Weight Loss Tips: ಸಣ್ಣಗಾಗಲು ಮಲಗುವ ಮುನ್ನ ಈ 10 ಕೆಲಸಗಳಲ್ಲಿ ಕೆಲವನ್ನಾದ್ರೂ ತಪ್ಪದೇ ಮಾಡಿ!

ಪ್ರತಿದಿನ ನಿಗದಿತ ಸಮಯಕ್ಕೆ ನಿದ್ರಿಸುವುದನ್ನು ಅಭ್ಯಾಸ ಮಾಡಿಕೊಂಡರೆ ದೇಹವು ಅದಕ್ಕೆ ಹೊಂದಿಕೊಳ್ಳುತ್ತದೆ. ರಾತ್ರಿ ಹೊತ್ತು ದೇಹ ಹೀಲ್ ಆಗುವುದಲ್ಲದೇ ರಿಪೇರ್​ ಕೂಡ ಆಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  for weight loss and better sleep: ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಎಂದಿಗೂ ಮುಗಿಯದ ಪ್ರಕ್ರಿಯೆ. ಬೆಳಿಗ್ಗೆ ಮೊದಲು ಮಾಡಬೇಕಾದ ಅನೇಕ ಕೆಲಸಗಳಿವೆ, ಉದಾಹರಣೆಗೆ ವ್ಯಾಯಾಮ ಮತ್ತು ಉತ್ತಮ ಆರೋಗ್ಯಕರ ಊಟ ಮುಖ್ಯವಾಗುತ್ತದೆ. ಅಲ್ಲದೇ ರಾತ್ರಿ ಸಮಯದ ಕೆಲವು ಉತ್ತಮ ಅಭ್ಯಾಸಗಳು ನಿಮ್ಮ ದೇಹ ತೂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ನಿಮಗೆ ಸುಖ ನಿದ್ರೆಯೊಟ್ಟಿಗೆ ಆರೋಗ್ಯವನ್ನು ಕೂಡ ನೀಡುತ್ತದೆ. ಈ ನಿಟ್ಟಿನಲ್ಲಿ ರಾತ್ರಿ ಮಲಗುವ ಮುನ್ನ ಅಳವಡಿಸಿಕೊಳ್ಳಲೇಬೇಕಾದ 10 ಅಭ್ಯಾಸಗಳು ಇಲ್ಲಿವೆ ನೋಡಿ.


  1. ಹಲ್ಲುಜ್ಜುವುದು:ಊಟದ ನಂತರ ಮತ್ತು ಮಲಗುವ ಮುನ್ನ ಹಲ್ಲು ಉಜ್ಜುವ ಅಭ್ಯಾಸವಿದ್ದರೆ ಉತ್ತಮ. ಇದರಿಂದ ದಂತ ಕ್ಷಯ, ದಂತ ಕುಳಿ, ಬಾಯಿ ವಾಸನೆ, ಸೋಂಕಿನಂತಹ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಇಲ್ಲವಾದರೇ ಆಹಾರದ ಕಣಗಳು ರಾತ್ರಿಯ ಹೊತ್ತು ಹಲ್ಲಿನಲ್ಲಿ ಸೇರಿಕೊಂಡು ದಂತದ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು.


  2. ತಡರಾತ್ರಿ ಕುರುಕಲು ಸೇವನೆ ಬೇಡ:2017 ರಲ್ಲಿ ಮೆಕ್ಸಿಕೋ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ತಡ ರಾತ್ರಿ ಕುರುಕಲು ಸೇವನೆಯ ಪರಿಣಾಮಗಳನ್ನು ತಿಳಿಸಿದೆ. ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆಯಂತಹ ಮಾರಕ ಕಾಯಿಲೆ ತರಬಹುದು ಎಂದಿದೆ. ಈ ಸೇವನೆ ದೇಹದ ಜೈವಿಕ ಕಾರ್ಯಕ್ಷಮತೆ ಕಡಿಮೆ ಮಾಡುತ್ತದೆ. ಇದು ರಕ್ತನಾಳ, ಹೃದಯದ ಸಮಸ್ಯೆ, ಚರ್ಮಕ್ಕೆ ಹಾನಿ ತರಬಹುದು ಎನ್ನುತ್ತವೆ ಸಂಶೋಧನೆಗಳು. ಬಾರ್ಸೋಲಿನ ಇನ್​ಸ್ಟಿಟ್ಯೂಟ್​ ಫಾರ್ ಗ್ಲೋಬಲ್ ಹೆಲ್ತ್​ನ ಸಂಶೋಧನೆ ಪ್ರಕಾರ ಊಟವಾದ ತಕ್ಷಣ ನಿದ್ದಗೆ ಜಾರುವುದು ಸ್ತನ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ನಾರಿನಂಶವಿರುವ ಆಹಾರ ಸೇವಿಸಿ ಆರೋಗ್ಯಕರವಾಗಿರಿ.


  3. ಮಲಗುವ ಮುನ್ನ ಮುಖ ತೊಳೆಯಿರಿ: ಮೇಕಪ್​ ತೆಗೆದು ಮುಖ ತೊಳೆದು ನಿದ್ರಿಸುವುದು ಒಳಿತು. ಇಲ್ಲವಾದರೇ ಮೇಕಪ್​ನ ಕಣಗಳು ಚರ್ಮವನ್ನು ಹಾನಿ ಮಾಡುತ್ತವೆ. ಮೇಕಪ್ ತೆಗೆದ ಬಳಿಕ ರಾತ್ರಿ ತ್ವಚೆ ತಾನೇ ತಾನಾಗಿ ಹೀಲ್ ಆಗುತ್ತದೆ.


  4. ಕಾಫಿ ಸೇವನೆ ಬೇಡ: ಕೊಲೊರಾಡೋ ಬೌಲ್ಡರ್ ಮತ್ತು ಇಂಗ್ಲೆಂಡಿನ ಕೇಂಬ್ರಿಡ್ಜ್‌ನಲ್ಲಿರುವ ವೈದ್ಯಕೀಯ ಸಂಶೋಧನಾ ಮಂಡಳಿಯ ಆಣ್ವಿಕ ಜೀವಶಾಸ್ತ್ರ ಪ್ರಯೋಗಾಲಯದ ಸಂಶೋಧನೆ ಹೀಗೆ ಹೇಳುತ್ತದೆ. ಕೆಫೀನ್ ಆಂತರಿಕ ಸಿರ್ಕಾಡಿಯನ್ ಗಡಿಯಾರವನ್ನು ವಿಳಂಬಗೊಳಿಸುತ್ತದೆ. ಯಾವಾಗ ನಿದ್ರಿಸಬೇಕು? ಎಚ್ಚರವಾಗಬೇಕು ಎನ್ನುವುದರ ಸಾಮ್ಯತೆ ಸಾಧಿಸಲು ಸಿಕಾರ್ಡಿಯನ್ ಅವಶ್ಯಕ.


  5. ಪ್ರತಿದಿನ ನಿಗದಿತ ಸಮಯಕ್ಕೆ ನಿದ್ರಿಸಿ: ಪ್ರತಿದಿನ ನಿಗದಿತ ಸಮಯಕ್ಕೆ ನಿದ್ರಿಸುವುದನ್ನು ಅಭ್ಯಾಸ ಮಾಡಿಕೊಂಡರೆ ದೇಹವು ಅದಕ್ಕೆ ಹೊಂದಿಕೊಳ್ಳುತ್ತದೆ. ರಾತ್ರಿ ಹೊತ್ತು ದೇಹ ಹೀಲ್ ಆಗುವುದಲ್ಲದೇ ರಿಪೇರ್​ ಕೂಡ ಆಗುತ್ತದೆ. ಇದರಲ್ಲಿ ವ್ಯತ್ಯಾಸವಾದರೇ ಅನಾರೋಗ್ಯ ಉಂಟಾಗುತ್ತದೆ. ವೀಕೆಂಡ್ ಮತ್ತು ರಜೆದಿನಗಳಲ್ಲೂ ಸರಿಯಾದ ಸಮಯಕ್ಕೆ ನಿದ್ರಿಸುವುದು ಒಳಿತು.


  ಇದನ್ನೂ ಓದಿ: Weight Loss Tips: ಸಾಮಾನ್ಯವಾಗಿ ತಿನ್ನುವ ಈ 5 ತಿಂಡಿಗಳನ್ನು ಬಿಟ್ಟರೆ ಸಾಕು ತೂಕ ಸುಲಭವಾಗಿ ಇಳಿಯುತ್ತೆ

  6. ಮೌತ್​ವಾಶ್​ ಬಳಸಿ :ನಿದಿರೆ ಮಾಡುವಾಗ ನೀವು ಕಡಿಮೆ ಎಂಜಲನ್ನು ಉತ್ಪತ್ತಿ ಮಾಡುವಿರಿ. ಇದು ಕೀಟಾಣು ಉತ್ಪತ್ತಿ ಮಾಡುವ ರಾಸಾಯನಿಕವನ್ನು ತಟಸ್ಥಗೊಳಿಸುವುದು. ಇದರಿಂದ ಹಲ್ಲು ಕೊಳೆಯಬಹುದು. ಮೌತ್​ವಾಶ್​ ಬಳಕೆಯಿಂದ ಲಾಲಾರಸದ ಕೊರತೆ ನೀಗಿ ಹೆಚ್ಚಿನ ರಕ್ಷಣೆ ಸಿಗುತ್ತದೆ. ಬ್ಯಾಕ್ಟೀರಿಯಾವನ್ನು ಸಹ ಕಡಿಮೆ ಮಾಡುತ್ತದೆ.


  7. ಯೋಗಾಭ್ಯಾಸವಿರಲಿ :ನಿದ್ರೆ ಮಾಡುವ ಮುನ್ನ ಯೋಗ ಮಾಡುವುದನ್ನು ಸಲಹೆ ನೀಡುವುದಿಲ್ಲ. ಆದರೆ ಸಣ್ಣ ಧ್ಯಾನ , ಚಿಕ್ಕ ಆಸನಗಳಾದ ಹಲಾಸನ, ಬಾಲಾಸನಗಳನ್ನು ಮಾಡುವುದು ನಿದಿರಿಗೆ ಪ್ರಯೋಜನಕಾರಿ.


  8. ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ:ಮಲಗುವ 20 ರಿಂದ 30 ನಿಮಿಷಗಳ ಮೊದಲು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಸುಖ ನಿದ್ರೆಗೆ ಪ್ರಯೋಜನಕಾರಿ. ಇದು ಸ್ನಾಯು ಮತ್ತು ನರಗಳಿಗೆ ರಿಲ್ಯಾಕ್ಸ್ ನೀಡುತ್ತದೆ. ಅಲ್ಲದೇ ಸರಾಗ ರಕ್ತ ಸಂಚಾರಕ್ಕೆ ನೆರವಾಗುವುದು. ದೇಹದ ಉಷ್ಣತೆಯ ಕುಸಿತವೂ ಆರಾಮದಾಯಕವಾಗಿದ್ದು, ನಿಧಾನವಾಗಿ ಡೀಟಾಕ್ಸ್ ಆಗುತ್ತದೆ.


  9. ಸರಿಯಾದ ಆಹಾರ ಕ್ರಮವಿರಲಿ:ಬಾದಾಮಿ, ಏಲಕ್ಕಿ ಟೀ, ಅರಿಶಿಣದ ಹಾಲು, ವಾಲ್​ನಟ್, ಚೆರ್ರಿ ಜ್ಯೂಸ್ ಮತ್ತು ಪ್ಯಾಷನ್ ಹಣ್ಣಿನ ಟೀ ಎಲ್ಲವೂ ನಿದಿರೆ ಗುಮಟ್ಟವನ್ನು ಹೆಚ್ಚಿಸುತ್ತವೆ. ನಿದಿರೆಗೆ ಕೆಲವು ಗಂಟೆಗಳ ಮೊದಲು ಇವುಗಳ ಸೇವನೆ ಇರಲಿ.


  10. ಸ್ವಲ್ಪ ಸಮಯ ವಿಶ್ರಮಿಸಿ:ನಿಮ್ಮ ದಿನ ಒತ್ತಡದಿಂದ ಕೂಡಿದ್ದರೆ, ಸ್ವಲ್ಪ ವಿಶ್ರಮಿಸಿ. ನಿಮ್ಮಿಷ್ಟದ ಕೆಲಸ ಮಾಡಿ. ಓದುವುದು, ಪೇಂಟಿಂಗ್ ಇಲ್ಲವೇ ಸಿನಿಮಾ ನೋಡುವುದು ಈ ಕೆಲಸಗಳನ್ನು ಮಾಡುವುದು ನಿಮ್ಮ ಮನಸ್ಸಿಗೆ ಒತ್ತಡ ಕಡಿಮೆ ಮಾಡಿ ನಿದಿರೆಯ ಕಡೆಗೆ ನಿಮ್ಮನ್ನು ಹೊರಳಿಸುತ್ತದೆ.

  First published: