Health Tips: ಋತುಚಕ್ರದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ, ಪಿರಿಯಡ್ಸ್​ಗೂ ಮುನ್ನ ಈ ಆಹಾರಗಳನ್ನ ತಿನ್ನೋದು ಉತ್ತಮ

ಮಟ್ಟಿಲುಗಳನ್ನು ಹತ್ತುವುದರಿಂದ ಕ್ಯಾಲೋರಿ ದಹಿಸಿ, ಹೃದಯವನ್ನು ಬಲಿಷ್ಠವನ್ನಾಗಿ ಮಾಡಬಹುದು. ಇದು ಜಾಗಿಂಗ್ ಸೈಕ್ಲಿಂಗ್, ಸ್ವಿಮ್ಮಿಂಗ್ ಅಥವಾ ಇತರ ಯಾವುದೇ ವ್ಯಾಯಾಮಕ್ಕಿಂತಲೂ ಒಳ್ಳೆಯದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತಮ ಆರೋಗ್ಯ ಪಡೆಯಲು ದಿನವೆಲ್ಲಾ ಜಿಮ್, ವರ್ಕೌಟ್,(Workout) ಡಯಟ್ ಅಂತೆಲ್ಲಾ ಫಾಲೋ ಮಾಡಲು ಕಷ್ಟ (Struggling) ಪಡುವವರು ಕೆಲವು ಸಣ್ಣ ಸಣ್ಣ ಕೆಲಸಗಳಿಂದಲೂ ಸಹ ದೇಹದಲ್ಲಿ ಬೇಡದಿರುವ ಕೊಬ್ಬನ್ನು ಕರಗಿಸಬಹುದು. ಈಗಿನವರಲ್ಲಿ ವಯಸ್ಸಿನ ಮಿತಿಯಿಲ್ಲದೇ ಬೊಜ್ಜು, ಮಧುಮೇಹ(Diabetes), ಬಿಪಿ ಇಂತಹ ಸಮಸ್ಯೆಗಳು ಸಹಜವಾಗಿ ಬಿಟ್ಟಿವೆ. ಇವು ನಮ್ಮ ಜೀವನ ಶೈಲಿ,(Lifestyle) ಆಹಾರ ಸೇವನೆ, ಕೆಲಸದ ಒತ್ತಡ ಇವೆಲ್ಲಾ ಅಂಶಗಳು ಈ ಕಾಯಿಲೆಗಳಿಗೆ ಕಾರಣವಾಗಿವೆ. ಇವುಗಳನ್ನು ನಿಯಂತ್ರಿಸಲು ಅಥವಾ ಅವುಗಳು ಬಾರದಂತೆ ಎಚ್ಚರ ವಹಿಸಲು ಅನೇಕ ಮಾರ್ಗಗಳಿವೆ. ಇವುಗಳನ್ನೆಲ್ಲ ಅನುಸರಿಸುವುದು ಆರೋಗ್ಯವಂತ ದೇಹಕ್ಕೆ (Healthy Body) ಸಿಂಪಲ್ ಸೂತ್ರ ಎನ್ನಬಹುದು.

ಲಿಫ್ಟ್ ಬದಲಿಗೆ ಮೆಟ್ಟಿಲು ಬಳಸಿ
ವ್ಯಾಯಾಮ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಜಾಗಿಂಗ್, ವಾಕಿಂಗ್ ಆರೋಗ್ಯವಂತ ಜೀವನ ನಡೆಸಲು ಸಹಕಾರಿ. ನಡೆಯುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳು ಹಲವು. ನಾವು ಸುಮ್ಮನೇ ಒಂದೇ ಜಾಗದಲ್ಲಿ ಕೂತು ಕಾಲಕಳೆಯುವುದಕ್ಕಿಂತ ಅನುಕೂಲ ಸಂದರ್ಭದಲ್ಲಿ ನಡೆಯುವುದು ಉತ್ತಮ. ಫೋನ್‌ನಲ್ಲಿ ಮಾತಾಡುವಾಗ ಓಡಾಡುತ್ತಾ ಮಾತನಾಡುವುದು, ಲಿಫ್ಟ್ ಇರುವ ಕಡೆ ಲಿಫ್ಟ್ ಬಳಸದೇ ಮೆಟ್ಟಿಲು ಹತ್ತಿ ಹೋಗುವುದು ದೇಹಕ್ಕೆ ವ್ಯಾಯಾಮ ಒದಗಿಸುತ್ತದೆ.

ಈ ಮೆಟ್ಟಿಲು ಹತ್ತುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತಾ ಗೊತ್ತಾದ್ರೆ ಸ್ವತ: ನೀವೇ ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಸುತ್ತೀರಾ ನೋಡಿ. ಇತ್ತೀಚಿನ ವರದಿಯ ಪ್ರಕಾರ ಮಟ್ಟಿಲುಗಳನ್ನು ಹತ್ತುವುದರಿಂದ ಕ್ಯಾಲೋರಿ ದಹಿಸಿ, ಹೃದಯವನ್ನು ಬಲಿಷ್ಠವನ್ನಾಗಿ ಮಾಡಬಹುದು. ಇದು ಜಾಗಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್, ಅಥವಾ ಇತರ ಯಾವುದೇ ವ್ಯಾಯಾಮಕ್ಕಿಂತಲೂ ಒಳ್ಳೆಯದು.

ಇದನ್ನೂ ಓದಿ: Vitamin D ಸಪ್ಲಿಮೆಂಟ್ಸ್‌ ತೆಗೆದುಕೊಳ್ತಿದ್ರೆ ಹುಷಾರಾಗಿರಿ... ಯಾಕೆ ಅಂತಾ ಈ ಸ್ಟೋರಿ ಓದಿ..!

ಹಾಗಾದರೆ ಈ ಬಗ್ಗೆ ತಜ್ಞರು ನೀಡಿರುವ ವರದಿ ಇಲ್ಲಿದೆ. 3 ನಿಮಿಷಗಳ ಕಾಲದ ಮೆಟ್ಟಿಲುಗಳ ನಡಿಗೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು 10 ನಿಮಿಷಗಳ ಕಾಲದ ಮೆಟ್ಟಿಲು ಹತ್ತುವಿಕೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಕರಿಸುತ್ತದೆ ಎಂದು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ.

ವ್ಯಾಯಾಮದ ಪರಿಣಾಮ
1, 3, ಅಥವಾ 10 ನಿಮಿಷಗಳ ಕಾಲ ಮೆಟ್ಟಿಲು ಹತ್ತುವುದರಿಂದ ದೇಹದಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ ಪ್ರಮಾಣ ಸುಧಾರಿಸಲಿಲ್ಲ ಎಂದು ನ್ಯೂಟ್ರಿಷನ್, ಮೆಟಾಬಾಲಿಸಮ್ ಜರ್ನಲ್‌ ಅಧ್ಯಯನವು ತಿಳಿಸಿದೆ. ಜೆಫ್ ಮೂರ್, ಸ್ಕೂಲ್ ಆಫ್ ಎಕ್ಸರ್ಸೈಸ್ ಅಂಡ್ ನ್ಯೂಟ್ರಿಷನಲ್ ಸೈನ್ಸಸ್, ಸ್ಯಾನ್ ಡಿಯಾಗೋ ಸ್ಟೇಟ್ ಯೂನಿವರ್ಸಿಟಿ, ಸ್ಯಾನ್ ಡಿಯಾಗೋ, CA, USA ಮತ್ತು ಸಹೋದ್ಯೋಗಿಗಳು ಗ್ಲೈಸೆಮಿಕ್ ಪ್ರತಿಕ್ರಿಯೆ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ ಸಾಮರ್ಥ್ಯದ ಮೇಲೆ ಮೆಟ್ಟಿಲು ವ್ಯಾಯಾಮದ ಪರಿಣಾಮವನ್ನು ಪರೀಕ್ಷಿಸುವ ಉದ್ದೇಶದಿಂದ ಅಧ್ಯಯನ ನಡೆಸಿದರು.

ಈ ಅಧ್ಯಯನಕ್ಕಾಗಿ 30 ಜನ (ಮಹಿಳೆಯರು - 12) 1, 3 ಮತ್ತು 10 ನಿಮಿಷಗಳ ವಿಶ್ರಾಂತಿ ಅಥವಾ ಮೆಟ್ಟಿಲುಗಳ ವಾಕಿಂಗ್ ಪಂದ್ಯಗಳಲ್ಲಿ 4 OGTT ಗಳನ್ನು ಪೂರ್ಣಗೊಳಿಸಿದರು. OGTT ಸಮಯದಲ್ಲಿ, 30 ನಿಮಿಷಗಳಲ್ಲಿ ರಕ್ತವನ್ನು ಸಂಗ್ರಹಿಸಿ ಮತ್ತು ಗ್ಲೂಕೋಸ್, ಇನ್ಸುಲಿನ್, TAC ಮತ್ತು ಲ್ಯಾಕ್ಟೇಟ್‌ಗಳಾಗಿ ವಿಶ್ಲೇಷಿಸಲಾಯಿತು.

ಸಂಶೋಧನೆಯ ಆಧಾರದ ಮೇಲೆ

1) 10 ನಿಮಿಷ ನಡಿಗೆಯಿಂದ ಗ್ಲೂಕೋಸ್ ಸಾಂದ್ರತೆಯು ಕಡಿಮೆಯಾಗಿದೆ. (−22.69 mg/dL) ಮತ್ತು 3 ನಿಮಿಷ (−15.37 mg/dL), 1 ನಿಮಿಷದಲ್ಲಿ (-6.18 mg/dL) ಆಗಿದೆ.

2)10 ನಿಮಿಷ (-6.11) ಮತ್ತು 3 ನಿಮಿಷ (−2.589 μIU/dL) ನಡಿಗೆ ನಂತರ ಇನ್ಸುಲಿನ್ ಸಾಂದ್ರತೆಯು ಕಡಿಮೆಯಾಗಿದೆ .

3) ಇನ್ಸುಲಿನ್ ಸೆನ್ಸಿಟಿವಿಟಿ ಇಂಡೆಕ್ಸ್ ಮೌಲ್ಯಗಳು 10-ನಿಮಿಷದ ಪ್ರಯೋಗದಲ್ಲಿ (1.81) ಗಮನಾರ್ಹ ಹೆಚ್ಚಳವನ್ನು ತೋರಿಸಿದೆ, ಆದರೆ 3 ನಿಮಿಷ (0.65) ಅಥವಾ 1 ನಿಮಿಷ ಪ್ರಯೋಗ (0.13) ಸಮಯದಲ್ಲಿ ಇಳಿಕೆಯಾಗಿದೆ.

ಇದನ್ನೂ ಓದಿ: Zinc ಇರೋ ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!

4)ರಕ್ತದ ಲ್ಯಾಕ್ಟೇಟ್ (p = 0.621, η2 = 0.02) ಪ್ರಯೋಗದ ಸಂದರ್ಭ ಯಾವುದೇ ಪರಸ್ಪರ ಕ್ರಿಯೆ ನೀಡಿಲ್ಲ. ಗರಿಷ್ಠ 3 ನಿಮಿಷಗಳಷ್ಟು ಮಟ್ಟಿಲು ಹತ್ತುವಿಕೆ ಆಹಾರದ ನಂತರದ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟಗಳಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಆದರೆ ಪ್ರಮಾಣಿತ ಗ್ಲೂಕೋಸ್ ಅನುಸರಿಸಿ ಇನ್ಸುಲಿನ್ ಸಂವೇದನೆ ಹೆಚ್ಚಿಸಲು 10 ನಿಮಿಷ ಮೆಟ್ಟಿಲು ನಡಿಗೆ ಅಗತ್ಯವಿದೆ ಎಂದು ವರದಿ ಬಹಿರಂಗಪಡಿಸಿದೆ. ಈ ಕ್ರಮ ಒಟ್ಟು ಉತ್ಕರ್ಷಣ ನಿರೋಧಕ ಸಾಮರ್ಥ್ಯದ (TAC) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಒಟ್ಟಾರೆ 10 ನಿಮಿಷಗಳ ಕಾಲ ಮೆಟ್ಟಿಲು ಹತ್ತುವ ಮೂಲಕ ನಡಿಗೆ ಮಾಡಿದರೆ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಎಂದು ನ್ಯೂಟ್ರಿಷನ್, ಮೆಟಾಬಾಲಿಸಮ್ ಮತ್ತು ಕಾರ್ಡಿಯೋವಾಸ್ಕುಲರ್ ಡಿಸೀಸ್ ಜರ್ನಲ್ ತಿಳಿಸಿದೆ .
Published by:vanithasanjevani vanithasanjevani
First published: