Oily Skin Problem: ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ ಯಾವುದೇ ಕಾರಣಕ್ಕೂ ಈ 4 ಆಹಾರಗಳನ್ನು ತಿನ್ನಬೇಡಿ..

ಕೆಲವು ಆಹಾರಗಳು ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಚರ್ಮ ಹೆಚ್ಚಿನ ಎಣ್ಣೆಯನ್ನು ಉತ್ಪಾದಿಸುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ನೀವು ಈ 4 ಆಹಾರಗಳನ್ನು ತ್ಯಜಿಸುವುದು ಸೂಕ್ತ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೆಂಗಳೆಯರಿಗೆ ಮೊಡವೆಗಳ ರಗಳೆ ತಪ್ಪಿದ್ದಲ್ಲ. ಜಿಡ್ಡು ತ್ವಚೆ ಇರುವವರಂತೂ ಫೇಸ್​​ವಾಶ್​ನಿಂದ ಹಿಡಿದು ಕ್ರೀಮ್​ಗಳವರೆಗೆ ಆಯಿಲ್​​​ ಫ್ರೀ ಪ್ರಾಡಕ್ಟ್​​ಗಳನ್ನೇ ಬಳಸಬೇಕು. ಕೇವಲ ಬ್ಯೂಟಿ ಪ್ರಾಡಕ್ಟ್​ಗಳು ಮಾತ್ರವಲ್ಲ, ನೀವು ತಿನ್ನುವ ಆಹಾರಗಳ ಬಗ್ಗೆಯೂ ಗಮನ ನೀಡಬೇಕು. ಆಯ್ಲಿ ಸ್ಕಿನ್​ ಇರುವವರು ಕೆಲವೊಂದು ಆಹಾರಗಳನ್ನು ತ್ಯಜಿಸುವುದೇ ಲೇಸು. ಇಲ್ಲವಾದರೆ ಮುಖ ಜಿಡ್ಡುಜಿಡ್ಡಾಗೋದು ಗ್ಯಾರೆಂಟಿ.

ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಇರುವ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ. ಅಂದರೆ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬು ಅಧಿಕವಾಗಿರುವ ಆಹಾರಗಳು ನಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಚರ್ಮವನ್ನು ಇನ್ನಷ್ಟು ಹದಗೆಡಿಸುತ್ತದೆ. ಅಲ್ಲದೆ, ಕೆಲವು ಆಹಾರಗಳು ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಚರ್ಮ ಹೆಚ್ಚಿನ ಎಣ್ಣೆಯನ್ನು ಉತ್ಪಾದಿಸುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ನೀವು ಈ 4 ಆಹಾರಗಳನ್ನು ತ್ಯಜಿಸುವುದು ಸೂಕ್ತ.

1. ಹಾಲು & ಡೈರಿ ಉತ್ಪನ್ನಗಳು

ನೀವು ಆಯ್ಲಿ ಸ್ಕಿನ್​​ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟಲು ಬಯಸಿದರೆ ಹಾಲಿನ ಉತ್ಪನ್ನಗಳನ್ನು ಮೊದಲು ಬಿಡಬೇಕು. ಕಡಿಮೆ ಕ್ಯಾಲೋರಿ ಹಾಲಿನ ಆಯ್ಕೆಗಳಾದ ಸೋಯಾ ಅಥವಾ ಬಾದಾಮಿಯನ್ನು ಆರಿಸಿಕೊಳ್ಳಬಹುದು. ಹಾಲಿನ ಸಿಹಿತಿಂಡಿಗಳಿಂದ ಆದಷ್ಟು ದೂರವಿರಬೇಕು.

2. ಚಾಕೊಲೇಟ್​​​ಗಳು

ಚಾಕೊಲೇಟ್​​​ಗಳು ಸಕ್ಕರೆಯಿಂದ ತುಂಬಿರುತ್ತದೆ. ಈ ಸಕ್ಕರೆ ನಿಮ್ಮ ತ್ವಚೆಯನ್ನು ಎಣ್ಣೆಯುಕ್ತವಾಗಿಸುತ್ತದೆ. ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಸಿಗುವ ಶುಗರ್​ ಕ್ಯಾಂಡಿಯಂತ ಚಾಕೊಲೇಟ್​ಗಳ ಬದಲು ಡಾರ್ಕ್ ಚಾಕೊಲೇಟ್ ಅನ್ನು ಆಯ್ಕೆ ಮಾಡಬಹುದು. ಆದರೆ 15 ದಿನಗಳಲ್ಲಿ ಒಮ್ಮೆ ಮಿತವಾಗಿ ಸೇವಿಸುವುದು ಉತ್ತಮ.

ಇದನ್ನೂ ಓದಿ: Food for Good Sleep: ಈ 4 ಆಹಾರ ಸೇವಿಸಿದ್ರೆ ಸಾಕು.. ಬೇಡ ಬೇಡ ಅಂದ್ರೂ ನಿದ್ರೆ ಬರುತ್ತೆ!

3. ಜಂಕ್ ಮತ್ತು ಕರಿದ ಆಹಾರ

ನಾವೆಲ್ಲರೂ ಬರ್ಗರ್ ಮತ್ತು ಪಿಜ್ಜಾಗಳನ್ನು ತಿನ್ನುವುದಕ್ಕೆ ಇಷ್ಟಪಡುತ್ತೇವೆ. ಆದರೆ ಇವುಗಳಲ್ಲಿ ಹೇರಳವಾಗಿರುವ ಚೀಸ್, ಮೇಯೋ, ಬೆಣ್ಣೆಯಂತಹ ಪದಾರ್ಥಗಳನ್ನು ಮರೆಯುತ್ತವೆ. ಇದು ನಮ್ಮ ದೇಹದಲ್ಲಿ ತೈಲದ ಪ್ರಮಾಣವನ್ನು ಹೆಚ್ಚಿಸಬಹುದು. ನಮ್ಮ ಚರ್ಮವು ಈ ಹೆಚ್ಚುವರಿ ಪ್ರಮಾಣವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಎಣ್ಣೆಯುಕ್ತ ಚರ್ಮ ಮತ್ತು ಮೊಡವೆ ಸಮಸ್ಯೆ ಉದ್ಬವಿಸುತ್ತದೆ.

4. ಕೆಂಪು ಮಾಂಸ

ನೀವು ಮಾಂಸ ತಿನ್ನುವುದನ್ನು ಇಷ್ಟಪಟ್ಟರೂ, ದಯವಿಟ್ಟು ಅದನ್ನು ನಿಮ್ಮ ನಿತ್ಯ ಆಹಾರವನ್ನಾಗಿ ಮಾಡಿಕೊಳ್ಳಬೇಡಿ. ಏಕೆಂದರೆ ಮಾಂಸ ಕೊಬ್ಬಿನಿಂದ ಸಮೃದ್ಧವಾಗಿದೆ. ಇದು ನಿಮ್ಮ ಚರ್ಮಕ್ಕೆ ಎಷ್ಟು ಕೆಟ್ಟದು ಎಂದು ಈಗಾಗಲೇ ನಿಮಗೆ ತಿಳಿದಿದೆ.

 ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: