BreakFast Recipe: ಸುಲಭವಾಗಿ ತಯಾರಿಸುವ ರುಚಿಕರ 3 ಬಗೆಯ ಚಟ್ನಿ, ಒಮ್ಮೆ ಟ್ರೈ ಮಾಡಿ

ಸುಲಭವಾಗಿ ಬೆಳಗಿನ ಉಪಹಾರಕ್ಕೆ ಚಪಾತಿ, ದೋಸೆ, ಇಡ್ಲಿಗೆ ರುಚಿಕರ ಚಟ್ನಿ ಮಾಡೋದು ಹೇಗೆ ಎಂದು ತಿಳಿದುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚೆಗೆ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸ್ವಾದಿಷ್ಟ ಊಟವನ್ನು (Tasty Food ) ಸವಿಯುವುದನ್ನು ಬಿಟ್ಟು ಆರೋಗ್ಯಕರ ಪದಾರ್ಥಗಳನ್ನು ಸೇವಿಸುವುದೂ ಕೂಡ ಕಷ್ಟಕರವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವೊಂದು ಸಂಸ್ಥೆಗಳು, ಜನರಿಗೆ ಮರುಳು ಮಾಡುವಂತಹ ಸಿದ್ಧ ಆಹಾರಗಳನ್ನು ಜಾಹೀರಾತಿನಲ್ಲಿ (Advertisement) ಪದೇ ಪದೇ ತೋರಿಸಿ, ಅವರನ್ನು ಆದಷ್ಟು ಬೇಗ ತಮ್ಮ ತೆಕ್ಕೆಗೆ ಬೀಳುಸುತ್ತಿದ್ದಾರೆ. ಅದು ಏನೇ ಇರಲಿ, ಆದರೆ ಇಂತಹ ಆಹಾರಗಳು ಮನೆಯಲ್ಲಿ (Home) ಅಮ್ಮ ತಯಾರಿಸಿದ ಅಡುಗೆಯ ಕೈರುಚಿಯನ್ನು ನೀಡಲು ಸಾಧ್ಯ? ಸುಲಭವಾಗಿ ಬೆಳಗಿನ ಉಪಹಾರಕ್ಕೆ ಚಪಾತಿ, ದೋಸೆ, ಇಡ್ಲಿಗೆ ರುಚಿಕರ ಚಟ್ನಿ ಮಾಡೋದು ಹೇಗೆ ಎಂದು ತಿಳಿದುಕೊಳ್ಳಿ

    ಬೇಕಾದ ಸಾಮಾಗ್ರಿಗಳು

    *ಸಣ್ಣ ಬದನೆಕಾಯಿ - 4 (ಕತ್ತರಿಸಲಾಗಿರುವ)

    *ನೆಲಗಡಲೆ ಹುರಿದದ್ದು - ಎರಡು ಚಮಚ

    *ಹಸಿಮೆಣಸು - 2 (ಸಣ್ಣಗೆ ಕತ್ತರಿಸಲಾಗಿರುವ)

    *ಕೊತ್ತಂಬರಿ ಸೊಪ್ಪು - (ಸಣ್ಣದಾಗಿ ಕತ್ತರಿಸಲಾಗಿರುವ 1/2 ಕಪ್) *ತೆಂಗಿನಕಾಯಿ ತುರಿ - 1 ಕಪ್

    *ಬೆಳ್ಳುಳ್ಳಿ - 2 ಎಸಳು

    *ಉಪ್ಪು - ರುಚಿಗೆ ತಕ್ಕಷ್ಟು

    *ಎಣ್ಣೆ - 1 ಚಮಚ

    *ಸಾಸಿವೆ - 1/2 ಚಮಚ

    *ಕರಿಬೇವಿನೆಸಳು - 2 - 3

    ಮಾಡುವ ವಿಧಾನ

    *ಮೊದಲಿಗೆ ಒಂದು ಕಪ್‌ನಷ್ಟು ನೀರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿಕೊಳ್ಳಿ. ಬದನೆ ಮತ್ತು ಬೆಳ್ಳುಳ್ಳಿಯನ್ನು ಇದಕ್ಕೆ ಸೇರಿಸಿ. ಚೆನ್ನಾಗಿ ಬೇಯಿಸಿಕೊಳ್ಳಿ. ನೀರಿನಿಂದ ಹೊರತೆಗೆದು ತಣ್ಣಗಾಗಲು ಬಿಡಿ.

    *ಇನ್ನು ಬೇಯಿಸಿದ ಬದನೆ, ಬೆಳ್ಳುಳ್ಳಿಯೊಂದಿಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುರಿದ ನೆಲಗಡಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ತೆಂಗಿನ ಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬದನೆ ಬೇಯಿಸಿದ ನೀರನ್ನು ರುಬ್ಬುವಾಗ ಬಳಸಿಕೊಳ್ಳಿ.

    ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

    *ಇನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಇದಕ್ಕೆ ಸಾಸಿವೆಯನ್ನು ಹಾಕಿ. ಇದು ಸಿಡಿಯುತ್ತಿದ್ದಂತೆ ಕರಿಬೇವು ಇದಕ್ಕೆ ಸೇರಿಸಿ. ಚಟ್ನಿಗೆ ಒಗ್ಗರಣೆಯನ್ನು ಮಾಡಿಕೊಳ್ಳಿ.

    ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ

    ಬೇಕಾಗುವ ಸಾಮಗ್ರಿ

    ಬೆಳ್ಳುಳ್ಳಿ ಇಡೀ ಬೆಳ್ಳುಳ್ಳಿ ( ಎಸಳು ಬಿಡಿಸಿ ಸಿಪ್ಪೆ ಸುಲಿಯಿರಿ)

    ರುಚಿಗೆ ತಕ್ಕ ಉಪ್ಪು

    ನೀರು 4 ಚಮಚ

    ಎಣ್ಣೆ 3 ಚಮಚ

    ಚಿಟಿಕೆಯಷ್ಟು ಇಂಗು

    ಟೊಮೆಟೊ ಪೇಸ್ಟ್ 1 ಚಿಕ್ಕ ಬೌಲ್‌ನಷ್ಟು

    ಅರಿಶಿಣ ಪುಡಿ 1 ಚಮಚ

    ಕಾಶ್ಮೀರಿ ಮೆಣಸಿನ ಪುಡಿ 3 ಚಮಚ

    ಕೊತ್ತಂಬರಿ ಪುಡಿ 3 ಚಮಚ

    ಮಾಡುವ ವಿಧಾನ

    ಬೆಳ್ಳುಳ್ಳಿಯನ್ನು ಜಾರ್‌ಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಗೂ -4 ಚಮಚ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ.

    * ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಅದಕ್ಕೆ ರುಬ್ಬಿದ ಈರುಳ್ಳಿ ತಿನ್ನಿ.

    * ಈಗ ಸೌಟ್‌ನಿಂದ ಆಡಿಸುತ್ತಾ 3-4 ನಿಮಿಷ ಬೇಯಿಸಿ.

    * ಈಗ ಟೊಮೆಟೊ ಪೇಸ್ಟ್ ಹಾಕಿ ಮಿಶ್ರಣದಿಂದ ಎಣ್ಣೆ ಬಿಟ್ಟು ಮೇಲ್ಬಾಗದಲ್ಲಿ ತೇಲುವಷ್ಟು ಹೊತ್ತು ಬಿಸಿ ಮಾಡಿ. ಈಗ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿ ಸೌಟ್‌ನಿಂದ ಆಡಿಸಿ. ನಂತರ ಸ್ಟೌವ್‌ ಆಫ್‌ ಮಾಡಿ ಬೌಲ್‌ಗೆ ಶಿಫ್ಟ್ ಮಾಡಿ.

    ಮೊಸರಿನ ಚಟ್ನಿ

    ಬೇಕಾಗುವ ಸಾಮಗ್ರಿ

    1 ಕಪ್‌ ಗಟ್ಟಿ ಮೊಸರು

    1 ಚಮಚ ಖಾರದ ಪುಡಿ

    2 ಚಮಚ ಕೊತ್ತಂಬರಿ ಪುಡಿ

    1 ಚಮಚ ಗರಂ ಮಸಾಲ ಪುಡಿ

    1 ಈರುಳ್ಳಿ

    1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

    ರುಚಿಗೆ ತಕ್ಕ ಉಪ್ಪು

    1 ಲೋಟ ನೀರು

    ಒಗ್ಗರಣೆಗೆ

    2 ಚಮಚ ಎಣ್ಣೆ

    1/2 ಚಮಚ ಸಾಸಿವೆ

    1/4 ಚಮಚ ಜೀರಿಗೆ

    ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

    ಮಾಡುವ ವಿಧಾನ

    * ಒಂದು ಬೌಲ್‌ಗೆ ಮೊಸರು ಹಾಕಿ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಿ ಇಡಿ.

    * ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ, ಅದು ಚಟ್‌ ಪಟ್‌ ಅಂತ ಹೇಳುವಾಗ ಈರುಳ್ಳಿ ಹಾಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.

    * ಈಗ ಮೊಸರು ಹಾಕಿ ಒಮ್ಮೆ ಮಿಕ್ಸ್ ಮಾಡಿ ಉರಿ ತುಂಬಾ ಕಡಿಮೆ ಮಾಡಿ. 3-5 ನಿಮಿಷ ಕುದಿಸಿದರೆ ಮೊಸರಿನ ಚಟ್ನಿ ರೆಡಿ.
    Published by:Pavana HS
    First published: