Health Tips: ದೊಡ್ಡಪತ್ರೆಯಲ್ಲಿದೆ ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಯ ನಿವಾರಣೆಯ ಗುಣ

Mexican Mint: ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು.

ದೊಡ್ಡಪತ್ರೆ

ದೊಡ್ಡಪತ್ರೆ

  • Share this:
    ನಮ್ಮ ಹಿರಿಯರು ಹೇಳಿದ "ಹಿತ್ತಲ ಗಿಡ ಮದ್ದಲ್ಲ" ಎನ್ನುವ ಮಾತು ಎಷ್ಟು ನಿಜ ಎಂದೆನಿಸುತ್ತದೆ ಅಲ್ಲವೇ.. ಯಕಂದ್ರೆ ಮನೆಯ (Home) ಅಂಗಳದಲ್ಲಿ ಸಿಗುವ ಅನೇಕ ಎಲೆಗಳು (Leaves) ನಮ್ಮ ಆರೋಗ್ಯ (Health) ರಕ್ಷಣೆ ಮಾಡುತ್ತವೆ. ತುಳಸಿ (Tulsi) ಎಲೆಯ ಪುದೀನಾ (Pudina) ಹೀಗೆ ನಾನಾ ಎಲೆಗಳು ನಮ್ಮ ಆರೋಗ್ಯ ಕಾಪಾಡುವಲ್ಲಿ ಆಯುರ್ವೇದ (Ayurveda) ಪದ್ಧತಿಯಲ್ಲಿ ಸಹಕಾರಿಯಾಗಿದೆ.. ಅದೇ ರೀತಿ ಮನೆಯ ಅಂಗಳದಲ್ಲಿ ಬೆಳೆಯುವ ದೊಡ್ಡಪತ್ರೆ (Mexican Mint) ಕೂಡ ರೋಗನಿರೋಧಕ ಶಕ್ತಿ (Immunity) ಹೆಚ್ಚಳ ಮಾಡಿ ನಮ್ಮನ್ನು ಹಲವಾರು ರೋಗಗಳಿಂದ ರಕ್ಷಣೆ ಮಾಡಲು ಸಹಾಯಕಾರಿ. ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯುತ್ತೇವೆ. ಜ್ವರ (Fever), ಶೀತ (Cold) ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು. ಇಷ್ಟೇ ಅಲ್ಲದೆ ದೊಡ್ಡಪತ್ರೆ ಇಂದೇ ಕಾಡುತ್ತಿದ್ದ ಮಹಾಮಾರಿ ಕಾಲರಾ ರೋಗವನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆಯಂತೆ. ಇಷ್ಟು ಮಾತ್ರವಲ್ಲದೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ದೊಡ್ಡಪತ್ರೆ ಹೊಂದಿದೆ. ಆಗಿದ್ರೆ ಅವುಗಳು ಯಾವುವು ಎನ್ನುವುದನ್ನು ನೋಡೋಣ.

    ದೊಡ್ಡಪತ್ರೆಯ ಆರೋಗ್ಯಕರ ಪ್ರಯೋಜನಗಳು

    ದೊಡ್ಡಪತ್ರೆ ಹಚ್ಚ ಹಸಿರಿನಿಂದ ಕೂಡಿದ, ದಪ್ಪವಾದ ಎಲೆಗಳನ್ನು ಹೊಂದಿರುವ ಇದು ಘಾಡವಾದ ವಾಸನೆನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ಹಲವಾರು ಅಡುಗೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದಲ್ಲದೇ  ಅನೇಕ ಆರೋಗ್ಯ ಉಪಯೋಗವನ್ನು ಇದು ಹೊಂದಿದೆ.

    ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರು ಕೂಡ ಈ ಎಲೆಯನ್ನು ಬಳಸೋದ್ರಿಂದ ನೆಗಡಿ, ಕಫ, ತಲೆಭಾರ, ಅಜೀರ್ಣ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಕೂಡ ಇದನ್ನು ನೀಡುತ್ತಾರೆ.

    1) ಚರ್ಮದ ಸೋಂಕು ಕಡಿಮೆ ಮಾಡಲು: ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು.

    ಇದನ್ನೂ ಓದಿ: ಕಣ್ಣಿನ ಆರೋಗ್ಯಕ್ಕೂ ಚರ್ಮದ ರಕ್ಷಣೆಗೆ ಸಹಕಾರಿ ಸಪೋಟ ಹಣ್ಣು

    2) ಜೀರ್ಣ ಶಕ್ತಿ ಹೆಚ್ಚಳ: ಬಹುತೇಕರಲ್ಲಿ ಜೀರ್ಣ ಶಕ್ತಿಯ ಸಮಸ್ಯೆ ಕಾಡುತ್ತಿರುತ್ತದೆ. ಹೀಗಾಗಿ ಸುಲಭವಾಗಿ ಜೀರ್ಣ ಶಕ್ತಿ ಹೆಚ್ಚಳ ಮಾಡಿಕೊಳ್ಳಲು ಪ್ರತಿನಿತ್ಯ ದೊಡ್ಡಪತ್ರೆಯ ಎಲೆಯನ್ನು ಉಪ್ಪಿನೊಂದಿಗೆ ನೆಂಚಿಕೊಂಡು ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ.

    3) ಕಟ್ಟಿದ ಮೂಗಿನಿಂದ ನಿವಾರಣೆ: ಒಮ್ಮೆ ಮೂಗು ಕಟ್ಟಿದ್ದು ಅಂದರೆ ಬಹುತೇಕರಿಗೆ ಉಸಿರಾಡಲು ಕಷ್ಟ.. ಇಂತಹ ಸಂದರ್ಭದಲ್ಲಿ ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ ಮೂಗಿನಿಂದ ನಿವಾರಣೆಯನ್ನು ಹೊಂದಬಹುದು.

    4) ಗ್ಯಾಸ್ಟ್ರಿಕ್‌ ತಡೆಯುತ್ತದೆ: ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕಾಡುವ ಸಮಸ್ಯೆಯೆಂದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆ. ನಿಯಮಿತವಾಗಿ ದೊಡ್ಡಪತ್ರೆ ಎಲೆಯನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಬಹುದು.ದೇಹದಿಂದ ವಿಷವನ್ನು ಹೊರ ಹಾಕುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ.

    5) ಮಕ್ಕಳ ಜ್ವರ ನಿವಾರಣೆ: ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಕಡಿಮೆಯಾಗುತ್ತದೆ.

    6) ಕಣ್ಣಿನ ಉರಿ ಕಡಿಮೆ ಮಾಡಲು: ದೊಡ್ಡಪತ್ರೆ ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆ ಸೇರಿಸಿ ಇದನ್ನು ನಿತ್ಯ ತಲೆಗೆ ಹಾಕುವುದರಿಂದ ತಲೆ ತಂಪಾಗುವುದರೊಂದಿಗೆ ಕಣ್ಣುರಿ ಕಡಿಮೆಯಾಗುತ್ತದೆ.

    7) ಭೇದಿ ನಿಯಂತ್ರಣಕ್ಕೆ: ದೊಡ್ಡಪತ್ರೆ ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಜೇನು ಅಥವಾ ಕಲ್ಲುಸಕ್ಕರೆಯನ್ನು ಸೇರಿಸಿ ದಿನಕ್ಕೆ 3 ಬಾರಿ ಕುಡಿಯುವುದರಿಂದ ಭೇದಿಯು ಕಡಿಮೆಯಾಗುತ್ತದೆ.

    ಇದನ್ನೂ ಓದಿ: ದೇಹಕ್ಕೆ ಅಗತ್ಯ ಪ್ರಮಾಣದ ಕ್ಯಾಲ್ಶಿಯಂ ನೀಡಲು ತಪ್ಪದೇ ಸೇವಿಸಿ 7 ಆಹಾರ

    8) ಕಫ ನಿವಾರಣೆಗೆ: ದೊಡ್ಡಪತ್ರೆಯ ಹಸಿ ಎಲೆಯ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ.

    10) ಪಿತ್ತದ ಸಮಸ್ಯೆ ದೂರ ಮಾಡಲು: ದೊಡ್ಡಪತ್ರೆಯ  ಎಲೆಗಳನ್ನು, ಒಂದೆರಡು ಕರಿಮೆಣಸು  ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಜಜ್ಜಿ ರಸವನ್ನು ತೆಗೆಯಬೇಕು. ಈ ರಸವನ್ನು ಕಾಲಿ  ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಪಿತ್ತ ಮತ್ತು ಪಿತ್ತದ ಸಮಸ್ಯೆಗಳಿಂದ ಸುಲಭವಾಗಿ ದೂರವಾಗಬಹುದು.
    Published by:ranjumbkgowda1 ranjumbkgowda1
    First published: