್ತಿ ಬಿಟ್ಟು ಹೋಗುವುದಿಲ್ಲ, ಅಂತಹ ಸ್ನೇಹದ ದ್ರೋಹವನ್ನು ಜೀವನದುದ್ದಕ್ಕೂ ಮರೆಯುವುದಿಲ್ಲ. ಈ ಜನರು ತಮಗೆ ಕೇಡು ಮಾಡಿದವರನ್ನು ಬಿಡುವುದಿಲ್ಲ. ಸೇಡು ತೀರಿಸಿಕೊಳ್ಳಲು ನೋಡುತ್ತಾರೆ.

ಕಟಕ ರಾಶಿ

ಇದನ್ನೂ ಓದಿ: 2022 ಹೊಸ ವರ್ಷದಲ್ಲಿ ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸದೃಢ

ಈ ರಾಶಿಯ ಜನರು ಹೆಚ್ಚು ಕೆಟ್ಟ ಗುಣವನ್ನು ಹೊಂದಿರುತ್ತಾರೆ. ನೀವು ಅವರಿಗೆ ದ್ರೋಹ ಮಾಡಿದಾಗ, ಅದು ಅವರೊಳಗೆ ತುಂಬಾ ಆಳವಾಗಿ ನೋವನ್ನು ಅನುಭವಿಸಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆ ನೋವು ಎಂದಿಗೂ ಗುಣವಾಗುವುದಿಲ್ಲ. ಅವರ ಮನಸ್ಸಿನಲ್ಲಿ, ದಯೆ ಮತ್ತು ನಿಷ್ಠೆ ಪ್ರಪಂಚದ ಅತ್ಯಂತ ಪ್ರಮುಖ ವಿಷಯಗಳಾಗಿವೆ ಮತ್ತು ನೀವು ಅವರನ್ನು ನಿರಾಸೆಗೊಳಿಸಿದರೆ ಅವರು ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ.
Published by:Sandhya M
First published: