Health Tips: ಅತಿಯಾದ ಆಲೋಚನೆಗೆ ಬ್ರೇಕ್ ಹಾಕಲು ಈ ಟಿಪ್ಸ್ ಫಾಲೋ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿಕ್ಕಾಪಟ್ಟೆ ಯೋಚಿಸುವವರು ನೀವಾಗಿದ್ದರೆ ನಿಮಗೆ ಮೆದುಳಿನ ಸಂಬಂಧಿ ಕಾಯಿಲೆಯೂ ಬರಬಹುದು, ಈ ರೀತಿಯಾಗಿ ಸಾಮಾನ್ಯವಾಗಿ ಯೋಚಿಸುವ ಕೆಲವರು ಅತಿಯಾದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೇ ಮಿದುಳಿನ ಆರೋಗ್ಯಕ್ಕೆ ಹಾನಿಮಾಡಿಕೊಂಡಿರುವ ನಿದರ್ಶನಗಳು ಇವೆ.

  • Share this:

ಅತಿಯಾದ ಆಲೋಚನೆ ಓವರ್​ ಥಿಂಕಿಂಗ್​ (Overthinking) ಇದು ವರವೂ ಹೌದು, ಶಾಪವೂ ಹೌದು. ನೀವು ನಿಮ್ಮ ಕೆಲಸದಲ್ಲಿ (Work) ಹೆಚ್ಚು ತೊಡಗಿಕೊಳ್ಳುತ್ತೀರಿ. ಅದಕ್ಕೆ ಸಂಬಂಧಿಸಿದ ಅಧ್ಯಯನ(Study) , ಬೆಳವಣಿಗೆ ನಿಮಗೆ ಬಹಳ ಮೆಚ್ಚುಗೆಯಾಗುತ್ತದೆ. ನಿಮ್ಮೊಟ್ಟಿಗೆ ನಿಮ್ಮವರು ಬೆಳೆಯುವುದು, ಕಷ್ಟದಲ್ಲಿ ಇದ್ದವರಿಗೆ ನೆರವಾಗುವುದು ಇದೆಲ್ಲವೂ ನಿಮ್ಮ ಒಳ್ಳೆಯ ಗುಣವೇ ಜೊತೆಗೆ ಅತಿಯಾಗಿ ಆಲೋಚನೆ (Thinking) ಮಾಡುವುದರ ಗುಣಲಕ್ಷಣ ಕೂಡ. ನೀವು ಹೆಚ್ಚು ಗಮನಿಸುವವರು, ಇನ್ನೊಬ್ಬರ ಬಗ್ಗೆ ಕಾಳಜಿ ಇಡವವರು, ಆತ್ಮಸಾಕ್ಷಿಗೆ (Conscience) ಬೆಲೆ ಕೊಡುವವರು ಇದೆಲ್ಲಾ ನಿಮ್ಮ ಒಳ್ಳೆಯ ಗುಣಗಳು ಜೊತೆಗೆ ನಿಮ್ಮ ಸೂಕ್ಷ್ಮ ವ್ಯಕ್ತಿತ್ವದ ಪ್ರತಿಬಿಂಬವೂ ಹೌದು.


ಮಿದುಳಿನ ಆರೋಗ್ಯ ಜೋಪಾನ


ಆದರೆ ನೆನಪಿರಲಿ ಇದರಿಂದ ನಿಮಗೆ ತೊಂದರೆಯಾಗುವ ಸಾಧ್ಯತೆ ಇದೆ. ಅತಿಯಾದ ಆಲೋಚನೆ ಮೂಲಕ ನಿಮ್ಮನ್ನು ಬಾಧಿಸುವಂತೆ ಮಾಡುತ್ತದೆ. ಸುಮಾರು ಶೇಕಡಾ 15 ರಿಂದ 20 ರಷ್ಟು ಜನರು ಈ ರೀತಿ ಇರುತ್ತಾರೆ ಎನ್ನುತ್ತದೆ ಸಂಶೋಧನೆಗಳು. ಇದು ಅನುವಂಶಿಕ ಸಮಸ್ಯತೆ ಕೂಡ ಆಗಿದ್ದಿರಬಹುದು. ಆ ಮೂಲಕ ಮಿದುಳಿನ ಆರೋಗ್ಯದ ಮೇಲೆ ಪರಿಣಾಮ ಕೂಡ ಬೀರಬಹುದು.


ಸಾಂದರ್ಭಿಕ ಚಿತ್ರ


ಈ ರೀತಿ ಸಿಕ್ಕಾಪಟ್ಟೆ ಯೋಚಿಸುವವರು ನೀವಾಗಿದ್ದರೆ ನಿಮಗೆ ಮಿದುಳಿನ ಸಂಬಂಧಿ ಕಾಯಿಲೆಯೂ ಬರಬಹುದು, ಈ ರೀತಿಯಾಗಿ ಸಾಮಾನ್ಯವಾಗಿ ಯೋಚಿಸುವ ಕೆಲವರು ಅತಿಯಾದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೇ ಮಿದುಳಿನ ಆರೋಗ್ಯಕ್ಕೆ ಹಾನಿಮಾಡಿಕೊಂಡಿರುವ ನಿದರ್ಶನಗಳು ಇವೆ.


ಈ ಅತಿಯಾದ ಆಲೋಚನೆಯಿಂದ ಸಹಜ ಸ್ಥಿತಿಗೆ ಬರುವುದು ಹೇಗೆ ಅನ್ನೋದಕ್ಕೆ ಈ ನಾಲ್ಕು ಹಂತ ಗಮನಿಸಿ.


1 ಹೆಸರಿಸುವುದು ಮತ್ತು ಬಗೆಹರಿಸುವುದು: ನಿಮ್ಮ ಅತಿಯಾದ ಆಲೋಚನೆಯ ಸ್ವಭಾವವನ್ನು ಗುರುತಿಸಿಕೊಳ್ಳಿ.


health hidden ways for stress anxiety and depression
ಸಾಂದರ್ಭಿಕ ಚಿತ್ರ


ಹೀಗೆ ನಿಭಾಯಿಸಿ: ಈ ಭಾವನೆಗಳನ್ನು ಗಮನಿಸಿ ಸೂಕ್ಷ್ಮತೆಗಳ ವ್ಯತ್ಯಾಸ ನೋಡಿ. ಇಲ್ಲಿ ನೀವು ಮತ್ತು ಸೋಲು ಹಾಗೂ ನಿರ್ವಹಣೆ ನಡುವೆ ನಿಮ್ಮನ್ನು ಬಾಧಿಸುತ್ತಿರುವ ಅಂಶವನ್ನು ಗುರುತಿಸಿ. ಸೋಲುವುದು ಕ್ಷಣಿಕ. ನಿಧಾನವಾಗಿ ಅಭ್ಯಾಸ ಮಾಡಿದರೇ ಅದು ಸಹಜ ಪ್ರಕ್ರಿಯರ ಎನ್ನುವುದರ ಅರಿವಾಗುತ್ತದೆ.


2. ಘಟನೆಗಳ ಸಾಮಾನ್ಯೀಕರೀಣ: ಒಮ್ಮೆ ಏನೋ ಘಟಿಸಿದರೆ ಅದು ಮತ್ತೆ ಸಂಭವಿಸುತ್ತದೆ ಎನ್ನುವ ಆತಂಕ ಬೇಡ. ಯಾವಾಗಲೂ, ಎಲ್ಲವೂ, ಹೀಗೆ ಆಗುತ್ತೆ ಎನ್ನುವ ಆಲೋಚನೆ ಬೇಡ. ಈ ಪದಗಳ ಬಳಕೆ ನಿಲ್ಲಿಸಿ.


ನನ್ನ ನ್ಯೂನತೆಗಳನ್ನು ಎತ್ತಿ ತೋರಿಸುವರು: ಇದು ಕೂಡ ಅತಿಯಾದ ಆಲೋಚನೆಗೆ ಬರುತ್ತದೆ. ಈ ರೀತಿಯ ಸಂದರ್ಭದಲ್ಲಿ ಒಳ್ಳೆಯದನ್ನು ಗಮನಿಸಿ. ಕೆಟ್ಟದ್ದು ಬೇಡ.


ಹೀಗೆ ನಿಭಾಯಿಸಿ


ಅತಿಯಾದ ಆಲೋಚನೆ ಮಾದರಿ ಗುರುತಿಸಿ ಮತ್ತು ನಿಭಾಯಿಸಿ: ಅತಿಯಾದ ಆಲೋಚನೆಯ ಸಮಯದಲ್ಲಿ ನಿಮ್ಮ ಮೈಂಡ್​ಗೆ ನೀವೇ ಕಮ್ಯಾಂಡ್​ ಕೊಟ್ಟು ಕೊಳ್ಳಿ. ನಿಲ್ಲಿಸು ಎಂದು ಹೇಳಿ. ಇಲ್ಲವೇ ನಿಮ್ಮ ಆಲೋಚನೆ ಬನೂನಿಲ್ಲಿ ತೇಲುತ್ತಿರುವಂತಿರಲಿ. ಮನಸ್ಸಿನಲ್ಲಿ ರೆಡ್​ ಸಿಗ್ನಲ್ ನೆನಪಿಸಿಕೊಳ್ಳಿ. ಇದು ನಿಮ್ಮನ್ನು ವರ್ತಮಾನಕ್ಕೆ ತರುತ್ತದೆ.


3. ಒಂದು ವೇಳೆ ಎನ್ನುವ ಸಂಭಾಷಣೆಯನ್ನು ಬದಲಾಯಿಸಿ: ಒಂದು ವೇಳೆ ನಮ್ಮ ತಂಡ ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸಿದರೇ ಹೇಗೆ? ಒಂದು ವೇಳೆ ನನ್ನ ಪ್ಲಾನಿಂಗ್​ ಒಪ್ಪಿತವಾದರೆ ಎನ್ನುವಂತಹ ರಚನಾತ್ಮಕ ಪ್ರಶ್ನೇ ಕೇಳಿಕೊಳ್ಳಿ.


ಹೀಗೆ ನಿಭಾಯಿಸಿ: ನಿಮ್ಮ ಕಛೇರಿಯ ಎಲ್ಲಾ ಸಂಭಾವ್ಯ ಬೆಳವಣಿಗೆ ಮತ್ತು ವ್ಯಕ್ತಿಗಳ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ. ನಕಾರಾತ್ಮಕತೆ ಬೇಡ.
4. ನಿಮ್ಮ ಮೌಲ್ಯಗಳೇ ಆಲೋಚನೆಗಳನ್ನು ನಿಯಂತ್ರಿಸಲಿ: ಆಂತರಿಕ ಒತ್ತಡವನ್ನು ನಿಮ್ಮ ಮೌಲ್ಯಯುತ ಗುಣಗಳಿಂದ ನಿಭಾಯಿಸಿ. ನಿಮ್ಮ ಸಕಾರಾತ್ಮಕ ಶಕ್ತಿ ಮತ್ತು ನಿಮ್ಮ ನ್ಯೂನತೆಗಳ ಬಗ್ಗೆ ಅರಿವಿರಲಿ. ಆಂತರಿಕ ಗುಣಗಳು, ನಿಮ್ಮ ಶಕ್ತಿ ನಿಮಗೆ ಸದಾ ಏನನ್ನಾದರೂ ಗೆಲ್ಲುವ ಶಕ್ತಿ ತಂದು ಕೊಡುತ್ತವೆ.


ಇದನ್ನೂ ಓದಿ: Career Stress: ಈ​ ಟಿಪ್ಸ್ ಫಾಲೋ ಮಾಡಿದ್ರೆ ಕೆಲಸದ ಒತ್ತಡ ಮಾಯವಾಗುತ್ತೆ


ಹೀಗೆ ನಿಭಾಯಿಸಿ


ನಿಮ್ಮ ಆಲೋಚನೆ, ಕಾರ್ಯಗಳನ್ನು ನಿರ್ದೇಶಿಸುವುದು ನಿಮ್ಮ ಮೌಲ್ಯ. ಎನ್ನುವುದು ನೆನಪಿರಲಿ. ಆದ್ದರಿಂದ ಅವುಗಳನ್ನು ಹೆಚ್ಚಾಗಇ ಗುರುತಿಸಿ ಮತ್ತು ಬೆಳೆಸಿಕೊಳ್ಳಿ. ಹೀಗೆ ಅತಿಯಾದ ಆಲೋಚನೆಯನ್ನು ಆದಷ್ಟು ವಿವರವಾಗಿ ಪದರವಾಗಿ ಬಿಡಿಸಿ ಆ ಸಮಸ್ಯೆಯಿಂದ ಹೊರ ಬರಬೇಕು. ಇಲ್ಲವಾದರೆ ಇದಕ್ಕೆ ಸಂಬಂಧಿಸಿದ ಕಾಗ್ನಿಟಿವ್​ ಸ್ಪೆಷಲಿಸ್ಟ್​ ಅವರನ್ನು ಬೇಟಿ ಮಾಡಿ. ಸಲಹೆ ಪಡೆದುಕೊಳ್ಳಿ.

First published: