ಪಾದಗಳ ಬಿರುಕು ಇಲ್ಲವೇ ಹಿಮ್ಮಡಿ ಒಡೆಯುವುದು ಸರ್ವೇ ಸಾಮಾನ್ಯವಾಗಿದೆ. ಹಿಮ್ಮಡಿ ಒಡೆಯುವುದರಿಂದ ನಾವು ಸಾರ್ವಜನಿಕವಾಗಿ ಕೂಡ ಕೆಲವೊಂದು ಮುಜುಗರದ ಸನ್ನಿವೇಶಗಳನ್ನು ಅನುಭವಿಸಬೇಕಾಗುತ್ತದೆ. ಸುಂದರವಾದ ಪಾದವಿದ್ದು ಹಿಮ್ಮಡಿ ಒಡೆದಿದ್ದರೆ ಅದು ಪಾದಗಳ ಸೌಂದರ್ಯವನ್ನೇ ಹಾಳುಗೆಡವುತ್ತದೆ. ನೀವು ಮುಖಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೀರೋ ಅಷ್ಟೇ ಮಹತ್ವವನ್ನು ಪಾದಗಳಿಗೆ ನೀಡಬೇಕು. ಹಾಗಿದ್ದರೆ ಒಡೆದ ಹಿಮ್ಮಡಿ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಪರಿಹಾರಗಳನ್ನು ನೀಡುತ್ತಿದ್ದೇವೆ. ಅದು ಏನು ಎಂಬುದನ್ನು ನೋಡೋಣ.
ಲಿಸ್ಟರೀನ್ ಮತ್ತು ವಿನೇಗರ್:
ಒಂದು ಕಪ್ ಲಿಸ್ಟರೀನ್ ಹಾಗೂ ಒಂದು ಕಪ್ ವಿನೇಗರ್ ಅನ್ನು 2 ಕಪ್ ನೀರಿನಲ್ಲಿ ಮಿಶ್ರ ಮಾಡಿ
ಈ ಮಿಶ್ರಣದಲ್ಲಿ ನಿಮ್ಮ ಕಾಲುಗಳನ್ನು 15 ನಿಮಿಷ ನೆನೆಯಿಸಿ
ನಿಮ್ಮ ಕಾಲುಗಳನ್ನು ಹೊರತೆಗೆಯಿರಿ, ನಂತರ ಬ್ರಶ್ ಇಲ್ಲವೇ ಪ್ಯುಮೈಸ್ ಸ್ಟೋನ್ನಿಂದ ಡೆಡ್ ಸ್ಕಿನ್ ಅನ್ನು ನಿವಾರಿಸಿ
ಸ್ವಚ್ಛ ನೀರಿನಿಂದ ಕಾಲುಗಳನ್ನು ತೊಳೆದುಕೊಳ್ಳಿ
ಕಾಲುಗಳನ್ನು ಒಣಗಿಸಿ ಮಾಯಿಶ್ಚರೈಸ್ ಮಾಡಿ
ಅಕ್ಕಿಹುಡಿ, ಜೇನು ಮತ್ತು ವಿನೇಗರ್:
3 ಚಮಚ ಅಕ್ಕಿಹುಡಿ, ಒಂದು ಚಮಚ ಜೇನು, 2-3 ಹನಿ ಆಪಲ್ ಸೀಡಲ್ ವಿನೇಗರ್ ಬಳಸಿಕೊಂಡು ಸ್ಕ್ರಬ್ ತಯಾರಿಸಿ
ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಕಾಲುಗಳನ್ನು ಮುಳುಗಿಸಿ ನಂತರ ಮೃತ ಚರ್ಮವನ್ನು ನಿವಾರಿಸಲು ಪೇಸ್ಟ್ ಬಳಸಿ ಪಾದಗಳಿಗೆ ಉಜ್ಜಿ
ಬಾಳೆಹಣ್ಣು:
2 ಬಾಳೆಹಣ್ಣುಗಳಿಂದ ಮೃದುವಾದ ಪೇಸ್ಟ್ ತಯಾರಿಸಿ. ಬಾಳೆ ಕಾಯಿ ಬೇಡ. ಏಕೆಂದರೆ ಅದರಲ್ಲಿ ಆ್ಯಸಿಡ್ ಇರುವುದರಿಂದ ಇದು ಪಾದಗಳಿಗೆ ಹಾನಿಯನ್ನುಂಟು ಮಾಡಬಹುದು
ಈ ಪೇಸ್ಟ್ ಅನ್ನು ನಿಮ್ಮ ಪಾದಗಳಿಗೆ ಹಚ್ಚಿ ಉಜ್ಜಿ. ಕಾಲ್ಬೆರಳು ಮತ್ತು ಉಗುರಿಗೂ ಇದನ್ನು ಹಚ್ಚಿ ಮಸಾಜ್ ಮಾಡಿ. 20 ನಿಮಿಷ ಹಾಗೆಯೇ ಬಿಡಿ
20 ನಿಮಿಷಗಳ ನಂತರ ನೀರಿನಿಂದ ಕಾಲುಗಳನ್ನು ತೊಳೆದುಕೊಳ್ಳಿ
ಜೇನು:
ಒಂದು ಟಬ್ ನೀರಿಗೆ ಒಂದು ಕಪ್ ಜೇನು ಸೇರಿಸಿ
ನಿಮ್ಮ ಕಾಲುಗಳನ್ನು ಈ ಮಿಶ್ರಣದಲ್ಲಿ ಮುಳುಗಿಸಿ, 20 ನಿಮಿಷಗಳ ಕಾಲ ಮಸಾಜ್ ಮಾಡಿ
ಪ್ಯುಮೈಸ್ ಸ್ಟೋನ್ ಇಲ್ಲವೇ ಬ್ರಶ್ ಬಳಸಿಕೊಂಡು ಎಕ್ಸ್ಪೋಲಿಯೇಟ್ ಮಾಡಿ
ಪಾದಗಳನ್ನು ಒಣಗಿಸಿ ಮಾಯಿಶ್ಚರೈಸರ್ ಹಚ್ಚಿ
ಸಸ್ಯದ ಎಣ್ಣೆ (ವೆಜಿಟೇಬಲ್ ಆಯಿಲ್):
ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿ
ಟವಲ್ ಬಳಸಿ ಪಾದಗಳನ್ನುಒಣಗಿಸಿ
ನಿಮ್ಮ ಪಾದ ಮತ್ತು ಬೆರಳುಗಳಿಗೆ ವೆಜಿಟೇಬಲ್ ಎಣ್ಣೆಯನ್ನು ದಪ್ಪಗೆ ಹಚ್ಚಿ
ಸಾಕ್ಸ್ಗಳನ್ನು ಕಾಲುಗಳಿಗೆ ಹಾಕಿ ಮತ್ತು ರಾತ್ರಿಪೂರ್ತಿ ಹಾಗೆಯೇ ಬಿಡಿ
ವಿಕ್ಸ್ ವಾಪೊರಬ್:
ಮಲಗುವ ಮುನ್ನ ವಿಕ್ಸ್ ವಾಪೊರಬ್ ಅನ್ನು ನಿಮ್ಮ ಪಾದಗಳಿಗೆ ಹಚ್ಚಿ
5 ನಿಮಿಷ ಮಸಾಜ್ ಮಾಡಿ, ನಂತರ ಸಾಕ್ಸ್ ಹಾಕಿಕೊಳ್ಳಿ
ಬೆಳಗ್ಗೆ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ
ಬೇಕಿಂಗ್ ಸೋಡ:
ಒಂದು ಪಾತ್ರೆ ಉಗುರು ಬೆಚ್ಚಗಿನ ನೀರಿಗೆ 3 ಚಮಚ ಬೇಕಿಂಗ್ ಸೋಡಾ ಬೆರೆಸಿ. ಸೋಡಾ ನೀರಿನಲ್ಲಿ ಕರಗಲಿ
ಈ ಮಿಶ್ರಣದಲ್ಲಿ ಕಾಲುಗಳನ್ನು 15 ನಿಮಿಷ ಮುಳುಗಿಸಿ
ನಿಮ್ಮ ಕಾಲುಗಳನ್ನು ಹೊರತೆಗೆಯಿರಿ, ನಂತರ ಪ್ಯುಮೈಸ್ ಕಲ್ಲಿನಿಂದ ಕಾಲುಗಳನ್ನು ತಿಕ್ಕಿ
ನೀರಿನಿಂದ ಪಾದ ತೊಳೆಯಿರಿ, ಟವೆಲ್ನಿಂದ ಕಾಲುಗಳನ್ನು ಒರೆಸಿಕೊಳ್ಳಿ.
ಮೇಲೆ ತಿಳಿಸಿದ ವಿಧಾನಗಳಿಂದ ನಿಮ್ಮ ಕಾಲುಗಳ ಒಡೆದ ಹಿಮ್ಮಡಿಯನ್ನು ರಿಪೇರಿ ಮಾಡಿಕೊಳ್ಳಬಹುದಾಗಿದೆ. ಈ ವಿಧಾನಗಳನ್ನು ನಿತ್ಯವೂ ಅನುಸರಿಸಿ ಇದರಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ