Daily Habits: ಕೆಲಸದ ಸಮಯದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ರಿಲ್ಯಾಕ್ಸೇಶನ್ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

1,057 ಯುಎಸ್‌ ಕಛೇರಿ ನೌಕರರ 2019ರ ಸಮೀಕ್ಷೆಯ ಪ್ರಕಾರ, 87 ಪ್ರತಿಶತ ವೃತ್ತಿಪರರು ತಮ್ಮ ಕೆಲಸದ ದಿನದ ಬಹುಪಾಲು ಸಮಯವನ್ನು ಹತ್ತಿರತ್ತಿರ ದಿನಕ್ಕೆ ಸರಾಸರಿ ಏಳು ಗಂಟೆಗಳನ್ನು ಮೊಬೈಲ್‌ ನೋಡುತ್ತಲೇ ಕಳೆಯುತ್ತಾರೆ ಎಂದು ಹೇಳಿದೆ. ನಮ್ಮ ಲ್ಯಾಪ್‌ಟಾಪ್‌ಗಳು ಮತ್ತು ಸಾಧನಗಳು ಕೆಲಸಕ್ಕೆ ಅಗತ್ಯವಾದರೂ ಕೂಡ ಅದನ್ನು ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಬೇಕು. ಕೆಲಸಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಬೇಕು.

ಮುಂದೆ ಓದಿ ...
  • Share this:

ನಮ್ಮ ಲೈಫ್‌ಸ್ಟೈಲ್‌ (Life Style), ಆರೋಗ್ಯ (Health) ಯಾವಾಗಲೂ ಉತ್ತಮವಾಗಿ, ಚೈತನ್ಯದಿಂದ ಕೂಡಿರ ಬೇಕೆಂದರೆ ಜಡವಾಗಿರದೇ ಸಕ್ರೀಯವಾಗಿರಬೇಕು. ಇದು ನಮ್ಮ ಸಂಪೂರ್ಣ ಏಳಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನವರಿಗೆ ಕೆಲಸ ಈಗ ಒತ್ತಡವಾಗಿದೆ. ಒತ್ತಡ (Stress) ಮನುಷ್ಯನನ್ನು ಮಾನಸಿಕವಾಗಿ (Mentally) ಮತ್ತು ದೈಹಿಕವಾಗಿ (Physically) ಕುಗ್ಗಿಸಿಬಿಡುತ್ತದೆ. ಹಾಗೆಯೇ ನಾವು ಮಾಡುವ ಕೆಲಸದ ಮೇಲೂ ಗಮನ ನೀಡದಂತೆ ಮಾಡಿಬಿಡುತ್ತದೆ. ನಾವು ಮಾಡುವ ನಮ್ಮ ಕೆಲಸದ ಮೇಲೆ ಗಮನ ಕೊಡಲು ಆಗದೇ ಇರುವುದಕ್ಕೆ ಮೊಬೈಲ್‌ನ (Mobile) ಹೆಚ್ಚಿನ ಬಳಕೆ, ನಮ್ಮ ಒತ್ತಡ, ಕೇಂದ್ರಿಕರಿಸುವಲ್ಲಿ ವಿಫಲರಾಗುವ ನಮ್ಮ ಮನೋಭಾವ ಹೀಗೆ ಈ ಎಲ್ಲಾ ಅಂಶಗಳು ಕೆಲಸದ ಉತ್ಪದಾಕತೆ ಮೇಲೆ ಪರಿಣಾಮ ಬೀರುತ್ತದೆ. ನಮ್ಮೊಬ್ಬರ ಈ ಸ್ವಭಾವ ಸಂಪೂರ್ಣ ಕಂಪನಿ ಮೇಲೆ ಪರಿಣಾಮ ಬೀರುತ್ತದೆ.


ಒತ್ತಡದ ಬಗ್ಗೆ WHO ಏನು ಹೇಳಿದೆ?


ಈಗಿನ ಓಡುತ್ತಿರುವ ಯುಗದಲ್ಲಿ ನಾವು ಎಷ್ಟೇ ಸಕ್ರೀಯವಾಗಿದ್ದರೂ ಸಾಲದು. ನಮ್ಮ ಒತ್ತಡ ಎಲ್ಲವನ್ನೂ ಬದಿಗಿಟ್ಟು ಮತ್ತು ಅದರಿಂದ ಹೊರಬಂದು ನಾವು ಕೆಲಸ ಮಾಡಬೇಕಾಗುತ್ತದೆ. 2019 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ಒತ್ತಡವನ್ನು ಕಾನೂನುಬದ್ಧ ವೈದ್ಯಕೀಯ ಸ್ಥಿತಿ ಎಂದು ವರ್ಗೀಕರಿಸಿದೆ. WHO ಬರ್ನ್‌ಔಟ್ (ಅತಿಯಾದ ಒತ್ತಡದಿಂದ ಕೆಲಸದ ಮೇಲಿನ ಆಸಕ್ತಿಯನ್ನು ಕಳೆದುಕೊಂಡ, ದೈಹಿಕ ಮತ್ತು ಮಾನಸಿಕ ಬಳಲಿಕೆಯ ಸ್ಥಿತಿ ಎಂದು ಹೇಳಬಹುದು) ಅನ್ನು "ಯಶಸ್ವಿಯಾಗಿ ನಿರ್ವಹಿಸದ ದೀರ್ಘಕಾಲದ ಕೆಲಸದ ಒತ್ತಡದ ಪರಿಣಾಮವಾಗಿ ಪರಿಕಲ್ಪನೆ ಮಾಡಲಾದ ಸಿಂಡ್ರೋಮ್" ಎಂದು ವ್ಯಾಖ್ಯಾನಿಸುತ್ತದೆ


ಹಾಗಾದರೆ ನಮ್ಮ ಒತ್ತಡವನ್ನು ಕಡಿಮೆ ಮಾಡಿ ದಿನದಲ್ಲಿ ನಮ್ಮ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸುವುದು ಅಂತೀರಾ, ಅದಕ್ಕೆ ನೀವು ಮಾಡಬೇಕಿದ್ದು, ಕೇವಲ ಈ ಎರಡು ಕೆಲಸಗಳನ್ನಷ್ಟೇ. ಅವು ಯಾವುವು ಅಂತಾ ನೋಡಿ.


ಹೆಚ್ಚು ಉತ್ಪನ್ನಶೀಲರಾಗಲು ಎರಡು ಮಾರ್ಗಗಳು


1. ನಿಮ್ಮ ಮೊಬೈಲ್‌ನಿಂದ ದೂರವಿರಿ
1,057 ಯುಎಸ್‌ ಕಛೇರಿ ನೌಕರರ 2019ರ ಸಮೀಕ್ಷೆಯ ಪ್ರಕಾರ, 87 ಪ್ರತಿಶತ ವೃತ್ತಿಪರರು ತಮ್ಮ ಕೆಲಸದ ದಿನದ ಬಹುಪಾಲು ಸಮಯವನ್ನು ಹತ್ತಿರತ್ತಿರ ದಿನಕ್ಕೆ ಸರಾಸರಿ ಏಳು ಗಂಟೆಗಳನ್ನು ಮೊಬೈಲ್‌ ನೋಡುತ್ತಲೇ ಕಳೆಯುತ್ತಾರೆ ಎಂದು ಹೇಳಿದೆ. ನಮ್ಮ ಲ್ಯಾಪ್‌ಟಾಪ್‌ಗಳು ಮತ್ತು ಸಾಧನಗಳು ಕೆಲಸಕ್ಕೆ ಅಗತ್ಯವಾದರೂ ಕೂಡ ಅದನ್ನು ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಬೇಕು. ಕೆಲಸಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಬೇಕು.


Man arrested for stabbing colleague in bengaluru mrq
ಸಾಂದರ್ಭಿಕ ಚಿತ್ರ


ಸೋಶಿಯಲ್‌ ಮೀಡಿಯಾಗಳ ಹಾವಳಿಯಿಂದಾಗಿ ಒಬ್ಬರಿಗೆ ಒಂದು ಕೆಲಸದ ಮೇಲೆ ಗಮನ ಕೊಡುವುದು ಕೂಡ ಕಷ್ಟನೇ. ಎರಡು ನಿಮಿಷ ಕೆಲಸ ಮಾಡಿ ಇನ್ನೂ ಅವರ ಮೊಬೈಲ್‌ನಲ್ಲಿರೋ ಡೇಟಾ ಖಾಲಿಯಾಗುವವರೆಗೂ ಫೋನ್‌ ಸ್ಕ್ರಾಲ್‌ ಮಾಡುತ್ತಿರುತ್ತಾರೆ. ಹೀಗೆ ಮಾಡಿದರೆ ಕೆಲಸ ಎಲ್ಲಿಂದ ಆಗುತ್ತೆ ಮತ್ತು ನಮ್ಮ ದಿನದ ಉತ್ಪಾದಕತೆ ಏನು?


ಅಧ್ಯಯನಗಳು ಹೇಳಿರುವ ಪ್ರಕಾರ, ಸೋಶಿಯಲ್‌ ಮೀಡಿಯಾಗಳು ಒಬ್ಬರನ್ನು ಒತ್ತಡಕ್ಕೆ ಸಿಲುಕಿಸುತ್ತವೆ ಎಂದಿದೆ. ಅತಿಯಾದ ಮೊಬೈಲ್‌, ಸೋಶಿಯಲ್‌ ಮೀಡಿಯಾ ಬಳಕೆ ನಮ್ಮನ್ನು ಒತ್ತಡಕ್ಕೆ ತಳ್ಳಿ ಕೆಲಸದ ಮೇಲೆ ಏಕಾಗ್ರತೆಯನ್ನು ಕಡಿಮೆ ಮಾಡುವಂತೆ ಮಾಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ಇವುಗಳಿಂದ ದೂರವಿರಿ


2. ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ
ಕೆಲಸದ ನಡುವೆ ಅಗತ್ಯ ವಿರಾಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಶಕ್ತಿಯುತವಾಗಿರಲು ಮತ್ತು ಒತ್ತಡವನ್ನು ತಪ್ಪಿಸಿಕೊಳ್ಳಬಹುದು. ಈ ವಿರಾಮಗಳು ನಿಮಗೆ ಮತ್ತು ಮೆದುಳಿಗೆ ವಿಶ್ರಾಂತಿ ನೀಡುತ್ತವೆ. ವಿರಾಮ ತೆಗೆದುಕೊಳ್ಳದೇ ಕೆಲಸ ಮಾಡಲು ಸಾಧ್ಯವಿಲ್ಲ. ಕೆಲಸದಲ್ಲಿ ಆಗಾಗ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದು ಉತ್ತಮ. "ಪ್ರತಿ 90 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳುವ ಉದ್ಯೋಗಿಗಳು ಹೆಚ್ಚಿನ ಮಟ್ಟದ ಗಮನ ಮತ್ತು ಉತ್ಪಾದಕತೆಯನ್ನು ವರದಿ ಮಾಡುತ್ತಾರೆ" ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ.




ವಿಶ್ರಾಂತಿ ಎಂದರೆ ಮೊಬೈಲ್‌, ಲ್ಯಾಪ್‌ಟಾಪ್‌ ನೋಡುವುದಲ್ಲ. ಬದಲಿಗೆ ಒಂದು ವಾಕ್‌ ಅಥವಾ ಹಾಡು ಕೇಳುವುದು. ಹೀಗೆ ಹೊರಗೆ ಒಂದು ಸುತ್ತು ವಾಕ್‌ ಮಾಡುವುದು ನಿಮ್ಮ ಮುಂದಿನ ಕಾರ್ಯಕ್ಕಾಗಿ ನಿಮ್ಮ ಮೆದುಳಿಗೆ ರೀಚಾರ್ಜ್ ಮಾಡಲು ಅನುಮತಿಸುತ್ತದೆ. ವಿಶ್ರಾಂತಿ ಮತ್ತು ಚೇತರಿಕೆಯೊಂದಿಗೆ ಒಬ್ಬರು ಕೆಲಸದಲ್ಲಿ ಹೆಚ್ಚಿನ ಉತ್ಪಾದಕತೆ ಸಾಧಿಸಬಹುದು. ಹಲವಾರು ಉದ್ಯಮಿಗಳು ಮತ್ತು ಸಿಇಒಗಳ ಯಶಸ್ಸಿನ ಗುಟ್ಟು ಕೂಡ ಇದೇ. ಅವರು ಕೆಲಸದ ಸಮಯದಲ್ಲಿ ಸ್ಮಾರ್ಟ್ ವಿರಾಮಗಳನ್ನು ತೆಗೆದುಕೊಳ್ಳುತ್ತಾರೆ. ನೀವೂ ಕೂಡ ಕೆಲಸ ಮಾಡುವ ಪ್ರತಿ ಗಂಟೆಗೆ ಐದರಿಂದ 10 ನಿಮಿಷಗಳ ವಿಶ್ರಾಂತಿಯನ್ನು ನೀಡಿದರೆ ಕೆಲಸದ ಒತ್ತಡವನ್ನು ಕಡಿಮೆ ಮಾಡಿ ಉತ್ಪಾದಕವಾಗಲು ಅನುವು ಮಾಡಿಕೊಡುತ್ತದೆ.

Published by:Monika N
First published: