Shikakai Benefits: ಸೀಗೆಕಾಯಿ ಪುಡಿಯಲ್ಲಿ ಅಡಗಿದೆ ಕೂದಲಿಗೆ ಬೇಕಾದಂತಹ ಎಲ್ಲಾ ಪೋಷಕಾಂಶ

ಬಹಳ ಹಿಂದಿನಿಂದಲೇ ಸೀಗೆಕಾಯಿಯನ್ನು ಕೂದಲಿನ ಆರೈಕೆಗೆ ನಾವು ಬಳಸಿಕೊಂಡು ಬಂದಿದ್ದೇವೆ. ಶ್ಯಾಂಪು ಬರುವ ಮುನ್ನ ತಲೆಗೆ ಎಲ್ಲ ಮನೆಗಳಲ್ಲೂ ಶೀಗೆಕಾಯಿ ಹುಡಿಯನ್ನು ಬಳಸುತ್ತಿದ್ದರು.

ಸೀಗೆಕಾಯಿ

ಸೀಗೆಕಾಯಿ

 • Share this:
  ಬಹಳ ಹಿಂದಿನಿಂದಲೇ ಸೀಗೆಕಾಯಿಯನ್ನು (Shikakai) ಕೂದಲಿನ ಆರೈಕೆಗೆ ನಾವು ಬಳಸಿಕೊಂಡು ಬಂದಿದ್ದೇವೆ. ಶ್ಯಾಂಪು (Shampoo) ಬರುವ ಮುನ್ನ ತಲೆಗೆ (Head) ಎಲ್ಲ ಮನೆಗಳಲ್ಲೂ ಶೀಗೆಕಾಯಿ ಹುಡಿಯನ್ನು ಬಳಸುತ್ತಿದ್ದರು. ಆದರೆ ಮುಂದೆ ಕ್ರಮೇಣ ಶ್ಯಾಂಪು ಸೀಗೆಕಾಯಿಯ ಸ್ಥಾನವನ್ನುವನ್ನು ಪಡೆದುಕೊಂಡು ಇದೀಗ ಹಳ್ಳಿ ಮನೆಗಳಲ್ಲೂ ಕೂಡ ಸೀಗೆಕಾಯಿ ಹುಡಿಯನ್ನು ಬಳಸುವವರು ಕಾಣಿಸುವುದು ಕಡಿಮೆಯಾಗಿದೆ. ಆದರೆ ಯಾವುದೇ ರೀತಿಯ ರಾಸಾಯನಿಕ (Chemical) ಪದಾರ್ಥಗಳು ಇಲ್ಲದೆ ಬಳಕೆಯಾಗುವ ಈ ಸೀಗೆಕಾಯಿ ಹುಡಿಯ ಬಗ್ಗೆ ಮತ್ತು ಅದನ್ನು ಹೇಗೆ ಬಳಕೆ ಮಾಡಬೇಕು, ಅದರಿಂದ ಕೂದಲಿಗೆ ಎಷ್ಟು ಪ್ರಯೋಜನಕಾರಿ ಇಂದಿನ ಲೇಖನದಲ್ಲಿ ತಿಳಿಯೋಣ.

  ಕೂದಲ ಉದುರುವಿಕೆಯನ್ನು ನಿಯಂತ್ರಿಸುತ್ತದೆ

  ಸೀಗೆ ಕಾಯಿ ನಿಮ್ಮ ಕೂದಲು ಉದುರುವಿಕೆಯನ್ನು ನಿಯಂತ್ರಿಸುವ ಮೂಲಕ ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ. ನೆತ್ತಿನ ಚರ್ಮದ ಆಮ್ಲೀಯ - ಕ್ಷಾರೀಯ ಅಥವಾ ಪಿ ಎಚ್ ಮಟ್ಟ ಸಮತೋಲನದಲ್ಲಿರುವುದು ಕೂದಲ ಬೆಳವಣಿಗೆಗೆ ಅವಶ್ಯವಾಗಿದೆ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳ ಉಪಸ್ಥಿತಿಯು ನಿಮ್ಮ ಕೂದಲು ಸುಲಭವಾಗಿ ಮತ್ತು ಒರಟಾಗುವುದನ್ನು ತಡೆಯುತ್ತದೆ.

  ಇದನ್ನೂ ಓದಿ: Cheese Benefits: ಚೀಸ್ ಇದ್ರೆ ಆಹಾರ ರುಚಿ ಮಾತ್ರವಲ್ಲ, ಆರೋಗ್ಯಕರವೂ ಹೌದು! ಏನೇನು ಲಾಭ ಗೊತ್ತೇ?

  ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ

  ಸೀಗೆ ಕಾಯಿ ನಿಮ್ಮ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ, ನಿಮ್ಮ ನೆತ್ತಿಯ ಶುಷ್ಕತೆಯನ್ನು ತಡೆಯುತ್ತದೆ. ನಮ್ಮ ನೆತ್ತಿಯಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ಕೂದಲ ಬುಡಗಳಿವೆ. ಇವುಗಳ ಜೊತೆಗೇ ಹೆಚ್ಚಿನ ಬೆವರುಗ್ರಂಥಿಗಳೂ, ಸಬೇಶಿಯಸ್ ಗ್ರಂಥಿಗಳೂ, ವರ್ಣದ್ರವ್ಯಗಳೂ ಇವೆ.

  ಹಾಗಾಗಿ ಇವುಗಳು ಸ್ರವಿಸುವ ದ್ರವಗಳೂ ಕೂದಲ ಬುಡಗಳಲ್ಲಿ ಸಂಗ್ರಹವಾಗಿ ಒಣಗಿ ಅಥವಾ ತೇವವಿದ್ದು ಸೋಂಕಿನ ಕ್ರಿಮಿಗಳು ಆವರಿಸುವ ಸಾಧ್ಯತೆಯೂ ಹೆಚ್ಚೇ ಇರುತ್ತದೆ. ಹಾಗಾಗಿ ತಲೆಯನ್ನು ಈ ಕೊಳೆಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಚೆನ್ನಾಗಿ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ.

  ಕೂದಲ ಹೊಳಪು ಸಹಾ ಹೆಚ್ಚಿಸಿಕೊಳ್ಳಬಹುದು

  ನಿಮ್ಮ ಕೂದಲು ನೈಸರ್ಗಿಕವಾಗಿ ಬೆಳೆಯಲು ತೇವಾಂಶ ಮತ್ತು ಪ್ರೋಟೀನ್ ಅಗತ್ಯವಿದೆ. ಹೇರ್ ಮಾಸ್ಕ್ ಮಾಡಲು ನೀವು ಶಿಕಾಕೈಯನ್ನು ಗೋರಂಟಿ ಮತ್ತು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಬಹುದು. ಇದು ಕೂದಲಿಗೆ ಹೆಚ್ಚಿನ ಹೊಳಪನ್ನು ನೀಡುತ್ತದೆ ಹಾಗೂ ಸೌಮ್ಯವಾಗಿಸುತ್ತದೆ.

  ಸೀಗೆಪುಡಿಯನ್ನು ಕೊಂಚ ನೀರಿನೊಂದಿಗೆ ಬೆರೆಸಿ ದಪ್ಪನಾದ ಲೇಪನವಾಗಿಸಿ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಅಥವಾ ಕೂದಲನ್ನು ಸ್ವಚ್ಛಗೊಳಿಸುವ ಮಾರ್ಜಕದಂತೆ ಬಳಸಿದಾಗ ಕೂದಲು ಸೌಮ್ಯವಾಗುತ್ತದೆ ಹಾಗೂ ಸಿಕ್ಕುಗಳಿಲ್ಲದೇ, ಇದ್ದರೆ ಸುಲಭವಾಗಿ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಸ್ನಾನದ ಬಳಿಕ ಕೂದಲ ಹೊಳಪು ಸಹಾ ಹೆಚ್ಚುತ್ತದೆ.

  ನೈಸರ್ಗಿಕ ಕೂದಲು ಕ್ಲೆನ್ಸರ್ ಆಗಿ ಬಳಸಬಹುದು.

  ಸೀಗೆ ಹುಡಿ ಒಂದು ನೈಸರ್ಗಿಕ ಕೂದಲು ಕ್ಲೆನ್ಸರ್ ಆಗಿದ್ದು, ಇದು ಇತರ ರಾಸಾಯನಿಕಯುಕ್ತ ಸೋಪ್ ಅಥವಾ ಡಿಟರ್ಜೆಂಟ್‌ಗಳಂತೆ ಕೂದಲಿಗೆ ಹಾನಿಯಾಗದಂತೆ ನೆತ್ತಿಯಿಂದ ಎಲ್ಲಾ ಕೊಳಕು, ಮಾಲಿನ್ಯಕಾರಕಗಳು ಮತ್ತು ಕಲ್ಮಶಗಳನ್ನು ಸ್ವಚ್ಛಗೊಳಿಸುತ್ತದೆ. ಜೊತೆಗೆ, ಇದು ಸ್ನಾನದ ನಂತರ ನೆತ್ತಿಯನ್ನು ಶುಷ್ಕ ಮತ್ತು ತುರಿಕೆಗೆ ಬಿಡದೆ ಮೇದಸ್ಸಿನ ಗ್ರಂಥಿಗಳಿಂದ ನೈಸರ್ಗಿಕ ಎಣ್ಣೆಯ ಅಂಶವನ್ನು ಉಳಿಸಿಕೊಳ್ಳುತ್ತದೆ.

  ಇದನ್ನೂ ಓದಿ: Garlic And Ginger Paste: ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಬೆಳವಣಿಗೆ ತಡೆಯುತ್ತೆ ಶುಂಠಿ-ಬೆಳ್ಳುಳ್ಳಿ

  ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ

  ತಲೆಹೊಟ್ಟಿನ ಸಮಸ್ಯೆಯೇ ಹೆಚ್ಚಿನ ಜನರ ದೊಡ್ಡ ತಲೆನೋವು ಎಂದರೆ ತಪ್ಪಲ್ಲ. ಇದಕ್ಕೆ ಚಿಕಿತ್ಸೆ ಪಡೆದು ಕೆಲ ದಿನಗಳ ಕಾಲ ತಲೆಹೊಟ್ಟಿನಿಂದ ಮುಕ್ತಿ ಪಡೆದವರಿದ್ದಾರೆ. ಇದರ ಶಿಲೀಂಧ್ರನಿವಾರಕ ಗುಣ ಮತ್ತು ಅವಶ್ಯಕ ಪೋಷಕಾಂಶಗಳು ನೆತ್ತಿಯ ಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ.

  ಇದೇ ಕಾರಣದಿಂದ ನೆತ್ತಿಯ ಚರ್ಮದಲ್ಲಿ ಒಣಗಿ ಪಕಳೆಯೇಳುತ್ತಿದ್ದ ಹೊರಪದರ ಸುಲಭವಾಗಿ ಕಳಚಿಕೊಂಡು ನಿವಾರಣೆಯಾಗಲು ಮತ್ತು ಹೊಸಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ತಲೆಹೊಟ್ಟು ಇಲ್ಲವಾಗಿ ಇದರ ಮೂಲಕ ಕಿರಿಕಿರಿಗೆ ಕಾರಣವಾಗಿದ್ದ ತುರಿಕೆಯೂ ಇಲ್ಲವಾಗುತ್ತದೆ.
  Published by:Swathi Nayak
  First published: