Good Sleep: ರಾತ್ರಿ ವೇಳೆ ಸರಿಯಾಗಿ ನಿದ್ದೆ ಬರ್ತಿಲ್ವಾ? ಹಾಗಿದ್ರೆ ಇಂದೇ ಈ ಹವ್ಯಾಸ ಬಿಟ್ಟುಬಿಡಿ..!

Sleeping Tips: ಸಂಜೆಯ ಸಮಯ ಎಂದರೆ, ವಿಶ್ರಾಂತಿ ಪಡೆಯುವ ಸಮಯವಾಗಿದೆ. ಸಂಜೆಯ ಸಮಯದಲ್ಲಿ ಭಾರೀ ವ್ಯಾಯಾಮವು ನಿದ್ರಾಹೀನತೆ ಮತ್ತು ಇತರ ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯ ತಜ್ಞರು ಹೇಳುವ ಪ್ರಕಾರ ನಾವು ಪ್ರತಿ ದಿನ ವ್ಯಾಯಾಮ ಮಾಡಲು ಆಯ್ಕೆ ಮಾಡಿಕೊಳ್ಳುವ ಸಮಯ ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಮುಂಜಾನೆ ಸಮಯದಲ್ಲಿ ಮಾಡುವ ವ್ಯಾಯಾಮ ನಮ್ಮ ದೇಹದ ತಾಪಮಾನವನ್ನು ಹೆಚ್ಚು ಹೊತ್ತು ಉಳಿಸಲು ಸಾಧ್ಯವಾಗುವುದಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಆರೋಗ್ಯಕರ (Health) ಹಾಗೂ ನೆಮ್ಮದಿಯ ಜೀವನಕ್ಕೆ(Life) ನಿದ್ರೆ(Sleep) ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ಉತ್ತಮ ಗುಣಮಟ್ಟದ ನಿದ್ರೆ ಮಾಡುವುದರಿಂದ ಮನುಷ್ಯನ ಮಾನಸಿಕ (Mental) ಮತ್ತು ದೈಹಿಕ ಆರೋಗ್ಯವನ್ನು(Physical Health) ಸುಧಾರಿಸುತ್ತದೆ. ರಾತ್ರಿಯ(Night) ಒಳ್ಳೆ ನಿದ್ರೆ ಮರುದಿನ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ದೇಹವನ್ನು(Body) ಸಮರ್ಪಕವಾಗಿ ಚಾರ್ಜ್ ಮಾಡುತ್ತದೆ. ನಿದ್ರೆಯ ಕೊರತೆಯು ಆಲೋಚನೆ ಮತ್ತು ಪ್ರತಿಕ್ರಿಯಿಸುವ ಮಾದರಿ ಮೇಲೆ ಪರಿಣಾಮ ಬೀರುವುದರ ಜೊತೆಗೆ ದೀರ್ಘಕಾಲದ ಆರೋಗ್ಯ ಸಂಬಂಧಿತ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ನಿದ್ರೆಯ ವ್ಯತ್ಯಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆ, ರಕ್ತದ ಒತ್ತಡ, ಬೊಜ್ಜು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ನಿದ್ರಾಹೀನತೆ ಉಂಟಾಗದಂತೆ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳ ಬೇಕು. ಮತ್ತು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನ ಸೂರ್ಯ ಮುಳುಗಿದ ಬಳಿಕ ಮಾಡಬಾರದು.

  1) ಕೆಫಿನ್ ಅಂಶ ಸೇವನೆ ಬೇಡ: ಚಹಾ, ಕಾಫಿ ಸೇವನೆ ಕಡಿಮೆ ಮಾಡಿ: ನಿಮಗೆ ರಾತ್ರಿಯಲ್ಲಿ ನಿದ್ರೆ ಬರದಿದ್ರೆ, ಚಹಾ, ಕಾಫಿ ಸೇವನೆಯನ್ನು ಕಡಿಮೆ ಮಾಡಿ. ಚಹಾ ಮತ್ತು ಕಾಫಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ನಿದ್ರೆ ಸಮಸ್ಯೆ ತಲೆದೂರುತ್ತದೆ. ಅದರಲ್ಲೂ ಮಲಗುವ ಮುನ್ನ ಚಹಾ, ಕಾಫಿ ಸೇವಿಸಬೇಡಿ.

  ಇದನ್ನೂ ಓದಿ: 6 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡ್ತಿದ್ದೀರಾ? ಎಚ್ಚರ...ಎಚ್ಚರ !

  2) ಸಂಜೆಯ ಸಮಯ ವ್ಯಾಯಾಮ: ಸಂಜೆಯ ಸಮಯ ಎಂದರೆ, ವಿಶ್ರಾಂತಿ ಪಡೆಯುವ ಸಮಯವಾಗಿದೆ. ಸಂಜೆಯ ಸಮಯದಲ್ಲಿ ಭಾರೀ ವ್ಯಾಯಾಮವು ನಿದ್ರಾಹೀನತೆ ಮತ್ತು ಇತರ ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯ ತಜ್ಞರು ಹೇಳುವ ಪ್ರಕಾರ ನಾವು ಪ್ರತಿ ದಿನ ವ್ಯಾಯಾಮ ಮಾಡಲು ಆಯ್ಕೆ ಮಾಡಿಕೊಳ್ಳುವ ಸಮಯ ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಮುಂಜಾನೆ ಸಮಯದಲ್ಲಿ ಮಾಡುವ ವ್ಯಾಯಾಮ ನಮ್ಮ ದೇಹದ ತಾಪಮಾನವನ್ನು ಹೆಚ್ಚು ಹೊತ್ತು ಉಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ರಾತ್ರಿಯ ಸಮಯದಲ್ಲಿ ನಿದ್ರೆಯ ಮೇಲೆ ಇದರ ಪ್ರಭಾವ ಅಷ್ಟೇನು ಇರುವುದಿಲ್ಲ.

  ಇನ್ನೊಂದು ಪ್ರಕಾರದಲ್ಲಿ ಹೇಳುವುದಾದರೆ ನಿದ್ರೆಗೆ ಮುಂಚೆ ರಾತ್ರಿಯ ಸಮಯದಲ್ಲಿ ಮಾಡುವ ವ್ಯಾಯಾಮ ಅಡ್ರಿನಲ್ ಗ್ರಂಥಿಯನ್ನು ಪರಾಭವಗೊಳಿಸಿ ನಿದ್ರೆಗೆ ತೊಂದರೆ ಮಾಡುತ್ತದೆ. ಆದರೆ ಊಟಕ್ಕೆ ಮುಂಚೆ ಮಾಡುವ ವ್ಯಾಯಾಮ ದೇಹದ ತಾಪಮಾನವನ್ನು ಹೆಚ್ಚಾಗಿಸುತ್ತದೆ. ಈ ಸಂದರ್ಭದಲ್ಲಿ ಹೃದಯ ಬಡಿತ ಕೂಡ ಹೆಚ್ಚಾಗಿ ನರ ಮಂಡಲ ವ್ಯವಸ್ಥೆ ಉತ್ತೇಜಿತಗೊಂಡಿರುತ್ತದೆ... ಇನ್ನು ಸಂಶೋಧನೆ ಹೇಳುವ ಪ್ರಕಾರ ಸಂಜೆಯ ಸಮಯದಲ್ಲಿ ಸ್ವಲ್ಪ ಹಗುರವಾಗಿ ಮಾಡುವ ವ್ಯಾಯಾಮ ರಾತ್ರಿ ನಿದ್ರೆ ಚೆನ್ನಾಗಿ ಬರಲು ಅನುಕೂಲ ಮಾಡಿಕೊಡುತ್ತದೆ.

  3) ಹೆಚ್ಚು ಊಟ ಸೇವನೆ: ಬೆಳಗ್ಗೆ ರಾಜನಂತೆ ತಿಂದರೆ ರಾತ್ರಿ ಭಿಕ್ಷುಕನಂತೆ ತಿನ್ನಬೇಕು ಎಂದು ಹೇಳಲಾಗುತ್ತದೆ. ಆದರೆ ಕೆಲವರು ರಾತ್ರಿ ವೇಳೆ ಹೆಚ್ಚು ಆಹಾರ ಸೇವಿಸುತ್ತಾರೆ. ಆದರೆ ರಾತ್ರಿ ವೇಳೆ ಚಯಾಪಚಯ ಕ್ರಿಯೆಯು ನಿಧಾನವಾಗುವುದರಿಂದ, ತಿನ್ನುವ ಭಾರಿ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ, ಮತ್ತು ದೇಹವು ಹೆಚ್ಚುವರಿ ಕ್ಯಾಲೋರಿಗಳನ್ನು ಕೊಬ್ಬಿನರೂಪದಲ್ಲಿ ಸಂಗ್ರಹಿಸುತ್ತದೆ.ಇನ್ನು ತಡವಾಗಿ ಮತ್ತು ಭಾರೀ ಭೋಜನವನ್ನು ಮಾಡುವುದರಿಂದ ಉಬ್ಬುವಿಕೆ, ಹೊಟ್ಟೆಯಲ್ಲಿ ಅಸ್ವಸ್ಥತೆ, ಜೀರ್ಣಕಾರಿ ಸಮಸ್ಯೆಗಳು, ಹೊಟ್ಟೆಯ ಕೊಬ್ಬು, ಕೊಬ್ಬಿನ ಯಕೃತ್ತು, ಅಧಿಕ ಕೊಲೆಸ್ಟ್ರಾಲ್ ಇತ್ಯಾದಿಗಳನ್ನು ಉಂಟುಮಾಡಬಹುದು. ಆದ್ದರಿಂದ ನಿದ್ರಾಹೀನತೆ ಸಮಸ್ಯೆಯಿದ್ದರೆ, ರಾತ್ರಿಯ ಊಟವನ್ನು ಬೇಗ ಮಾಡಿ ಜೊತೆಗೆ ಅದನ್ನು ಲಘುವಾಗಿರಿಸಿ.

  ಇದನ್ನೂ ಓದಿ: ರಾತ್ರಿ ಬೀಳೋ ಯಾವ ಕನಸುಗಳು ನಿಜವಾಗುತ್ತವೆ.. Dreams ಭವಿಷ್ಯ ಸೂಚಕಗಳಾ?

  4) ಗ್ಯಾಜೆಟ್‌ ಬಳಕೆ: ಹೊತ್ತು ಕಂಪ್ಯೂಟರ್ ಅಥವಾ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಮುಂದೆ ಸಮಯ ಕಳೆಯುವುದರಿಂದ ದೈಹಿಕ ಚಟುವಟಿಕೆಗಳಿಂದ ವಂಚಿತರಾಗುವುದರಿಂದ ಬೊಜ್ಜಿನ ಸಮಸ್ಯೆ, ಮಾಂಸಖಂಡಗಳು ಗಡಸಾಗುವುದು, ಮಂಡಿನೋವು , ಸ್ನಾಯುಸೆಳೆತ ಮುಂತಾದ ಸಮಸ್ಯೆಗಳಿಂದ ಬಳಲಬಹುದಾಗಿದೆ.ಬೆಡ್‌ಟೈಮ್‌ಗೆ 1 ಗಂಟೆ ಮೊದಲು ಗ್ಯಾಜೆಟ್‌ಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ. ಇದು ದಿನವಿಡೀ ಪಟ್ಟುಬಿಡದೆ ಕೆಲಸ ಮಾಡಿದ ನಿಮ್ಮ ಮನಸ್ಸನ್ನು ವಿಶ್ರಾಂತಿ ಮತ್ತು ಸ್ಥಗಿತಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ, ಈ ಸಾಧನಗಳಿಂದ ಹೊರಬರುವ ನೀಲಿ-ಬೆಳಕು ವಾಸ್ತವವಾಗಿ ಮೆಲಟೋನಿನ್ ಎಂಬ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ.
  Published by:ranjumbkgowda1 ranjumbkgowda1
  First published: