• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Curd Recipes: ಬೇಸಿಗೆಯಲ್ಲಿ ಗಟ್ಟಿ ಮೊಸರು ಬಳಸುವುದು ಹೇಗಪ್ಪಾ ಅಂತಿದ್ದೀರಾ? ಇಲ್ಲಿದೆ ನೋಡಿ ವೆರೈಟಿ ರೆಸಿಪಿಗಳು!

Curd Recipes: ಬೇಸಿಗೆಯಲ್ಲಿ ಗಟ್ಟಿ ಮೊಸರು ಬಳಸುವುದು ಹೇಗಪ್ಪಾ ಅಂತಿದ್ದೀರಾ? ಇಲ್ಲಿದೆ ನೋಡಿ ವೆರೈಟಿ ರೆಸಿಪಿಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಂಗ್ ಕರ್ಡ್ ಎಂದರೆ ಹಂಗ್ ಮೊಸರು (ನೀರಿನಂಶ ತೆಗೆದ ಗಟ್ಟಿಯಾದ ಮೊಸರು) ಅನೇಕ ಪೋಷಕಾಂಶಗಳ ಭಂಡಾರ ಮತ್ತು ಅದ್ಭುತ ಪ್ರೋಬಯಾಟಿಕ್ ಆಹಾರ ಪದಾರ್ಥವಾಗಿದೆ. ಮೊಸರು ಬೇಸಿಗೆಯಲ್ಲಿ ಭಕ್ಷ್ಯಗಳನ್ನು ತಯಾರಿಸಲು ನೀವು ಬಳಸಬಹುದಾದ ಆರೋಗ್ಯಕರ ಘಟಕಾಂಶವಾಗಿದೆ.

  • Share this:

ಸಾಮಾನ್ಯವಾಗಿ ನಾವೆಲ್ಲಾ ಬೇಸಿಗೆಕಾಲ (Summer) ಬಂತೆಂದರೆ ಸಾಕು ಮೊಸರು (Curd), ಮಜ್ಜಿಗೆ, ಲಸ್ಸೀ (Lassie)ಅಂತ ಹೆಚ್ಚು ಹೆಚ್ಚು ಈ ಪದಾರ್ಥಗಳನ್ನು ತಿನ್ನಲು ಮತ್ತು ಕುಡಿಯಲು ಶುರು ಮಾಡುತ್ತೇವೆ. ಇದಕ್ಕೆ ಕಾರಣವೆಂದರೆ ನಮಗೆ ತಿಳಿದ ಹಾಗೆ ಮೊಸರು, ಮಜ್ಜಿಗೆ ಮತ್ತು ಲಸ್ಸೀ ನಮ್ಮ ಹೊಟ್ಟೆಗೆ ತಂಪು ನೀಡುತ್ತದೆ ಮತ್ತು ಬೇಸಿಗೆಯ ಬಿಸಿಲಿನಲ್ಲಿ (Sunny) ನಮ್ಮ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ. ಬೇಸಿಗೆಯಲ್ಲಿ ಕೆಲವರು ಮನೆಯಲ್ಲಿಯೇ ಮೊಸರು, ಮಜ್ಜಿಗೆ, ಲಸ್ಸಿಯನ್ನು ಮಾಡಿಕೊಂಡು ಕುಡಿದರೆ, ಇನ್ನೂ ಕೆಲವರು ಹೊಟೇಲ್ ನಲ್ಲಿ (Hotel) ಸಿಗುವಂತಹ ದಹಿ ವಡಾ (Dahi Vada), ದಹಿ ಪೂರಿ (Dahi Poori) ಅಂತಹ ಮೊಸರಿನಿಂದ ಮಾಡಿದ ತಿಂಡಿಗಳನ್ನು ಮತ್ತು ಭಕ್ಷ್ಯಗಳನ್ನು ತಿನ್ನುತ್ತಾರೆ. ಹಂಗ್ ಕರ್ಡ್ ಎಂದರೆ ಹಂಗ್ ಮೊಸರು (ನೀರಿನಂಶ ತೆಗೆದ ಗಟ್ಟಿಯಾದ ಮೊಸರು) ಅನೇಕ ಪೋಷಕಾಂಶಗಳ ಭಂಡಾರ ಮತ್ತು ಅದ್ಭುತ ಪ್ರೋಬಯಾಟಿಕ್ ಆಹಾರ ಪದಾರ್ಥವಾಗಿದೆ. ಮೊಸರು ಬೇಸಿಗೆಯಲ್ಲಿ ಭಕ್ಷ್ಯಗಳನ್ನು ತಯಾರಿಸಲು ನೀವು ಬಳಸಬಹುದಾದ ಆರೋಗ್ಯಕರ ಘಟಕಾಂಶವಾಗಿದೆ.


ಈ ಮೊಸರನ್ನು ಬಳಸಿಕೊಂಡು ನಾವು ಸ್ಯಾಂಡ್ವಿಚ್ ಗಳು, ಕಬಾಬ್ ಗಳು, ಡಿಪ್ಸ್, ರೈತಾ, ಚಟ್ನಿ ಮತ್ತು ಇತರ ಹಲವಾರು ಭಕ್ಷ್ಯಗಳನ್ನು ತಯಾರಿಸಬಹುದು. ಒಟ್ಟಿನಲ್ಲಿ ಮೊಸರು ಬೇಸಿಗೆಯಲ್ಲಿ ಆಮ್ಲೀಯತೆಯನ್ನು ನಿಯಂತ್ರಿಸುತ್ತದೆ ಮತ್ತು ಸಾಮಾನ್ಯ ಮೊಸರಿಗೆ ಹೋಲಿಸಿದರೆ ಕಡಿಮೆ ಸೋಡಿಯಂ ಹೊಂದಿರುತ್ತದೆ. ಇದು ಕಡಿಮೆ ಕಾರ್ಬ್ ಮತ್ತು ಪ್ರೋಟೀನ್ ನಿಂದ ಸಹ ತುಂಬಿರುತ್ತದೆ.


ಬೇಸಿಗೆಯಲ್ಲಿ ನೀವು ಮಧ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಲು ಇಷ್ಟವಿರದಿದ್ದರೆ, ತಿಂಡಿಗಳಾಗಿ ಪ್ರಯತ್ನಿಸಬಹುದಾದ ರೆಸಿಪಿಗಳು ಇಲ್ಲಿವೆ. ನವೀ ಮುಂಬೈನ ದಿ ಪಾರ್ಕ್ ಹೋಟೆಲ್ ನ ಕಾರ್ಯನಿರ್ವಾಹಕ ಚೆಫ್ ನಿಖಿಲ್ ಕೇದಾರ್ ಹಂಚಿಕೊಂಡ 3 ರುಚಿಕರವಾದ ಹಂಗ್ ಮೊಸರು ಪಾಕವಿಧಾನಗಳು ಇಲ್ಲಿವೆ ನೋಡಿ.


ದಹಿ ಕೆ ಕಬಾಬ್ ಮಾಡಲು ಬೇಕಾಗುವ ಸಾಮಾಗ್ರಿಗಳು


  • 2 ಕಪ್ ಮೊಸರು ಅಥವಾ 3/4 ಕಪ್ ಹಂಗ್ ಮೊಸರು

  • 1/2 ಕಪ್ ಪನೀರ್ / ಕಾಟೇಜ್ ಚೀಸ್

  • 1 ತುಂಬಾನೇ ನುಣ್ಣಗೆ ಕತ್ತರಿಸಿಕೊಂಡ ಅಥವಾ ತುರಿದಂತಹ ಈರುಳ್ಳಿ

  • 1 ನುಣ್ಣಗೆ ತುರಿದ ಕ್ಯಾರೆಟ್

  • 2 ಟೇಬಲ್ ಚಮಚ ಕತ್ತರಿಸಿಕೊಂಡ ಗೋಡಂಬಿ

  • 2 ನುಣ್ಣಗೆ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ

  • 2 ಟೇಬಲ್ ಚಮಚ ಸಣ್ಣದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು

  • 2 ಟೇಬಲ್ ಚಮಚ ಹುರಿದ ಕಡಲೆ ಹಿಟ್ಟು

  • 1 ಟೇಬಲ್ ಚಮಚ ಗರಂ ಮಸಾಲ

  • 1 ಟೀ ಸ್ಪೂನ್ ಕರಿಮೆಣಸಿನ ಪುಡಿ

  • ರುಚಿಗೆ ತಕ್ಕಷ್ಟು ಉಪ್ಪು

  • ಕಬಾಬ್ ಗೆ ಲೇಪನ ಮಾಡಲು 1/4 ಕಪ್ ನುಣುಪಾದ ರವೆ

  • ಡೀಪ್ ಫ್ರೈ ಮಾಡಲು ಎಣ್ಣೆ


ದಹಿ ಕೆ ಕಬಾಬ್


ಮಾಡುವ ವಿಧಾನ:


  • ಒಂದು ಪಾತ್ರೆಯಲ್ಲಿ ಮೊಸರು, ಪನೀರ್, ಸಣ್ಣಗೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರೆಟ್, ಕತ್ತರಿಸಿದ ಗೋಡಂಬಿ, ಸಣ್ಣಗೆ ಕತ್ತರಿಸಿದ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ.

  • ನಂತರ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಉಪ್ಪು, ಕರಿಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಸತ್ತು / ಹುರಿದ ಕಡಲೆ ಹಿಟ್ಟನ್ನು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

  • ಈ ಹಂತದಲ್ಲಿ ಆ ಮಿಶ್ರಣದ ರುಚಿ ನೋಡಿ ಮತ್ತು ಅಗತ್ಯವಿದ್ದರೆ ಅದಕ್ಕೆ ಇನ್ನಷ್ಟು ಮಸಾಲೆಗಳನ್ನು ಸಹ ಸೇರಿಸಿಕೊಳ್ಳಿ.

  • ಈ ಮಿಶ್ರಣವನ್ನು 5 ರಿಂದ 6 ಸಮಾನ ಭಾಗಗಳಾಗಿ ವಿಭಜಿಸಿಕೊಳ್ಳಿ.

  • ಒಂದು ಭಾಗವನ್ನು ತೆಗೆದುಕೊಂಡು ಅದನ್ನು ನಿಮ್ಮ ಅಂಗೈಗಳಲ್ಲಿ ತಿರುಗಿಸಿ ಮತ್ತು ಪ್ಯಾಟಿ ಆಕಾರವನ್ನು ನೀಡಲು ಸ್ವಲ್ಪ ಚಪ್ಪಟೆಯಾಗಿಸಿಕೊಳ್ಳಿ.

  • ನೀವು ಬಯಸಿದರೆ ಅದನ್ನು ಚೆಂಡಿನ ಆಕಾರದಲ್ಲಿ ಸಹ ಮಾಡಿಕೊಳ್ಳಬಹುದು ಅಥವಾ ಉದ್ದವಾದ ರೋಲ್ ಗಳನ್ನು ಸಹ ಮಾಡಿಕೊಳ್ಳಬಹುದು.


ದಹಿ ಕೆ ಕಬಾಬ್


  •  ನಂತರ ಒಂದು ತಟ್ಟೆಯಲ್ಲಿ ರವೆಯನ್ನು ತೆಗೆದುಕೊಂಡು ಅದರ ಮೇಲೆ ಪ್ರತಿ ಪ್ಯಾಟಿಯನ್ನು ಎಲ್ಲಾ ಬದಿಗಳಿಂದ ಲೇಪಿಸಿ, ಹೆಚ್ಚುವರಿ ರವೆಯನ್ನು ತೆಗೆದು ಹಾಕಲು ಅದನ್ನು ಚೆನ್ನಾಗಿ ಟ್ಯಾಪ್ ಮಾಡಿ ಮತ್ತು ಅದನ್ನು ತಟ್ಟೆಯಲ್ಲಿ ಇರಿಸಿ.

  • ಅವುಗಳನ್ನು ಸ್ವಲ್ಪ ಸಮಯದವರೆಗೆ ಫ್ರಿಡ್ಜ್ ನಲ್ಲಿಡಿ ಮತ್ತು ನಂತರ ಅವುಗಳನ್ನು ಬಿಸಿ ಎಣ್ಣೆಗೆ ಬಿಡಿ ಮತ್ತು ಅವುಗಳು ಚಿನ್ನದ ಕರಿದ ಬಣ್ಣಕ್ಕೆ ಬರುವವರೆಗೂ ಹಾಗೆಯೇ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.

  • ಎಲ್ಲಾ ಪ್ಯಾಟಿಗಳನ್ನು ಒಂದೇ ರೀತಿ ಮಾಡಿ.

  • ಬಾಣಲೆಯಲ್ಲಿ ಸಾಕಷ್ಟು ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದು ಚೆನ್ನಾಗಿ ಬಿಸಿಯಾದಾಗ, ಜ್ವಾಲೆಯನ್ನು ಕಡಿಮೆ ಮಾಡಿ ಮತ್ತು ಒಂದೇ ದಹಿ ಕಬಾಬ್ ನಲ್ಲಿ ಸ್ಲೈಡ್ ಮಾಡಿ ಅದು ಚೆನ್ನಾಗಿ ಬಂದಿದೆಯೇ ಅಂತ ನೋಡಿಕೊಂಡು ಮುಂದುವರೆಯಿರಿ.

  • ಕಬಾಬ್ ಅನ್ನು ಮಧ್ಯಮ ಶಾಖದಲ್ಲಿ ಎಲ್ಲಾ ಕಡೆಯಿಂದಲೂ ಗೋಲ್ಡನ್​ ಬ್ರೌನ್​ ಬಣ್ಣ ಬರುವವರೆಗೆ ಹುರಿಯಿರಿ.

  • ಎಲ್ಲಾ ಕಬಾಬ್ ಗಳನ್ನು ಒಂದೇ ರೀತಿ ಫ್ರೈ ಮಾಡಿ. ಹುರಿಯುವ ಪಾತ್ರೆಯಲ್ಲಿ ನೀವು ಅವುಗಳನ್ನು ತುಂಬದಂತೆ ನೋಡಿಕೊಳ್ಳಿ.

  • ಹುರಿದ ಕಬಾಬ್ ಗಳನ್ನು ಎಣ್ಣೆ ಹೀರಿಕೊಳ್ಳುವ ಕಾಗದ ಅಥವಾ ಕಿಚನ್ ಟವೆಲ್ ಮೇಲೆ ಸ್ಲಾಟೆಡ್ ಲ್ಯಾಡಲ್ ಬಳಸಿ ಎಣ್ಣೆಯನ್ನು ತೆಗೆದು ಹಾಕಿ.

  • ರುಚಿಕರವಾದ ದಹಿ ಕೆ ಕಬಾಬ್ ಅನ್ನು ಕೊತ್ತಂಬರಿ ಚಟ್ನಿ ಮತ್ತು ಸ್ವಲ್ಪ ಸಲಾಡ್ ನೊಂದಿಗೆ ಬಡಿಸಿ ಮತ್ತು ನಿಮ್ಮ ಪ್ರೀತಿ ಪಾತ್ರರೊಂದಿಗೆ ಕೂತು ಇವುಗಳನ್ನು ಸೇವಿಸಿರಿ.


ಗ್ರೀಕ್ ಸ್ಯಾಂಡ್ವಿಚ್ ಮಾಡಲು ಬೇಕಾಗುವ ಪದಾರ್ಥಗಳು

  • 1/4 ಕಪ್ ಸಣ್ಣದಾಗಿ ಕತ್ತರಿಸಿದ ಅಥವಾ ತುರಿದ ಎಲೆಕೋಸು

  • 1/4 ಕಪ್ ಗಟ್ಟಿಯಾಗಿ ಪ್ಯಾಕ್ ಮಾಡಿದ ನುಣ್ಣಗೆ ಕತ್ತರಿಸಿದ ಅಥವಾ ತುರಿದ ಕ್ಯಾರೆಟ್

  • 2 ಟೇಬಲ್ ಚಮಚ ಸಣ್ಣದಾಗಿ ಕತ್ತರಿಸಿಕೊಂಡ ಕ್ಯಾಪ್ಸಿಕಂ

  • 2 ಟೇಬಲ್ ಚಮಚ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ

  • 1/4 ಕಪ್ ಬೇಯಿಸಿದ ಜೋಳದ ಕಾಳುಗಳು

  • ಜೋಳದ ಬದಲು, ನೀವು ಬೇಯಿಸಿದ ಹಸಿರು ಬಟಾಣಿ ಮತ್ತು ಬೇಯಿಸಿದ ಆಲೂಗಡ್ಡೆಯನ್ನು ಸಹ ಇಲ್ಲಿ ಬಳಸಬಹುದು

  • 1/3 ಕಪ್ ಗಟ್ಟಿ ಮೊಸರು ಅಥವಾ ಗ್ರೀಕ್ ಮೊಸರು

  • 1/3 ಟೀ ಸ್ಪೂನ್ ಕರಿಮೆಣಸಿನ ಪುಡಿ


ಗ್ರೀಕ್ ಸ್ಯಾಂಡ್ವಿಚ್


ಗ್ರೀಕ್ ಸ್ಯಾಂಡ್ವಿಚ್ ಮಾಡುವ ವಿಧಾನ


  • ಮೊದಲನೆಯದಾಗಿ, ತರಕಾರಿಗಳನ್ನು ಚೆನ್ನಾಗಿ ತೊಳೆದುಕೊಳ್ಳಿರಿ ಮತ್ತು ಫುಡ್ ಚಾಪರ್, ಫುಡ್ ಪ್ರೊಸೆಸರ್ ಅಥವಾ ಚಾಕುವಿನಿಂದ ನುಣ್ಣಗೆ ಕತ್ತರಿಸಿಕೊಳ್ಳಿ ಅಥವಾ ತುರಿದುಕೊಳ್ಳಿ.

  • ಒರೆಗಾನೊ, ಥೈಮ್, ತುಳಸಿ ಅಥವಾ ಮಿಶ್ರಿತ ಗಿಡಮೂಲಿಕೆಗಳು, ಕೆಂಪು ಮೆಣಸಿನ ಚೂರುಗಳು ಮತ್ತು ಅಗತ್ಯವಿರುವಷ್ಟು ಉಪ್ಪು ಮುಂತಾದ ಕೆಲವು ಒಣಗಿದ ಗಿಡಮೂಲಿಕೆಗಳನ್ನು ಸೇರಿಸಿಕೊಳ್ಳಿ.

  • ಕೆಂಪು ಮೆಣಸಿನ ಚೂರುಗಳ ಬದಲು ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಸಹ ಇದಕ್ಕೆ ಸೇರಿಸಬಹುದು.

  • ಬ್ರೆಡ್ ಅನ್ನು ಬಾಣಲೆಯಲ್ಲಿ ಅಥವಾ ಟೋಸ್ಟರ್ ಅಥವಾ ಒಲೆಯಲ್ಲಿ ಪ್ರತ್ಯೇಕವಾಗಿ ಟೋಸ್ಟ್ ಮಾಡಿ.

  • ಟೋಸ್ಟ್ ಮಾಡಿದ ಬ್ರೆಡ್ ಮೇಲೆ ಬೆಣ್ಣೆಯನ್ನು ಹರಡಿ, ನಂತರ ಮೊಸರು ಮತ್ತು ತರಕಾರಿಗಳನ್ನು ಅದಕ್ಕೆ ತುಂಬಿಸಿ.

  • ಬ್ರೆಡ್ ತುಂಡುಗಳನ್ನು ತೆಗೆದುಕೊಂಡು, ಅವುಗಳ ಮೇಲೆ ಸ್ವಲ್ಪ ಬೆಣ್ಣೆಯನ್ನು ಹರಡಿ ಮತ್ತು ತಯಾರಿಸಿದ ಸ್ಟಫಿಂಗ್ ಅನ್ನು ಬ್ರೆಡ್ ತುಂಡುಗಳ ಅರ್ಧದಷ್ಟು ಮೇಲೆ ಉದಾರವಾಗಿ ಸೇರಿಸಿ.

  • ಸ್ಯಾಂಡ್ವಿಚ್ ಗಳನ್ನು ಗರಿಗರಿ ಮತ್ತು ಚಿನ್ನದ ಬಣ್ಣ ಬರುವವರೆಗೆ ಚೆನ್ನಾಗಿ ಗ್ರಿಲ್ ಮಾಡಿ.


ಹಂಗ್ ಕರ್ಡ್ ಮ್ಯಾಕ್ರೋನಿ ಮಾಡಲು ಬೇಕಾಗುವ ಸಾಮಾಗ್ರಿಗಳು:

  • 1 ಕಪ್ ಬೇಯಿಸದ ಮ್ಯಾಕ್ರೋನಿ

  • 1/2 ನುಣ್ಣಗೆ ಕತ್ತರಿಸಿಕೊಂಡ ಈರುಳ್ಳಿ

  • 1/2 ಕಪ್ ಕುದಿಸಿಕೊಂಡ ಜೋಳದ ಕಾಳುಗಳು

  • 1 ನುಣ್ಣಗೆ ಕತ್ತರಿಸಿಕೊಂಡ ಕ್ಯಾರೆಟ್

  • 1/4 ಕಪ್ ನುಣ್ಣಗೆ ಕತ್ತರಿಸಿಕೊಂಡ ಹಸಿರು ಬೆಲ್ ಪೆಪ್ಪರ್

  • ಕತ್ತರಿಸಿದ ಕೆಲವು ಲೆಟ್ಯೂಸ್ ಎಲೆಗಳು

  • 1 ನುಣ್ಣಗೆ ಕತ್ತರಿಸಿಕೊಂಡ ಟೊಮೆಟೊ

  • 1 ಕಪ್ ಮೊಸರು

  • ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು

  • 2 ಕತ್ತರಿಸಿದ ಬೆಳ್ಳುಳ್ಳಿ ಎಸಳುಗಳು

  • 1 ಟೀ ಸ್ಪೂನ್ ತಾಜಾವಾಗಿ ಹಿಂಡಿದ ನಿಂಬೆ ರಸ

  • 1/2 ಟೀ ಸ್ಪೂನ್ ಸಕ್ಕರೆ

  • 1/2 ಟೀ ಸ್ಪೂನ್ ಒಣಗಿದ ಪಾರ್ಸ್ಲಿ

  • 1/2 ಟೀ ಸ್ಪೂನ್ ಒಣಗಿದ ಮಿಶ್ರಿತ ಗಿಡಮೂಲಿಕೆಗಳು

  • 1-2 ಟೀ ಸ್ಪೂನ್ ಹುರಿದ ಕಡಲೆಕಾಯಿ


ಹಂಗ್ ಕರ್ಡ್ ಮ್ಯಾಕ್ರೋನಿ


ಹಂಗ್ ಕರ್ಡ್ ಮ್ಯಾಕ್ರೋನಿ ಮಾಡುವ ವಿಧಾನ


  • ಮೊದಲಿಗೆ ಮ್ಯಾಕ್ರೋನಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ

  • ಅದನ್ನು ನಂತರ ಸೋಸಿಕೊಂಡು ಪಕ್ಕಕ್ಕೆ ಇರಿಸಿಕೊಳ್ಳಿ

  • ಒಂದು ದೊಡ್ಡ ಸಲಾಡ್ ಪಾತ್ರೆಯಲ್ಲಿ ಮ್ಯಾಕ್ರೋನಿ, ಈರುಳ್ಳಿ, ಟೊಮೆಟೊ, ಹಸಿರು ಬೆಲ್ ಪೆಪ್ಪರ್, ಕಾರ್ನ್, ಕ್ಯಾರೆಟ್ ಮತ್ತು ಲೆಟ್ಯೂಸ್ ಎಲೆಗಳನ್ನು ಸೇರಿಸಿ ಚೆನ್ನಾಗಿ ಕಲಿಸಿಕೊಳ್ಳಿ.

  • ಒಂದು ಸಣ್ಣ ಪಾತ್ರೆಯಲ್ಲಿ ಮೊಸರು, ಸಕ್ಕರೆ, ಉಪ್ಪು, ಮೆಣಸು, ಬೆಳ್ಳುಳ್ಳಿ, ನಿಂಬೆ ರಸ, ಒಣಗಿದ ಪಾರ್ಸ್ಲಿ ಮತ್ತು ಮಿಶ್ರಿತ ಗಿಡಮೂಲಿಕೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.




ಇದನ್ನೂ ಓದಿ: Non-veg Recipe: ಮನೆಯಲ್ಲಿ ಸುಲಭವಾಗಿ ಮಾಡಿ ಸ್ಪೈಸಿ ಚಿಕನ್ ಕಬಾಬ್


  • ಈಗ ಈ ಡ್ರೆಸ್ಸಿಂಗ್ ಅನ್ನು ಸಲಾಡ್ ಗೆ ಸೇರಿಸಿ ಚೆನ್ನಾಗಿ ಕಲಿಸಿಕೊಳ್ಳಿ.

  • ಬೌಲ್ ಅನ್ನು ಕ್ಲಿಂಗ್ ರ್ಯಾಪ್ ನಿಂದ ಮುಚ್ಚಿ ಮತ್ತು ರೆಫ್ರಿಜರೇಟರ್ ನಲ್ಲಿ ಕನಿಷ್ಠ ಒಂದು ಗಂಟೆಗಳ ಕಾಲ ಇರಿಸಿ.

  • ಅದನ್ನು ನಂತರ ಹೊರ ತೆಗೆದು ಅದಕ್ಕೆ ಹುರಿದ ಕಡಲೆಕಾಯಿಯಿಂದ ಅಲಂಕರಿಸಿ ಮತ್ತು ಬಡಿಸಿ.

top videos
    First published: