• Home
  • »
  • News
  • »
  • lifestyle
  • »
  • Queen Elizabeth: ಬ್ರಿಟನ್ ರಾಣಿಯ ಸೌಂದರ್ಯದ ಗುಟ್ಟು ಈ ಪಾನೀಯಗಳಂತೆ

Queen Elizabeth: ಬ್ರಿಟನ್ ರಾಣಿಯ ಸೌಂದರ್ಯದ ಗುಟ್ಟು ಈ ಪಾನೀಯಗಳಂತೆ

Queen Elizabeth

Queen Elizabeth

Queen Elizabeth: ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯದ ಮೇಲೆ ಸಾಕಷ್ಟು ಕಾಳಜಿ ಇರುತ್ತದೆ. ರಾಣಿ ಎಲಿಜಬೆತ್​ಲಾಳ ಸೌಂದರ್ಯವನ್ನು ನೋಡುವುದೇ ಚೆಂದ . ಎಷ್ಟೋ ಹೆಣ್ಣು ಮಕ್ಕಳಿಗೆ ಇವರಂತ ಚರ್ಮ, ಅವರ ಹೊಳಪು ಬೇಕೆಂದೆನಿಸುತ್ತದೆ. ಅವರ ಪ್ರತಿನಿತ್ಯ ಯಾವುದೆಲ್ಲಾ ಪಾನೀಯಗಳನ್ನು ಸೇವಿಸುತ್ತಾ ಇದ್ದರು, ಮತ್ತು ಅದರಿಂದ ಸೌಂದರ್ಯ ವೃದ್ಧಿಸುತ್ತದೆಯಾ ಎಂಬುದು ತಿಳಿದು ನೋಡೋಣ.

ಮುಂದೆ ಓದಿ ...
  • Share this:

ರಾಜಮನೆತನದ ಜೀವನ ಶೈಲಿ (Life Style), ಅಲ್ಲಿನ ಜನರ ಅಭ್ಯಾಸಗಳು ಜನಸಾಮಾನ್ಯರ ಪಾಲಿಗೆ ಯಾವತ್ತಿಗೂ ಕುತೂಹಲದ ಅಂಶಗಳೇ ಆಗಿವೆ. ರಾಜ ಮನೆತನದ ರಾಯಲ್‌ ಲೈಫ್‌ ಸ್ಟೈಲ್‌ ಹೇಗಿರುತ್ತಿತ್ತು ಅನ್ನೋದನ್ನು ತಿಳ್ಕೊಳ್ಳೋಕೆ ಇಂದಿಗೂ ಜನರು ಕಾತುರ ಪಡ್ತಾರೆ. ರಾಯಲ್‌ ಜನ  (Royal People) ಹೇಗೆ ಇರುತ್ತಿದ್ದರು, ಅವರ ದಿನಚರಿ ಹೇಗಿರುತ್ತಿತ್ತು. ಅವರಿಗೆ ಯಾವುದೆಲ್ಲ ಇಷ್ಟವಾಗುತ್ತಿತ್ತು.. ಏನನ್ನು ತಿನ್ನುತ್ತಿದ್ದರು, ಏನನ್ನ ಕುಡಿಯುತ್ತಿದ್ದರು ಅನ್ನೋದು ಜನರಿಗೆ ಇಂಟ್ರೆಸ್ಟಿಂಗ್‌ ಟಾಪಿಕ್  (Intresting Topic) .‌ ಹಾಗಾಗಿ ಬ್ರಿಟನ್‌  (Britain) ರಾಣಿ ಎಲಿಜಬೆತ್  (Queen Elizabeth)‌ ನಿಧನದ ನಂತರ ಅವರಿಗೆ ಸಂಬಂಧಿಸಿದ ಬಹಳಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ. ಸಾಕಷ್ಟು ಇಂಟೆರೆಸ್ಟಿಂಗ್‌ ವಿಚಾರಗಳು ಜನರನ್ನು ಬೆರಗುಗೊಳಿಸುತ್ತಿವೆ. ಅದರಲ್ಲೊಂದು ರಾಣಿ ಎಲಿಜಬೆತ್‌ ಅವರು ದಿನವೂ ತಪ್ಪದೇ ಸೇವಿಸುತ್ತಿದ್ದ ಪಾನೀಯಗಳು.


ಹೌದು. ರಾಣಿ ಎಲಿಜಬೆತ್‌ ಒಂದು ದಿನದಲ್ಲಿ ಸುಮಾರು 4 ಕಾಕ್‌ಟೇಲ್‌ಗಳನ್ನು ಸೇವಿಸುತ್ತಿದ್ದರಂತೆ. ಇವುಗಳು ರಾಜನು ಪ್ರತಿ ದಿನ ಕುಡಿಯುತ್ತಿದ್ದ ಕಾಕ್ಟೇಲ್‌ ಗಳಾಗಿದ್ದವು. ರಾಣಿ ಕೂಡ ಅದನ್ನು ಪ್ರತಿದಿನವೂ ತಪ್ಪದೇ ಸೇವಿಸುತ್ತಿದ್ದರು. ಎಷ್ಟೆಷ್ಟು ಹೊತ್ತಿಗೆ ಅವರು ಪಾನೀಯಗಳನ್ನು ಸೇವಿಸ್ತಾ ಇದ್ರು ಅನ್ನೋದನ್ನು ರಾಜ ಮನೆತನದ ಮಾಜಿ ಬಾಣಸಿಗ ಡ್ಯಾರೆನ್ ಮೆಕ್‌ಗ್ರಾಡಿ ಬಹಿರಂಗಪಡಿಸಿದ್ದರು. ಊಟಕ್ಕೆ ಸ್ವಲ್ಪ ಮೊದಲು ರಾಣಿಯು ತನ್ನ ಮೊದಲ ಪಾನೀಯವನ್ನು ಸೇವಿಸುತ್ತಿದ್ದರಂತೆ.


ಈ ಪಾನೀಯ ಜಿನ್ ಮತ್ತು ಡುಬೊನೆಟ್‌ನಿಂದ ಮಾಡಲ್ಪಟ್ಟಿರುತ್ತೆ. ಅಲ್ದೇ ಇದಕ್ಕೆ ಲಿಂಬೆಹಣ್ಣು ಹಾಗೇ ಸಾಕಷ್ಟು ಐಸ್‌ ಕ್ಯೂಬ್‌ ಗಳನ್ನೂ ಹಾಕಿ ತಯಾರಿಸಲಾಗುತ್ತೆ ಎಂದಿದ್ದಾರೆ.


4 drinks the Queen used to have every single day, Beauty secret of Queen Elizabeth, Royal chef Darren McGrady, Kannada News, Karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ರಾಣಿ ಎಲಿಜಬೆತ್ ಸೌಂದರ್ಯ ಹಿಂದೆ ಇರುವ ಕಾರಣವೇನಯ, ಅವರು ಪ್ರತಿನಿತ್ಯ ಕುಡಿಯುತ್ತಿದ್ದ ಪಾನೀಯಗಳು ಯಾವೆಲ್ಲಾ
Queen Elizabeth


ಇನ್ನು ರಾಣಿ ತನ್ನ ಊಟವನ್ನು ಮುಗಿಸಿದ ಬಳಿಕ ಒಂದು ಪೀಸ್‌ ಚಾಕೋಲೇಟ್‌ ತಿನ್ನುತ್ತಿದ್ದರು. ಜೊತೆಗೆ ಒಂದು ಗ್ಲಾಸ್‌ ವೈನ್‌ ತೆಗೆದುಕೊಳ್ಳುತ್ತಿದ್ದರು. ಅಲ್ದೇ ರಾಣಿಯು ಡ್ರೈ ಜಿನ್ ಮಾರ್ಟಿನಿಯ ಪಾನೀಯವನ್ನು ಸಹ ಸೇವಿಸುತ್ತಿದ್ದರು ಅನ್ನೋದನ್ನು ರಾಣಿಯ ಸೋದರ ಸಂಬಂಧಿ ಮಾರ್ಗರೆಟ್ ರೋಡ್ಸ್ ಹೇಳಿದ್ದಾರೆ.


ಇದನ್ನೂ ಓದಿ: ಮೈಸೂರಿಗೆ ಒಂದು ದಿನದ ಟ್ರಿಪ್, ಈ ಎಲ್ಲಾ ಸ್ಥಳಗಳ ಸೌಂದರ್ಯ ಆಸ್ವಾದಿಸಬಹುದು!


ಇನ್ನು ದಿನದ ಕೊನೆಯಲ್ಲಿ ರಾಣಿ ಎಲಿಜಬೆತ್‌ ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್‌ ಶಾಂಪೇನ್‌ ಕುಡಿದು ಮಲಗುತ್ತಿದ್ದರು. ಹೀಗೆ ರಾಣಿ ಸೇವಿಸುತ್ತಿದ್ದ ಈ ನಾಲ್ಕು ಪಾನೀಯಗಳನ್ನು ನಾವು ಬೆಸ್ಟ್‌ ರಾಯಲ್‌ ಮಿಶ್ರಣ ಅಂತ ಕರೆಯಬಹುದೇನೋ.


ಇಷ್ಟೇ ಅಲ್ಲದೇ, ಬಕಿಂಗ್‌ ಹ್ಯಾಮ್​ನ‌ ಅರಮನೆಯ ಬಾಣಸಿಗರು ವಿಶೇಷವಾಗಿ ತಯಾರಿಸಿದ ಕೇಕ್ ಒಂದನ್ನು ರಾಜ ಇಷ್ಟಪಡುತ್ತಿದ್ದರು. ಅಲ್ದೇ ರಾಣಿ ಎಲಿಜಬೆತ್‌ ಪ್ರತಿ ದಿನವೂ ಒಂದು ಚಾಕೊಲೇಟ್ ಬಿಸ್ಕತ್‌ ಕೇಕ್ ಅನ್ನು ತಿನ್ನುತ್ತಿದ್ದರು.


ಅಷ್ಟೇ ಏಕೆ ಕೊನೆಯಲ್ಲಿ ಸ್ವಲ್ಪವೇ ಉಳಿದಿದ್ದರೂ ಸಹ ರಾಣಿ ಅದನ್ನು ತಿನ್ನದೇ ಬಿಡುತ್ತಿರಲಿಲ್ಲ. ಅಲ್ಲದೇ ರಾಣಿ ಎಲ್ಲಿಗಾದರೂ ಪ್ರಯಾಣ ಮಾಡೋವಾಗ ಅವರು ತಮ್ಮೊಂದಿಗೆ ಹಿರಿಯ ಬಾಣಸಿಗರನ್ನೂ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ತಮ್ಮ ನೆಚ್ಚಿನ ಊಟ ತಿಂಡಿಯನ್ನೇ ಅವರು ಸೇವಿಸೋಕೆ ಸಾಧ್ಯವಾಗುತ್ತಿತ್ತು.


ಹೀಗೆ ರಾಣಿ ಎಲಿಜಬೆತ್‌ ತಿನ್ನುವ ಹಾಗೂ ಪಾನೀಯಗಳನ್ನು ಸೇವಿಸುವ ಅಭ್ಯಾಸವಿತ್ತು. ಇಷ್ಟು ವರ್ಷ ಆರೋಗ್ಯವಾಗಿ ಬದುಕಿದ್ದ ರಾಣಿಯ ಲೈಫ್‌ ಸ್ಟೈಲ್‌ ಕೂಡ ಕಟ್ಟುನಿಟ್ಟಾಗಿತ್ತು. ಆರೋಗ್ಯಕರವಾದ ಅಭ್ಯಾಸಗಳನ್ನು ಹೊಂದಿದ್ದ ರಾಣಿ ಹಿತಮಿತವಾಗಿ ತಿನ್ನುತ್ತಿದ್ದರು ಅನ್ನೋದು ಸುಳ್ಳಲ್ಲ.


ಇದನ್ನೂ ಓದಿ: ಪಿಸಿಓಎಸ್​ ಸಮಸ್ಯೆಗೆ ನಟಿ ಸೋನಮ್ ಕಪೂರ್ ಈ ಆಹಾರಗಳನ್ನೇ ಸೇವಿಸುತ್ತಿದ್ರಂತೆ


ಮೊನ್ನೆ ಮೊನ್ನೆಯಷ್ಟೇ ಬ್ರಿಟನ್‌ ರಾಣಿ ಎಲಿಜಬೆತ್‌ ಅಂತ್ಯಕ್ರಿಯೆ ನಡೆಯಿತು. ಜಗತ್ತಿನ ಗಣ್ಯಾತಿ ಗಣ್ಯರು, ನಾಯಕರು, ರಾಜಮನೆತನದವರು ಬಂದು ರಾಣಿಗೆ ಅಂತಿಮ ನಮನ ಸಲ್ಲಿಸಿ ಹೋದರು. ಇಡೀ ಜಗತ್ತು ಅವರ ಚತುರತೆಯನ್ನು ಕೊಂಡಾಡಿತು.


ಬ್ರಿಟನ್‌ ರಾಣಿ ಎಲಿಜಬೆತ್‌ ಜೀವನ ಬಹಳಷ್ಟು ಜನರಿಗೆ ಸ್ಪೂರ್ತಿ ಅನ್ನೋದು ಸುಳ್ಳಲ್ಲ. ಒಳ್ಳೆಯ ಆಡಳಿತಗಾರ್ತಿಯಾಗಿದ್ದ ಎಲಿಜಬೆತ್‌ ಅತ್ಯದ್ಭುತ ಆಡಳಿತ ತಂತ್ರಗಳನ್ನು ಅನುಸರಿಸುತ್ತಿದ್ದರು. ಅವರ ಜೀವನ ಶೈಲಿ ಬೆರಗಾಗುವಂತಿತ್ತು. ಅಲ್ಲದೇ ಅವರ ಆಸಕ್ತಿಯ ವಿಷಯಗಳು, ಸೌಂದರ್ಯ ಪ್ರಜ್ಞೆ ಎಲ್ಲವೂ ಮಾದರಿಯಾಗುವಂತಿದ್ದವು ಅಂದರೆ ಸುಳ್ಳಾಗೋದಿಲ್ಲ.

First published: