Summer Tips: ಸುಡುವ ಬಿಸಿಲಿನಿಂದ ನಿಮ್ಮ ಚರ್ಮವನ್ನು ರಕ್ಷಣೆ ಮಾಡಿಕೊಳ್ಳಲು ಈ 4 ಮಾರ್ಗಗಳನ್ನು ಅನುಸರಿಸಿ

ಚರ್ಮದ ಆರೈಕೆಗಾಗಿ ಮನೆಮದ್ದುಗಳಿಗೆ ಬದಲಾಯಿಸಿಕೊಳ್ಳುವುದು ಒಂದು ಉತ್ತಮ ಆಯ್ಕೆಯಾಗಿದೆ. ಅವು ಪರಿಣಾಮಕಾರಿ, ನೈಸರ್ಗಿಕ ಮತ್ತು ರಾಸಾಯನಿಕಗಳಿಂದ ನಿಮ್ಮ ಚರ್ಮಕ್ಕೆ ಹಾನಿ ಮಾಡುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಗೆ ನೋಡಿದರೆ ಬೇಸಿಗೆಯು (Summer) ಹೊರಹೋಗಲು, ಆನಂದಿಸಲು, ವಿಹಾರವನ್ನು ತೆಗೆದುಕೊಳ್ಳಲು ಮತ್ತು ನೀವು ದೀರ್ಘಕಾಲದವರೆಗೆ ಧರಿಸಲು ಕಾಯುತ್ತಿರುವ ರೋಮಾಂಚಕ ಬಣ್ಣಗಳನ್ನು(Color)  ಧರಿಸಲು ಉತ್ತಮ ಸಮಯವೆಂದೇ ಹೇಳಬಹುದು. ಹೀಗೆ ನೀವು ಈ ಸಮಯದಲ್ಲಿ ಆನಂದಿಸುತ್ತಿರುವಾಗ ವಿಪರೀತವಾದ ಸುಡು ಬಿಸಿಲಿನ ಶಾಖದ ಅಲೆಗಳು, ಬಿಸಿ ಗಾಳಿ (Hot Air) ನಿಮ್ಮ ಚರ್ಮವನ್ನು (Skin) ಸ್ಪರ್ಶಿಸಿ ಅದಕ್ಕೆ ಹಾನಿಯುಂಟು ಮಾಡಬಹುದಾಗಿರುತ್ತದೆ. ಇದರಿಂದ ನಿಮ್ಮ ಚರ್ಮವು ತನ್ನ ಹೊಳಪನ್ನು ಕಳೆದುಕೊಂಡು ಮಂದವಾಗಿ ಕಾಣುತ್ತದೆ.

ಹಾಗಾಗಿ ಬೇಸಿಗೆಯಲ್ಲಿ ಚರ್ಮವನ್ನು ಸಂರಕ್ಷಿಸಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ ಮತ್ತು ಅದಕ್ಕಾಗಿ ಬಹು ಜನರು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಚರ್ಮ ಸಂರಕ್ಷಣೆಯ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ದೊರಕುವ ಚರ್ಮ ಆರೈಕೆಯ ಉತ್ಪನ್ನಗಳು ಉತ್ತಮವಾಗಿರುವುದಾದರೂ ಸಾಕಷ್ಟು ದುಬಾರಿಯೂ ಆಗಿರುತ್ತದೆ ಮತ್ತು ಇದರಿಂದ ನಿಮ್ಮ ಜೇಬಿಗೆ ಹೆಚ್ಚಿನ ಕತ್ತರಿ ಬೀಳುತ್ತದೆ. ಅಂತಹ ಸಂದರ್ಭಗಳಲ್ಲಿ, ಚರ್ಮದ ಆರೈಕೆಗಾಗಿ ಮನೆಮದ್ದುಗಳಿಗೆ ಬದಲಾಯಿಸಿಕೊಳ್ಳುವುದು ಒಂದು ಉತ್ತಮ ಆಯ್ಕೆಯಾಗಿದೆ. ಅವು ಪರಿಣಾಮಕಾರಿ, ನೈಸರ್ಗಿಕ ಮತ್ತು ರಾಸಾಯನಿಕಗಳಿಂದ ನಿಮ್ಮ ಚರ್ಮಕ್ಕೆ ಹಾನಿ ಮಾಡುವುದಿಲ್ಲ. ಆದ್ದರಿಂದ, ಬೇಸಿಗೆಯಲ್ಲಿ ನೀವು ಸುಂದರವಾಗಿ ಕಾಣುವ ಚರ್ಮವನ್ನು ಹೊಂದಲು ಬಯಸಿದರೆ, ಈ ಸರಳವಾದ ನಾಲ್ಕು ಸಲಹೆಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

1. ವಾರಕ್ಕೆ ಎರಡು ಬಾರಿ ಸಕ್ಕರೆ ಎಕ್ಸ್‌ಫೋಲಿಯೇಶನ್

ಸ್ಕಿನ್‌ಕೇರ್ ಮಾಡಿಕೊಳ್ಳಲು ರೂಢಿಸಿಕೊಂಡಿರುವ ದಿನಚರಿಯ ಪ್ರಮುಖ ಹಂತಗಳಲ್ಲಿ ಎಕ್ಸ್‌ಫೋಲಿಯೇಶನ್ ಪ್ರಕ್ರಿಯೆ ಸಹ ಒಂದಾಗಿದ್ದು ಇದರ ಮಹತ್ವದ ಬಗ್ಗೆ ಪ್ರತ್ಯೇಕವಾಗಿ ಬಿಡಿಸಿ ಹೇಳುವ ಅಗತ್ಯವಿಲ್ಲ. ಚರ್ಮದಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಅಲ್ಲಿರುವ ಜೀವಂತ ಕೋಶಗಳಿಗೆ ಉಸಿರಾಡಲು ತಾಜಾ ಗಳಿ ಸಿಗುವಂತೆ ಮಾಡಲು ಉತ್ತಮವಾದ ಸ್ಕ್ರಬ್ ಬಳಸುವುದು ಅತ್ಯಗತ್ಯ. ಬ್ರೌನ್ ಶುಗರ್ ಮತ್ತು ಜೇನುತುಪ್ಪದ ಸ್ಕ್ರಬ್, ಸತ್ತ ಚರ್ಮವನ್ನು ಒಡೆಯಲು ಸಹಾಯ ಮಾಡುತ್ತದೆ. ಕೆಲವು ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಚರ್ಮದ ಮೇಲೆ ಮಸಾಜ್ ಮಾಡಿ ಮತ್ತು ನಂತರ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮದ ಸತ್ತ ಕೋಶಗಳೆಲ್ಲ ಉದುರಿ ಹೋಗುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಕಚೇರಿಗೆ ಹೋಗುವ ಮೊದಲು ಯಾವ ರೀತಿಯ ಮೇಕಪ್ ಮಾಡಿದರೆ ಬೆಸ್ಟ್?   

2. ಸನ್​ ಬರ್ನ್ ಚಿಕಿತ್ಸೆ

ನಾವು ಬೇಸಿಗೆಯಲ್ಲಿ ಹೊರಗೆ ಹೋದಾಗ, ಹಾನಿಕಾರಕವಾದ ಸೂರ್ಯನ ಯುವಿ ಕಿರಣಗಳು ನಮ್ಮ ಚರ್ಮವನ್ನು ಸುಡುತ್ತವೆ, ಇದರಿಂದ ರೆಡ್ ರ್‍ಯಾಶ್ ಆಗಿ ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದಲ್ಲದೆ ನಿರಂತರ ತುರಿಕೆಗೆ ಕಾರಣವಾಗಬಹುದು. ಆದ್ದರಿಂದ, ಇದು ಉಂಟಾಗದಂತೆ ಸಮಯಕ್ಕೆ ಚಿಕಿತ್ಸೆ ನೀಡುವುದು ಮುಖ್ಯ. ಅದಕ್ಕಾಗಿ ನೀವು ಅಲೋವೆರಾ ಎಲೆಯನ್ನು ತೆಗೆದುಕೊಂಡು ಅದರ ಮಧ್ಯದಲ್ಲಿ ಕತ್ತರಿಸಿ ಅದರಿಂದ ಜೆಲ್ ಹೊರತೆಗೆಯಿರಿ ಮತ್ತು ಅದನ್ನು ನಿಮ್ಮ ಚರ್ಮಕ್ಕೆ ನಿಧಾನವಾಗಿ ಅನ್ವಯಿಸಿ. ಈ ಜೆಲ್ಲಿನ ಎಲ್ಲ ದ್ರವಾಂಶವು ಚರ್ಮದಲ್ಲಿ ಹೀರಿಕೊಳ್ಳುವವರೆಗೆ ಮಸಾಜ್ ಮಾಡಿ. ಈಗ ನೋಡಿ ನೀವು ನಿಮ್ಮ ಚರ್ಮದಲ್ಲಿ ಹೆಚ್ಚು ತಂಪಾಗಿರುವಿಕೆಯ ಅನುಭವ ಪಡೆಯುತ್ತೀರಿ.

3. ನೈಸರ್ಗಿಕ ಕಾಂತಿ ಮತ್ತೆ ಬರುವಂತೆ ಮಾಡಿ

ನೀವು ಬಹು ಬಾರಿ ಕೇಳಿರುವಂತೆ ಬೆಳ್ಳಗಾಗುವುದು ಮಿಥ್ಯ ಎನ್ನಲಾಗುತ್ತದೆ. ಚರ್ಮದ ಆರೈಕೆಗೆ ಬಳಸಲಾಗುವ ಪ್ರತಿಯೊಂದು ಉತ್ತಮ ಉತ್ಪನ್ನವು ಕಲ್ಮಶಗಳನ್ನು ಮಾತ್ರ ತೆಗೆದುಹಾಕುತ್ತದೆ ಮತ್ತು ನಿಮ್ಮ ನೈಸರ್ಗಿಕ ಚರ್ಮದ ಟೋನ್ ಅನ್ನು ಹಿಂತಿರುಗುವಂತೆ ಮಾಡುತ್ತದೆ. ಟೊಮೆಟೊ ಮತ್ತು ಮೊಸರಿನಲ್ಲಿರುವ ವಿಟಮಿನ್ ಸಿ ನಿಮ್ಮ ನೈಸರ್ಗಿಕ ತ್ವಚೆಯನ್ನು ಹೊರತರಲು ಅತ್ಯುತ್ತಮ ಪರಿಹಾರವಾಗಿದೆ. ಮೊಸರಿನಲ್ಲಿ ಟೊಮೆಟೊ ರಸವನ್ನು ಬೆರೆಸಿ ಫೇಸ್ ಮಾಸ್ಕ್ ನಂತೆ ಹಚ್ಚಿಕೊಳ್ಳಿ. ಇದನ್ನು ಅರ್ಧ ಘಂಟೆಯವರೆಗೆ ಬಿಡಿ ಮತ್ತು ನಂತರ ನೀರಿನಿಂದ ತೊಳೆಯಿರಿ. ನಿಮ್ಮ ಚರ್ಮದ ಮೇಲೆ ತ್ವರಿತ ಹೊಳಪನ್ನು ನೀವು ಗಮನಿಸಬಹುದು.

ಇದನ್ನೂ ಓದಿ: ಯಕೃತ್ತು ದಾನ ಹೇಗೆ ಮಾಡಲಾಗುತ್ತದೆ? ಆರೋಗ್ಯಕರ ಯಕೃತ್ತನ್ನು ಗುರುತಿಸುವುದು ಹೇಗೆ?

4. ನಿಮ್ಮ ಕಣ್ಣುಗಳ ಆರೈಕೆ ಮಾಡಿ

ಬೇಸಿಗೆಯಲ್ಲಿ ಅತಿಯಾದ ಶಾಖ ಮತ್ತು ಮಲೀನತೆ ನಿಮ್ಮ ಕಣ್ಣುಗಳಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಬಹುದು. ನಾವು ನಮ್ಮ ಕಣ್ಣುಗಳನ್ನು ಮಲಿನ ಪರಿಸರದಿಂದ ರಕ್ಷಿಸಲು ಎಷ್ಟೇ ಪ್ರಯತ್ನ ಪಟ್ಟರೂ, ಅವು ಮಾಲಿನ್ಯ ಮತ್ತು ಶಾಖಕ್ಕೆ ಪರೋಕ್ಷವಾಗಿ ಒಡ್ಡಿಕೊಳ್ಳದೆ ಇರಲಾರವು. ಇದರಿಂದ ಕಣ್ಣುಗಳ ಕೆಳಗಿನ ಚರ್ಮವು ಉಬ್ಬುತ್ತದೆ ಮತ್ತು ಕೆಲವೊಮ್ಮೆ ಊದಿಕೊಂಡಂತೆ ಕಾಣುತ್ತದೆ. ಇದನ್ನು ಹೋಗಲಾಡಿಸಲು ಆಲೂಗಡ್ಡೆ ಬಳಸಿ ಚಿಕಿತ್ಸೆ ನೀಡಬಹುದಾಗಿದೆ.

ಆಲೂಗೆಡ್ಡೆಯು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇದು ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳು ಮತ್ತು ಪಫಿನೆಸ್ ವಿರುದ್ಧ ಸಮರ್ಥವಾಗಿ ಹೋರಾಡಲು ಸಹಾಯ ಮಾಡುತ್ತದೆ. ತಣ್ಣಗಾದ ಆಲೂಗೆಡ್ಡೆ ಸ್ಲೈಸ್ ಅನ್ನು ತೆಗೆದುಕೊಂಡು ಸ್ವಲ್ಪ ಸಮಯದವರೆಗೆ ನಿಮ್ಮ ಕಣ್ಣುಗಳ ಮೇಲೆ ಇರಿಸಿ. ಇದರ ಕೂಲಿಂಗ್ ಪರಿಣಾಮವು ನಿಮ್ಮ ಕಣ್ಣುಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.
Published by:Pavana HS
First published: