• Home
  • »
  • News
  • »
  • lifestyle
  • »
  • Bengaluru: ಬೆಂಗಳೂರಿಗೆ ಹೋದರೆ ಭೇಟಿ ನೀಡಲೇಬೇಕಾದ ಮ್ಯೂಸಿಯಂಗಳಿವು!

Bengaluru: ಬೆಂಗಳೂರಿಗೆ ಹೋದರೆ ಭೇಟಿ ನೀಡಲೇಬೇಕಾದ ಮ್ಯೂಸಿಯಂಗಳಿವು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೀವು ಮುಂದಿನ ಬಾರಿ ಬೆಂಗಳೂರಿಗೆ ಹೋದಾಗ ಈ ನಾಲ್ಕು ಮ್ಯೂಸಿಯಂಗಳನ್ನು ನೋಡಿಕೊಂಡು ಬರುವುದನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರಿನಲ್ಲಿರುವ ಮ್ಯೂಸಿಯಂ ಅಂತ ನೆನಪಿಸಿಕೊಂಡಾಗ ಮೊದಲಿಗೆ ನಮ್ಮ ತಲೆಗೆ ಬರುವುದು ವಿಶ್ವೇಶ್ವರಯ್ಯ ಮ್ಯೂಸಿಯಂ (Vishweshwaraiah Museum). ಹೌದು, ಅದು ಬೆಂಗಳೂರಿನಲ್ಲಿರುವ ತುಂಬಾನೇ ದೊಡ್ಡ ಮ್ಯೂಸಿಯಂ ಅಂತ ಹೇಳಬಹುದು. ಆದ್ದರಿಂದಲೇ ದಿನನಿತ್ಯ ರಾಜ್ಯದ ಅನೇಕ ಜಿಲ್ಲೆಗಳಿಂದ ಜನರು ಇದನ್ನು ನೋಡಲು ಬರುತ್ತಾರೆ. ಆದರೆ ಬೆಂಗಳೂರಿನಲ್ಲಿ (Bengaluru) ಇದನ್ನು ಹೊರತುಪಡಿಸಿ ಸಹ ತುಂಬಾನೇ ಮ್ಯೂಸಿಯಂಗಳಿವೆ ಎಂಬುದು ನಿಮಗೆ ಗೊತ್ತೆ? ಅದರಲ್ಲೂ ಈಗ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದಲೂ ಆಗಾಗ ಈ ಲಾಕ್ಡೌನ್ ಗಳನ್ನು (Lock Down) ಹೆರಲಾಗುತ್ತಿದ್ದದ್ದು, ಈ ಲಕ್ಡೌನ್ ಗಳಲ್ಲಿಯೂ ಸಹ ಕೆಲವು ಮ್ಯೂಸಿಯಂಗಳು (Museum) ಶುರುವಾಗಿವೆ.


ನೀವು ಮುಂದಿನ ಬಾರಿ ಬೆಂಗಳೂರಿಗೆ ಹೋದಾಗ ಈ ನಾಲ್ಕು ಮ್ಯೂಸಿಯಂಗಳನ್ನು ನೋಡಿಕೊಂಡು ಬರುವುದನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ.


ರೆಜ್ವಾನ್ ರಜಾಕ್ ಅವರ ಮ್ಯೂಸಿಯಂ ಆಫ್ ಇಂಡಿಯನ್ ಪೇಪರ್ ಮನಿ


ಬೆಂಗಳೂರಿನ ಬ್ರಂಟನ್ ರೋಡ್ ನಲ್ಲಿ 2020 ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂ ಪ್ರೆಸ್ಟೀಜ್ ಗ್ರೂಪ್ ನ ಸಹ-ಸಂಸ್ಥಾಪಕ ಮತ್ತು ಜಂಟಿ ಎಂಡಿ ಅವರದ್ದು ಅಂತ ಹೇಳಲಾಗುತ್ತದೆ. 67ರ ಹರೆಯದ ಅವರು ಹದಿಹರೆಯದಲ್ಲಿದ್ದಾಗ ಸಂಗ್ರಹಿಸಿದ ಭಾರತೀಯ ನೋಟುಗಳನ್ನು, ಪಾಕಿಸ್ತಾನ, ಬರ್ಮಾಗಳಲ್ಲಿ ಮತ್ತು ಭಾರತವನ್ನು ವಸಾಹತುಗೊಳಿಸಿದ ಬ್ರಿಟಿಷ್, ಪೋರ್ಚುಗೀಸ್ ಮತ್ತು ಫ್ರೆಂಚ್ ನಂತಹ ಸಾಮ್ರಾಜ್ಯಗಳ ಕರೆನ್ಸಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.


ಅಲ್ಲದೆ, ಬ್ಯಾಂಕ್ ಆಫ್ ಮದ್ರಾಸ್ ನೋಟುಗಳ ಮುದ್ರಣ ಫಲಕಗಳನ್ನು ಶೀಘ್ರದಲ್ಲಿಯೇ ಪ್ರದರ್ಶನಕ್ಕೆ ಸೇರಿಸಲು ರೆಜ್ವಾನ್ ಯೋಜಿಸಿದ್ದಾರೆ. ಡಿಜಿಟಲ್ ಜಗತ್ತಿನಲ್ಲಿ ವಸ್ತುಸಂಗ್ರಹಾಲಯದ ಪ್ರಸ್ತುತತೆ ಹೆಚ್ಚಾಗಿದೆ ಎಂದು ಅವರು ನಂಬುತ್ತಾರೆ. "ನಾವು ಇಂದು ಹೊಂದಿರುವ ಭೌತಿಕ ಕರೆನ್ಸಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಮ್ಯೂಸಿಯಂ ನಲ್ಲಿರುವ ಕಾಗದದ ಕರೆನ್ಸಿಗಳು ನಿಮಗೆ ಭಾರತದ ಹಳೆಯ ದಿನಗಳನ್ನು ನೆನಪಿಸುತ್ತವೆ" ಎಂದು ಅವರು ಹೇಳುತ್ತಾರೆ.


ಈ ಮ್ಯೂಸಿಯಂ ಪ್ರೆಸ್ಟೀಜ್ ಫಾಲ್ಕನ್ ಟವರ್ಸ್ ನಲ್ಲಿದ್ದು ಇದು ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.


ಇದನ್ನೂ ಓದಿ: Toothpick: ಹಲ್ಲು ಕ್ಲೀನ್ ಮಾಡುವ ಟೂತ್‌ಪಿಕ್​ನ್ನು ಮನೆಯಲ್ಲಿ ಈ ರೀತಿಯೂ ಯೂಸ್ ಮಾಡಬಹುದಂತೆ!


ಅಮ್ಮ ಸರಸ್ವತಿ ಲೋಕ, ಬನಶಂಕರಿ


ಇದು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಿಯರಿಗೆ ಸ್ವರ್ಗವಾಗಿದ್ದು, ಇದನ್ನು ಮಾಜಿ ಮೆಕ್ಯಾನಿಕಲ್ ಎಂಜಿನಿಯರ್ ಪಿ.ಡಿ.ರವೀಂದ್ರ ಅವರು ನಿರ್ಮಿಸಿದ್ದಾರೆ. ವೆಟ್ ಗ್ರೈಂಡರ್, ವಾಟರ್ ಪಂಪ್ ಮತ್ತು ದೀಪಗಳು, ಬ್ಯಾಟರಿ ಚಾರ್ಜರ್ ಮತ್ತು ಪೋರ್ಟಬಲ್ ಟ್ರಾಫಿಕ್ ಕಿಟ್ ನಂತಹ ಸುಮಾರು 100 ಮಾದರಿಗಳನ್ನು ನೀವು ಇಲ್ಲಿ ಕಾಣಬಹುದು.


ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ನಿರ್ವಹಣಾ ಮುಖ್ಯಸ್ಥರಾಗಿ ನಿವೃತ್ತರಾಗಿರುವ 84 ವರ್ಷದ ರವೀಂದ್ರ ಅವರು "ಇಂದಿಗೂ ನನಗೆ ಬಿಡುವಿನ ಸಮಯವಿದ್ದಾಗ, ನಾನು ವಸ್ತುಗಳನ್ನು ಸಂಗ್ರಹಿಸಿಡಲು ಪ್ರಯತ್ನಿಸುತ್ತೇನೆ" ಎಂದು ಹೇಳುತ್ತಾರೆ. ಸೂರ್ಯ ಮತ್ತು ಚಂದ್ರಗ್ರಹಣ ಮಾದರಿ ಮತ್ತು ದೂರದರ್ಶಕ ಅವರ ಇತ್ತೀಚಿನ ಕೆಲವು ಸಂಗ್ರಹಣೆಯಾಗಿವೆ. ರವೀಂದ್ರ ಅವರ ಕೈಗಾರಿಕಾ ವಿನ್ಯಾಸ ಘಟಕದ ಎರಡು ಮಹಡಿಗಳಲ್ಲಿ 30 ವರ್ಷಗಳಿಂದ ಮ್ಯೂಸಿಯಂ ನಡೆಯುತ್ತಿದೆ.


ಕೆಲವು ಮಾದರಿಗಳನ್ನು ಟೆರೇಸ್ ಮೇಲೆಯೂ ಸಹ ಇರಿಸಿದ್ದಾರೆ ಎಂದು ಅವರು ಹೇಳುತ್ತಾರೆ. ಇದು ಬನಶಂಕರಿ 2ನೇ ಹಂತದಲ್ಲಿದ್ದು, ಪ್ರವೇಶ ಉಚಿತವಾಗಿದೆ. ಆದರೆ ಮುಂಚಿತವಾಗಿಯೇ ಅಪಾಯಿಂಟ್ಮೆಂಟ್ ಪಡೆಯಬೇಕು.


ಶಾರ್ಟ್ ವೇವ್ ರೇಡಿಯೋ ಮ್ಯೂಸಿಯಂ, ಬಸವೇಶ್ವರ ನಗರ


ಇದು ರೇಡಿಯೋ ಉತ್ಸಾಹಿ ಮತ್ತು ದೂರಸಂಪರ್ಕ ಸಲಹೆಗಾರ ಉದಯ್ ಕಲ್ಬುರ್ಗಿ ಅವರ ಆಲೋಚನೆಯಾಗಿದೆ. ಈ ವಸ್ತುಸಂಗ್ರಹಾಲಯವು 2021 ರಲ್ಲಿ ತೆರೆದಾಗ ಇಲ್ಲಿ 110 ರೇಡಿಯೋಗಳನ್ನು ಪ್ರದರ್ಶನಕ್ಕಿಡಲಾಗಿತ್ತು ಮತ್ತು ಆ ಸಂಖ್ಯೆಗೆ ಈಗ ಮತ್ತೆ 60 ಹೊಸ ರೇಡಿಯೋಗಳ ಸೇರ್ಪಡೆಯಾಗಿದೆ. 1928 ರಲ್ಲಿ ತಯಾರಿಸಲಾದ ಫಿಲಿಪ್ಸ್ 2802 ಮತ್ತು ಯುಎಸ್ ನಿಂದ ಉತ್ಪಾದಿಸಲಾದ 1936 ರ ಪೈಲಟ್ ರೇಡಿಯೋ ಇಲ್ಲಿರುವ ಅಪರೂಪದ ಸಂಗ್ರಹಗಳಲ್ಲಿ ಸೇರಿವೆ.


ತಿರುವಾಂಕೂರು ರಾಜಮನೆತನದ ಪದ್ಮನಾಭ ವರ್ಮರ ಕಾಲದ ರೇಡಿಯೋ ಸಹ ಇಲ್ಲಿದೆ. "ಅವರು ಅದನ್ನು ನನಗೆ ಉಡುಗೊರೆಯಾಗಿ ನೀಡಿದರು, ಆದ್ದರಿಂದ ನಾನು ಅದನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಸಾಧ್ಯವಾಯಿತು ಮತ್ತು ಜನರು ಬಂದು ಅದನ್ನು ನೋಡಿ ಆಶ್ಚರ್ಯಚಕಿತರಾಗಬಹುದು" ಎಂದು ಅವರು ಹೇಳುತ್ತಾರೆ. "ನಾನು ಹೆಚ್ಚಿನ ಜನರನ್ನು, ವಿಶೇಷವಾಗಿ ಯುವಕರು ಇಲ್ಲಿಗೆ ಬಂದು ನೋಡುವಂತೆ ಪ್ರೋತ್ಸಾಹಿಸುತ್ತೇನೆ. ಮನರಂಜನೆ ಹೇಗೆ ವಿಕಸನಗೊಂಡಿದೆ ಎಂಬುದನ್ನು ತಿಳಿಯಲು ಇದು ಒಳ್ಳೆಯ ಸ್ಥಳವಾಗಿದೆ" ಎಂದು ಅವರು ಹೇಳಿದರು.




ಇದು ಬಸವೇಶ್ವರ ನಗರದಲ್ಲಿದ್ದು, ಮಂಗಳವಾರದಿಂದ ಭಾನುವಾರದವರೆಗೆ ತೆರೆದಿರುತ್ತದೆ.


ಸುಸ್ವರಲಕ್ಷ್ಮಿ ಫೌಂಡೇಶನ್ ಫಾರ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಪರ್ಫಾರ್ಮಿಂಗ್ ಆರ್ಟ್ಸ್


ಸಂಗೀತ ದಿಗ್ಗಜರಾದ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಕುಟುಂಬವು ಅವರ ನಿವಾಸದಲ್ಲಿ ಅವರ ತಾನ್ಪುರಗಳು, ವೀಣೆಗಳು, ಸೀರೆಗಳು, ಸುಗಂಧ ದ್ರವ್ಯಗಳು ಮತ್ತು ಇತರ ವಸ್ತುಗಳಿಗೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದೆ. 1944 ರಲ್ಲಿ ಮಹಾತ್ಮಾ ಗಾಂಧಿ ಅವರು ಗಾಯಕರಿಗೆ ಬರೆದ ಪ್ರಸಿದ್ಧ ಪತ್ರವನ್ನು ಸಹ ಈ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.


"ಈ ವಸ್ತುಸಂಗ್ರಹಾಲಯವು ಭೂತಕಾಲದ ಕಿಟಕಿಯಾಗಿದೆ. ಇಂದಿನ ಜಗತ್ತಿನಲ್ಲಿ, ಈಗ ಟ್ರೆಂಡಿಂಗ್ ಆಗಿರುವುದು ಕೆಲವೇ ವಾರಗಳಲ್ಲಿ ಹಳತಾಗಬಹುದು. ಆದ್ದರಿಂದ ಮ್ಯೂಸಿಯಂನಲ್ಲಿರುವ ವಸ್ತುಗಳು ಇಂದಿನ ಪೀಳಿಗೆಗೆ ಒಂದು ಔತಣವಾಗಿದೆ" ಎಂದು ಅವರ ಮೊಮ್ಮಗ ವಿ ಶ್ರೀನಿವಾಸನ್ ಹೇಳುತ್ತಾರೆ. ಇಲ್ಲಿಗೆ ಪ್ರತಿದಿನ ಸರಾಸರಿ 20-25 ಜನ ಅತಿಥಿಗಳು ಬಂದು ಹೋಗುತ್ತಾರೆ ಅಂತ ಹೇಳುತ್ತಾರೆ. ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿರುವ ಈ ಮ್ಯೂಸಿಯಂ ವಾರಾಂತ್ಯಗಳಲ್ಲಿ ಮುಚ್ಚಲಾಗಿರುತ್ತದೆ. ಪ್ರವೇಶ ಉಚಿತವಾದರೂ ಮೊದಲೇ ಅಪಾಯಿಂಟ್ಮೆಂಟ್ ಪಡೆದುಕೊಂಡು ಹೋಗಬೇಕು.

First published: