ವ್ಯಕ್ತಿತ್ವ (Personality) ಎಂಬುದು ವ್ಯಕ್ತಿಯ ಕೈಗನ್ನಡಿ ಇದ್ದಂತೆ. ಆತನ ಸಂಪೂರ್ಣ ಗುಣ ಸ್ವಭಾವ ನಡತೆಯ ಬಗ್ಗೆ ವ್ಯಕ್ತಿತ್ವ ಸೂಕ್ತ ಪರಿಚಯ ಮಾಡಿಸುತ್ತದೆ. ಇನ್ನೊಬ್ಬರನ್ನು ಆಕರ್ಷಿಸುವ (Attraction) ವ್ಯಕ್ತಿತ್ವನ್ನು ಹೊಂದಿರುವ ವ್ಯಕ್ತಿ ಇತರರಿಗಿಂತ ಭಿನ್ನವಾಗಿರುವ ಗುಣ ಸ್ವಭಾವಗಳನ್ನು ಹೊಂದಿರುತ್ತಾನೆ. ಇಂತಹ ವ್ಯಕ್ತಿತ್ವ ಉಳ್ಳವರು ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗುತ್ತಾರೆ ಹಾಗೂ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಹಾತೊರೆಯುತ್ತಾರೆ. ಇಂತಹ ವ್ಯಕ್ತಿತ್ವ ಹೊಂದಿರುವವರು ಪ್ರಬಲ ಹಾಗೂ ಆಕರ್ಷಕ ಸ್ವಭಾವವನ್ನೊಳಗೊಂಡಿರುವವರಾಗಿರುತ್ತಾರೆ. ಇವರು ಪ್ರಬಲ ಆತ್ಮವಿಶ್ವಾಸದ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಸಮಾಜದಲ್ಲಿ (Society) ಪರಸ್ಪರ ಬೆಂಬಲ ಹಾಗೂ ವಿಶ್ವಾಸವನ್ನು ತೋರ್ಪಡಿಸುವ ಈ ವ್ಯಕ್ತಿತ್ವದವರು ಪ್ರತಿಯೊಬ್ಬರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಾರೆ.
ಆಕರ್ಷಕ ವ್ಯಕ್ತಿತ್ವ ಹೇಗೆ ಇತರರನ್ನು ಆಕರ್ಷಿಸುತ್ತದೆ?
ಸಮಾಜದಲ್ಲಿ ಇತರರೊಂದಿಗೆ ಪರಸ್ಪರ ಬೆಂಬಲ ಹಾಗೂ ವಿಶ್ವಾಸವನ್ನು ತೋರ್ಪಡಿಸಿಕೊಳ್ಳುವಂತೆ ವರ್ತಿಸುವುದೂ ಕೂಡ ಇತರರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಆಕರ್ಷಕ ವ್ಯಕ್ತಿತ್ವನ್ನು ಹೊಂದಿದರವಾಗಿರುತ್ತಾರೆ.
ಇತರರು ಮೆಚ್ಚುವಂತೆ ನಾವು ಇರದೇ ಇದ್ದರೂ ಎಲ್ಲರಿಗೂ ಇಷ್ಟವಾಗುಂತಹ ರೀತಿಯಲ್ಲಿ ನಮ್ಮ ಸ್ವಭಾವವನ್ನು ಮಾರ್ಪಡಿಸಿಕೊಳ್ಳಬೇಕು ಎಂಬುದು ತಜ್ಞರ ಸಲಹೆಯಾಗಿದೆ. ಸಾಮಾಜಿಕವಾಗಿ ಗುಂಪಿನಲ್ಲಿ ಗೌರವ ಹೊಂದಲು ಹಾಗೂ ಗುರುತಿಸಿಕೊಳ್ಳಲು ಈ ನಡವಳಿಕೆ ಸಹಾಯಕವಾಗಿದೆ.
ಇದನ್ನೂ ಓದಿ: ಪತ್ನಿ ಅಥವಾ ತಾಯಿಯ ಹೆಸರಿನಲ್ಲಿ ಆಸ್ತಿ ನೋಂದಾವಣೆ ಮಾಡುವುದರಿಂದ ಹೇಗೆ ಹಣ ಉಳಿಸಬಹುದು?
ಇನ್ನೊಬ್ಬರು ನಮ್ಮನ್ನು ಮೆಚ್ಚುವುದರಿಂದ ಸ್ನೇಹ ಹಾಗೂ ವಿಶ್ವಾಸ ಹೆಚ್ಚುತ್ತದೆ ಅಂತೆಯೇ ಸಂಬಂಧ ಗಟ್ಟಿಯಾಗುತ್ತದೆ. ಪರಸ್ಪರ ಬೆಂಬಲ ದೊರೆಯುತ್ತದೆ. ನೀವು ಇನ್ನೊಬ್ಬರಿಗೆ ಇಷ್ಟವಾದಾಗ ನಿಮಗೆ ಗೊತ್ತಿಲ್ಲದಂತೆ ಪ್ರಸಿದ್ಧಿ ಪಡೆಯುತ್ತೀರಿ. ಎಂಬುದು ತಜ್ಞರ ಕಿವಿಮಾತಾಗಿದೆ. ಜನರೊಂದಿಗೆ ಮಾತನಾಡುವಾಗ, ಅವರ ಕಣ್ಣುಗಳಲ್ಲಿ ನೋಡಿ ಮತ್ತು ಅವರ ನೋಟವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿ.
ಇತರರು ಮೆಚ್ಚುವಂತಹ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಹೇಗೆ?
ನಗು ನಿಮ್ಮನ್ನು ಆಕರ್ಷಕ ಹಾಗೂ ಇತರರು ಮೆಚ್ಚುವ ವ್ಯಕ್ತಿಯನ್ನಾಗಿ ರೂಪಿಸುತ್ತದೆ
ಹೊಬರನ್ನು ಭೇಟಿಯಾಗುವಾಗ ಇಲ್ಲವೇ ಇತರರೊಂದಿಗೆ ಮಾತನಾಡುವಾಗ ನಿಮ್ಮ ಮುಖದಲ್ಲಿ ಆದಷ್ಟು ನಗು ತರಲು ಪ್ರಯತ್ನಿಸಿ ಇದರಿಂದ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ.
ಸೂಕ್ತ ಭಂಗಿಯನ್ನು ಅಭಿವೃದ್ಧಿಪಡಿಸಿ
ಆದಷ್ಟು ನೇರವಾದ ಭಂಗಿಯಲ್ಲಿ ನಿಂತುಕೊಳ್ಳಿ ಹಾಗೂ ನಡೆಯಿರಿ. ತಲೆಎತ್ತಿಕೊಂಡು ಮಾತನಾಡಿ ಇದರಿಂದ ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ.
ಮುಕ್ತ ಸಂವಹನ ಬೆಳೆಸಿಕೊಳ್ಳಿ
ನಿಮ್ಮೊಳಗಿನ ಮಾತುಗಳನ್ನು ಮುಕ್ತವಾಗಿ ಸಂವಹನ ನಡೆಸುವುದನ್ನು ಅಭ್ಯಸಿಸಿ. ಮುಕ್ತ ಮಾತುಗಾರಿಕೆ ಯಾವುದೇ ದುಗುಡ ಹಾಗೂ ಬೇಸರವನ್ನು ನಿವಾರಿಸುತ್ತದೆ. ಇದರಿಂದ ಇತರರಿಗೆ ನಿಮ್ಮ ಮೇಲೆ ಆಕರ್ಷಣೆ ಉಂಟಾಗುತ್ತದೆ ಹಾಗೂ ನಿಮ್ಮೊಂದಿಗೆ ಮಾತನಾಡಲು ಅವರೂ ಉತ್ಸುಕರಾಗುತ್ತಾರೆ.
ಇದನ್ನೂ ಓದಿ: ನೀವು ತಿನ್ನೋ ಈ ಆಹಾರಗಳೇ ನಿಮಗೆ ಮಧುಮೇಹ ಬರಲು ಕಾರಣ!
ಜನರ ಮಾತುಗಳನ್ನು ಆಲಿಸಿ
ನಿಮ್ಮ ವ್ಯಕ್ತಿತ್ವ ಇತರರನ್ನು ಸೂಜಿಗಲ್ಲಿನಂತೆ ಆಕರ್ಷಿಸುವಂತಹದ್ದು ಆಗಬೇಕು ಎಂದಾದರೆ ಅವರ ಮಾತುಗಳನ್ನು ಆಲಿಸುವ ಸ್ವಭಾವ ನಿಮ್ಮದಾಗಬೇಕು. ಇದರಿಂದ ನಿಮ್ಮೊಡನೆ ಮಾತನಾಡಬೇಕು ಎಂಬ ಭಾವನೆ ಇತರರಲ್ಲಿ ಮೂಡುತ್ತದೆ.
ಜನರನ್ನು ಅವರ ಹೆಸರಿನಿಂದ ಕರೆಯಿರಿ
ಮೊದಲ ಬಾರಿಗೆ ನೀವು ಯಾರನ್ನಾದರೂ ಭೇಟಿಯಾಗುತ್ತಿದ್ದರೆ ಅವರ ಹೆಸರು ಹೇಳಿ ಶುಭಾಶಯ ವಿನಿಮಯ ಮಾಡಿಕೊಳ್ಳಿ. ಇದರಿಂದ ಅವರಿಗೂ ಗೌರವ ದೊರೆತ ಅನುಭವವಾಗುತ್ತದೆ.
ಜನರನ್ನು ಹೊಗಳಿ
ಜನರನ್ನು ಹೊಗಳಿ ಅಭಿನಂದಿಸಿ ಮಾತನಾಡಿದಾಗ ಅವರು ನಿಮ್ಮೊಂದಿಗೆ ಹೆಚ್ಚು ಬೆರೆಯಬೇಕೆಂಬ ಬಯಕೆ ವ್ಯಕ್ತಪಡಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಕೇಳಲು ಇಷ್ಟಪಡುತ್ತಾರೆ. ಅವರು ಇಷ್ಟಪಡುವ ಮಾತುಗಳನ್ನು ಅವರೊಂದಿಗೆ ಮಾತನಾಡಿ. ನಿಮ್ಮ ಅಭಿನಂದನೆಗಳು ಪ್ರಾಮಾಣಿಕವಾಗಿವೆ ಎಂದು ಖಚಿತಪಡಿಸಿಕೊಳ್ಳಿ
ಸಮಾನ ರೀತಿಯ ಹವ್ಯಾಸವಿರುವವರೊಂದಿಗೆ ಸಂವಹನ ನಡೆಸಿ
ಸಮಾನ ರೀತಿಯ ಹವ್ಯಾಸಗಳನ್ನು ಹೊಂದಿರುವ ಇತರ ಜನರನ್ನು ಇಷ್ಟಪಡುತ್ತಾರೆ. ಯಾರೊಂದಿಗಾದರೂ ಹೊಸಬರೊಂದಿಗೆ ಚಾಟ್ ಮಾಡುತ್ತಿರುವಾಗ ಅಥವಾ ನೀವು ಸ್ನೇಹಿತರ ಜೊತೆ ಮಾತನಾಡುತ್ತಿರುವಾಗ, ನಿಮ್ಮಿಬ್ಬರು ಒಂದೇ ರೀತಿಯ ವಿಷಯಗಳನ್ನು ಇಷ್ಟಪಡುತ್ತೀರಾ ಎಂದು ನೋಡಲು ಪ್ರಯತ್ನಿಸಿ.
ನಿಮ್ಮ ಸಾಧನೆಗಳ ಬಗ್ಗೆ ವಿನಮ್ರರಾಗಿರಿ
ಬಡಾಯಿ ಕೊಚ್ಚಿಕೊಳ್ಳುವುದು ಜನರನ್ನು ನಿಮ್ಮಿಂದ ದೂರ ತಳ್ಳುತ್ತದೆ. ನೀವು ಪಕ್ಕವಾದ್ಯಗಳು ಅಥವಾ ಪ್ರಶಸ್ತಿಗಳನ್ನು ಹೊಂದಿದ್ದರೆ ಅದು ಉತ್ತಮವಾಗಿದ್ದರೂ, ಯಾವಾಗಲೂ ಅವರ ಬಗ್ಗೆ ಮಾತನಾಡುವ ಬದಲು ಅವರ ಬಗ್ಗೆ ವಿನಮ್ರವಾಗಿರಲು ಪ್ರಯತ್ನಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ