• Home
  • »
  • News
  • »
  • lifestyle
  • »
  • Cancer: ಈ 14 ಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಕ್ಯಾನ್ಸರ್‌ಗೆ ಕಾರಣವಾಗಿರಬಹುದು!

Cancer: ಈ 14 ಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಕ್ಯಾನ್ಸರ್‌ಗೆ ಕಾರಣವಾಗಿರಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಟ್ಟೆಯು ಸರಿಯಿಲ್ಲದೇ ಇರುವುದರ ಜೊತೆಗೆ ಮತ್ತಷ್ಟು ಬೇರೆ ಬೇರೆಯ ಸಮಸ್ಯೆಗಳಿಗೂ ಕಾರಣವಾಗಿರಬಹುದು. ಅದರಲ್ಲೂ ಇವು ಮುಖ್ಯವಾಗಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅಥವಾ ಮೇದೋಜ್ಜಿರಕ ಗ್ರಂಥಿಯ ಕ್ಯಾನ್ಸರ್ ಲಕ್ಷಣಗಳು ಕೂಡ ಆಗಿರಬಹುದು ಎನ್ನುತ್ತಾರೆ ತಜ್ಞರು.

  • Share this:

ಸಾಮಾನ್ಯವಾಗಿ ಅಜೀರ್ಣ, ಹೊಟ್ಟೆ ನೋವು, ಆಹಾರ ಬೇಡ ಎನಿಸುವುದು, ಸ್ವಲ್ಪ ಅನಾರೋಗ್ಯ ಎನಿಸುವುದು ಇಂಥ ಅನುಭವಗಳಾದರೆ ಹೊಟ್ಟೆಯಲ್ಲಿ ಏನೋ ಸರಿಯಿಲ್ಲ ಎಂದು ನೀವು ಭಾವಿಸಬಹುದು. ಆದ್ರೆ ಇದು ಹೊಟ್ಟೆಯು ಸರಿಯಿಲ್ಲದೇ ಇರುವುದರ ಜೊತೆಗೆ ಮತ್ತಷ್ಟು ಬೇರೆ ಬೇರೆಯ ಸಮಸ್ಯೆಗಳಿಗೂ ಕಾರಣವಾಗಿರಬಹುದು. ಅದರಲ್ಲೂ ಇವು ಮುಖ್ಯವಾಗಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅಥವಾ ಮೇದೋಜ್ಜಿರಕ ಗ್ರಂಥಿಯ ಕ್ಯಾನ್ಸರ್ (Cancer)‌ ಲಕ್ಷಣಗಳು ಕೂಡ ಆಗಿರಬಹುದು ಎನ್ನುತ್ತಾರೆ ತಜ್ಞರು. ಪ್ರತಿ ವರ್ಷ ಲಂಡನ್‌ನಲ್ಲಿ ಇಂಥದ್ದೇ ಲಕ್ಷಣಗಳನ್ನು ಹೊಂದಿರುವ ಸುಮಾರು 10,500 ಜನರು ತಪ್ಪಾಗಿ ರೋಗನಿರ್ಣಯ ಮಾಡುತ್ತಾರೆ. ಅಷ್ಟೇನೂ ಹೇಳಿಕೊಳ್ಳುವಂಥ ನೋವಿಲ್ಲದೇ ಹೋಗುವುದರಿಂದ ಜನರು ಅದನ್ನು ಸಾಮಾನ್ಯ ಹೊಟ್ಟೆಯ ತೊಂದರೆ ಎಂದು ಭಾವಿಸುತ್ತಾರೆ. ಹೀಗಾಗಿ ಈ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಗಂಭೀರ ಸ್ಥಿತಿ ತಲುಪುತ್ತದೆ. ಮೊದಲು ತಪ್ಪಾಗಿ ಗ್ರಹಿಸಿ ವೈದ್ಯರ ಸಹಾಯ ಪಡೆಯದೇ ಹೋದ್ದರಿಂದ ಅದು ತೀರಾ ಹೆಚ್ಚಾದ ಬಳಿಕ ಚಿಕಿತ್ಸೆ (Treatment) ನೀಡುವುದು ಕಷ್ಟ ಎನ್ನುತ್ತಾರೆ ವೈದ್ಯರು.


ಇದರಿಂದಾಗಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮಾರಣಾಂತಿಕ ಕ್ಯಾನ್ಸರ್ ಆಗಿದೆ. ರೋಗವನ್ನು ಹೊಂದಿರುವ ಅರ್ಧಕ್ಕಿಂತ ಹೆಚ್ಚು ಜನರು ರೋಗನಿರ್ಣಯದ ಮೂರು ತಿಂಗಳೊಳಗೆ ಸಾವನ್ನಪ್ಪುತ್ತಾರೆ ಎಂಬುದಾಗಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಯುಕೆ (PCUK, pancreaticcancer.org.uk) ಹೇಳುತ್ತದೆ.


ಪಿಸಿಯುಕೆ ಸ್ಪೆಷಲಿಸ್ಟ್ ನರ್ಸ್, ಜೆನಿ ಜೋನ್ಸ್ ಹೇಳುವ ಪ್ರಕಾರ, "ಬಹುಪಾಲು ಕ್ಯಾನ್ಸರ್ ಪ್ರಕರಣಗಳು ಕೊನೆಯ ಹಂತದಲ್ಲಿದ್ದಾಗ ರೋಗನಿರ್ಣಯ ಮಾಡಲ್ಪಡುತ್ತವೆ. ಏಕೆಂದರೆ ರೋಗಲಕ್ಷಣಗಳು ಅಜೀರ್ಣದಂಥ ಸಾಮಾನ್ಯ ರೋಗಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ನೀವು ನಿರಂತರವಾದ ರೋಗಲಕ್ಷಣವನ್ನು ಹೊಂದಿದ್ದರೆ ವೈದ್ಯರೊಂದಿಗೆ ಮಾತನಾಡಿ, ಚಿಕಿತ್ಸೆ ಪಡೆಯಬೇಕು ಎಂಬುದಾಗಿ ಅವರು ಹೇಳುತ್ತಾರೆ.


ನೀವು ಅಷ್ಟೇನೂ ಗಂಭೀರವಾಗಿಲ್ಲ ಎಂದು ಸುಲಭವಾಗಿ ತಳ್ಳಿಹಾಕಬಹುದಾದ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಕೆಲವು ರೋಗಲಕ್ಷಣಗಳು ಇಲ್ಲಿವೆ.


1. ಅಜೀರ್ಣ: ಅಜೀರ್ಣ ಮತ್ತು ಎದೆಯುರಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿರಬಹುದು. ಆದರೆ ಹೆಚ್ಚಿನ ಜನರು ಗಂಭೀರ ಕಾಯಿಲೆಗೆ ಸಂಬಂಧಿಸಿರಬೇಕೆಂದು ಯೋಚಿಸುವುದಿಲ್ಲ. "ಜನರು ನಿರಂತರ ಅಜೀರ್ಣಕ್ಕೆ ಪರಿಹಾರಗಳನ್ನು ತೆಗೆದುಕೊಳ್ಳಬಹುದು. ಆದರೆ ಇದು ನಿಮ್ಮ ಹೊಟ್ಟೆ ಅಥವಾ ಬೆನ್ನಿನ ನೋವಿನಂತಹ ಇತರ ಲಕ್ಷಣಗಳೊಂದಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಅನ್ನು ಸೂಚಿಸುತ್ತಿರಬಹುದು ಎಂಬುದಾಗಿ ಜೆನಿ ಜೋನ್ಸ್‌ ಹೇಳುತ್ತಾರೆ.


2. ಹೊಟ್ಟೆ ಅಥವಾ ಬೆನ್ನು ನೋವು: ಇದು ನಿಮ್ಮ ಹೊಟ್ಟೆ, ಬೆನ್ನಿನವರೆಗೆ ಹರಡುವ ಯಾವುದಾದರೂ ನೋವಾಗಿರಬಹುದು. "ನೀವು ಮಹಿಳೆಯಾಗಿದ್ದರೆ ಅದು ನಿಮ್ಮ ಸ್ತನಬಂಧದ ಸುತ್ತಲೂ ಇರಬಹುದು. ಜೊತೆಗೆ ಇದು ಸಾಮಾನ್ಯವಾಗಿ ಭುಜದ ಬ್ಲೇಡ್ಗಳ ನಡುವೆ ಇರುತ್ತದೆ. ನೀವು ಏನನ್ನಾದರೂ ತಿಂದ ನಂತರ ಅಲ್ಲಿ ಹೆಚ್ಚು ನೋವು ಉಂಟಾಗಬಹುದು ಹಾಗೆಯೇ ಅದು ಸುಲಭವಾಗಿ ವಾಸಿಯಾಗುವುದಿಲ್ಲ. ಹಾಗಾಗಿ ಹೊಟ್ಟೆ ಮತ್ತು ಬೆನ್ನು ನೋವು ಈ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ ಎಂದು ಜೋನ್ಸ್‌ ಹೇಳುತ್ತಾರೆ.


3. ತೂಕ ನಷ್ಟ: ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಲಕ್ಷಣಗಳಲ್ಲಿ ತೂಕ ನಷ್ಟ ಸೇರಿದೆ. ಸಾಮಾನ್ಯವಾಗಿ ಜನರು ತೂಕ ಕಳೆದುಕೊಳ್ಳಬೇಕು ಎಂದುಕೊಳ್ಳದೇ ಇರುವಾಗಲೂ ಗಣನೀಯವಾಗಿ ತೂಕ ಇಳಿಕೆಯಾಗುವುದು ಇದರ ಲಕ್ಷಣಗಳಾಗಿರಬಹುದು. ಸಾಮಾನ್ಯವಾಗಿ ತಿನ್ನುತ್ತಿದ್ದರೂ ಅವರು ಹೆಚ್ಚಿನ ತೂಕ ಕಳೆದುಕೊಳ್ಳಬಹುದು. "ಅವರು ತಮ್ಮ ಬಟ್ಟೆಗಳು ಸಡಿಲಗೊಳ್ಳುತ್ತಿರುವುದನ್ನು ಗಮನಿಸಬಹುದು" ಎಂದು ಜೋನ್ಸ್ ಹೇಳುತ್ತಾರೆ.


4. ಹಸಿವು ನಷ್ಟ: ತೂಕವನ್ನು ಕಳೆದುಕೊಳ್ಳುವುದು ಸಹಜವಾಗಿ ಹಸಿವಾಗದೇ ಇರುವುದಕ್ಕೆ ಸಂಬಂಧಿಸಿದೆ. ಇದು ಸುಲಭವಾಗಿ ನಿರ್ಲಕ್ಷಿಸಲ್ಪಡುವ ಮತ್ತೊಂದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣವಾಗಿದೆ. "ತಮಗೆ ನಿಜವಾಗಿಯೂ ಹಸಿವಿಲ್ಲ ಎಂದು ಜನರು ಭಾವಿಸುವುದರಿಂದ ಹಿಡಿದು, ಹಸಿವು ಇಲ್ಲದಿರುವುದು ಮತ್ತು ಆಹಾರವನ್ನು ತಿನ್ನಲು ಸಾಧ್ಯವಾಗದಿರುವುದು, ಕಡಿಮೆ ಆಹಾರದ ನಂತರ ಹೊಟ್ಟೆ ತುಂಬಿರುವ ಅನುಭವವಾಗುವುದು... ಇಂಥ ಹಸಿವಿನ ಬದಲಾವಣೆಗಳಿಗೆ ಕಾರಣವಾಗಿರಬಹುದು ಎಂದು ವಿವರಿಸುತ್ತಾರೆ. ಗೆಡ್ಡೆ ಹೊಟ್ಟೆಯ ಮೇಲೆ ಒತ್ತುತ್ತದೆ. ಜೊತೆಗೆ ತಿನ್ನುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಜೋನ್ಸ್ ಹೇಳುತ್ತಾರೆ.


5. ಕಾಮಾಲೆ ರೋಗ: ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಕಾಮಾಲೆ ರೋಗ ಕೂಡ ಒಂದು. ಆದರೆ ಮೇದೋಜ್ಜೀರಕ ಗ್ರಂಥಿಯ ಮೇಲ್ಭಾಗದಲ್ಲಿ ಗೆಡ್ಡೆ ಇರುವ ಜನರಲ್ಲಿ ಮಾತ್ರ ಇದು ಸಂಭವಿಸುತ್ತದೆ ಎಂದು ಜೋನ್ಸ್ ವಿವರಿಸುತ್ತಾರೆ. "ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಹೊಂದಿರುವ ಪ್ರತಿಯೊಬ್ಬರೂ ಕಾಮಾಲೆ ಹೊಂದಿರುವುದಿಲ್ಲ. ಆದರೂ ಇದು ಬಹಳ ಸಾಮಾನ್ಯವಾಗಿದೆ ಎಂದು ಅವರು ಹೇಳುತ್ತಾರೆ. "ನಿಮ್ಮ ಕಣ್ಣುಗಳ ಬಿಳಿಭಾಗವು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದಾಗ, ನಿಮ್ಮ ಚರ್ಮವು ಹಳದಿ ಬಣ್ಣ ಪಡೆಯಲು ಪ್ರಾರಂಭಿಸಿದೊಡನೆ ನೀವು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳುತ್ತಾರೆ.


6. ತುರಿಕೆ: ಕಾಮಾಲೆ ರೋಗವನ್ನು ಹೊಂದುವ ಮೊದಲು ನಿಮಗೆ ಅಸಾಮಾನ್ಯ ಚರ್ಮದ ತುರಿಕೆಗೆ ಉಂಟಾಗಬಹುದು. ಏಕೆಂದರೆ ಪಿತ್ತರಸ ಲವಣಗಳು ಮೊದಲು ಚರ್ಮದ ಅಡಿಯಲ್ಲಿ ಸಂಗ್ರಹಗೊಳ್ಳುತ್ತವೆ. "ಇದು ಅತ್ಯಂತ ತುರಿಕೆಯಾಗಿದೆ. ನಾನು ಸ್ವಲ್ಪ ತುರಿಕೆ ಬಗ್ಗೆ ಮಾತನಾಡುವುದಿಲ್ಲ, ಅದು ನಿಮಗೆ ತೀರಾ ಎನ್ನುವಷ್ಟು ತುರಿಕೆ ಉಂಟುಮಾಡುತ್ತದೆ ಎಂಬುದಾಗಿ ಜೋನ್ಸ್ ಒತ್ತಿಹೇಳುತ್ತಾನೆ.


7. ಕರುಳಿನ ತೊಂದರೆ: "ಅತಿಸಾರಕ್ಕೆ ಹಲವು ಕಾರಣಗಳಿವೆ. ಆದರೆ ಇದನ್ನು ನಾವು ಸ್ಟೀಟೋರಿಯಾ ಎಂದು ಕರೆಯುತ್ತೇವೆ. ಮಲದಲ್ಲಿ ಕೊಬ್ಬು ಇದ್ದಾಗ, ಅದು ಹಳದಿ ಬಣ್ಣಕ್ಕೆ ತಿರುಗುತ್ತದೆ. ಕಾಮಾಲೆಯಲ್ಲಿಯೂ ಸಹ ಸಂಭವಿಸುತ್ತದೆ. ಈ ಜಿಡ್ಡಿನ, ಹಳದಿ ಬಣ್ಣದ ಮಲವು ಜೀರ್ಣಾಂಗ ವ್ಯವಸ್ಥೆಯಲ್ಲಿ ಏನಾದರೂ ತಪ್ಪಾಗಿದೆ ಎಂಬುದರ ಸಂಕೇತವಾಗಿದೆ. "ರೋಗಿಯು ತಮ್ಮ ಅತಿಸಾರದ ವಿಷಯಗಳನ್ನು ಸರಿಯಾಗಿ ಹೇಳದೇ ಹೋದರೆ ಸರಿಯಾಗಿ ರೋಗ ನಿರ್ಣಯ ಮಾಡಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಜೋನ್ಸ್ ಹೇಳುತ್ತಾರೆ.


8. ಮಧುಮೇಹ: ಇತ್ತೀಚಿಗೆ ಡಯಾಬಿಟಿಸ್ ಹೊಂದಿರುವ ಕೆಲವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಹೊಂದಿರಬಹುದು ಎಂದು ಜೋನ್ಸ್ ಎಚ್ಚರಿಸಿದ್ದಾರೆ. ಏಕೆಂದರೆ ಕ್ಯಾನ್ಸರ್ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದನ್ನು ನಿಲ್ಲಿಸಬಹುದು. ಇದು ಮಧುಮೇಹಕ್ಕೆ ಕಾರಣವಾಗಬಹುದು "ನೀವು ಕೆಲವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ರೋಗಲಕ್ಷಣಗಳನ್ನು ಹೊಂದಿದ್ದು ನೀವು ಇತ್ತೀಚಿಗೆ ಮಧುಮೇಹ ಹೊಂದಿದ್ದರೆ ನಿಮ್ಮ ಮೇದೋಜ್ಜೀರಕ ಗ್ರಂಥಿ ಸ್ಕ್ಯಾನ್ ಮಾಡುವ ಅಗತ್ಯವಿದೆ. ಏಕೆಂದರೆ ಇದು ಎಚ್ಚರಿಕೆಯ ಚಿಹ್ನೆಯಾಗಿದೆ ಎಂದು ಅವರು ವಿವರಿಸುತ್ತಾರೆ.


9. ವಾಕರಿಕೆ: ವಾಕರಿಕೆಯಂಥ ಅನಾರೋಗ್ಯವು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನ ಮತ್ತೊಂದು ಲಕ್ಷಣವಾಗಿರಬಹುದು. "ಕೆಲವೊಮ್ಮೆ ಜನರು ವಾಂತಿ ಮಾಡಬಹುದು. ಆದರೆ ಇದು ಸಾಮಾನ್ಯವಾದ ಅನಾರೋಗ್ಯವೆಂದು ಭಾವಿಸಿದರೂ ಅದು ನಿಜವಾಗಿಯೂ ಸಾಮಾನ್ಯದ್ದಾಗಿರುವುದಿಲ್ಲ ಎಂದು ಜೋನ್ಸ್‌ ಹೇಳುತ್ತಾರೆ.


10. ರಕ್ತ ಹೆಪ್ಪುಗಟ್ಟುವಿಕೆ: ಜೋನ್ಸ್ ಹೇಳುವಂತೆ ರಕ್ತ ಹೆಪ್ಪುಗಟ್ಟುವಿಕೆಯು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣವಾಗಿದೆ. ಇದು ಬಹುಶಃ ಕಿರಿಯರಲ್ಲಿ ಅಥವಾ ಧೂಮಪಾನಿಗಳಲ್ಲದ ಜನರಲ್ಲಿ ಕಂಡುಬರುತ್ತದೆ. "ಅವರು ಉಸಿರಾಟದ ತೊಂದರೆ ಅಥವಾ ಕಾಲು ಊದಿಕೊಂಡಿರುವಂಥ ಲಕ್ಷಣಗಳನ್ನು ಹೊಂದಿರಬಹುದು. ಹೀಗಾದಾಗ ಅವರು ಸ್ಕ್ಯಾನ್‌ಗೆ ಹೋಗಬಹುದು. ಈ ಮೂಲಕ ಅವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಹೊಂದಿದ್ದಾರೆಯೇ ಎಂದು ಕಂಡುಹಿಡಿಯಬಹುದು" ಎಂದು ಅವರು ಹೇಳುತ್ತಾರೆ.


11. ಆಯಾಸ: ಆಯಾಸವು ಬೇರೆ ಬೇರೆ ಕಾರಣಗಳಿಂದ ಉಂಟಾಗಬಹುದು. ಆದರೆ ನೀವು ಇತರ ರೋಗಲಕ್ಷಣಗಳನ್ನು ಹೊಂದಿದ್ದರೆ ಅದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಸಂಬಂಧಿಸಿರಬಹುದು ಎಂದು ಜೋನ್ಸ್ ಎಚ್ಚರಿಸುತ್ತಾರೆ. ನೀವು ವಿಶ್ರಾಂತಿ ಪಡೆದರೂ ಆಯಾಸ ಎನಿಸಿದರೆ, ನಡೆಯುತ್ತಿರುವ ನೋವು ಎನಿಸಿದರೆ, ದೈಹಿಕವಾಗಿ ತುಂಬಾ ಸುಸ್ತು ಎನಿಸಿದರೆ ಇದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣವಾಗಿರಬಹುದು.


ಇದನ್ನೂ ಓದಿ: ಮಕ್ಕಳ ಮುಂದೆ ನೀವು ಹೀಗೆಲ್ಲ ಮಾತನಾಡಿದ್ರೆ ಒಳ್ಳೆಯ ಬುದ್ದಿ ಕಲಿಯಲ್ಲ, ನಾಲಿಗೆ ಮೇಲೆ ನಿಗಾ ಇರಲಿ


12. ಜ್ವರ, ನಡುಕ ಮತ್ತು ಅಸ್ವಸ್ಥ ಭಾವನೆ: ಇಂತಹ ರೋಗಲಕ್ಷಣಗಳು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಲಕ್ಷಣಗಳಾಗಿವೆ. ಜ್ವರ, ನಡುಕ ಹಾಗೂ ಅಸ್ವಸ್ಥರಾದಂತೆ ಅನಿಸುವುದು ಕ್ಯಾನ್ಸರ್‌ಗೆ ಸಂಬಂಧಿಸಿರಬಹುದು. ಹಾಗಾಗಿ ಇಂಥ ಲಕ್ಷಣಗಳನ್ನು ಕಂಡೊಡನೆ ನೀವು ತಕ್ಷಣವೇ ವೈದ್ಯರನ್ನು ಕಾಣುವುದು ಒಳಿತು ಎಂದು ಜೋನ್ಸ್ ಹೇಳುತ್ತಾರೆ.


13. ಆಹಾರವನ್ನು ನುಂಗಲು ಕಷ್ಟವಾಗುವುದು: ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಬಗ್ಗೆ ವಿವರಿಸುವ ಜೋನ್ಸ್, "ಕ್ಯಾನ್ಸರ್ ಒಬ್ಬ ವ್ಯಕ್ತಿ ಪೂರ್ಣವಾಗಿ ನೋವನ್ನು ಅನುಭವಿಸುವಂತೆ ಮಾಡುತ್ತದೆ. ಆದ್ದರಿಂದ ಅವರು ನುಂಗಲು ಸಮಸ್ಯೆ ಎಂದು ಅವರು ಭಾವಿಸಿದರೂ, ಅವರು ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಅವು ನುಂಗುವಾಗ ಅಸಹಜವಾದ ನೋವನ್ನು ಅನುಭವಿಸಬಹುದು ಎಂದು ಅವರು ಹೇಳುತ್ತಾರೆ.


14. ಖಿನ್ನತೆ ಮತ್ತು ಆತಂಕ: ಯಾವುದೇ ಸ್ಪಷ್ಟ ಕಾರಣವಿಲ್ಲದೆ ಖಿನ್ನತೆ ಮತ್ತು ಆತಂಕವನ್ನು ಅನುಭವಿಸುವುದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ. "ಇವು ಖಂಡಿತವಾಗಿ ನೀವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅನ್ನು ಹೊಂದಿದ್ದೀರಿ ಎಂದು ಹೇಳದೇ ಹೋದರೂ ಅದರ ಲಕ್ಷಣಗಳಂತೂ ಹೌದು ಎಂಬುದಾಗಿ ಜೋನ್ಸ್ ಹೇಳುತ್ತಾರೆ.

First published: