Alia Bhatt: ಬೇಸಿಗೆಯಲ್ಲಿ ಹಬ್ಬಗಳಿಗೆ ಎಂಥಾ ಸೀರೆಗಳು ಬೆಸ್ಟ್? ನಟಿ ಆಲಿಯಾ ಭಟ್ ಸೆಲೆಕ್ಷನ್ & ಕಲೆಕ್ಷನ್ ಹೇಗಿದೆ ನೋಡಿ

ಭಾರವಾದ ಸೀರೆಗಳನ್ನು ಧರಿಸುವುದಕ್ಕಿಂತಲೂ ನೀವು ಹಗುರವಾದ ಮತ್ತು ಮೃದುವಾದ ಸೀರೆಗಳನ್ನು ಧರಿಸಿ ಸಮಾರಂಭಗಳಿಗೆ ಹೋಗುವುದು ಒಳ್ಳೆಯದು

ಬಾಲಿವುಡ್ ನಟಿ ಆಲಿಯಾ ಭಟ್​

ಬಾಲಿವುಡ್ ನಟಿ ಆಲಿಯಾ ಭಟ್​

  • Share this:
ನೀವು ಈ ಬೇಸಿಗೆಯಲ್ಲಿ (Summer) ಕೌಟುಂಬಿಕ ಕಾರ್ಯಕ್ರಮಕ್ಕೆ ಅಥವಾ ಮದುವೆಗಳಿಗೆ ಹೋಗುತ್ತಿದ್ದರೇ, ಯಾವ ಸೀರೆಯನ್ನು (Saree) ಧರಿಸಿದರೆ ಸೂಕ್ತ ಎಂಬ ವಿಷಯದ ಬಗ್ಗೆ ತುಂಬಾನೇ ಗೊಂದಲವಿರುತ್ತದೆ. ಇಂತಹ ಬೇಸಿಗೆಯ ದಿನಗಳಲ್ಲಿ ಯಾವುದೇ ಆಚರಣೆಗಳಿಗೆ ಹೋದರೂ ನಾವು ಧರಿಸುವ ಸೀರೆ ತುಂಬಾನೇ ಸ್ಟೈಲ್ (Style) ಆಗಿ ಸಹ ಕಾಣಬೇಕು, ಅಲ್ಲದೆ ಹಗುರವಾಗಿರುವುದನ್ನು ಸಹ ಆಯ್ಕೆ ಮಾಡಬೇಕಾಗುತ್ತದೆ. ಕಸೂತಿ ಮಾಡಿದ ಬಿಳಿ ಸೀರೆಗಳು (White Saree) ಯಾರೇ ತೊಟ್ಟರೂ ಅದು ಅವರ ಸೌಂದರ್ಯವನ್ನು (Beauty) ಇನ್ನಷ್ಟೂ ಹೆಚ್ಚಿಸುತ್ತದೆ ಎಂದು ಹೇಳಬಹುದು. ಈ ಚಲನಚಿತ್ರ ನಟಿಯರು ಆಗಾಗ್ಗೆ ಈ ಬಿಳಿ ಸೀರೆಯನ್ನು ಉಡುತ್ತಾರೆ ನೋಡಿ ಅದರ ಮೇಲೆ ಲೈಟ್ ಆಗಿ ಡಿಸೈನ್ ಇರುತ್ತದೆ ಮತ್ತು ನೋಡಲು ತುಂಬಾನೇ ಚೆನ್ನಾಗಿ ಸಹ ಕಾಣುತ್ತದೆ.

ತನ್ನ ಇತ್ತೀಚಿನ ಚಿತ್ರವಾದ ‘ಗಂಗೂಬಾಯಿ ಕಾಥಿಯಾವಾಡಿ’ ಯ ಪ್ರಚಾರಕ್ಕಾಗಿ ಬಿಳಿ ಬಣ್ಣದ ಹೂಗುಚ್ಛದ ಡಿಸೈನ್ ಇರುವ ಸೀರೆಯನ್ನು ನಟಿ ಆಲಿಯಾ ಭಟ್ ಅವರು ಧರಿಸಿದ್ದು ನಮಗೆಲ್ಲಾರಿಗೂ ತಿಳಿದೇ ಇದೆ. ಅವರ ಲುಕ್ ಬುಕ್ ನಲ್ಲಿ, ನಾವು ಬಿಳಿ ಜಮ್ದಾನಿ ನೇಯ್ಗೆಗಳು ಮತ್ತು ಮಲ್ಟಿ-ಹೈಡ್ ಚಿಕಂಕಾರಿ ಕೆಲಸವಿರುವ ಸೀರೆಗಳನ್ನು ನೋಡುತ್ತೇವೆ. ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ರಿವೆಟಿಂಗ್ ಹೇರ್ ಅಕ್ಸೆಸರಿಗಳಾಗಿ ಹೂವುಗಳನ್ನು ಬಳಸುವುದು. ಬಿಳಿ ಬಣ್ಣದ ಡ್ರೇಪ್ ಲುಕ್ ಅನ್ನು ಹೇಗೆ ತಯಾರಿಸುವುದು ಎಂಬುದರ ಬಗ್ಗೆ ನಿಮಗೆ ವಿವರವಾದ ಸ್ಟೈಲಿಂಗ್ ಪಾಠಗಳು ಬೇಕಿದ್ದರೆ, ಆಲಿಯಾ ಅವರ ಕಲೆಕ್ಷನ್ ನಲ್ಲಿರುವ ಈ ಡಿಸೈನ್ ಸೀರೆಗಳನ್ನು ನೀವು ಬುಕ್ ಮಾರ್ಕ್ ಮಾಡಿಕೊಳ್ಳಬಹುದು.

ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಪ್ರಚಾರಕ್ಕಾಗಿ ಆಲಿಯಾ ಬಿಳಿ ಚಿಕಂಕಾರಿ ಸೀರೆ ಧರಿಸಿದ್ದರು

ನಟಿ ಆಲಿಯಾ ಭಟ್ ಯಾವತ್ತೂ ಒಂದು ಕ್ಷಣವೂ ನೀರಸವಾಗಿ ಕಾಣುವುದಿಲ್ಲ, 28 ವರ್ಷದ ನಟಿ ಯಾವಾಗಲೂ ತಾನು ಧರಿಸುವ ಉಡುಪುಗಳಿಂದ ಸದಾ ಆಸಕ್ತಿದಾಯಕವಾಗಿ ಕಾಣುತ್ತಾರೆ. ಬಾಲಿವುಡ್ ಚಿತ್ರಗಳಲ್ಲಿ ಮಾತ್ರವಲ್ಲದೆ ತಾನು ನಟಿಸುತ್ತಿರುವ ದಕ್ಷಿಣದ ಚಿತ್ರಗಳಲ್ಲಿಯೂ ಸಹ ತಾನು ತೊಡುವ ಉಡುಪುಗಳಿಂದ ಮತ್ತು ಸೀರೆಗಳಿಂದ ಅಭಿಮಾನಿಗಳನ್ನು ಮಂತ್ರ ಮುಗ್ದರನ್ನಾಗಿಸಿದ್ದಾರೆ ಎಂದು ಹೇಳಬಹುದು.

ಇತ್ತೀಚೆಗೆ, ಅವರ ಬಹು ನಿರೀಕ್ಷಿತ ಜೀವನಚರಿತ್ರೆ ಆಧಾರಿತ ಚಿತ್ರವಾದ ಗಂಗೂಬಾಯಿ ಕಾಥಿಯಾವಾಡಿಯ ಘೋಷಣೆ ಆದಾಗ ಮತ್ತು ಅದಕ್ಕಾಗಿ ಅವರು ಪ್ರಚಾರ ಕಾರ್ಯದಲ್ಲಿ ಅವರು ತೊಟ್ಟ ಬಿಳಿ ಸೀರೆ ಅವರ ಅಭಿಮಾನಿಗಳನ್ನು ತುಂಬಾನೇ ಆಕರ್ಷಿಸಿದೆ. ಅನೇಕ ಸೆಲೆಬ್ರಿಟಿಗಳಂತೆ, ಭಟ್ ತನ್ನ ತೆರೆಯ ಮೇಲಿನ ಪಾತ್ರದ ವೇಷಭೂಷಣಗಳಿಗೆ ಅನುಗುಣವಾಗಿ ಉಡುಗೆ ತೊಡುಗೆಯ ಮಾನದಂಡದ ಕಡೆಗೆ ವಾಲುತ್ತಾರೆ.

ಅಲಿಯಾ ಅವರ ಐವರೀ ಸೀರೆ ಸೂಕ್ಷ್ಮ ಕಸೂತಿಯಿಂದ ಕೂಡಿದೆ

ನಟಿ ಆಲಿಯಾ ಅವರ ಹಗುರವಾದ ಆರ್ಗಂಜಾ ಡ್ರೇಪ್ ಮತ್ತು ಅಂಜುಲ್ ಭಂಡಾರಿಯವರ ಇತ್ತೀಚಿನ ಡಿಸೈನ್ ಸೀರೆ ಮೃದುವಾದ ಶೀರ್ ಬಟ್ಟೆಯ ಮೇಲೆ ಪೇಸ್ಟಲ್ ಬಣ್ಣಗಳಲ್ಲಿ ಸುಂದರವಾದ ಸ್ಕಲೋಪ್ಡ್ ಹೆಮ್ ಗಳು ಮತ್ತು ಸಂಕೀರ್ಣವಾದ ಹೂವಿನ ಚಿಕಂಕಾರಿ ಕಸೂತಿಯನ್ನು ಒಳಗೊಂಡಿತ್ತು. ಅವರು ಅದನ್ನು ಸ್ಟ್ರಾಪಿ ಬ್ಲೌಸ್ ನೊಂದಿಗೆ ಮ್ಯಾಚಿಂಗ್ ಮಾಡಿ ಹಾಕಿಕೊಂಡಿದ್ದಾರೆ. ಅವರು ತೊಟ್ಟ ಬ್ಲೌಸ್ ವಿ-ನೆಕ್ ಲೈನ್, ಸೂಕ್ಷ್ಮವಾದ ಥ್ರೆಡ್ ವರ್ಕ್ ಮತ್ತು ಹೆಮ್ ಗೆ ಅಡ್ಡಲಾಗಿ ಮಣಿಯ ಕುಂಚಗಳನ್ನು ಹೊಂದಿತ್ತು.

ಇದನ್ನೂ ಓದಿ: RRR: ಜೂನಿಯರ್​ NTR ಮದ್ವೆಗೆ ಖರ್ಚಾಗಿದ್ದೆಷ್ಟು? ಈಗ್ಯಾಕೆ ಈ ಮ್ಯಾಟರ್​ ಅಂತೀರಾ? ಕಾರಣ ಇದೆ ನೋಡಿ..

'ಫ್ಲವರ್ ಪವರ್' ಥೀಮ್ ಅನ್ನು ಬೆಳ್ಳಿಯಲ್ಲಿ ಅರಳುವ ಹೂವಿನ ಕಿವಿ ಸ್ಟಡ್ ಗಳು ಮತ್ತು ಚಂಕಿ ಉಂಗುರದೊಂದಿಗೆ ಮತ್ತಷ್ಟು ಹೆಚ್ಚಿಸಲಾಯಿತು. ನಟಿ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮ್ಯಾಟ್ ಬೇಸ್, ಬಲವಾದ ಹುಬ್ಬುಗಳು, ತುಟಿಗೆ ಗುಲಾಬಿ ಬಣ್ಣ, ಹಣೆಯ ಮೇಲೆ ಸಣ್ಣ ಬಿಂದಿಯನ್ನು ಆಯ್ಕೆ ಮಾಡಿಕೊಂಡರು.

ಬಿಳಿ ಜಮ್ದಾನಿ ಸೀರೆಯ ಮೇಲಿದೆ ಸೊಗಸಾದ ಕರಕುಶಲತೆ

ಅಲಿಯಾ ಭಟ್ ಅವರ ಬಳಿ ಹೆಚ್ಚು ಬಿಳಿಯಂತಹ ಯಾವುದೇ ಸೀರೆಗಲಿಲ್ಲ, ಪ್ರಸ್ತುತ ಗಂಗೂಬಾಯಿ ಕಾಥಿಯಾವಾಡಿ ಜೀವನಚರಿತ್ರೆಯ ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ಪ್ರಚಾರ ಮಾಡುತ್ತಿರುವ ನಟಿ ತನ್ನ ಮಹಿಳಾ ಅಭಿಮಾನಿಗಳ ಮೇಲೆ ಪ್ರಭಾವ ಬೀರುವ ಎಲ್ಲಾ ರೀತಿಯ ಬಿಳಿ ಬಣ್ಣದ ಉಡುಗೆಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

ಭಾರತೀಯ ಕೈಮಗ್ಗಗಳ ಡಿಸೈನ್ ಇರುವ ಸೀರೆಗಳನ್ನು ತಮ್ಮ ಬಳಿ ಇರಿಸುವುದನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆಲಿಯಾ ಅವರ ಆಯ್ಕೆಗಳ ಸೀರೆಗಳು ನಿಜವಾಗಿಯೂ ಒಳ್ಳೆಯ ಹೂಡಿಕೆಯಾಗಿದೆ. ಇವುಗಳನ್ನು ನೀವು ಆಲ್-ಐ-ಆನ್-ಮೀ ಬ್ಲೌಸ್ ಗಳೊಂದಿಗೆ ಜೋಡಿಸಬಹುದು ಎಂಬುದಕ್ಕೆ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ, ಇದು ಪ್ರತಿ ಬಾರಿಯೂ ನಿಮಗೆ ಅನನ್ಯ ನೋಟವನ್ನು ನೀಡಲು ಸಹಾಯ ಮಾಡುತ್ತದೆ.

ಸೂಕ್ಷ್ಮವಾಗಿ ಕೈಯಿಂದ ನೇಯ್ದ ಮೋಟಿಫ್ ಗಳನ್ನು ಹೊಂದಿದೆ

ಅವರ ಬಹು ನಿರೀಕ್ಷಿತ ಚಿತ್ರದ ಪ್ರಚಾರಕ್ಕಾಗಿ, ಭಟ್ ಅವರು ಕೋಲ್ಕತ್ತಾಗೆ ಭೇಟಿ ನೀಡಿದರು ಮತ್ತು ಅವರ ಆಯ್ಕೆಯ ಉಡುಗೆಯು ಆ ಸ್ಥಳದ ಶ್ರೀಮಂತ ಜವಳಿ ಪರಂಪರೆಯನ್ನು ಎತ್ತಿ ತೋರಿಸಿದೆ ಎಂದು ಹೇಳಬಹುದು. ನಟಿ ಮಾಧುರ್ಯ ಕ್ರಿಯೇಷನ್ಸ್ ನ ಶುದ್ಧ ಬಿಳಿ ಜಮ್ದಾನಿ ನೇಯ್ಗೆಯನ್ನು ಧರಿಸಿದ್ದರು, ಅದನ್ನು ವಿಶಿಷ್ಟವಾದ ಕೈಯಿಂದ ನೇಯ್ದ ಚಿತ್ತಾರಗಳೊಂದಿಗೆ ರಚಿಸಲಾಗಿದೆ. ಅವರು ತಮ್ಮ ಆಳವಾದ ವಿ-ನೆಕ್ ಸ್ಲೀವ್ ಲೆಸ್ ಬ್ಲೌಸ್ ನೊಂದಿಗೆ ಶೀರ್ ಸೀರೆಯನ್ನು ಉಟ್ಟಿದ್ದರು.

ಚಂಕಿ ಚಿನ್ನದ ಟೋನ್ ಮಾಡಿದ ಅಲಂಕೃತ ಕಿವಿಯೋಲೆಗಳು, ಬೆಳ್ಳಿಯ ಉಂಗುರ ಮತ್ತು ಚಿನ್ನದ ಬಣ್ಣದ ಕೊಲ್ಹಾಪುರಿ ಶೈಲಿಯ ಚಪ್ಪಲಿಗಳು ಎಲ್ಲವೂ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು ಎಂದು ಹೇಳಬಹುದು. ಅರಳುವ ಬಿಳಿ ಗುಲಾಬಿ, ಒಳಗಿನಿಂದ ಬೆಳಗಿದ ಇಬ್ಬನಿ ತಳ, ಕೋಹ್ಲ್-ರಿಮ್ಡ್ ಕಣ್ಣುಗಳು, ಬಲವಾದ ಹುಬ್ಬುಗಳು ಮತ್ತು ಗುಲಾಬಿ ಬಣ್ಣದ ತುಟಿಗಳು, ನಯವಾದ ಜಡೆಯ ಗುಚ್ಛ ಆ ದಿನದ ಅವರ ಸೌಂದರ್ಯದ ಆಯ್ಕೆಗಳಾಗಿದ್ದವು. ಭಟ್ ಅವರ ಸೀರೆಗಳು ಮುಂಬರುವ ಕುಟುಂಬ ಪೂಜೆಗಳು ಅಥವಾ ಆಪ್ತ ಕೂಟಗಳಿಗೆ ಸೂಕ್ತವಾಗಿರುತ್ತದೆ.

ಲೈಟ್ ಆರ್ಗನ್ಜಾ ಸೀರೆ ವಿವಾಹಗಳಿಗೆ ಸೂಕ್ತವಾಗಿದೆ

ಆಲಿಯಾ ಭಟ್ ಅವರ ಸೀರೆಗಳು ಅವಳ ವಾರ್ಡ್‌ರೋಬ್ ನಲ್ಲಿ ಪ್ರಮುಖವಾಗಿವೆ. ವೈಭವೋಪೇತವಾದ ಸಬ್ಯಸಾಚಿಯಿಂದ ಹಿಡಿದು ಜಟಿಲವಾಗಿ ರಚಿಸಿದ ಪೂರ್ವ-ಹೊದಿಕೆಯ ಸೀರೆಗಳವರೆಗೆ ಎಲ್ಲಾ ರೀತಿಯ ಕಲೆಕ್ಷನ್ ಇದೆ. ಮೃದುವಾದ ಹಗುರವಾದ ಸೀರೆಗಳು ಮತ್ತು ಪ್ರಿಂಟ್ ಗಳೊಂದಿಗೆ ಸಂಪೂರ್ಣವಾಗಿರುವ ಸೀರೆಗಳು ಎಲ್ಲವೂ ಇವೆ. ಅವರ ವಾರ್ಡ್‌ರೋಬ್ ಗೆ ಮತ್ತೊಂದು ಗಮನಾರ್ಹ ಸೇರ್ಪಡೆಯೆಂದರೆ ದೇವನಾಗರಿಯ ಸಿಲ್ಕ್ ಆರ್ಗಂಜಾ ಸೀರೆ ಎಂದು ಹೇಳಬಹುದು. ಇದನ್ನು ನೀವು ಆತ್ಮೀಯರ ಮದುವೆ ಸಮಾರಂಭಗಳಿಗೆ ಧರಿಸಿಕೊಂಡು ಹೋಗಲು ಸೂಕ್ತವಾಗಿದೆ.

ಇದನ್ನೂ ಓದಿ: Rashmika Mandanna: ಈ ಫೋಟೋ ನಿಮಗೆ ಇಷ್ಟ ಆಗಲ್ಲ ಆದ್ರೂ ಹಾಕಿದ್ದೀನಿ.. ಹಿಂಗ್ಯಾಕ್​ ಅಂದ್ರು ರಶ್ಮಿಕಾ ಮೇಡಂ?

ಸೀರೆ ಆಕರ್ಷಕವಾಗಿ ಕಾಣಲು ಕಡಿಮೆ ಆಭರಣ ಧರಿಸುತ್ತಾರೆ

ಭಾರವಾದ ಸೀರೆಗಳನ್ನು ಧರಿಸುವುದಕ್ಕಿಂತಲೂ ನೀವು ಹಗುರವಾದ ಮತ್ತು ಮೃದುವಾದ ಸೀರೆಗಳನ್ನು ಧರಿಸಿಕೊಂಡು ಸಮಾರಂಭಗಳಿಗೆ ಹೋಗುವುದು ಒಳ್ಳೆಯದು. ಕೋವಿಡ್ ಸಾಂಕ್ರಾಮಿಕ ರೋಗದ ಅನೇಕ ಅಲೆಗಳ ನಡುವೆ ನಿಕಟ ವಿವಾಹಗಳು ಮತ್ತು ವರ್ಚುವಲ್ ಕಾರ್ಯಕ್ರಮಗಳಿಗೆ ನಿಮ್ಮನ್ನು ಆರಾಮವಾಗಿರಿಸುವ ಹಗುರವಾದ ಸೀರೆಗಳ ಕಾಲಾತೀತ ಸಂಗ್ರಹವನ್ನು ನಿರ್ಮಿಸುವುದು ಬುದ್ಧಿವಂತಿಕೆಯಾಗಿದೆ. ಆಲಿಯಾ ಅವರ ಇತ್ತೀಚಿನ ಫೋಟೋಗಳನ್ನು ನೋಡಿಕೊಳ್ಳಿ, ಅವರು ಹೇಗೆ ಹಗುರವಾದ ಬಿಳಿ ಸೀರೆಗಳನ್ನು ಧರಿಸಿ ಕಡಿಮೆ ಆಭರಣಗಳನ್ನು ಧರಿಸಿದ್ದಾರೆ ಅಂತ ನೋಡಿಕೊಳ್ಳಿರಿ.

ಇದರಲ್ಲಿ ಹಿತವಾದ ದಂತ-ಬಣ್ಣದ ರೇಷ್ಮೆ ಆರ್ಗಂಜಾ ಸೀರೆಯು ಹಳದಿ ಬಣ್ಣದಲ್ಲಿ ರೋಮಾಂಚಕ ರೇಶಮ್ ಕಸೂತಿಯನ್ನು ಹೊಂದಿತ್ತು. ನಾಜೂಕಾದ ಹತ್ತಿಯ ಲೇಸ್ ಅದರ ಅಂಚುಗಳನ್ನು ಹೊಂದಿತ್ತು. ನಟಿ ಅದನ್ನು ಸ್ಲೀವ್ ಲೆಸ್ ಬ್ಲೌಸ್ ನೊಂದಿಗೆ ಜೋಡಿಸಿ ಹಾಕಿಕೊಂಡಿದ್ದರು. ಅದು ಸೀಕ್ವಿನ್ಸ್ ಮತ್ತು ಪಾತ್ರಾ ಕೆಲಸದಿಂದ ಅಲಂಕೃತವಾಗಿತ್ತು ಮತ್ತು ಹಿಂಭಾಗದಲ್ಲಿ ಟೈ-ಅಪ್ ವಿವರವನ್ನು ಹೊಂದಿತ್ತು. ಅವರು ಧರಿಸಿದ್ದ ಝುಮ್ಕಾಗಳು ಮತ್ತು ಉಂಗುರದೊಂದಿಗೆ ಇನ್ನೂ ಸುಂದರವಾಗಿ ಕಾಣುತ್ತಿದ್ದರು.
Published by:Pavana HS
First published: