Astrology: ವೃಶ್ಚಿಕ ರಾಶಿಗೆ ಹೊಂದಾಣಿಕೆಯಾಗುವ ರಾಶಿಗಳು ಯಾವುದು ಗೊತ್ತಾ?

Zodiac Sign: ವೃಶ್ಚಿಕ ರಾಶಿಯವರು ಬಹುತೇಕ ಹೊಂದಾಣಿಕೆಯಾಗುವ ಕೆಲವು  ರಾಶಿಗಳು ಕಡಿಮೆ. ವೃಶ್ಚಿಕ ರಾಶಿ ಮಾತ್ರವಲ್ಲ ಕೆಲವೊಂದು ರಾಶಿಗಳಿಗೆ ಎಲ್ಲ ರಾಶಿಯ ಜನರು ಹೊಂದಾಣಿಕೆಯಾಗವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಒಂದೊಂದು ರಾಶಿಯ ವ್ಯಕ್ತಿಗಳ ಗುಣ ಒಂದೊಂದು ತರ ಇರುತ್ತದೆ. ಕೆಲವು ರಾಶಿಗಳ ವ್ಯಕ್ತಿಗಳಿಗೆ ಕೋಪ ಹೆಚ್ಚಿದ್ದರೆ, ಕೆಲವರು ಶಾಂತ ಸ್ವಭಾವದವರಾಗಿರುತ್ತಾರೆ. ಇನ್ನು ತುಂಬಾ ಖಾಸಗಿಯಾಗಿ, ನಿಗೂಢವಾಗಿ  ಮತ್ತು ಶಾಂತವಾಗಿರುವ ರಾಶಿಯ ವಿಚಾರಕ್ಕೆ ಬಂದರೆ ಅದು ವೃಶ್ಚಿಕ ರಾಶಿ ಅಗ್ರಸ್ಥಾನಕ್ಕೆ ಬರುತ್ತದೆ. ಈ ರಾಶಿಗೆ ಸೇರಿದ ಜನರು ಅಂತರ್ಮುಖಿಯಾಗಿರುತ್ತಾರೆ ಮತ್ತು ಸುಲಭವಾಗಿ ಯಾರೊಂದಿಗೂ ಸೇರುವುದಿಲ್ಲ. ಅವರು ಯಾರೊಂದಿಗಾದರೂ ಬೆರೆಯಲು ಹೆಚ್ಚು  ಸಮಯವನ್ನು ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಅವರ ಈ ಪ್ರವೃತ್ತಿ  ನಮಗೆ ಅವರಲ್ಲಿ  ಅಹಂಕಾರವಿದೆ ಎಂದು ಅನಿಸುತ್ತದೆ ಅಥವಾ ವಿಚಿತ್ರವಾಗಿ ಕಾಣಿಸುತ್ತದೆ.

ಆದರೆ ಅವರ ಬಗ್ಗೆ ತಿಳಿದಿರುವ ಜನರಿಗೆ ಅರ್ಥವಾಗುತ್ತದೆ. ಇನ್ನು  ವೃಶ್ಚಿಕ ರಾಶಿಯವರು ಭಾವೋದ್ರಿಕ್ತರು, ಹರಿತವಾದ ಮಾತುಗಳನ್ನು ಆಡುವವರು ಮತ್ತು ಬುದ್ಧಿವಂತರು ಎಂದು ಹೇಳಲಾಗುತ್ತದೆ. ಅವರು ಕೆಲವೇ ಜನರೊಂದಿಗೆ ಬೆರೆಯುವುದರಿಂದ, ವೃಶ್ಚಿಕ ರಾಶಿಯವರು ಬಹುತೇಕ ಹೊಂದಾಣಿಕೆಯಾಗುವ ಕೆಲವು  ರಾಶಿಗಳು ಕಡಿಮೆ. ವೃಶ್ಚಿಕ ರಾಶಿ ಮಾತ್ರವಲ್ಲ ಕೆಲವೊಂದು ರಾಶಿಗಳಿಗೆ ಎಲ್ಲ ರಾಶಿಯ ಜನರು ಹೊಂದಾಣಿಕೆಯಾಗವುದಿಲ್ಲ. ವೃಶ್ಚಿಕ ರಾಶಿಯವರಿಗೆ ಹೊಂದಾಣಿಕೆಯಾಗುವ ಕೆಲ ರಾಶಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕಟಕ

ವೃಶ್ಚಿಕ ರಾಶಿಯವರಂತೆ, ಕರ್ಕಾಟಕ ರಾಶಿಯವರೂ ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ. ಅಲ್ಲದೇ ಅವರು ಹೆಚ್ಚು ಗಮನಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಹಾಗೆಯೇ ಹೆಚ್ಚು ಅಂತರ್ಮುಖಿಯಾಗಿ ಯಾರೆಂದಿಗೂ ಬೆರೆಯುವುದಿಲ್ಲ. ಇವರು ಶಾಂತ ಮತ್ತು ನಾಚಿಕೆ ಸ್ವಭಾವದವರು. ಅವರು ಸುಲಭವಾಗಿ ಜನರೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಹೀಗಾಗಿ, ವೃಶ್ಚಿಕ ರಾಶಿಯವರ ಮನಸ್ಥಿತಿ ಮತ್ತು ಚಿಂತನೆಯ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಅಲ್ಲದೇ ವೃಶ್ಚಿಕ ಮತ್ತು ಕಟಕ ರಾಶಿಯವರು ಒಳ್ಳೆಯ ಸಂಬಂಧವನ್ನು ಹೊಂದಿರುತ್ತಾರೆ. ಒಬ್ಬರಿಗೊಬ್ಬರು ಚನ್ನಾಗಿ ಬೆರೆಯುತ್ತಾರೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ಮಾಡೋದು ಯಾಕೆ ಗೊತ್ತಾ?

ಮಕರ ರಾಶಿ

ಕಟಕ ರಾಶಿಯ ನಂತರ ವೃಶ್ಚಿಕ ರಾಶಿಯವರ ಜೊತೆ ಮಕರ ರಾಶಿಯವರು ಹೆಚ್ಚು ಹೊಂದಿಕೊಳ್ಳುತ್ತಾರೆ. ಇನ್ನು ವೃಶ್ಚಿಕ ರಾಶಿಯವರು ಶಾಂತವಾಗಿದ್ದರೂ, ಅವರು ಬಹಳ ಭಾವೋದ್ರಿಕ್ತ ಸ್ವಭಾವವುಳ್ಳ  ಜೀವಿಗಳಾಗಿರುತ್ತಾರೆ. ಅಲ್ಲದೆ ಅವರು ಒಂದು ವಿಚಾರವಾಗಿ ನಿರ್ಧಾರ ಕೈಗೊಂಡರೆ ಅದನ್ನು ಮಾಡಿಯೇ ಮಾಡುತ್ತಾರೆ. ಅವರಲ್ಲಿ ಸಾಧನೆ ಮಾಡುವ ಹಂಬಲ ಮತ್ತು ಛಲ ಇರುತ್ತದೆ. ಅದೇ ರೀತಿ, ಮಕರ ರಾಶಿಯವರು ಸಹ ಮಹತ್ವಾಕಾಂಕ್ಷೆಯ ಗುಣವನ್ನು ಹೊಂದಿರುತ್ತಾರೆ ಮತ್ತು ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ, ಮಕರ ರಾಶಿಯ ಜನರು  ಮತ್ತು ವೃಶ್ಚಿಕ ರಾಶಿಯವರು ಅತ್ಯಂತ ಹೊಂದಾಣಿಕೆಯಾಗಿರುತ್ತಾರೆ. ಈ ಎರೆಡು ರಾಶಿಯ ಜನರಲ್ಲಿ ಒಳ್ಳೆಯ ಭಾಂಧವ್ಯ ಇರುತ್ತದೆ.

ಮೀನಾ ರಾಶಿ

ಕಟಕ, ಮಕರ ರಾಶಿಯ ಜೊತೆ ಕೇವಲ ಮೀನಾ ರಾಶಿಯವರು ಮಾತ್ರ ವೃಶ್ಚಿಕ ರಾಶಿಯ ಜನರಿಗೆ ಹೊಂದಾಣಿಕೆಯಾಗುತ್ತಾರೆ. ಮೀನಾ ರಾಶಿಯಲ್ಲಿ ಜನಿಸಿದ ಜನರು ಚಮತ್ಕಾರಿ ಸ್ವಭಾವವನ್ನು ಹೊಂದಿರುತ್ತಾರೆ. ಮೀನಾ ರಾಶಿಯವರು ಉಳಿದವರಿಗಿಂತ ಭಿನ್ನವಾಗಿರುವ ಸ್ವಭಾವವನ್ನು ಹೊಂದಿರುವ ಕಾರಣ ಬಹು ಬೇಗ ಆಕರ್ಷಿತರಾಗುತ್ತಾರೆ. ಅವರು  ಸಹ ವೃಶ್ಚಿಕ ರಾಶಿಯವರ ಅಸಾಮಾನ್ಯತೆಯನ್ನು ಮೆಚ್ಚುತ್ತಾರೆ. ಮೀನಾ ರಾಶಿ ಮತ್ತು ವೃಶ್ಚಿಕ ರಾಶಿಯವರ ಮಧ್ಯೆ ಒಂದು ಆರಾಮದಾಯಕ ಸ್ನೇಹವಿರುತ್ತದೆ. ಅವರಿಬ್ಬರು ಒಬ್ಬರನೊಬ್ಬರನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಅವರಿಬ್ಬರು ಹೆಚ್ಚು ಹೊಂದಿಕೊಂಡು, ಒಳ್ಳೆಯ ಬಾಂಧವ್ಯವನ್ನು ಹೊಂದಿರುತ್ತಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: