Diabetes: ಮಧುಮೇಹದಿಂದ ಬಳಲುತ್ತಿರೋರಿಗೆ 10 ಆರೋಗ್ಯಕರ ಆಹಾರಗಳು ಇಲ್ಲಿವೆ

ದಿನಕ್ಕೆ ಒಂದು ಸೇಬನ್ನು ತಿನ್ನುವುದರಿಂದ ಅದರ ಪ್ರಯೋಜನಗಳಿವೆ. ಅವುಗಳು ನಾರಿನಂಶ, ವಿಟಮಿನ್ ಸಿ ಇದ್ದು ಕೊಬ್ಬು ಮುಕ್ತವಾಗಿದೆ. ಬೆಳಗ್ಗೆಯ ತಿಂಡಿ ಮತ್ತು ಮಧ್ಯಾಹ್ನದ ಊಟದ ಮಧ್ಯೆ ಒಂದು ಸೇಬು ಸೇವಿಸುವುದು ಒಳ್ಳೆಯದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
10 Healthy food: ಈಗಂತೂ ಬಹುತೇಕವಾಗಿ ಎಲ್ಲರ ಮನೆಯಲ್ಲಿ ಒಬ್ಬರಾದರೂ ಈ ಮಧುಮೇಹ(Diabetes)ದಿಂದ ಬಳಲುತ್ತಿರುವವರು ನಮಗೆ ನೋಡಲು ಸಿಗುತ್ತಾರೆ. ಅಷ್ಟರ ಮಟ್ಟಿಗೆ ಈ ರೋಗ ಆವರಿಸಿದೆ ಎಂದು ಹೇಳಬಹುದು. ಇನ್ನೇನು ಮಧುಮೇಹ ಬರುವ ಹಂತದಲ್ಲಿ ಇದೆ ಅಥವಾ ಮಧುಮೇಹ ಆಗಲೇ ಹೊಂದಿರುವ ಜನರು ತಮ್ಮ ಆಹಾರ ಪದ್ಧತಿ(Food Style)ಯ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಆದ್ದರಿಂದ, ಕೆಲವೊಮ್ಮೆ ಯಾವ ಆಹಾರಗಳು ಮತ್ತು ಪಾನೀಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅನೇಕರಿಗೆ ಅನೇಕ ಗೊಂದಲಗಳು ಇರುತ್ತವೆ. ಆದರೆ ಚಿಂತಿಸಬೇಡಿ, ಪೌಷ್ಠಿಕಾಂಶ ವೈದ್ಯರಾದ ಡಾ. ಗಣೇಶ್ ಕಡೇ (Dr Ganesh Kade) ಅವರು ಹೇಳಿದ 10 ಆರೋಗ್ಯಕರ ಆಹಾರ ಪದಾರ್ಥ(Healthy Food)ಗಳು ಇಲ್ಲಿವೆ ನೋಡಿ. ಇವುಗಳನ್ನು ನೀವು ಪ್ರತಿದಿನ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

1. ಬೀನ್ಸ್

ಯಾವುದೇ ರೀತಿಯ ಬೇಳೆ ಕಾಳುಗಳು ಉದಾಹರಣೆಗೆ ಕಪ್ಪು ಅಥವಾ ಕಡಲೆ ಬೀನ್ಸ್ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರಗಳಾಗಿವೆ. ಇದರರ್ಥ ಅವುಗಳ ಕಾರ್ಬೋಹೈಡ್ರೇಟ್‌ ಗಳು ಕ್ರಮೇಣ ಬಿಡುಗಡೆವಾಗುತ್ತವೆ. ಆದ್ದರಿಂದ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.

ಇದನ್ನೂ ಓದಿ:  Health Tips: ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಆಹಾರ ಸಹಕಾರಿ

ಅವು ಎಷ್ಟು ಪ್ರಯೋಜನಕಾರಿಯೆಂದರೆ, ಕಡಿಮೆ ಗ್ಲೈಸೆಮಿಕ್ ಆಹಾರದ ಭಾಗವಾಗಿ ಮೂರು ತಿಂಗಳ ಕಾಲ ಪ್ರತಿದಿನ ಒಂದು ಕಪ್ ಬೀನ್ಸ್ ತಿನ್ನುವುದು ಹೀಮೋಗ್ಲೋಬಿನ್ ಎ1ಸಿ ಮತ್ತು ಎಚ್ ಬಿಎ1ಸಿ ಮಟ್ಟವನ್ನು ಅರ್ಧ ಪ್ರತಿಶತ ಪಾಯಿಂಟ್‌ನಷ್ಟು ಕಡಿಮೆ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡು ಹಿಡಿದಿದೆ. ನೀವು ಸೇವಿಸುವ ಬೇಳೆ ಸಾರಿನ ಬದಲಿಗೆ ರಾಜ್ಮಾವನ್ನು ಸೇವಿಸಿರಿ.

2. ಸೇಬುಗಳು

ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಊಟದ ಡಯಟ್‌ನಲ್ಲಿ ಹಣ್ಣುಗಳಿಗೆ ಸ್ವಲ್ಪ ಜಾಗವನ್ನು ಇರಿಸಿಕೊಳ್ಳಲೇಬೇಕು. ಅದರಲ್ಲೂ ಸೇಬುಗಳು ಸಹ ಕಡಿಮೆ ಗ್ಲೈಸೆಮಿಕ್ ಹೊಂದಿರುತ್ತವೆ. ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಕಡಿಮೆ ಅಥವಾ ಮಧ್ಯಮವಾಗಿರುವ ಆಹಾರಗಳನ್ನು ಗುರಿಯಾಗಿರಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವ ಒಂದು ಮಾರ್ಗವಾಗಿದೆ.

ದಿನಕ್ಕೆ ಒಂದು ಸೇಬನ್ನು ತಿನ್ನುವುದರಿಂದ ಅದರ ಪ್ರಯೋಜನಗಳಿವೆ. ಅವುಗಳು ನಾರಿನಂಶ, ವಿಟಮಿನ್ ಸಿ ಇದ್ದು ಕೊಬ್ಬು ಮುಕ್ತವಾಗಿದೆ. ಬೆಳಗ್ಗೆಯ ತಿಂಡಿ ಮತ್ತು ಮಧ್ಯಾಹ್ನದ ಊಟದ ಮಧ್ಯೆ ಒಂದು ಸೇಬು ಸೇವಿಸುವುದು ಒಳ್ಳೆಯದು.

3.ಬಾದಾಮಿ

ಸಾಮಾನ್ಯವಾಗಿ ಬಾದಾಮಿ ಮೆಗ್ನೀಶಿಯಂನಿಂದ ಸಮೃದ್ಧವಾಗಿರುತ್ತವೆ ಮತ್ತು ಇದು ದೇಹವು ತನ್ನದೇ ಆದ ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ. ಈ ರಕ್ತದಲ್ಲಿನ ಸಕ್ಕರೆ ಸಮತೋಲನ ಖನಿಜದ ನಿಮ್ಮ ದೈನಂದಿನ ಡೋಸ್ ಅನ್ನು ಹೊಂದಲು ನಿಮ್ಮ ಆಹಾರದಲ್ಲಿ ಹೆಚ್ಚಿನ ಬಾದಾಮಿಯನ್ನು ಸೇರಿಸಲು ಪ್ರಯತ್ನಿಸಿ.

ಜೊತೆಗೆ, ಬಾದಾಮಿಯಲ್ಲಿ ಮಾನೋಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ನಾರಿನಂಶವು ಹೆಚ್ಚಾಗಿರುವುದರಿಂದ, ಇದು ರಕ್ತದ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

4. ಪಾಲಕ್ ಸೊಪ್ಪು

ಈ ಎಲೆಯುಕ್ತ ಹಸಿರು ತರಕಾರಿಯು ಬೇಯಿಸಿದ ಒಂದು ಕಪ್ ಪಲ್ಯವು ಕೇವಲ 21 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಸ್ನೇಹಿ ಮೆಗ್ನೀಶಿಯಮ್ ಮತ್ತು ನಾರಿನಂಶದಿಂದ ತುಂಬಿದೆ. ಹೆಚ್ಚುವರಿಯಾಗಿ, ನೀವು ಪಾಲಕ್ ಅನ್ನು ಹಸಿಯಾಗಿ ಸಹ ಸೇವಿಸಬಹುದು. ಆಲಿವ್ ಎಣ್ಣೆಯೊಂದಿಗೆ, ನಿಮ್ಮ ನೆಚ್ಚಿನ ಪಾಲಾಕ್ ಪನ್ನೀರ್ ಸಹ ಮಾಡಿಕೊಂಡು ಸೇವಿಸಬಹುದು.

ಇದನ್ನೂ ಓದಿ:  Weight Loss Drinks: ತ್ವರಿತವಾಗಿ ತೂಕ ಇಳಿಸಲು ಸಹಾಯ ಮಾಡುವ 5 ಜ್ಯೂಸ್ ಗಳು ಇಲ್ಲಿವೆ

5. ಚಿಯಾ ಬೀಜಗಳು

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ನಿರ್ವಹಿಸುವುದು ನೀವು ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಇದು ಒಂದಾಗಿದೆ. ಚಿಯಾ ಬೀಜಗಳು ಅದಕ್ಕೆ ಸಹಾಯ ಮಾಡಬಹುದು.

ಒಂದು ಅಧ್ಯಯನದಲ್ಲಿ, ಮಧುಮೇಹ ಹೊಂದಿರುವ ಜನರು ಸುಮಾರು ಒಂದು ಔನ್ಸ್ ಚಿಯಾ ಬೀಜಗಳನ್ನು ಕ್ಯಾಲೋರಿ ನಿಯಂತ್ರಿತ ಆಹಾರಕ್ಕೆ ಆರು ತಿಂಗಳ ಕಾಲ ಸೇರಿಸಿಕೊಂಡರೆ ನಾಲ್ಕು ಪೌಂಡ್ ತೂಕವನ್ನು ನೀವು ಕಡಿಮೆ ಮಾಡಿಕೊಳ್ಳಬಹುದು. ನಾರಿನಂಶದಿಂದ ತುಂಬಿರುವುದನ್ನು ಹೊರತುಪಡಿಸಿ, ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಹ ಇರುತ್ತದೆ.

6. ಮಧುಮೇಹ ನಿರ್ದಿಷ್ಟ ಸೂತ್ರವನ್ನು ಅನುಸರಿಸಿ

ಜೀವನ ಶೈಲಿಯ ಮಾರ್ಪಾಡುಗಳು ಮತ್ತು ನಿಯಮಿತ ವ್ಯಾಯಾಮದ ಜೊತೆಗೆ, ನಿಮ್ಮ ಆಹಾರ ಯೋಜನೆಗೆ ಮಧುಮೇಹ ನಿರ್ದಿಷ್ಟ ಸೂತ್ರವನ್ನು ಸೇರಿಸಲು ಸೂಚಿಸಲಾಗಿದೆ. ಗ್ಲೂಕೋಸ್‌ನ ಸ್ಥಿರ ಬಿಡುಗಡೆಯನ್ನು ನಿರ್ವಹಿಸಲು ಸಹಾಯ ಮಾಡಲು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ವಿಶೇಷ ಪದಾರ್ಥಗಳೊಂದಿಗೆ ವಿನ್ಯಾಸಗೊಳಿಸಲಾದ ಸೂತ್ರವನ್ನು ನೋಡಿ.

ಆದರ್ಶವಾಗಿ, ಸೂತ್ರವನ್ನು ನಿಮ್ಮ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿ ಊಟದಲ್ಲಿ ಅಳವಡಿಸಿಕೊಳ್ಳಬೇಕು, ಇದು ರಕ್ತದ ಗ್ಲೂಕೋಸ್ ಮತ್ತು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

7. ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ಇನ್ಸುಲಿನ್ ಅನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತೋರಿಸಲಾದ ಸಂಯುಕ್ತಗಳನ್ನು ಹೊಂದಿರುತ್ತವೆ.

ಒಂದು ಅಧ್ಯಯನವು ಪ್ರತಿದಿನ ಸುಮಾರು 2 ಕಪ್ ಬ್ಲೂಬೆರ್ರಿಗಳಿಗೆ ಸಮಾನವಾದ ಆಹಾರವನ್ನು ತಿನ್ನುವುದರಿಂದ ಇನ್ಸುಲಿನ್ ಪ್ರತಿರೋಧವಿರುವ ಅಧಿಕ ತೂಕದ ಜನರಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಎಂದು ತೋರಿಸಿದೆ. ಅವು ನಾರಿನಂಶ ಮತ್ತು ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳಂತಹ ಇತರ ಪೋಷಕಾಂಶಗಳ ಉತ್ತಮ ಮೂಲವಾಗಿದೆ.

8. ಓಟ್ಸ್ ಮೀಲ್

ಓಟ್ಸ್ ಮೀಲ್ ಕೇವಲ ನಿಮ್ಮ ಹೃದಯಕ್ಕೆ ಒಳ್ಳೆಯದಲ್ಲ, ಇದು ನಿಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿದಡಲು ತುಂಬಾ ಪ್ರಯೋಜನಕಾರಿಯಾಗಿದೆ. ಸೇಬುಗಳಂತೆ, ಓಟ್ಸ್ ಕೂಡ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತದೆ. ಆದಾಗ್ಯೂ, ಓಟ್ಸ್ ಉತ್ತಮ ಆಯ್ಕೆಯಾಗಿದೆ.

9. ಅರಿಶಿನ

ಈ ಚಿನ್ನದ ಮಸಾಲೆಯಲ್ಲಿ ಕರ್ಕ್ಯುಮಿನ್‌ ಎಂಬ ವಸ್ತುವಿದೆ. ಇದು ನಿಮ್ಮ ಮೇದೋಜೀರಕ ಗ್ರಂಥಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಮಧುಮೇಹವು ಟೈಪ್ 2 ಮಧುಮೇಹವಾಗಿ ಬದಲಾಗುವುದನ್ನು ತಡೆಯುತ್ತದೆ.

10. ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾವನ್ನು ದೀರ್ಘಕಾಲದಿಂದ ವಿವಿಧ ಕಾಯಿಲೆಗಳಿಗೆ ಬಳಸಲಾಗುತ್ತದೆ. ಅಸ್ತಿತ್ವದಲ್ಲಿರುವ ಸಂಶೋಧನೆಯು ಇದು ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ತೋರಿಸುತ್ತದೆ. ಇತ್ತೀಚಿನ ಅಧ್ಯಯನವು ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ.
Published by:Mahmadrafik K
First published: