ಖಿನ್ನತೆ, ಒತ್ತಡ ಸೇರಿದಂತೆ ಹಲವು ಸಮಸ್ಯೆಗಳಿಗೆ ಯೋಗ ಪರಿಹಾರ

news18
Updated:July 11, 2018, 7:11 PM IST
ಖಿನ್ನತೆ, ಒತ್ತಡ ಸೇರಿದಂತೆ ಹಲವು ಸಮಸ್ಯೆಗಳಿಗೆ ಯೋಗ ಪರಿಹಾರ
news18
Updated: July 11, 2018, 7:11 PM IST
-ನ್ಯೂಸ್ 18 ಕನ್ನಡ

ಸರ್ವರೋಗಕ್ಕೂ ಯೋಗವೇ ಪರಿಹಾರ ಎನ್ನಲಾಗುತ್ತಿದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯ ವೃದ್ದಿಸುತ್ತದೆ . ಹಾಗೆಯೇ ಇತ್ತೀಚಿನ ಜೀವನಶೈಲಿಯಿಂದ ಉಂಟಾಗುವ ಅನೇಕ ಕಾಯಿಲೆಗಳನ್ನು ಯೋಗದಿಂದ ದೂರ ಮಾಡಬಹುದು. ಯೋಗದಲ್ಲಿರುವ ಕೆಲವೊಂದು ಆಸನಗಳನ್ನು ಸರಿಯಾದ ಮಾರ್ಗದರ್ಶನದಲ್ಲಿ ನಿರ್ವಹಿಸಿದರೆ ಖಿನ್ನತೆ, ಮೈಗ್ರೇನ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸುವ 10 ಯೋಗ ಭಂಗಿಗಳನ್ನು ಇಲ್ಲಿ ತಿಳಿಸಲಾಗಿದೆ.

ಸೂಕ್ಷ್ಮಾಸನ : ಸಾಮಾನ್ಯವಾಗಿ 40ರ ಅಸುಪಾಸಿನಲ್ಲಿರುವ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ  ಉಂಟಾಗುತ್ತದೆ. ಇದರಿಂದ ಮೊಣಕಾಲು ನೋವು ಮತ್ತು ಬೆನ್ನು ನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಯಿಂದ ಮುಕ್ತಿ ಹೊಂದಲು ಪ್ರತಿನಿತ್ಯ ಸೂಕ್ಷ್ಮಾಸನ ಮಾಡುವುದು ಒಳಿತು.

ತಿತ್ಲಿ ಆಸನ ಅಥವಾ ಚಿಟ್ಟೆ ಭಂಗಿ : ಈ ಭಂಗಿಯಲ್ಲಿ ಯೋಗಾಸನ ಮಾಡುವುದರಿಂದ ಗರ್ಭಾಶಯದ ಸಮಸ್ಯೆಗಳನ್ನು ದೂರ ಮಾಡಬಹುದು. ಅಲ್ಲದೆ ಈ ಆಸನವನ್ನು ಪ್ರತಿನಿತ್ಯ ಮಾಡಿದರೆ ಸ್ನಾಯು ಸೆಳೆತದ ಸಮಸ್ಯೆ ದೂರವಾಗುತ್ತದೆ.

ಕಪಲಭಾತಿ ಪ್ರಾಣಯಾಮ :ಪ್ರಾಣಯಾಮ ಸ್ತ್ರೀ-ಪುರುಷರಿಗೆ ಸಮಾನ ಪ್ರಯೋನಕಾರಿ. ಇದನ್ನು ಮಾಡುವುದರಿಂದ ಶ್ವಾಸಕೋಶ ಮತ್ತು ನರಮಂಡಲದ ವ್ಯವಸ್ಥೆ ಸುಧಾರಿಸುತ್ತದೆ.

ಅನುಲೋಮ್-ವಿನುಲೋಮ್ : ಉಸಿರಾಟದ ತೊಂದರೆ, ರಕ್ತದೊತ್ತಡ ಮತ್ತು ಮಧುಮೇಹದ ನಿಯಂತ್ರಣಕ್ಕೆ ಅನುಲೋಮ್-ವಿನುಲೋಮ್ ಪ್ರಾಣಯಾಮ ಪ್ರಯೋಜನಕಾರಿಯಾಗಿದೆ.

ಭ್ರಮರಿ ಪ್ರಾಣಯಾಮ : ಈ ಪ್ರಾಣಯಾಮವನ್ನು ಪ್ರತಿನಿತ್ಯ ನಿರ್ವಹಿಸುವುದರಿಂದ ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸಬಹುದು.
Loading...

ಶೀತಲಿ ಪ್ರಾಣಯಾಮ : ಬೇಸಿಗೆ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆಯ ಸಮಸ್ಯೆಗಳಿಗೆ ಶೀತಲಿ ಪ್ರಾಣಯಾಮ ರಾಮಬಾಣ. ಆ್ಯಸಿಡಿಟಿ ಸಮಸ್ಯೆಗಳಿಗೂ ಈ ಪ್ರಾಣಯಾಮದಿಂದ ಪರಿಹಾರ ಕಾಣಬಹುದು.

ಸೂರ್ಯ ನಮಸ್ಕಾರ : ಪ್ರತಿನಿತ್ಯ ಯೋಗದಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ. ಅಲ್ಲದೆ ಮಕ್ಕಳ ಬೆಳವಣಿಗೆಯಲ್ಲೂ ಈ ಆಸನ ಪ್ರಮುಖ ಪಾತ್ರವಹಿಸುತ್ತದೆ.

ವೃಕ್ಷಾಸನ : ಈ ಆಸನವನ್ನು ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಮನ ಕೇಂದ್ರೀಕರಿಸಲು ಸಹಾಯಕವಾಗುತ್ತದೆ. ಅಲ್ಲದೆ ಖಿನ್ನತೆ ದೂರ ಮಾಡುವಲ್ಲಿಯು ವೃಕ್ಷಾಸನ ಮುಖ್ಯ ಪಾತ್ರವಹಿಸುತ್ತದೆ.

ಚಕ್ರಾಸನ : ಈ ಆಸನದಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಬಹುದು. ಪ್ರತಿನಿತ್ಯ ಈ ಆಸನವನ್ನು ನಿರ್ವಹಿಸುವುದರಿಂದ ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು.

ಹಲಾಸನ : ಹಲಾಸನ ಮಾಡುವುದರಿಂದ ಬುದ್ದಿವಂತಿಕೆ ಮತ್ತು ದೈಹಿಕ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಬಹುದು.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...