Diabetes Food: ದಿನಾ ಚಪಾತಿ ತಿಂದು ಬೋರ್ ಆಗಿದ್ಯಾ? ಮಧುಮೇಹಿಗಳೇ ಒಮ್ಮೆ ಈ ರುಚಿಕರ ಅಡುಗೆ ಟ್ರೈ ಮಾಡಿ

ನಾಲ್ಕು ಬಗೆಯ ಪೌಷ್ಠಿಕಾಂಶವಿರೋ ಹಿಟ್ಟು ಬಳಸಿ ಮಧುಮೇಹಿಗಳು ರುಚಿಕರ ಆಹಾರ ತಯಾರಿಸಿ ಸೇವಿಸಬಹುದು ಹಾಗೂ ಡಯಾಬಿಟಿಸ್ ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಯ್ಯೋ.. ನನಗೆ ಡಯಾಬಿಟಿಸ್ ಇದೆ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ಬಿಟ್ಟು ಬೇರೆ ಅಡುಗೆ ಮಾಡಿ ತಿನ್ನೋ ಆಗಿಲ್ಲ ಅಂತ ಬೇಜಾರ್ ಮಾಡ್ಕೊಬೇಡಿ. ಗೋಧಿ ಬದಲು ರಾಗಿ (Ragi Atta), ಅಮರಾಂತ್ (Amaranth atta), ಬಾರ್ಲಿ (Barley Atta)  ಹಾಗೂ ಕಡ್ಲೆ ಹಿಟ್ಟಿ (Channe Ka Atta)ನಲ್ಲಿ ರುಚಿಕರ ಅಡುಗೆ ಮಾಡಿ ತಿನ್ನಬಹುದು. ಮಧುಮೇಹಿಗಳು ತಮ್ಮ ಆಹಾರದಲ್ಲಿ ಫೈಬರ್ (Fibre-rich) ಹಾಗೂ ಪ್ರೋಟಿನ್ ಹೆಚ್ಚಾಗಿರುವ  ಪದಾರ್ಥಗಳನ್ನೇ ಹೆಚ್ಚಾಗಿ ಬಳಸಬೇಕು. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಕ್ಕರೆ ಮಟ್ಟವನ್ನು ಬ್ಯಾಲೆನ್ಸ್ ಮಾಡಲು ಕಾರ್ಬೋಹೈಡ್ರೇಟ್ (Carbohydrates) ಮತ್ತು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕು.  ಮಧುಮೇಹಿಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸೂಕ್ತ ಪ್ರಮಾಣದಲ್ಲಿ ಕಾಪಾಡಿಕೊಳ್ಳೊದು ಅತಿ ಮುಖ್ಯವಾಗಿದೆ. 

ಹೇಗಿರಬೇಕು ಮಧುಮೇಹಿಗಳ ಆಹಾರ ಕ್ರಮ?

ಮಧುಮೇಹದ ಚಿಕಿತ್ಸೆಯಲ್ಲಿ ಆಹಾರಕ್ರಮ ಪ್ರಮುಖ ಪಾತ್ರ  ನಿರ್ವಹಿಸುತ್ತೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಒಂದು ಒಳ್ಳೆಯ ಆಹಾರಕ್ರಮ ಅಂತಾರೆ ವೈದ್ಯರು. ಡಯಾಬಿಟಿಸ್ ಡಯೆಟ್ ಅಂದ್ರೆ ಬರೀ ಚಪಾತಿ ತಿನ್ನುವುದಲ್ಲ. ನಾವು ಖರೀದಿಸೋ ಗೋಧಿ ಹಿಟ್ಟಿನಲ್ಲಿ ಸಂಸ್ಕರಿಸಿದ ಹಿಟ್ಟು ಬಳಸಿರುತ್ತಾರೆ. ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಹೀಗಾಗಿ ಮನೆಯಲ್ಲಿನ ಧಾನ್ಯಗಳನ್ನು ಹೆಚ್ಚಾಗಿ ಬಳಸೋದು ಉತ್ತಮ. ಧಾನ್ಯದ ಹಿಟ್ಟಿಗೆ ಇತರ ಹಿಟ್ಟನ್ನು ಬೆರೆಸಬಾರದು.

ಮಧುಮೇಹಿಗಳು ರಾಗಿ , ಅಮರಾಂತ್, ಬಾರ್ಲಿ ಹಾಗೂ ಕಡ್ಲೆ ಹಿಟ್ಟಿನಲ್ಲಿ ಅಡುಗೆ ಮಾಡಿ ಸೇವಿಸೋದು ಉತ್ತಮ. ವಿವಿಧ ಧ್ಯಾನದ ಹಿಟ್ಟುಗಳನ್ನು ಹೇಗೆ ಬಳಸಬೇಕು ಅಂತ ಹೇಳ್ತಿವಿ ನೋಡಿ.

ರಾಗಿ ಹಿಟ್ಟಿನ ದೋಸೆ ಬೆಸ್ಟ್

ಮಧುಮೇಹಿಗಳಿಗೆ ನಾರಿನಾಂಶವಿರೋ ಆಹಾರ ಪದಾರ್ಥಗಳು ಅತಿ ಮುಖ್ಯ. ರಾಗಿಯಲ್ಲಿ ಅತಿ ಹೆಚ್ಚಾಗಿ ಫೈಬರ್ ಅಂಶವಿದೆ. ರಾಗಿಯಲ್ಲಿ ಮಾಡಿದ ಆಹಾರ ಸೇವಿಸಿದ್ರೆ ಬೇಗ ಹೊಟ್ಟೆ ಹಸಿಯುವುದಿಲ್ಲ. ಇದ್ರಿಂದ ಅತಿಯಾಗಿ ತಿನ್ನೋದು ಕಡಿಮೆಯಾಗುತ್ತೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತೆ. ರಾಗಿ ಮಧುಮೇಹ ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತೆ. ರಾಗಿ ಹಿಟ್ಟಿನಿಂದ ನೀವು ರಾಗಿ ದೋಸೆ, ರಾಗಿ ರೊಟ್ಟಿ ಹಾಗೂ ರಾಗಿ ಮುದ್ದೆ ಮಾಡಿ ತಿನ್ನಬಹುದು.

ಇದನ್ನೂ ಓದಿ:  Netra Suraksha: ಡಯಾಬಿಟೀಸ್ ಮತ್ತು ನಿಮ್ಮ ದೃಷ್ಟಿಯ ಬಗೆಗಿನ 6 ತಪ್ಪುಕಲ್ಪನೆಗಳು

ಅಮರಾಂತ್ ಹಿಟ್ಟು ಬಳಸಿ ನೋಡಿ

ಅಮರಾಂತ್ ಧಾನ್ಯ ಅತ್ಯಂತ ಹಳೆಯ ಧಾನ್ಯ. ಪ್ರಾಚೀನಕಾಲದಿಂದ ಬಳಕೆಯಲ್ಲಿದೆ. ಸಿರಿಧಾನ್ಯಗಳಂತೆ ಇದು ಕೂಡ ಮರೆಯಾಗಿತ್ತು. ಇದರ ಉಪಯೋಗ ಅರಿತ ಜನರು ಇತ್ತೀಚಿನ ದಿನಗಳಲ್ಲಿ ಅಮರಾಂತ್ ಧಾನ್ಯವನ್ನು ಬಳಕೆ ಮಾಡ್ತಿದ್ದಾರೆ. ಇದು ಮಧುಮೇಹಿಗಳಿಗೆ ಅತ್ಯುತ್ತಮವಾದ್ದದ್ದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಹೆಚ್ಚಿನ ಪ್ರಮಾಣದ ಪ್ರೋಟೀನ್, ಖನಿಜಗಳು, ಜೀವಸತ್ವಗಳು ಮತ್ತು ಲಿಪಿಡ್‌ಗಳಿಂದ ತುಂಬಿದೆ. ಅಮರಾಂತ್ ಹಿಟ್ಟಿಗೆ ನೀರು ಹಾಗೂ ಬೆಲ್ಲ ಸೇರಿಸಿ ಚಿಕ್ಕಿ ಮಾಡಿ ತಿನ್ನಬಹುದು. ಅಮರಾಂತ್ ಹಿಟ್ಟಿನಿಂದ ಗಂಜಿ ಅಥವಾ ಮಕ್ಕಳಿಗೆ ನೀಡೋ ಸರಿ ರೂಪದಲ್ಲೂ ತಿನ್ನಬಹುದು.

ಬಾರ್ಲಿ ಹಿಟ್ಟು ಎಲ್ಲದ್ದಕ್ಕೂ ಬೆಸ್ಟ್

ಬಾರ್ಲಿ ಹಿಟ್ಟು ಕರುಳಿನ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಿ ನಿಮ್ಮ ದೇಹವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಬಾರ್ಲಿ ಹಿಟ್ಟಿನಿಂದ ಬ್ರೆಡ್ ಹಾಗೂ ಬಿಸ್ಕೆಟ್ ಗಳನ್ನು ತಯಾರಿಸಬಹುದು. ಬಾರ್ಲಿ ಗಂಜಿ ಮಾಡಿ ಕೂಡ ಕುಡಿಯಬಹುದು.

ಇದನ್ನೂ ಓದಿ: Netra Suraksha: ಡಯಾಬಿಟೀಸ್ ಸಂಬಂಧಿತ ಸಮಸ್ಯೆಗಳು ನಿಮ್ಮ ಕುಟುಂಬದ ಜೀವನದ ಗುಣಮಟ್ಟವನ್ನು ಗಂಭೀರವಾಗಿ ಅಡ್ಡಿಪಡಿಸಬಹುದು

ಕಡಲೆ ಹಿಟ್ಟು ಬಳಸಿ ಬ್ರೇಕ್​ಫಾಸ್ಟ್​ ಮಾಡಿ

ಕಡಲೆ ಹಿಟ್ಟು ಕೂಡ ಮಧುಮೇಹಿಗಳಿಗೆ ಉತ್ತಮವಾಗಿದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ, ಸಕ್ಕರೆ ಮಟ್ಟವನ್ನು ತಗ್ಗಿಸಲು ಸಹಾಯ ಮಾಡುತ್ತದೆ.  ಕಡಲೆ ಹಿಟ್ಟಿನಿಂದ ದೋಸೆ ಮಾಡಬಹುದು. ಬೆಳಗಿನ ಉಪಹಾರವಾಗಿ ದೋಸೆ ತಿನ್ನೋದು ಉತ್ತಮ ಈ ರೀತಿ ನಾಲ್ಕು ಬಗೆಯ ಪೌಷ್ಠಿಕಾಂಶವಿರೋ ಹಿಟ್ಟು ಬಳಸಿ ಮಧುಮೇಹಿಗಳು ರುಚಿಕರ ಆಹಾರ ತಯಾರಿಸಿ ಸೇವಿಸಬಹುದು ಹಾಗೂ ಡಯಾಬಿಟಿಸ್ ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
Published by:Pavana HS
First published: