ಜುಲೈ 27ಕ್ಕೆ ಕಾಣಿಸಲಿದೆ ಈ ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ

news18
Updated:July 25, 2018, 7:53 PM IST
ಜುಲೈ 27ಕ್ಕೆ ಕಾಣಿಸಲಿದೆ ಈ ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ
news18
Updated: July 25, 2018, 7:53 PM IST
-ನ್ಯೂಸ್ 18 ಕನ್ನಡ

ಈ ಶತಮಾನದ ದೀರ್ಘಾವಧಿಯ ಚಂದ್ರಗ್ರಹಣವು ಜುಲೈ 27ರಂದು ನಡೆಯಲಿದೆ. ಮಧ್ಯರಾತ್ರಿ ಗೋಚರಿಸಲಿರುವ ಈ ಗ್ರಹಣವನ್ನು ಯಾವುದೇ ತಂತ್ರಜ್ಞಾನ ಬಳಸದೇ ವೀಕ್ಷಿಸಬಹುದು. 104 ವರ್ಷಗಳ ಬಳಿಕ ಮಂಗಳ ಗ್ರಹವು ಚಂದ್ರನ ಸಮೀಪ ಬರುವುದು ಈ ಬಾರಿಯ ಗ್ರಹಣದ ವಿಶೇಷ.

ಶುಕ್ರವಾರ ರಾತ್ರಿ 11 ಗಂಟೆಯ ಬಳಿಕ = ಶುರುವಾಗುವ ಗ್ರಹಣವು ಬೆಳಿಗ್ಗಿನ ಜಾವ 3 ಗಂಟೆ ನಂತರ ಕೊನೆಗೊಳ್ಳುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಗುರು ಪೂರ್ಣಿಮ ದಿನದಂದು ನಡೆಯಲಿದ್ದು, ಹೀಗಾಗಿ ಪೂಜಾ ಕಾರ್ಯಗಳನ್ನು ಗ್ರಹಣಕ್ಕಿಂತ ಮುಂಚಿತವಾಗಿ ನೆರವೇರಿಸಬೇಕಾಗುತ್ತದೆ.

ಆಷಾಢ ಶುಕ್ಲ ಪಕ್ಷದ ಪೂರ್ಣಿಮೆಯಲ್ಲಿ ಕಾಣಿಸುತ್ತಿರುವ ಈ ಗ್ರಹಣವು ಅರ್ಧ ಅಥವಾ ಪೂರ್ಣ ಪ್ರಮಾಣದಲ್ಲಿ ಕಾಣಿಸಲಿದೆ. ಇದರಿಂದ ಕೆಲ ರಾಶಿಯವರಿಗೆ ಭೌತಿಕ, ಸಾಮಾಜಿಕ ಹಾಗೂ ಆರ್ಥಿಕ ತೊಂದರೆಗಳು ಉಂಟಾಗುವ ಸಾಧ್ಯತೆಯಿದೆ.

ಗ್ರಹಣದ ಪ್ರಭಾವವು ಎಲ್ಲಾ ರಾಶಿಯರಿಗೂ ಬಾಧಿಸಲಿದೆ ಎನ್ನಲಾಗಿದೆ. ಆದರೆ ಗರ್ಭಿಣಿ ಮಹಿಳೆಯರಿಗೆ ಮತ್ತು ಗರ್ಭದಲ್ಲಿರುವ ಮಗುವಿನ ಮೇಲೆ ಇದರ ಪ್ರಭಾವ ಮುಂದಿನ 108 ದಿನಗಳಿರುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸಿದೆ. ಹೀಗಾಗಿ ಗ್ರಹಣದ ಮುಂದಿನ ದಿನಗಳಲ್ಲಿ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಹಾಗೆಯೇ ಕೆಲ ಕಾರ್ಯಗಳನ್ನು ಮಾಡಲು ಅಶುಭ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಚಂದ್ರಗ್ರಹಣವನ್ನು ಗರ್ಭಿಣಿ ಮಹಿಳೆಯರು ವೀಕ್ಷಿಸಿದರೆ ಹುಟ್ಟುವ ಮಕ್ಕಳು ದೈಹಿಕ ಅಥವಾ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗುತ್ತಾರೆ ಎಂದು ತಿಳಿಸಲಾಗಿದೆ. ಗ್ರಹಣದ ದಿನ ಗರ್ಭವತಿ ಸ್ತ್ರೀಯರು 'ಓಂ ಶಿರಪುತ್ರಯೆ ವಿಹ್ಮಾಹೆ ಅಮೃತ್ ತತ್ವಾಯ ದೀಮಾಹಿ ತನ್ನೊ ಚಂದ್ರ ಪ್ರಚೋದ್ಯತ್' ಮಂತ್ರವನ್ನು ಪಠಿಸುವುದು ಉತ್ತಮ.
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ