Healthy Life Style: ನೀವು ಸಂತೋಷವಾಗಿರಬೇಕಂದ್ರೆ ಈ ಟಿಪ್ಸ್​ ಫಾಲೋ ಮಾಡಿ ಅನ್ನುತ್ತೆ ವಿಜ್ಞಾನ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಾ. ಸೋಂಜಾ ಲ್ಯುಬೊಮಿರ್ಸ್ಕಿ ಅವರು, ಮಾಡಿರುವ ಮುಖ್ಯ ಆವಿಷ್ಕಾರಗಳಲ್ಲಿ ಒಂದೆಂದರೆ ನಾವೆಲ್ಲರೂ ಸಂತೋಷದ ಅಂಶಗಳನ್ನು ನಮ್ಮೊಳಗೆ ಹೊಂದಿದ್ದೇವೆ ಎಂದಾಗಿದೆ. ಯಾವುದೇ ಬೇಸರದ ಘಟನೆಯಿಂದ ನಾವು ದುಃಖಿತರಾದಾಗ ಅವು ಕೆಲವು ಕಾಲ ಮಾತ್ರ ನಮ್ಮನ್ನು ದುಃಖಿತರನ್ನಾಗಿಸುತ್ತದೆ ಹಾಗೂ ನಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ.

ಮುಂದೆ ಓದಿ ...
  • Share this:

ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಂತೋಷದಿಂದಿರುವುದು (Happy) ಮುಖ್ಯವಾಗಿದೆ. ಜೀವನದಲ್ಲಿ ಸಂತೋಷ ಇಲ್ಲ ಎಂದಾದರೆ ದಿನನಿತ್ಯ ಕಿರಿಕಿರಿ, ಅಸಮಾಧಾನ, ಒತ್ತಡ, ಕೋಪಗಳು ನಮ್ಮನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಜರಿತಗೊಳಿಸುತ್ತದೆ. ಹಾಗಿದ್ದರೆ ಜೀವನದಲ್ಲಿ ಸಂತೋಷ ಕಂಡುಕೊಳ್ಳುವುದು ಹೇಗೆ ಮತ್ತು ನಮ್ಮನ್ನು ನಾವು ಖುಷಿಯಾಗಿರಿಸಿಕೊಳ್ಳುವುದು ಹೇಗೆ? ಇದಕ್ಕೆ ಉತ್ತರ ಎಂಬಂತೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ (University of California) ಮನಶ್ಶಾಸ್ತ್ರಜ್ಞರು (Psychologists) ಜೀವನವನ್ನು ಬದಲಾಯಿಸಬಹುದಾದ ಸಂತೋಷದ ಕುರಿತು ಕೆಲವೊಂದು ಆಕರ್ಷಕ ವಿಷಯಗಳನ್ನು ಕಂಡುಹಿಡಿದಿದ್ದಾರೆ. ಡಾ. ಸೋಂಜಾ ಲ್ಯುಬೊಮಿರ್ಸ್ಕಿ (Dr. Sonja Lyubomirsky) ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದು ಸಂತೋಷದ ಕುರಿತು ಹಲವಾರು ಅಧ್ಯಯನವನ್ನು ನಡೆಸಿದ್ದಾರೆ ಹಾಗೂ ಇದೇ ವಿಷಯದ ಕುರಿತು ಹಲವಾರು ಲೇಖನಗಳನ್ನು ವಿಚಾರ ವಿಮರ್ಶೆಗಳನ್ನು ಮಾಡಿದ್ದಾರೆ.


ಸಂತೋಷದ ಅಂಶಗಳು ನಮ್ಮಲ್ಲಿಯೇ ಇದೆ


ಡಾ. ಸೋಂಜಾ ಲ್ಯುಬೊಮಿರ್ಸ್ಕಿ ಅವರು, ಮಾಡಿರುವ ಮುಖ್ಯ ಆವಿಷ್ಕಾರಗಳಲ್ಲಿ ಒಂದೆಂದರೆ ನಾವೆಲ್ಲರೂ ಸಂತೋಷದ ಅಂಶಗಳನ್ನು ನಮ್ಮೊಳಗೆ ಹೊಂದಿದ್ದೇವೆ ಎಂದಾಗಿದೆ. ಯಾವುದೇ ಬೇಸರದ ಘಟನೆಯಿಂದ ನಾವು ದುಃಖಿತರಾದಾಗ ಅವು ಕೆಲವು ಕಾಲ ಮಾತ್ರ ನಮ್ಮನ್ನು ದುಃಖಿತರನ್ನಾಗಿಸುತ್ತದೆ ಹಾಗೂ ನಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ. ಆದರೆ ದಿನಗಳೆದಂತೆ ಆ ಬೇಸರವನ್ನು ಮರೆತು ನಮ್ಮ ಹಿಂದಿನ ಜೀವನಕ್ಕೆ ನಾವು ಹೊಂದಿಕೊಳ್ಳುತ್ತೇವೆ, ಇದುವೇ ಸಂತೋಷದ ಅಂಶವಾಗಿದೆ ಎಂದು ಸೋಂಜಾ ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ


ನಿಯಂತ್ರಿಸುವ ನಮ್ಮ ಸಂತೋಷದ ಹೆಚ್ಚಿನ ಭಾಗವು ನಮ್ಮ ಅಭ್ಯಾಸಗಳು, ವರ್ತನೆ ಮತ್ತು ಜೀವನದ ದೃಷ್ಟಿಕೋನದಿಂದ ನಿರ್ಧರಿಸಲ್ಪಡುತ್ತದೆ ಎಂದು ಸೋಂಜಾ ತಿಳಿಸುತ್ತಾರೆ. ನಮ್ಮನ್ನು ಅತೃಪ್ತಿಗೊಳಿಸುವಂತಹ ಹಲವಾರು ಕೆಟ್ಟ ಅಭ್ಯಾಸಗಳಿವೆ. ಈ ಕೆಟ್ಟ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವುದರಿಂದ ನಮ್ಮ ಸಂತೋಷದ ಅಂಶಗಳನ್ನು ಹೆಚ್ಚು ಕ್ರಿಯಾತ್ಮಕಗೊಳಿಸಬಹುದು. ವಿಜ್ಞಾನವು ನಮ್ಮೊಳಗಿನ ಸಂತೋಷವನ್ನು ಅನ್ವೇಷಿಸುವ ಕುರಿತು ಕೆಲವೊಂದು ವಿಧಾನಗಳನ್ನು ತಿಳಿಸಿದ್ದು ಅದು ಏನು ಎಂಬುದನ್ನು ಅರಿತುಕೊಳ್ಳೋಣ.


ನಿಮ್ಮನ್ನು ಸಮಾಧಾನಪಡಿಸಿಕೊಳ್ಳುವುದು: ಇತರರಿಂದ ನಿಮಗೆ ಅತೃಪ್ತಿ ಉಂಟಾದರೆ ಅದನ್ನು ಅಲ್ಲಿಯೇ ಮರೆತುಬಿಡಿ. ನಿಮ್ಮ ಸಂತೋಷಕ್ಕೆ ಈ ವಿಷಯ ಅಡ್ಡಿಯಾಗದಂತೆ ನೋಡಿಕೊಳ್ಳಿ. ಸಂತೋಷವಾಗಿರಲು ನಾವು ನಮ್ಮ ಜೀವನದ ನಿಯಂತ್ರಣವನ್ನು ಅನುಭವಿಸಬೇಕು. ಇತರರನ್ನು ದೂಷಿಸುವುದನ್ನು ಬಿಡಿ.


ಸಾಂದರ್ಭಿಕ ಚಿತ್ರ


ಸ್ವಯಂ ನಿಯಂತ್ರಣ: ನಿಮ್ಮ ಜೀವನದ ಮೇಲೆ ಹಿಡಿತ ಸಾಧಿಸುವುದು ಮುಖ್ಯವಾಗಿದೆ. ಆದರೆ ಈ ನಿಯಂತ್ರಣ ನಿಮ್ಮನ್ನು ಅತೃಪ್ತಿಗೊಳಿಸುವಷ್ಟು ಹಿಡಿತವನ್ನುಂಟು ಮಾಡಬಾರದು. ನಿಮ್ಮ ಜೀವನದಲ್ಲಿ ನಿಮ್ಮನ್ನು ನಿಯಂತ್ರಿಸುವ ಏಕೈಕ ವ್ಯಕ್ತಿ ನೀವಾಗಿದ್ದೀರಿ ಹಾಗಾಗಿ ಹೆಚ್ಚು ಕೋಪ ಬೇಸರ ಉಂಟಾದಾಗ ಕೂಡ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬಹುದು.


ಟೀಕಿಸುವುದನ್ನು ಬಿಡಿ: ಇತರ ಜನರನ್ನು ನಿರ್ಣಯಿಸುವುದು ಮತ್ತು ಅವರ ಬಗ್ಗೆ ಕಳಪೆಯಾಗಿ ಮಾತನಾಡುವುದು ನಿಮ್ಮ ಗುಣವಾಗಿದ್ದರೆ ಅದನ್ನು ಈಗಲೇ ಬಿಟ್ಟುಬಿಡಿ. ಇದೊಂದು ರೀತಿ ಸಿಹಿ ಪದಾರ್ಥವನ್ನು ಹೆಚ್ಚು ತಿಂದ ಅದೇ ಆನಂದವನ್ನು ನೀಡುತ್ತದೆ ಆದರೆ ಕೊನೆಯಲ್ಲಿ ವಿಷಕಾರಿಯಾಗಿ ಪರಿಣಮಿಸುತ್ತದೆ. ಹೀಗಾಗಿ ಕೊನೆಯಲ್ಲಿ ನೀವೇ ತಪ್ಪಿತಸ್ಥ ಹಾಗೂ ಅಸಂತೋಷಕರ ಅನುಭವಕ್ಕೆ ಒಳಗಾಗುತ್ತೀರಿ


ದೂರುವುದನ್ನು ತ್ಯಜಿಸಿ: ಇತರರನ್ನು ದೂರುವುದು ಮೂದಲಿಸುವುದು ನಿಮ್ಮ ಗುಣವಾಗಿದ್ದರೆ ಅದಕ್ಕೂ ಅಂತ್ಯ ಹಾಡಿ ಎಂದು ಮನೋಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. ಕೆಟ್ಟ ವಿಷಯಗಳ ಬಗ್ಗೆ ಮಾತನಾಡುವುದು, ಕೆಟ್ಟದ್ದರ ಬಗ್ಗೆ ಯೋಚಿಸುವುದು ಮೊದಲಾದವನ್ನು ಬಿಟ್ಟುಬಿಡಿ.


ಸಾಂದರ್ಭಿಕ ಚಿತ್ರ


ಇತರರ ಮೇಲೆ ಪ್ರಭಾವ ಬೀರುವುದು: ನಿಮ್ಮಲ್ಲಿರುವ ಐಷಾರಾಮಿ ವಸ್ತುಗಳನ್ನು ನೋಡಿ ಇತರರು ಇಷ್ಟಪಡುತ್ತಾರೆ ಎಂದು ಭಾವಿಸುವುದು ನಿಮ್ಮ ತಪ್ಪು ತಿಳುವಳಿಕೆಯಾಗಿದೆ. ಇತರರನ್ನು ಮೆಚ್ಚಿಸುವುದು ಅತೃಪ್ತಿಯ ಕೆಲಸವಾಗಿದೆ.


ಋಣಾತ್ಮಕತೆ: ಜೀವನವು ಎಂದಿಗೂ ನೀವು ಬಯಸಿದ ರೀತಿಯಲ್ಲಿ ಇರುವುದಿಲ್ಲ ಎಂಬುದನ್ನು ಅರಿತುಕೊಳ್ಳಿ. ಆದರೆ ಜೀವನದ ಬಗ್ಗೆ ಕೃತಜ್ಞತೆ ಇರಬೇಕು ಎಂದು ಮನೋಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ಅಂತೆಯೇ ಜೀವನದಲ್ಲಿ ಋಣಾತ್ಮಕತೆ ಹೋಗಿ ಧನಾತ್ಮಕ ಅಂಶ ಬಂದೇ ಬರುತ್ತದೆ




ಕೆಟ್ಟ ಜನರ ಸಹವಾಸ: ಯಾವಾಗಲೂ ಇತರರನ್ನು ದೂಷಿಸುವವರು ಹಾಗೂ ಋಣಾತ್ಮಕವಾಗಿ ಚಿಂತಿಸುವವರು ತಮ್ಮೊಳಗಿನ ಸಂತೋಷವನ್ನು ಕಂಡುಕೊಳ್ಳುವಲ್ಲಿ ಅಸಮರ್ಥರಾಗಿರುತ್ತಾರೆ. ಹಾಗಾಗಿ ಅಂತಹವರ ಸಹವಾಸವನ್ನು ಬಿಟ್ಟುಬಿಡಿ ಇಲ್ಲದಿದ್ದರೆ ಅವರ ಗುಣಗಳು ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು.

Published by:Monika N
First published: