• Home
  • »
  • News
  • »
  • lifestyle
  • »
  • Gold Ice Cream Near Me: ಚಿನ್ನದ ಐಸ್​ಕ್ರೀಂ ತಿಂದಿದ್ದೀರಾ? ಬೆಂಗ್ಳೂರಲ್ಲೇ ಸಿಗುತ್ತೆ ನೋಡಿ, ರೇಟ್ ಎಷ್ಟು ಹೇಳಿ!

Gold Ice Cream Near Me: ಚಿನ್ನದ ಐಸ್​ಕ್ರೀಂ ತಿಂದಿದ್ದೀರಾ? ಬೆಂಗ್ಳೂರಲ್ಲೇ ಸಿಗುತ್ತೆ ನೋಡಿ, ರೇಟ್ ಎಷ್ಟು ಹೇಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

24 Karat Gold Ice Cream Near Me: ಇನ್‌ಸ್ಟಾಗ್ರಾಮ್‌ಗೆ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾದಲ್ಲಿ ಚಿನ್ನದ ಲೇಪಿತ ಐಸ್‌ಕ್ರೀಮ್​ ವೈರಲ್ ಆಗಿದ್ದು, ಮೈಟಿ ಮಿಡಾಸ್ 17 ಹೆಸರಿನ ಈ 24k ಚಿನ್ನದ ಐಸ್‌ಕ್ರೀಮ್​ ಸಖತ್ ಫೇಮಸ್​ ಆಗ್ತಿದೆ.

  • Share this:

ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ (Karnataka) ಆಹಾರ ಪ್ರಿಯರೇನು (Food Lovers)  ಕಡಿಮೆ ಇಲ್ಲ. ವಿಭಿನ್ನ ಬಗೆಯ ಆಹಾರಗಳನ್ನು ಪ್ರಯತ್ನ ಮಾಡುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಬೆಂಗಳೂರಿನಲ್ಲಿ (Bengaluru)  ನಿಮಗೆ ಒಂದೊಂದು ಮೂಲೆಯಲ್ಲಿ ಸಹ ಒಂದೊಂದು ರೀತಿಯ ರುಚಿಕರ ಹಾಗೂ ವೈಶಿಷ್ಟ್ಯಪೂರ್ಣ ಆಹಾರಗಳು ಸಿಗುತ್ತದೆ. ಸಾಮಾನ್ಯವಾಗಿ ಜನರಿಗೆ ಹೊರಗಡೆ ಕಣ್ಣಿಗೆ ಸೆಳೆಯುವಂತಿರುವುದನ್ನ ತಿನ್ನಬೇಕು ಅನಿಸುತ್ತದ.  ಹಾಗೆಯೇ, ನೀವು ಹೊರಗೆ ಯಾವುದೇ ಕಡೆ ಊಟಕ್ಕೆ ಹೋದಾಗ ಕೊನೆಯಲ್ಲಿ ಐಸ್​ಕ್ರೀಂ ತಿನ್ನುತ್ತೇವೆ. ಆದರೆ, ಬೆಂಗಳೂರಿನ ಕೆಲ ಸ್ಥಳಗಳಿಗೆ ಐಸ್​ಕ್ರೀಂ (Ice Cream) ತಿನ್ನಲು ಹೋಗಬೇಕು ಎಂದರೆ ಅತಿಶಯೋಕ್ತಿಯಾಗದು. ಆದರೆ, ನೀವು ಚಿನ್ನದ ಐಸ್​ ಕ್ರೀಂ ತಿಂದಿದ್ದೀರಾ?. ಬೆಂಗಳೂರಿನಲ್ಲಿ ಒಂದು ಸ್ಥಳದಲ್ಲಿ ನಿಮಗೆ ಚಿನ್ನದ ಐಸ್​ ಕ್ರೀಮ್​ (Gold Ice Cream) ಸಿಗುತ್ತದೆ. ಅರೇ, ಏನಪ್ಪಾ ಇದು ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ.


ಭಾರತೀಯ ಮಾರುಕಟ್ಟೆಯಲ್ಲಿ ಅಥವಾ ಆಹಾರದ ಮಾರುಕಟ್ಟೆಯಲ್ಲಿ  ಚಿನ್ನದ ಆಹಾರವನ್ನು ಪರಿಚಯಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಚಿನ್ನದ ಲೇಪಿತ ಚೋಲೆ ಭಾಟುರೆ ಮತ್ತು ದೋಸೆಯಂತಹ ಆಹಾರಗಳು ಇಂಟರ್ನೆಟ್‌ನಲ್ಲಿ ಟ್ರೆಂಡ್‌ನಲ್ಲಿತ್ತು. ಅಲ್ಲದೇ, ಭಾರತೀಯ ಆಹಾರಪ್ರೇಮಿಗಳು ಅದನ್ನು ಮೆಚ್ಚಿಕೊಂಡಿದ್ದರು ಸಹ.  ನಿಮಗೆ ಗೊತ್ತಿರಬಹುದು ಹಿಂದಿನ ಕಾಲದಲ್ಲಿ ಚಿನ್ನದ ತಟ್ಟೆ ಮತ್ತು ಬೆಳ್ಳಿಯ ತಟ್ಟೆಯ ಬಳಕೆಯು ರಾಜಮನೆತನದ ಭೋಜನದ ಒಂದು ಭಾಗವಾಗಿತ್ತು, ಅಲ್ಲಿ ರಾಜರು ಬೆಳ್ಳಿ ಮತ್ತು ಚಿನ್ನದ ತಟ್ಟೆಯಲ್ಲಿ ಆಹಾರವನ್ನು ಸೇವಿಸುತ್ತಿದ್ದರು.


ಇನ್ನು ಆರೋಗ್ಯದ ವಿಚಾರದ ಬಗ್ಗೆ ನಾವು ಹೇಳುವುದಾದರೆ, ಇವೆಲ್ಲವೂ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಈಗ ಸಹ ಮತ್ತೆ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡು, ಮಾರುಕಟ್ಟೆ ಟ್ರೆಂಡ್‌ಗೆ ಹೊಸ ಸೇರ್ಪಡೆಯಾಗಿರುವುದು,  24-ಕ್ಯಾರೆಟ್ ಚಿನ್ನದ ಲೇಪಿತ ಐಸ್‌ಕ್ರೀಮ್​ನ. ಈಗ ಬೆಂಗಳೂರಿನ ಐಸ್‌ಕ್ರೀಮ್ ಪಾರ್ಲರ್ ಹ್ಯೂಬರ್ ಮತ್ತು ಹ್ಯಾಲಿ​ಯಲ್ಲಿ ಈ ಐಸ್​ಕ್ರೀಮ್​ ಲಭ್ಯವಿದೆ.




ಚಿನ್ನದ ಐಸ್​ ಕ್ರೀಮ್​ ಫುಲ್ ವೈರಲ್ 


ಇನ್‌ಸ್ಟಾಗ್ರಾಮ್‌ಗೆ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾದಲ್ಲಿ ಚಿನ್ನದ ಲೇಪಿತ ಐಸ್‌ಕ್ರೀಮ್​ನ ವೈರಲ್ ಆಗಿದ್ದು,  ಮೈಟಿ ಮಿಡಾಸ್ 17 ಹೆಸರಿನ ಈ 24k ಚಿನ್ನದ ಐಸ್‌ಕ್ರೀಂ ಸಖತ್ ಫೇಮಸ್​ ಆಗ್ತಿದೆ.  ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಅಹಮದಾಬಾದ್ ಸೇರಿದಂತೆ ನಾಲ್ಕು ನಗರಗಳಲ್ಲಿ ಔಟ್‌ಲೆಟ್‌ಗಳನ್ನು ಹೊಂದಿರುವ ಐಸ್‌ಕ್ರೀಂ ಪಾರ್ಲರ್‌ನ ಹ್ಯೂಬರ್ ಮತ್ತು ಹಾಲಿಯಲ್ಲಿ ಇದು ಸುಲಭವಾಗಿ ಲಭ್ಯವಿದೆ.


ಏಜೆನ್ಸಿಗಳ ಪ್ರಕಾರ, ಈ ಮೈಟಿ ಮಿಡಾಸ್ ಐಸ್ ಕ್ರೀಮ್​ ಅನ್ನು 17 ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ, ಇದರಲ್ಲಿ ಕ್ಯಾರಮೆಲೈಸ್ಡ್ ಬಾದಾಮಿ, ಬ್ರೌನಿ, ನಟ್ಟಿ ಪ್ರಲೈನ್, ಹ್ಯಾಝಲ್ನಟ್ ಬಾಲ್​, ಮಿಠಾಯಿ, ಬೆಲ್ಜಿಯನ್ ಚಾಕೊಲೇಟ್ ಐಸ್ ಕ್ರೀಮ್, ಗೋಲ್ಡನ್ ಚಾಕೊಲೇಟ್ ಐಸ್ ಕ್ರೀಮ್ ಅನ್ನು 24 ಕೆ. ಚಿನ್ನದ ಹಾಳೆಯ ಪದರಗಳು, ಪ್ಯಾಶನ್ ಹಣ್ಣಿನ ರಸದಿಂದ ತುಂಬಿದ ಪೈಪೆಟ್​ ಇರುತ್ತದೆ.




ಈ ಐಸ್​ ಕ್ರೀಮ್​ ಬೆಲೆ ಎಷ್ಟು?


ಈ ಕನಸಿನ ಐಸ್ ಕ್ರೀಮ್ 1000 ರೂ ಆಗಿದ್ದು, ಈ ರೆಸ್ಟೊರೆಂಟ್​ನಲ್ಲಿ ನಿಮಗೆ ವಿವಿಧ ಈ ಐಸ್​ಕ್ರೀಂ ಮಾತ್ರವಲ್ಲದೇ, ಇನ್ನೂ ಹಲವು ವಿಧದ ಆಹಾರಗಳು ಸಹ ಸಿಗುತ್ತದೆ.


ವಿಳಾಸ:  ಹ್ಯೂಬರ್ ಮತ್ತು ಹ್ಯಾಲಿ, ನಾವೆಲ್ ಎಂಎಸ್​ಆರ್​ ಪಾರ್ಕ್,ಶಾಪ್ ನೋ. ಸಿ5, ಗ್ರೌಂಡ್ ಫ್ಲೋರ್, ಮಾರತಹಳ್ಳಿ, ಬೆಂಗಳೂರು, ಕರ್ನಾಟಕ

Published by:Sandhya M
First published: