Valentains Day 2023: ಪ್ರೇಮಿಗಳ ದಿನಕ್ಕಿರುವ ವಿಶೇಷತೆ ಏನು? ಈ ಕುರಿತ ಶಾಕಿಂಗ್ ವಿಚಾರಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಇತಿಹಾಸಕಾರರು ಫೆಬ್ರವರಿ 14 ರಂದು ಸಂತ ವ್ಯಾಲಂಟೈನ್‌ರ ಮರಣದ ದಿನ ಎಂಬುದಾಗಿಯೂ ನೆನಪಿಸಿಕೊಳ್ಳುತ್ತಾರೆ. ಇತರರ ಪ್ರಕಾರ "ಲುಪರ್ಕಾಲಿಯಾ" ಎಂಬ ಪೇಗನ್ ಫಲವತ್ತತೆ ಉತ್ಸವದ ಮೂಲವನ್ನು ಹೊಂದಿದೆ ಎಂಬುದಾಗಿಯೂ ಉಲ್ಲೇಖಗೊಂಡಿದೆ. ಫೆಬ್ರವರಿ 15 ರಂದು ಪ್ರಾಚೀನ ರೋಮ್‌ನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿತ್ತು.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • New Delhi, India
  • Share this:

ಪ್ರೇಮಿಗಳಿಗೆ (Lovers) ಪ್ರತ್ಯೇಕ ದಿನವೆಂಬುದೇ ಇಲ್ಲ ಏಕೆಂದರೆ ಪ್ರೇಮ ಎಂಬುದು ಧರ್ಮ, ಜಾತಿ, ಸಮಯ, ದಿನ, ವರ್ಷ ಇದೆಲ್ಲವನ್ನೂ ಮೀರಿದ ಮಧುರವಾದ ಅನುಭೂತಿಯಾಗಿದೆ. ಆದರೂ ಪಾಶ್ಚಾತ್ಯ ಸಂಸ್ಕೃತಿಯ (Western Culture) ಪ್ರಭಾವ ಎಂಬಂತೆ ಫೆಬ್ರವರಿ 14 ಅನ್ನು ವ್ಯಾಲೆಂಟೈನ್ಸ್​​ ಡೇ (Valentains Day) ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರೇಮಿಗಳಿಗೆ (Love) ಈ ದಿನ ಅತ್ಯಂತ ವಿಶೇಷವಾದುದು. ಅದೆಷ್ಟೋ ಸಮಯದಿಂದ ಮನಸ್ಸಿನಲ್ಲಿ ಇದ್ದ ಪ್ರೇಮ ನಿವೇದನೆಗೂ ಇದೇ ದಿನವನ್ನೇ ಹೆಚ್ಚಿನ ಪ್ರೇಮಿಗಳು ಆಯ್ದುಕೊಳ್ಳುತ್ತಿದ್ದಾರೆ. ಇಂದಿನ ಲೇಖನದಲ್ಲಿ ಈ ದಿನವನ್ನು ಏಕೆ ಆಚರಿಸಲಾಗುತ್ತದೆ ಹಾಗೂ ಪ್ರೇಮಿಗಳ ದಿನವೆಂದು ಯಾಕೆ ಕರೆಯಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ


ಸೇಂಟ್ ವ್ಯಾಲೆಂಟೈನ್ ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ


ವ್ಯಾಲೆಂಟೈನ್ಸ್ ಡೇ ಎಂಬ ಹೆಸರು ಸಂತ ವ್ಯಾಲೆಂಟೈನ್‌ನಿಂದ ಬಂದಿರುವುದಾಗಿದೆ. ಆದರೆ ಈ ಹೆಸರಿನ ಬಗ್ಗೆ ಕೆಲವು ಗೊಂದಲಗಳಿವೆ. ಈ ದಿನವನ್ನು ರಜಾದಿನವನ್ನಾಗಿ ಕೂಡ ಆಚರಿಸಲಾಗುತ್ತದೆ.


Tips for long distance relationship in love
ಸಾಂದರ್ಭಿಕ ಚಿತ್ರ


History.com ಪ್ರಕಾರ, ಮೂರನೇ ಶತಮಾನದ ರೋಮ್‌ನಲ್ಲಿ ಪಾದ್ರಿಯಾಗಿದ್ದ ಇನ್ನೊಬ್ಬ ವ್ಯಾಲಂಟೈನ್ ಎಂಬ ಸಂತನಿದ್ದು ಬಹುಶಃ ಆತನ ಜನ್ಮದಿನವನ್ನೇ ರಜಾದಿನವನ್ನಾಗಿ ಗುರುತಿಸಿರಬಹುದು ಎಂದು ತಿಳಿಸಿದೆ. ಚಕ್ರವರ್ತಿ ಕ್ಲಾಡಿಯಸ್ II ಪ್ರೀತಿಯ ಹೆಸರಿನಲ್ಲಿ ವಿವಾಹವಾಗುವುದನ್ನು ನಿಷೇಧಿಸಿದ್ದನು ಹಾಗೂ ಈ ನಿಷೇಧವನ್ನು ಸಂತ ವ್ಯಾಲಂಟೈನ್ ಧಿಕ್ಕರಿಸಿದನು ಎಂಬುದು ಇತಿಹಾಸದಲ್ಲಿ ಉಲ್ಲೇಖಿತಗೊಂಡಿದೆ. ಇನ್ನೊಂದು ದಂತಕಥೆಯ ಪ್ರಕಾರ, ರೋಮ್‌ನಲ್ಲಿ ಸೆರೆಮನೆಯಿಂದ ಪಾರಾಗಲು ಕ್ರಿಶ್ಚಿಯನ್ನರಿಗೆ ಸಹಾಯ ಮಾಡಿದ್ದಕ್ಕೆ ವ್ಯಾಲಂಟೈನ್ ವಧಿಸಲ್ಪಟ್ಟರು ಹಾಗೂ ನಿಮ್ಮ ಪ್ರೀತಿಪಾತ್ರರಿಂದ ಎಂಬ ಒಕ್ಕಣೆ ಇರುವ ಸಂದೇಶವನ್ನು ಕಳುಹಿಸಿದರು ಎಂಬುದು ದಾಖಲೆಗೊಂಡಿದೆ.


ವ್ಯಾಲೆಂಟೈನ್ಸ್ ಡೇ ಪುರಾತನ ಪೇಗನ್ ಹಬ್ಬ


ಕೆಲವು ಇತಿಹಾಸಕಾರರು ಫೆಬ್ರವರಿ 14 ರಂದು ಸಂತ ವ್ಯಾಲಂಟೈನ್‌ರ ಮರಣದ ದಿನ ಎಂಬುದಾಗಿಯೂ ನೆನಪಿಸಿಕೊಳ್ಳುತ್ತಾರೆ. ಇತರರ ಪ್ರಕಾರ "ಲುಪರ್ಕಾಲಿಯಾ" ಎಂಬ ಪೇಗನ್ ಫಲವತ್ತತೆ ಉತ್ಸವದ ಮೂಲವನ್ನು ಹೊಂದಿದೆ ಎಂಬುದಾಗಿಯೂ ಉಲ್ಲೇಖಗೊಂಡಿದೆ. ಫೆಬ್ರವರಿ 15 ರಂದು ಪ್ರಾಚೀನ ರೋಮ್‌ನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿತ್ತು.


1300 ರ ದಶಕದಲ್ಲಿ, ಇದು ಅಧಿಕೃತವಾಗಿ ಪ್ರೀತಿಗೆ ಸಂಬಂಧಿಸಿದ ರಜಾದಿನವಾಯಿತು


5 ನೇ ಶತಮಾನದ ಕೊನೆಯಲ್ಲಿ, ರೋಮನ್ ಪೋಪ್ ಗೆಲಾಸಿಯಸ್ ಫೆಬ್ರವರಿ 14 ರ ದಿನಾಂಕವನ್ನು "ಸೇಂಟ್ ವ್ಯಾಲೆಂಟೈನ್ಸ್ ಡೇ" ಎಂದು ಅಧಿಕೃತವಾಗಿ ಘೋಷಿಸಿದರು. ಇದು ಮೊದಲು ಫ್ರಾನ್ಸ್ ಮತ್ತು ಇಂಗ್ಲೆಂಡ್‌ನಲ್ಲಿನ ಸಾಮಾನ್ಯ ನಂಬಿಕೆಯಿಂದ ಪ್ರಾರಂಭವಾದ ಸಂಪ್ರದಾಯವಾಗಿದೆ.


follow these tips to become a master of love making
ಸಾಂದರ್ಭಿಕ ಚಿತ್ರ


ಪ್ರಣಯ ದೇವತೆಯ ಮೂಲ ಗ್ರೀಕ್ ಪುರಾಣಗಳಲ್ಲಿದೆ


ಪ್ರಣಯ ದೇವರನ್ನು ಬಿಲ್ಲು ಬಾಣದಿಂದ ಹೃದಯದ ಆಕಾರದಿಂದ ಚಿತ್ರಿಸಲಾಗುತ್ತದೆ. ಹೆಚ್ಚಾಗಿ ವ್ಯಾಲೆಂಟೈನ್ಸ್ ಡೇ ಕಾರ್ಡ್‌ಗಳಲ್ಲಿ ಕಾಣಿಸಿಕೊಳ್ಳುವ ಈ ದೇವತ ವ್ಯಕ್ತಿ ಪ್ರಣಯ ದೇವರಾಗಿದ್ದಾನೆ. ಎರೋಸ್ ಎಂಬ ಗ್ರೀಕ್ ಪ್ರೀತಿಯ ದೇವರು, ನಿಜವಾಗಿಯೂ ಸುಂದರ, ಅಮರ ವ್ಯಕ್ತಿಯಾಗಿದ್ದು ಜನರನ್ನು ಪ್ರೀತಿಯಲ್ಲಿ ಬೀಳಿಸುವ ಶಕ್ತಿ ಹೊಂದಿದ್ದರು ಎಂಬ ಪುರಾಣ ಮಾಹಿತಿ ಇದೆ.


ಮೊದಲ ವ್ಯಾಲೆಂಟೈನ್ ಕವನವನ್ನು 15 ನೇ ಶತಮಾನದಲ್ಲಿ ಕಳುಹಿಸಲಾಯಿತು


1415 ರಲ್ಲಿ ಚಾರ್ಲ್ಸ್ ಎಂಬ ಫ್ರೆಂಚ್ ಮಧ್ಯಕಾಲೀನ ದಳಪತಿ ತನ್ನ ಹೆಂಡತಿಗೆ ಬರೆದ ಕವನವಾಗಿದ್ದು, History.com ಪ್ರಕಾರ ಪ್ರೇಮಿಗೆ ಕಳುಹಿಸಲಾದ ಹಳೆಯ ಕವನ ದಾಖಲೆಯಾಗಿದೆ. 21 ರ ಹರೆಯದ ಚಾರ್ಲ್ಸ್ ಲಂಡನ್ ಟವರ್‌ನಲ್ಲಿ ಜೈಲಿನಲ್ಲಿದ್ದಾಗ ಈ ಪ್ರೀತಿಯ ಕವನವನ್ನು ತಮ್ಮ ಪತ್ನಿಗೆ ಬರೆದಿದ್ದರು ಎನ್ನಲಾಗಿದೆ.


1840 ರವರೆಗೂ ಮೊದಲ ಸಾಮೂಹಿಕ-ವ್ಯಾಲೆಂಟೈನ್‌ ಕಾರ್ಡ್‌ ಮಾರಾಟ


17 ನೇ ಶತಮಾನದಲ್ಲಿ ಜನರು ಕಾರ್ಡ್‌ಗಳು ಮತ್ತು ಕೈಬರಹದ ಪತ್ರಗಳನ್ನು ಪ್ರೇಮಿಗಳು ಮತ್ತು ಸ್ನೇಹಿತರಿಗೆ ವಿನಿಮಯ ಮಾಡಿಕೊಳ್ಳಲು ಪ್ರಾರಂಭಿಸಿದರು, ಆದರೆ 1840 ರ ದಶಕದಲ್ಲಿ ಮೊದಲ ವ್ಯಾಲೆಂಟೈನ್ಸ್ ಡೇ ಕಾರ್ಡ್‌ಗಳನ್ನು ಯುಎಸ್‌ನಲ್ಲಿ ಎಸ್ತರ್ ಎ. ಹೌಲ್ಯಾಂಡ್ ಮಾರಾಟ ಮಾಡಿದರು.


ಸಾಂದರ್ಭಿಕ ಚಿತ್ರ


ವ್ಯಾಲೆಂಟೈನ್ಸ್ ಡೇ ಹೂವುಗಳನ್ನು ನೀಡುವ ಸಂಪ್ರದಾಯವು 17 ನೇ ಶತಮಾನದಷ್ಟು ಹಿಂದಿನದು


ಕೆಂಪು ಗುಲಾಬಿಗಳನ್ನು ನೀಡುವುದು ಇಂದು ಪ್ರಣಯ ಸೂಚಕವಾಗಿರಬಹುದು, ಆದರೆ 17 ನೇ ಶತಮಾನದ ಅಂತ್ಯದವರೆಗೆ ಹೂವುಗಳನ್ನು ನೀಡುವುದು ಜನಪ್ರಿಯ ಪದ್ಧತಿಯಾಗಿತ್ತು.


ವಾಸ್ತವವಾಗಿ, ಸ್ವೀಡನ್ನ ರಾಜ ಚಾರ್ಲ್ಸ್ II ಪರ್ಷಿಯಾ ಪ್ರವಾಸದಲ್ಲಿ ಹೂಗಳ ಭಾಷೆಯನ್ನು ಅರಿತುಕೊಂಡು ಬೇರೆ ಬೇರೆ ಹೂವುಗಳು ತಿಳಿಸುವ ಸಂಕೇತವನ್ನು ಕಲಿತನು ಎಂಬುದು ದಾಖಲಾಗಿದೆ. ಈತ ನಂತರ ಯುರೋಪ್‌ನಲ್ಲಿ ಹೂವುಗಳನ್ನು ನೀಡುವ ಸಂಪ್ರದಾಯವನ್ನು ಆರಂಭಿಸಿದನು ಎಂದು ಇತಿಹಾಸ ಹೇಳುತ್ತದೆ.


ಪ್ರತಿ ವರ್ಷ ವ್ಯಾಲೆಂಟೈನ್ಸ್ ಡೇ ತಯಾರಿಗಾಗಿ ಸುಮಾರು 250 ಮಿಲಿಯನ್ ಗುಲಾಬಿಗಳನ್ನು ಬೆಳೆಯಲಾಗುತ್ತದೆ


ಫೆಬ್ರವರಿ 14 ಬಂತೆಂದರೆ ಗುಲಾಬಿ ಹೂವುಗಳಿಗೆ ಸಾಕಷ್ಟು ಬೇಡಿಕೆ ಪ್ರಾರಂಭವಾಗುತ್ತದೆ. ಈಕ್ವೆಡಾರ್, ಕೀನ್ಯಾ ಅಥವಾ ಕೊಲಂಬಿಯಾ ಸೇರಿದಂತೆ ದೇಶಗಳು ಗುಲಾಬಿಗಳನ್ನು ಯುಎಸ್‌ಗೆ ರವಾನಿಸುತ್ತವೆ.


rose day 2023 the significance of the various rose colours
ಸಾಂದರ್ಭಿಕ ಚಿತ್ರ


ಪ್ರೇಮಿಗಳ ದಿನದಂದು ನೀಡಲಾದ ಹೂವಿನ ಬಣ್ಣವು ಅರ್ಥವನ್ನು ಹೊಂದಿದೆ


ಕೆಂಪು ಗುಲಾಬಿ ಸಾಂಪ್ರದಾಯಿಕವಾಗಿ ಪ್ರೀತಿಯನ್ನು ಸಂಕೇತಿಸುತ್ತದೆ, ಇತರ ಬಣ್ಣಗಳಾದ ಗಾಢ ಗುಲಾಬಿ, ನೇರಳೆ ಅಥವಾ ಬಿಳಿ -- ಇದು ಕ್ರಮವಾಗಿ ಸಂತೋಷ, ರಾಯಲ್ ಮತ್ತು ಸಹಾನುಭೂತಿಯನ್ನು ಸಂಕೇತಿಸುತ್ತದೆ.


ಇಂದು, ಅಮೆರಿಕನ್ನರು ಪ್ರೀತಿಯನ್ನು ಅರುಹಲು ಬಹಳಷ್ಟು ಖರ್ಚು ಮಾಡುತ್ತಾರೆ


ನ್ಯಾಷನಲ್ ರೀಟೇಲ್ ಫೌಂಡೇಶನ್ ಪ್ರಕಾರ, ಅಮೆರಿಕನ್ನರು 2019 ರಲ್ಲಿ ವ್ಯಾಲೆಂಟೈನ್ಸ್ ಡೇ ಉಡುಗೊರೆಗಳಿಗಾಗಿ $ 20 ಶತಕೋಟಿಗಿಂತ ಹೆಚ್ಚು ಖರ್ಚು ಮಾಡಿದ್ದಾರೆ ಮತ್ತು 2020 ಕ್ಕೆ $ 27.4 ಶತಕೋಟಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.


ಅಮೆರಿಕನ್ನರು ಪ್ರತಿ ವರ್ಷ 145 ಮಿಲಿಯನ್ ವ್ಯಾಲೆಂಟೈನ್ಸ್ ಡೇ ಕಾರ್ಡ್‌ಗಳನ್ನು ಕಳುಹಿಸುತ್ತಾರೆ


ಹಾಲ್‌ಮಾರ್ಕ್‌ನ ಪ್ರಕಾರ, ಪ್ರತಿ ಫೆಬ್ರವರಿ 14 ರಂದು 145 ಮಿಲಿಯನ್ ವ್ಯಾಲೆಂಟೈನ್ಸ್ ಡೇ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಕ್ರಿಸ್‌ಮಸ್ ನಂತರ ಹೆಚ್ಚು ಕಾರ್ಡ್ ವಿನಿಮಯ ಮಾಡುವ ದಿನ ಪ್ರೇಮಿಗಳ ದಿನವಾಗಿದೆ.


ಸಾಂದರ್ಭಿಕ ಚಿತ್ರ


ವ್ಯಾಲೆಂಟೈನ್ಸ್ ಸಂದೇಶಗಳನ್ನು ಬರೆಯಲು ಜನರಿಗೆ ಸಹಾಯ ಮಾಡಲು ಕಿರುಪುಸ್ತಕಗಳನ್ನು ರಚಿಸಲಾಗಿದೆ


ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಸರಿಯಾದ ಪದಗಳನ್ನು ಹುಡುಕಲು ನಿಮಗೆ ಸಹಾಯ ಬೇಕಾದರೆ, ನೀವು ವ್ಯಾಲೆಂಟೈನ್ಸ್ ರೈಟರ್ ಅನ್ನು ಖರೀದಿಸಬಹುದು. ಕಿರುಪುಸ್ತಕಗಳು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಳಸಬಹುದಾದ ಮಾದರಿ ಪಠ್ಯವನ್ನು ಒಳಗೊಂಡಿವೆ.


ಸಾಕುಪ್ರಾಣಿಗಳಿಗೆ ಉಡುಗೊರೆ ನೀಡಲು ಮಿಲಿಯನ್ ಡಾಲರ್ ಖರ್ಚು


ಸುಮಾರು 27.6 ಮಿಲಿಯನ್ ಅಮೆರಿಕನ್ ಕುಟುಂಬಗಳು 2020 ರಲ್ಲಿ ತಮ್ಮ ಸಾಕು ನಾಯಿಗಳಿಗೆ ವ್ಯಾಲೆಂಟೈನ್ಸ್ ಡೇ ಉಡುಗೊರೆಗಳನ್ನು ನೀಡಿದರು ಮತ್ತು 17.1 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಮ್ಮ ಬೆಕ್ಕುಗಳಿಗೆ ಉಡುಗೊರೆಗಳನ್ನು ತೆಗೆದುಕೊಂಡರು ಎಂಬುದು ವರದಿಯಾಗಿದೆ.


ಅಮೇರಿಕನ್ ಕುಟುಂಬಗಳು ಪ್ರೇಮಿಗಳ ದಿನದಂದು ತಮ್ಮ ಸಾಕುಪ್ರಾಣಿಗಳಿಗೆ ಉಡುಗೊರೆಗಳಿಗಾಗಿ ಅಂದಾಜು $751.3 ಮಿಲಿಯನ್ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.


ಸಾಂದರ್ಭಿಕ ಚಿತ್ರ


ಪ್ರೇಮಿಗಳ ದಿನದಂದು ಜನರು ಹೆಚ್ಚು ಖರ್ಚು ಮಾಡುವ ಉಡುಗೊರೆ ಆಭರಣವಾಗಿದೆ


ಕ್ಯಾಂಡಿ ಮತ್ತು ಹೂವುಗಳು ವ್ಯಾಲೆಂಟೈನ್ಸ್ ಡೇಗೆ ಕೆಲವು ಸಾಮಾನ್ಯ ಉಡುಗೊರೆಗಳಾಗಿರಬಹುದು, ಆದರೆ ರಾಷ್ಟ್ರೀಯ ರಿಟೇಲ್ ಒಕ್ಕೂಟದ ಪ್ರಕಾರ, ಫೆಬ್ರವರಿ 14 ರಂದು ಸಾಮಾನ್ಯವಾಗಿ ಹೆಚ್ಚು ಖರ್ಚು ಮಾಡುವ ಉಡುಗೊರೆ ವಸ್ತು ಎಂದರೆ ಆಭರಣವಾಗಿದ್ದು, 2020 ರಲ್ಲಿ $5.8 ಬಿಲಿಯನ್ ಖರ್ಚಾಗಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ.


ಮೊದಲ ಹೃದಯಾಕಾರದ ಚಾಕೊಲೇಟ್ ಬಾಕ್ಸ್ ಅನ್ನು 1861 ರಲ್ಲಿ ಪರಿಚಯಿಸಲಾಯಿತು


ಕ್ಯಾಡ್‌ಬರಿ ಸಂಸ್ಥಾಪಕ ಜಾನ್ ಕ್ಯಾಡ್ಬರಿ ಅವರ ಮಗ ರಿಚರ್ಡ್ ಕ್ಯಾಡ್ಬರಿ ಇದನ್ನು ನಿರ್ಮಿಸಿದ್ದು, ಅವರು ಮಾರಾಟವನ್ನು ಹೆಚ್ಚಿಸಲು ಅಲಂಕಾರಿಕ ಪೆಟ್ಟಿಗೆಗಳಲ್ಲಿ ಚಾಕೊಲೇಟ್‌ಗಳನ್ನು ಪ್ಯಾಕೇಜಿಂಗ್ ಮಾಡಲು ಪ್ರಾರಂಭಿಸಿದರು.


1866 ನಂತರ ಪ್ರೀತಿಯ ನಿವೇದನಗೆ ಸಿಹಿಯಾದ ಸಂಕೇತಗಳ ಸಂಭಾಷಣೆಗಳ ಬಳಕೆ


ಡೇನಿಯಲ್ ಚೇಸ್ ಅವರು ಸ್ವೀಟ್‌ಹಾರ್ಟ್ಸ್ ಕ್ಯಾಂಡಿಗಳ ಮೇಲೆ ಭಾವನಾತ್ಮಕ ಸಂದೇಶಗಳನ್ನು ಮುದ್ರಿಸಲು ಆರಂಭಿಸಿದರು. ಈ ಕ್ಯಾಂಡಿಗಳು ತುಂಬಾ ದೊಡ್ಡದಾಗಿದ್ದವು ಹಾಗೂ ಇದರಲ್ಲಿ ಹೆಚ್ಚು ಉದ್ದವಾದ ಸಾಲುಗಳನ್ನು ಮುದ್ರಿಸಬಹುದಾಗಿತ್ತು.


follow these tips to become a master of love making
ಸಾಂದರ್ಭಿಕ ಚಿತ್ರ


ಪ್ರತಿ ವರ್ಷ 8 ಶತಕೋಟಿಗೂ ಹೆಚ್ಚು ಒಲವಿನ ಸಂದೇಶಗಳಿರುವ ಕ್ಯಾಂಡಿಗಳನ್ನು ತಯಾರಿಸಲಾಗುತ್ತದೆ


ಹೃದಯದ ಸಂಕೇತವಿರುವ ಸುಮಾರು 8 ಶತಕೋಟಿಗೂ ಅಧಿಕ ಕ್ಯಾಂಡಿಗಳನ್ನು ತಯಾರಿಸಲಾಗುತ್ತದೆ. ಈ ಕ್ಯಾಂಡಿಗಳ ಮೇಲೆ ಒಲವಿನ ಸಂದೇಶಗಳನ್ನು ಮುದ್ರಿಸಲಾಗುತ್ತದೆ.


2022 ರಲ್ಲಿ ಪ್ರೋತ್ಸಾಹದ ಪದಗಳನ್ನು ಪ್ರೇಮ ನಿವೇದಿತ ಸಂದೇಶದೊಂದಿಗೆ ಸೇರಿಸಲಾಯಿತು


ಸ್ಪ್ಯಾಂಗ್ಲರ್ ಕ್ಯಾಂಡಿ ಕಳೆದ ವರ್ಷ ಪ್ರಸಿದ್ಧ ಸಂಭಾಷಣೆಗಳಾದ ಸ್ಫೂರ್ತಿದಾಯಕ ಮಾತುಗಳನ್ನು ಸೇರಿಸಲು ಆರಂಭಿಸಿದರು. ಈ ಕ್ಯಾಂಡಿಗಳನ್ನು ಸ್ನೇಹಿತರೊಂದಿಗೂ ಹಂಚಿಕೊಳ್ಳಬಹುದು.
ಸುಮಾರು 6 ಮಿಲಿಯನ್ ಜೋಡಿಗಳು ಪ್ರೇಮಿಗಳ ದಿನದಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ


ಫೆಬ್ರವರಿ 14 ರಂದು 6 ಮಿಲಿಯನ್ ಜೋಡಿಗಳು ನಿಶ್ಚಿತಾರ್ಥ ಮಾಡಿಕೊಳ್ಳುವುದರೊಂದಿಗೆ ವ್ಯಾಲೆಂಟೈನ್ಸ್ ಡೇಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುತ್ತಾರೆ.


ಇದನ್ನೂ ಓದಿ: Valentine’s Day 2023: ಲವರ್ ಇಲ್ಲದೇ ಇದ್ದರೂ ವ್ಯಾಲೆಂಟೈನ್ಸ್ ಡೇಯನ್ನು ಸಿಂಗಲ್ಸ್ ಎಂಜಾಯ್ ಮಾಡಬಹುದು!


ಪ್ರಪಂಚದಾದ್ಯಂತ ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ


ಅನೇಕ ಲ್ಯಾಟಿನ್ ಅಮೇರಿಕನ್ ದೇಶಗಳು ರಜಾದಿನವನ್ನು (ವ್ಯಾಲಂಟೈನ್ ದಿನ) ಎಲ್ ಡಿಯಾ ಡೆ ಲಾಸ್ ಎನಾಮೊರಾಡೋಸ್ (ಪ್ರೇಮಿಗಳ ದಿನ) ಅಥವಾ ಡಿಯಾ ಡೆಲ್ ಅಮೋರ್ ವೈ ಲಾ ಅಮಿಸ್ಟಾಡ್ (ಪ್ರೀತಿ ಮತ್ತು ಸ್ನೇಹದ ದಿನ) ಎಂದು ಕರೆದಿದ್ದಾರೆ.

Published by:Monika N
First published: