ನಿಮ್ಮ ಮಗು ದಿನಕ್ಕೆ ಎಷ್ಟು ತಾಸು ನಿದ್ದೆ ಮಾಡಿದರೆ ಒಳ್ಳೆಯದು..? ಇಲ್ಲಿದೆ ಮಾಹಿತಿ..

ನಿಮ್ಮ ಮಗು ನವಜಾತ ಶಿಶುವಾಗಿದ್ದಾಗಿನಿಂದ ಹಿಡಿದು ಸುಮಾರು 13-14 ವಯಸ್ಸಿನವರಾಗುವವರೆಗೂ ಎಷ್ಟು ತಾಸಿನ ನಿದ್ದೆ ಅವಶ್ಯಕ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಒಳ್ಳೆಯ ನಿದ್ದೆಯು ಒಂದು ಬಹು ಮುಖ್ಯವಾದ ಅಂಶವಾಗಿದೆ ಎಂದರೆ ತಪ್ಪಾಗಲಾರದು. ಚಿಕ್ಕ ಮಕ್ಕಳು ಎಷ್ಟು ಹೆಚ್ಚಾಗಿ ನಿದ್ರಿಸುತ್ತವೆಯೋ ಅಷ್ಟು ಒಳ್ಳೆಯದು ಅಂತಾರೆ. ಕೆಲವು ಪೋಷಕರು ತಮ್ಮ ಮಕ್ಕಳು ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಏಳುವುದನ್ನು ನೋಡಿ ಮಕ್ಕಳ ಮೇಲೆ ತುಂಬಾ ರೇಗಾಡುತ್ತಿರುತ್ತಾರೆ. ಎಷ್ಟೋ ಮಕ್ಕಳು ಬೆಳಗ್ಗೆ ಎಷ್ಟೇ ಎಬ್ಭಿಸಿದರೂ ಹಾಸಿಗೆಯಿಂದ ಬೇಗನೆ ಏಳುವುದೇ ಇಲ್ಲ, ಹಾಗೆಯೇ ನಿದ್ರೆ ಮಂಪರಿನಲ್ಲಿರುತ್ತಾರೆ. ಕೆಲವೊಂದು ಮಕ್ಕಳಿಗೆ ರಾತ್ರಿ ನಿದ್ದೆ ಸರಿಯಾಗಿ ಆಗದೆ ಇಡೀ ದಿನ ನಿದ್ರೆ ಮಂಪರಿನಲ್ಲಿದ್ದಂತೆ ಕಾಣುತ್ತಾರೆ.ಮಕ್ಕಳಿಗೆ ಎಷ್ಟು ತಾಸಿನ ನಿದ್ದೆ ಅವಶ್ಯಕ ಎಂದು ಹೇಗೆ ತಿಳಿದುಕೊಳ್ಳುವುದು ಎಂದು ತುಂಬಾ ಪೋಷಕರು ಗೊಂದಲದಲ್ಲಿರುತ್ತಾರೆ. ನಿಮ್ಮ ಮಗು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ತೋರದೆ ಇರುವುದು ಎಲ್ಲವೂ ನಿದ್ರೆಗೆ ಸಂಬಂಧಿಸಿದವು ಆಗಿರುತ್ತವೆ.


ಕೆಲವು ಮಕ್ಕಳು ರಾತ್ರಿ ಸರಿಯಾಗಿ ನಿದ್ರೆ ಮಾಡದೆ ಇರುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ನಿಮ್ಮ ಮಗು ನವಜಾತ ಶಿಶುವಾಗಿದ್ದಾಗಿನಿಂದ ಹಿಡಿದು ಸುಮಾರು 13-14 ವಯಸ್ಸಿನವರಾಗುವವರೆಗೂ ಎಷ್ಟು ತಾಸಿನ ನಿದ್ದೆ ಅವಶ್ಯಕ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ:Explained: ಕ್ರಿಮಿನಲ್ ಕೇಸ್‌ ಹೊಂದಿರುವ ವ್ಯಕ್ತಿ ಸರ್ಕಾರಿ ಕೆಲಸ ಪಡೆಯಬಹುದೇ? ವಿದೇಶ ಪ್ರಯಾಣಕ್ಕೆ ಅನುಮತಿ ಇದೆಯೇ?

ನವಜಾತ ಶಿಶುಗಳಿಗೆ ಸರಿ ಸುಮಾರು 14 ಗಂಟೆಗಳ ನಿದ್ರೆ, ಶಿಶುಗಳಿಗೆ ಸುಮಾರು 15 ಗಂಟೆ, ಅಂಬೆಗಾಲಿಡುವ ಶಿಶುಗಳಿಗೆ 14 ಗಂಟೆ, 4 ರಿಂದ 5 ವರ್ಷದ ಮಕ್ಕಳಿಗೆ 10 ರಿಂದ 13 ಗಂಟೆ, ಶಾಲೆಗೆ ಹೋಗುವ ಮಕ್ಕಳು ಎಂದರೆ 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು 9 ಗಂಟೆಗಳ ಕಾಲ ನಿದ್ದೆ ಅವಶ್ಯಕವಾಗಿರುತ್ತದೆ.


ನಿಮ್ಮ ಮಗು ರಾತ್ರಿ ಚೆನ್ನಾಗಿ ನಿದ್ರಿಸಬೇಕೆಂದರೆ ಕೆಳಗಿನ ಕೆಲವೊಂದು ಅಂಶಗಳನ್ನು ಪಾಲಿಸಿರಿ
  • ನಿಮ್ಮ ಮಗು ಕನಿಷ್ಠ 10 ರಿಂದ 11 ಗಂಟೆಗಳ ಕಾಲ ನಿದ್ರಿಸುವಂತೆ ನೋಡಿಕೊಳ್ಳಿ. ನಿಮ್ಮ ಮಗು ತಡವಾಗಿ ಮಲಗುತ್ತಿದ್ದರೆ, ಮಲಗುವ ಸಮಯವನ್ನು ಅರ್ಧ ಗಂಟೆ ಮುಂಚಿತವಾಗಿ ಮಲಗಿಸಿ ಮತ್ತು ಇದರಿಂದ ಮಗು ಬೆಳಗ್ಗೆ ಏಳುವ ಸಮಯವು ಬದಲಾಗುತ್ತದೆ.

  • ಪ್ರತಿದಿನ ಮಲಗುವ ಸಮಯವನ್ನು ಒಂದೇ ರೀತಿಯಲ್ಲಿ ಕಾಯ್ದುಕೊಳ್ಳಿ ಮತ್ತು ಮಗು ಶಾಂತ ರೀತಿಯಲ್ಲಿ ಮಲಗುವಂತೆ ನೋಡಿಕೊಳ್ಳಿರಿ.

  • ಮಲಗುವ ಒಂದು ಗಂಟೆ ಮುಂಚಿತವಾಗಿ ನಿಮ್ಮ ಮಗುವಿಗೆ ಯಾವುದೇ ಮೊಬೈಲ್‌ನಲ್ಲಿ ಆಟ ಆಡದಂತೆ ಮತ್ತು ಟಿವಿ ನೋಡದಂತೆ ನೋಡಿಕೊಳ್ಳಿ.

  • ಕೆಫೀನ್ ಮತ್ತು ಸಕ್ಕರೆ ಮಿಶ್ರಿತ ಪಾನೀಯಗಳನ್ನು ಸೇವಿಸದಂತೆ ನೋಡಿಕೊಳ್ಳಿ, ಏಕೆಂದರೆ ತುಂಬಾ ಪಾನೀಯ ಸೇವಿಸಿದರೆ ಪದೇ ಪದೇ ನಿದ್ದೆಯಲ್ಲಿ ಮೂತ್ರಕ್ಕಾಗಿ ಏಳಬೇಕಾಗುತ್ತದೆ, ಆದ್ದರಿಂದ ನಿದ್ದೆ ಹದಗೆಡುತ್ತದೆ.

  • ಮಗು ಮಲಗುವ ಕೋಣೆಯಲ್ಲಿ ಉತ್ತಮ ಗಾಳಿ ಮತ್ತು ಬೆಳಕು ಇರುವಂತೆ ನೋಡಿಕೊಳ್ಳಿ. ಮಗುವಿಗೆ ಕತ್ತು ಮತ್ತು ಬೆನ್ನು ನೋವಾಗದಂತೆ ಮೆತ್ತನೆಯ ಹಾಸಿಗೆ ಬಳಸಿರಿ.

  • ನಿಮ್ಮ ಮಗುವಿಗೆ ನಿದ್ದೆಯಲ್ಲಿ ಉಸಿರಾಟವು ಜೋರಾಗಿದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಮತ್ತು ಸೂಕ್ತವಾದ ಸಲಹೆ ಪಡೆಯಿರಿ.


ಇದನ್ನೂ ಓದಿ:Afghan Crisis: ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಸುರಕ್ಷಿತವಾಗಿ ಬಂದಿಳಿದ ಐವರು ಕನ್ನಡಿಗರುನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Latha CG
First published: