ರಂಜಾನ್ : ಇಫ್ತಾರ್ ಖಾದ್ಯಗಳ ರುಚಿ ಸವಿಯಲು ಈ ಮೂರು ನಗರಗಳಿಗೆ ಭೇಟಿ ಕೊಡಿ

news18
Updated:May 31, 2018, 3:21 PM IST
ರಂಜಾನ್ : ಇಫ್ತಾರ್ ಖಾದ್ಯಗಳ ರುಚಿ ಸವಿಯಲು ಈ ಮೂರು ನಗರಗಳಿಗೆ ಭೇಟಿ ಕೊಡಿ
news18
Updated: May 31, 2018, 3:21 PM IST
ನ್ಯೂಸ್ 18 ಕನ್ನಡ

ಇಸ್ಲಾಂನ ಪವಿತ್ರ ತಿಂಗಳು ರಂಜಾನ್ ಚಾಲ್ತಿಯಲ್ಲಿದೆ. ಈ ತಿಂಗಳಲ್ಲಿ ಮುಸಲ್ಮಾನರು ಮುಂಜಾನೆಯಿಂದ ಉಪವಾಸ ವ್ರತ ಕೈಗೊಂಡು ಮುಸ್ಸಂಜೆಯಲ್ಲಿ ವ್ರತವನ್ನು ಕೊನೆಗೊಳಿಸುತ್ತಾರೆ. ಈ ಸಮಯದಲ್ಲಿ ಯಾವುದೇ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದಿಲ್ಲ.

ಆದರೆ ಮುಸ್ಸಂಜೆಯಾಗುತ್ತಿದ್ದಂತೆ ಮನೆಗಳಲ್ಲಿ ಇಫ್ತಾರ್​ಗಾಗಿ​ (ವ್ರತ ಕೊನೆಗೊಳಿಸುವ ಸಮಯ) ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿಡುತ್ತಾರೆ. ಭಾರತದಲ್ಲೂ ರಂಜಾನ್ ಸಂದರ್ಭದಲ್ಲಿ ಇಫ್ತಾರ್ ಖಾದ್ಯಗಳಿಗೆ ಪ್ರಸಿದ್ದಿ ಪಡೆದಿರುವ ಅನೇಕ ನಗರಗಳಿವೆ. ಇಫ್ತಾರ್​ನ ವೈವಿಧ್ಯ ತಿನಿಸುಗಳ ರುಚಿ ನೋಡಬೇಕೆನಿಸಿದರೆ ನೀವು ಭೇಟಿ ನೀಡಬೇಕಾದ 3 ಪಟ್ಟಣಗಳ ಪರಿಚಯ ಇಲ್ಲಿದೆ.

ದೆಹಲಿ : ಸುಲ್ತಾನರ ಆಳ್ವಿಕೆಯನ್ನು ಕಂಡ ಈ ನಗರದಲ್ಲಿ ಪ್ರಸಿದ್ಧ ಮೊಘಲ್ ಆಹಾರಗಳಿಗೆ ಕೊರತೆಯಿಲ್ಲ. ಅದರಲ್ಲೂ ಹಳೆ ದಿಲ್ಲಿ ಅಥವಾ ಪುರಾನಿ ದಿಲ್ಲಿಯಲ್ಲಿ ಸಿಗುವ ಮೊಘಲೈ ತಿಂಡಿ ತಿನಿಸುಗಳ ರುಚಿ ನೋಡಲೇಬೇಕು. ರಂಜಾನ್ ಸಂದರ್ಭದಲ್ಲಂತೂ ತಿಂಡಿ ಪ್ರಿಯರಿಗೆ ಇಲ್ಲಿನ ಬೀದಿಗಳು ಸ್ವರ್ಗ ಎನಿಸಿಬಿಡುತ್ತದೆ. ಬಜಾರ್ ಮತಿಯಾ ಮಹಲ್​ ಬೀದಿಯ ಜುಮಾ ಮಸೀದಿ ಅಸುಪಾಸಿನಲ್ಲಿ ಸಿಗುವ ಖಾದ್ಯಗಳು ವಿಶೇಷ ರುಚಿಯಿಂದ ಕೂಡಿರುತ್ತದೆ. ಕೀಮಾ ಸಮೋಸದಿಂದ ಹಿಡಿದು ಪನೀರ್ ಜಿಲೇಬಿಯವರೆಗೂ ಸಿಗುವ ಇಲ್ಲಿನ ಖಾದ್ಯಗಳ ರುಚಿಗೆ ಸರಿಸಾಟಿಯಿಲ್ಲ ಎಂಬುದು ತಿಂಡಿ ಪ್ರಿಯರ ಅಭಿಪ್ರಾಯ.

ಹೈದರಾಬಾದ್ :​ ಹೈದರಾಬಾದ್​ನ ಚಾರ್​ಮಿನಾರ್ ಸುತ್ತಮುತ್ತ ಭಾಗದಲ್ಲೂ ಅದ್ಭುತ ರುಚಿಯ ಮುಸ್ಲಿಮರ ಆಹಾರ ಪದಾರ್ಥಗಳು ಸಿಗುತ್ತದೆ. ಮುಸ್ಸಂಜೆಯ ನಂತರ ನಿಜಾಮ್ ನಗರದ ಬೀದಿಗಳಿಗೆ ನುಗ್ಗುತ್ತಿದ್ದಂತೆ ಹಲೀಂ ಮತ್ತು ಪತ್ತರ್​ ಕಾ ಗೋಶ್ ಖಾದ್ಯದ ವಾಸನೆಯು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ಹಾಗೆಯೇ ಪರೋಟಾ ಮತ್ತು ಸಮೋಸಗಳು ಇಲ್ಲಿನ ಸಾಮಾನ್ಯ ಆಹಾರವಾಗಿದೆ. ಈ ನಗರದ ಟೋಲಿ ಚೌಕಿ ಭಕ್ಷ್ಯ ಪ್ರಿಯರ ಕೇಂದ್ರ ಎನ್ನಬಹುದು. ಇಲ್ಲಿ ಫುಡ್​ಕೋರ್ಟ್​​ ಮತ್ತು ರೆಸ್ಟೊರೆಂಟ್​ಗಳು ಹೆಚ್ಚಾಗಿದ್ದು, ರಂಜಾನ್ ಸಮಯದಲ್ಲಿ ವೈವಿದ್ಯ ಭಕ್ಷ್ಯಗಳನ್ನು ಇಲ್ಲಿ ಅಸ್ವಾದಿಸಬಹುದು.

ಲಖನೌ : ರಂಜಾನ್ ತಿಂಗಳಲ್ಲಿ ಸೂರ್ಯಾಸ್ತಮಾನದ ಬಳಿಕ ಜೀವಂತವಾಗುವ ಮತ್ತೊಂದು ನಗರ ಲಖನೌ. ಈ ನಗರವನ್ನು ಸಿಟಿ ಆಫ್ ನವಾಬ್ ಎಂದು ಕರೆಯುತ್ತಾರೆ. ಇಲ್ಲಿನ ಪ್ರತಿ ಗಲ್ಲಿಯಲ್ಲೂ ನವಾಬರ ಆಹಾರ ಪದ್ಧತಿಯ ಅನೇಕ ಖಾದ್ಯಗಳು ಸಿಗುತ್ತದೆ. ಲಕ್ನೋ ನಗರದ ಬೀದಿಗಳಿಗೆ ನಿಮ್ಮ ಪ್ರವೇಶವಾಗುತ್ತಿದ್ದಂತೆ ನಿಹಾರಿ, ಕುಲ್ಚ, ಕಬಾಬ್​ಗಳು ಬಾಯಲ್ಲಿ ನೀರೂರಿಸುವುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಸಿಹಿ ತಿನಿಸುಗಳಾದ ಗುಲಾಬ್ ಜಮೂನ್, ಗೂಂಡ್​-ಕಾ-ಹಲ್ವಾ, ದೂದ್ ಫೆನಿ, ರಬ್ರಿ ಮತ್ತು ಖೀರ್​ ನಾಲಿಗೆಯ ರುಚಿಯನ್ನು ತಣಿಸುತ್ತದೆ.
First published:May 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...