Goa Trip: ಗೋವಾ ಪ್ರವಾಸಕ್ಕೆ ಹೋಗೋ ಮುನ್ನ ಈ ವಸ್ತುಗಳನ್ನು ಮರೀಬೇಡಿ!

ಗೋವಾಗೆ ಹೋಗೋಕೆ ಎಲ್ಲರಿಗೂ ಇಷ್ಟ. ಅಲ್ಲಿಗೆ ಹೋಗುವಾಗ ಈ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಹೋಗುವುದನ್ನು ಮರೆಯಬೇಡಿ. ಹವಾಮಾನ ಪರಿಸ್ಥಿತಿಗನುಗುಣವಾಗಿ ವಸ್ತುಗಳು ಬೇಕು

ಗೋವಾ

ಗೋವಾ

  • Share this:
ಪ್ರವಾಸಕ್ಕೆ ಹೋಗುವುದು ಎಂದರೆ ಕೆಲವರಿಗೆ ಹುಚ್ಚು. ವರ್ಷಕ್ಕೆ ಒಂದು ಅಥವಾ ಎರಡು ಬಾರಿಯಾದ್ರೂ ಪ್ರವಾಸಕ್ಕೆ ಹೋಗುತ್ತಾರೆ. ಸ್ನೇಹಿತರು ಇಲ್ಲವೇ ಕುಟುಂಬದವರ ಜೊತೆ ವರ್ಷಕ್ಕೆ ಒಮ್ಮೆಯಾದ್ರೂ ಪ್ರವಾಸ ಮಾಡಿದ್ರೆ, ಮನಸ್ಸಿಗೂ ಖುಷಿಯಾಗುತ್ತೆ. ಜಾಗ ಬದಲಾವಣೆಯಿಂದ ಹೊಸ ಚೈತನ್ಯ ತುಂಬುತ್ತೆ. ಕೆಲವೊಂದು ಪ್ರದೇಶಗಳಿಗಳಿ ಹೋದಾಗ ಅಲ್ಲಿಯ ಹವಾಮಾನ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಬೇಕಾಗುತ್ತೆ. ಬೇರೆ, ಬೇರೆ ಪ್ರದೇಶಗಳಿಗೆ ಹೋಗುವಾಗ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಂಡು ಹೋದ್ರೆ ಉತ್ತಮ. ಇಲ್ಲ ಅಂದ್ರೆ ಅಲ್ಲಿ ಹೋಗಿ ಕಷ್ಟ ಪಡಬೇಕಾಗುತ್ತದೆ. ಎಂಜಾಯ್ ಕೂಡ ಮಾಡೋಕೆ ಆಗಲ್ಲ. ಗೋವಾಗೆ (Goa) ಹೋಗೋಕೆ ಎಲ್ಲರಿಗೂ ಇಷ್ಟ. ಅಲ್ಲಿಗೆ ಹೋಗುವಾಗ ಈ ಅಗತ್ಯ (Essentials) ವಸ್ತುಗಳನ್ನು (Items Packs) ಪ್ಯಾಕ್ ಮಾಡಿಕೊಂಡು ಹೋಗುವುದನ್ನು ಮರೆಯಬೇಡಿ.

ಹವಾಮಾನ ಪರಿಸ್ಥಿತಿಗನುಗುಣವಾಗಿ ವಸ್ತುಗಳು ಬೇಕು
ಗೋವಾದ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ನೀವು ಕೆಲವು ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಹೋಗಬೇಕು. ಆಗ ನೀವು ಆಯಾಗಿ ಅಲ್ಲಿ ಎಂಜಾಯ್ ಮಾಡಬಹುದು.

ಟೋಪಿ
ಗೋವಾದ ಬೀಚ್ ಬಳಿ ನೀವು ಹೆಚ್ಚು ಹೊತ್ತು ಇರಲು ಇಷ್ಟ ಪಡುತ್ತೀರಿ. ಆದ ಕಾರಣ ಅಲ್ಲಿನ ಬಿಸಿಲನ್ನು ತಡೆಯಲು ನೀವು ಟೋಪಿ ಹಾಕಿಕೊಂಡ್ರೆ ಒಳ್ಳೆಯದು. ಕಡಲತೀರದಲ್ಲಿ ಧರಿಸಲು ಒಣಹುಲ್ಲಿನ ಟೋಪಿ ಧರಿಸಿದ್ರೆ ಉತ್ತಮ. ಅಲ್ಲದೇ ನೀವು ಫ್ಯಾಶನ್ ಆಗಿಯೂ ಕಾಣುತ್ತೀರಿ.

ಪಾದರಕ್ಷೆಗಳು
ನೀವು ಬೀಚ್‍ನಲ್ಲಿ ವಿಶ್ರಾಂತಿ ಪಡೆಯಲು ಅಥವಾ ಯಾವುದೇ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಲು ಪ್ಲ್ಯಾನ್ ಹಾಕಿಕೊಂಡಿದ್ರೆ, ರಬ್ಬರ್ ಪಾದರಕ್ಷೆಗಳನ್ನು ಕೊಂಡೊಯ್ಯುವುದು ಸುರಕ್ಷಿತವಾಗಿದೆ. ಏಕೆಂದರೆ ಅದು ನಿಮ್ಮ ಪಾದಗಳಿಗೆ ಆರಾಮದಾಯಕ ಆಗಿರುತ್ತೆ. ನಿಮ್ಮ ಗೋವಾ ಪ್ರವಾಸಕ್ಕೆ ನೀವು ಸ್ನೀಕರ್ಸ್ ಮತ್ತು ಸ್ಯಾಂಡಲ್ಗಳನ್ನು ಕೊಂಡೊಯ್ಯಬೇಕು. ನೀವು ನೈಟ್‍ಕ್ಲಬ್‍ಗಳಲ್ಲಿ ಪಾರ್ಟಿ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ರೆ, ಮಹಿಳೆಯರಿಗೆ ಒಂದು ಜೋಡಿ ಹೀಲ್ಸ್ ಸ್ಲಿಪ್ಪರ್ ಸಹ ಪ್ಯಾಕ್ ಮಾಡಿಕೊಂಡು ಹೋಗಬೇಕು.

ಮ್ಯಾಪ್
ನೀವು ಗೋವಾಕ್ಕೆ ಹೊಸದಾಗಿ ಹೋಗುತ್ತಿದ್ರೆ, ಅಲ್ಲಿನ ಗೈಡ್‍ಗಳು ಬೇಡ ಅಂದ್ರೆ, ಗೋವಾಗ ಮ್ಯಾಪ್ ಅನ್ನು ನೀವು ತೆಗೆದುಕೊಂಡು ಹೋದ್ರೆ ಒಳ್ಳೆಯದು. ಮೊಬೈಲ್‍ನಲ್ಲೇ ನೋಡಬಹುದು. ಆದ್ರೆ ಕೆಲವೊಮ್ಮೆ ನೆಟ್‍ವರ್ಕ್ ಸಮಸ್ಯೆ ಆಗಿ ಮೊಬೈಲ್ ವರ್ಕ್ ಆಗದಿದ್ರೆ, ನಕ್ಷೆ ನಿಮಗೆ ಸಹಾಯವಾಗುತ್ತೆ.

ಟೋಟ್ ಬ್ಯಾಗ್‍ಗಳು
ಟೋಟ್ ಬ್ಯಾಗ್‍ಗಳು ಪ್ಯಾಕ್ ಮಾಡಿಕೊಂಡು ತೆಗೆದುಕೊಂಡು ಹೋದ್ರೆ ಒಳ್ಳೆಯದು. ಆಗ ನೀವು ಶಾಪಿಂಗ್ ಮಾಡಲು ಸಹಾಯ ಆಗುತ್ತೆ.  ಇತರ ಅಗತ್ಯ ವಸ್ತುಗಳನ್ನು ಒಟ್ಟಿಗೆ ಇಟ್ಟುಕೊಳ್ಳಲು ಸಹಾಯ ಆಗುತ್ತೆ.

ಇದನ್ನೂ ಓದಿ: Tourist Spot: ಹಡಗು ಮುಳುಗಿದ ಜಾಗವೂ ಈಗ ಗೋವಾದ ಮತ್ತೊಂದು ಆಕರ್ಷಣೆಯ ಸ್ಥಳವಂತೆ

ಸನ್‍ಸ್ಕ್ರೀನ್
ಯಾವುದೇ ಪ್ರವಾಸದಲ್ಲಿ ನಿಮ್ಮೊಂದಿಗೆ ಇರಬೇಕಾದ ಪ್ರಮುಖ ವಸ್ತುಗಳಲ್ಲಿ ಇದು ಒಂದಾಗಿದೆ. ಸನ್‍ಸ್ಕ್ರೀನ್ ನಿಮ್ಮನ್ನು ಸೂರ್ಯ ಕಿರಣಗಳಿಂದ ರಕ್ಷಿಸುತ್ತದೆ. ನಿಮ್ಮ ಸ್ಕಿನ್‍ಗೆ ಮ್ಯಾಚ್ ಆಗುವ ಕ್ರೀಮ್ ಹಚ್ಚಿಕೊಳ್ಳಿ. ಇದರಿಂದ ನೀವು ಗೋವಾದಲ್ಲಿ ಸಮುದ್ರ ಸ್ನಾನ ಮಾಡಲು ಸಹಾಯವಾಗುತ್ತೆ.

ಸನ್‍ಗ್ಲಾಸ್‍ಗಳು
ಟೋಪಿಗಳು ನಿಮ್ಮನ್ನು ಹೇಗೆ ಬಿಸಿಲಿನಿಂದ ರಕ್ಷಿಸುತ್ತವೆಯೋ ಹಾಗೆಯೇ, ಸನ್‍ಗ್ಲಾಸ್‍ಗಳು ನಿಮಗೆ ರಕ್ಷಣೆ ನೀಡುತ್ತವೆ. ಅಲ್ಲದೇ ನೀವು ಇನ್ನೂ ಮುದ್ದಾಗಿ ಸಹ ಕಾಣುತ್ತೀರಿ.

ಪವರ್ ಬ್ಯಾಂಕ್‍ಗಳು
ಪವರ್ ಬ್ಯಾಂಕ್ ಅನ್ನು ಒಯ್ಯುವುದರಿಂದ ನೀವು ಗೂಗಲ್‍ನಲ್ಲಿ ಮ್ಯಾಪ್ ಹಾಕಿಕೊಳ್ಳಬಹುದು. ಫೋನ್ ಚಾರ್ಜ್ ಮಾಡಲು ಒದ್ದಾಡಬೇಕಿಲ್ಲ. ಗೋವಾದಲ್ಲಿನ ಸ್ಥಳಗಳನ್ನು ಪೋನ್ ಮೂಲಕ ಹುಡಕಬಹುದು. ಫೋಟೋಗಳನ್ನು ಕ್ಲಿಕ್ ಮಾಡಿಕೊಳ್ಳಬಹುದು. ನಿಮ್ಮ ಫೋನ್ ಬ್ಯಾಟರಿ ಖಾಲಿಯಾಗಬಹುದು, ಆದ್ದರಿಂದ ಬ್ಯಾಕಪ್ ಹೊಂದಲು, ಪವರ್ ಬ್ಯಾಂಕ್ ಅನ್ನು ಒಯ್ಯುವುದು ಅತ್ಯಗತ್ಯ.

ಇದನ್ನೂ ಓದಿ: Best Places: ಭಾರತದ ಈ ಸ್ಥಳಗಳಿಗೆ ನಿಮ್ಮ ಮಕ್ಕಳೊಂದಿಗೆ ಮಿಸ್ ಮಾಡದೇ ಹೋಗಿ!

ಪ್ರಥಮ ಚಿಕಿತ್ಸಾ ಕಿಟ್
ನೀವು ಪ್ರಯಾಣಿಸುವಾಗ, ಕೆಲವೊಮ್ಮೆ ನೀವು ಕೆಲವು ದುರದೃಷ್ಟಕರ ಅಪಘಾತಗಳನ್ನು ಎದುರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಸೂಕ್ತವಾಗಿ ಸಹಾಯಕ್ಕೆ ಬರುತ್ತದೆ. ಪ್ರಥಮ ಚಿಕಿತ್ಸಾ ಕಿಟ್, ನಿಮ್ಮ ಎಲ್ಲಾ ಅಗತ್ಯ ಔಷಧಿಗಳನ್ನು ಹೊಂದಿರಬೇಕು.

ಸರೋಂಗ್ಸ್
ಸರೋಂಗ್ಸ್ ಅಂದ್ರೆ ದುಪ್ಪಟ್ಟದ ರೀತಿಯ ತೆಳುವಾದ ಬಟ್ಟೆ. ಅದು ನೀವು ಈಜಿಕೊಂಡು ಹೊರ ಬಂದಾಗ ಅದನ್ನು ನಿಮ್ಮ ಡ್ರೆಸ್ ಮೇಲೆ ಡ್ರೆಪ್ ಆಗಿ ಬಳಸಬಹುದು.ಅದು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.

ಸ್ಪೀಕರ್ 
ಬೀಚ್ ಆಗಿರಲಿ ಅಥವಾ ನಿಮ್ಮ ಹೋಟೆಲ್ ರೂಂ ಆಗಿರಲಿ, ಪ್ರವಾಸದಲ್ಲಿ ಹಾಡುಗಳನ್ನು ಕೇಳುವುದು ಇಡೀ ಪ್ರವಾಸವನ್ನು ಹೆಚ್ಚು ಮೋಜ ಮಾಡಲು ಸಹಾಯ ಮಾಡುತ್ತೆ. ಸ್ಪೀಕರ್​ಗಳು ಒಯ್ಯಿರಿ ಇದರಿಂದ ನೀವು ಬೀಚ್‍ನಲ್ಲಿ ಅಥವಾ ರಾತ್ರಿ ಕ್ಯಾಂಪ್‍ಫೈರ್​ನಲ್ಲಿ ಸಂಗೀತವನ್ನು ಕೇಳಬಹುದು.
Published by:Savitha Savitha
First published: