Health Tips: ಹಾಲಿಗೆ ಒಂದು ಚಿಟಿಕೆ ಅರಿಶಿಣ ಹಾಕಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿಗೆ ಗೊತ್ತಾ?

ಅರಿಶಿಣದ ಹಾಲು ಮೆದುಳಿಗೆ ತುಂಬಾ ಪರಿಣಾಮಕಾರಿ. ಈ ಹಾಲಿನಲ್ಲಿರುವ ಕೆಲವು ಪದಾರ್ಥಗಳು ನೆನಪಿನ ಶಕ್ತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ

ಅರಿಶಿಣದ ಹಾಲು ಮೆದುಳಿಗೆ ತುಂಬಾ ಪರಿಣಾಮಕಾರಿ. ಈ ಹಾಲಿನಲ್ಲಿರುವ ಕೆಲವು ಪದಾರ್ಥಗಳು ನೆನಪಿನ ಶಕ್ತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ

ಅರಿಶಿಣದ ಹಾಲು ಮೆದುಳಿಗೆ ತುಂಬಾ ಪರಿಣಾಮಕಾರಿ. ಈ ಹಾಲಿನಲ್ಲಿರುವ ಕೆಲವು ಪದಾರ್ಥಗಳು ನೆನಪಿನ ಶಕ್ತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ

  • Share this:

    ಭಾರತೀಯ ಆಹಾರ ಪದ್ಧತಿಗಳಲ್ಲಿ ಅರಿಶಿಣದ ಹಾಲಿಗೆ ಪ್ರಮುಖ ಸ್ಥಾನವಿದೆ. ಇದನ್ನು ಗೋಲ್ಡನ್ ಮಿಲ್ಕ್ ಎಂದು ಕರೆಯುತ್ತಾರೆ. ಇದೀಗ ಪಾಶ್ಚಿಮಾತ್ಯ ಆಹಾರ ಪದ್ಧತಿಯಲ್ಲಿ ಪ್ರಾಮುಖ್ಯತೆ ಗಳಿಸುತ್ತಿದೆ. ಸಕ್ಕರೆರಹಿತ ಹಾಲಿಗೆ ಒಂದು ಚಮಚ ಅರಿಶಿಣ, ಶುಂಠಿ ಪುಡಿ, ದಾಲ್ಚಿನ್ನಿ ಪುಡಿ, ಕಾಳು ಮೆಣಸಿನ ಪುಡಿ, ಒಂದು ಚಮಚ ಜೇನುತುಪ್ಪ ಸೇರಿಸಿ ಮಾಡಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಅನುಕೂಲಕರವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಅನಾರೋಗ್ಯದಿಂದ ದೂರವಿರಿಸುತ್ತದೆ.


    ಅರಿಶಿಣದಿಂದಾಗುವ ಅರೋಗ್ಯದ ಮೇಲೆ ಉಂಟಾಗುವ ಅನೇಕ ಪ್ರಯೋಜನಗಳು ಹೀಗಿವೆ..


    ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಳ
    ಇದು ಆಂಟಿಆಕ್ಸಿಡೆಂಟ್ಸ್‌ಗಳ ಹೆಚ್ಚಳಕ್ಕೆ ಕಾರಣವಾಗುವುದರ ಜೊತೆಗೆ ಜೀವಕೋಶಗಳು ತೊಂದರೆಗೊಳಗಾಗುವುದನ್ನು ತಡೆಯುತ್ತದೆ. ವಿವಿಧ ರೋಗಗಳ ವಿರುದ್ಧ ಹಾಗೂ ಸೋಂಕುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲದು. ಒಟ್ಟಿನಲ್ಲಿ ಆರೋಗ್ಯಕ್ಕೆ ಉತ್ತಮ ಮದ್ದು ಎಂದೇ ಹೇಳಬಹುದು.


    ಉರಿಯೂತ ಮತ್ತು ಕೀಲು ನೋವು ಕಡಿಮೆ ಮಾಡುತ್ತದೆ
    ಅರಿಶಿನ, ಶುಂಠಿ ಮತ್ತು ದಾಲ್ಚಿನ್ನಿ, ಅರಿಶಿಣದ ಹಾಲಿನಲ್ಲಿರುವ ಪ್ರಮುಖ ಪದಾರ್ಥಗಳು. ಇವು ಉರಿಯೂತದ ಲಕ್ಷಣಗಳನ್ನು ಕಡಿಮೆ ಮಾಡುವುದರ ಜೊತೆಗೆ ಕೀಲು ನೋವು ಕಡಿಮೆ ಮಾಡುತ್ತದೆ.


    ಮೆದುಳಿನ ಕಾರ್ಯಚಟುವಟಿಕೆ, ನೆನಪಿನ ಶಕ್ತಿ ಹೆಚ್ಚಳ
    ಅರಿಶಿಣದ ಹಾಲು ಮೆದುಳಿಗೆ ತುಂಬಾ ಪರಿಣಾಮಕಾರಿ. ಈ ಹಾಲಿನಲ್ಲಿರುವ ಕೆಲವು ಪದಾರ್ಥಗಳು ನೆನಪಿನ ಶಕ್ತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ ಮತ್ತು ಆಲ್‍ಜೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಮೆದುಳಿನ ಕಾರ್ಯದಲ್ಲಿನ ಕುಸಿತವನ್ನು ಕಡಿಮೆ ಮಾಡುತ್ತದೆ.


    ಇದನ್ನೂ ಓದಿ:Black Fungus: ಬ್ಲ್ಯಾಕ್​ ಫಂಗಸ್ ಹೆಚ್ಚಾಗಲು ಕಾರಣ ಬೇರೆಯೇ ಇದೆ; ಏಮ್ಸ್​ ವೈದ್ಯರು ಹೇಳಿದ್ದಿಷ್ಟು..!

    ಅರಿಶಿಣದಲ್ಲಿನ ಕರ್ಕ್ಯುಮಿನ್ ಮನಸ್ಥಿತಿಯನ್ನು ಸುಧಾರಿಸುತ್ತದೆ
    ಅರಿಶಿನದಲ್ಲಿನ ಪ್ರಮುಖ ಅಂಶವಾದ ಕರ್ಕ್ಯುಮಿನ್ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರ್ಕ್ಯುಮಿನ್ ಬಿಡಿಎನ್‍ಎಫ್ ಮಟ್ಟವನ್ನು ಹೆಚ್ಚಿಸುವಂತೆ ಕಂಡುಬರುತ್ತದೆ. ಆದ್ದರಿಂದ, ಇದು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.


    ಹೃದಯ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ
    ಇತ್ತೀಚಿನ ದಿನಗಳಿಂದ ಹೃದಯ ಸಂಬಂಧಿ ಖಾಯಿಲೆಗಳು ಯಥೇಚ್ಛವಾಗುತ್ತಿವೆ. ಹೃದ್ರೋಗದಿಂದ ವಿಶ್ವಾದ್ಯಂತ ಸಾವುಗಳು ಹೆಚ್ಚಾಗುತ್ತಿವೆ. ದಾಲ್ಚಿನ್ನಿ, ಶುಂಠಿ ಮತ್ತು ಅರಿಶಿಣ ಇವು ಅರಿಶಿಣ ಹಾಲಿನ ಪ್ರಮುಖ ಪದಾರ್ಥಗಳು. ಇವೆಲ್ಲವೂ ಹೃದ್ರೋಗ ರೋಗ ಬಾರದಂತೆ ತಡೆಯಲು ಸಹಕಾರಿಯಾಗಿದೆ. ಮಧುಮೇಹ ಹೊಂದಿರುವ 41 ಮಂದಿಯನ್ನು ಸಂಶೋಧನೆಗೆ ಒಳಪಡಿಸಲಾಯಿತು. ಇವರಿಗೆ ದಿನಕ್ಕೆ 2 ಗ್ರಾಂ ಶುಂಠಿ ಪುಡಿ ನೀಡಲಾಯಿತು. 12 ವಾರಗಳ ಅಧ್ಯಯನದ ನಂತರ ಹೃದ್ರೋಗಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳು ಶೇಕಡಾ 23–28ರಷ್ಟು ಕಡಿಮೆಯಾಗಿದ್ದವು.


    ರಕ್ತದೊತ್ತಡ ಕಡಿಮೆ ಮಾಡುತ್ತದೆ
    ಅರಿಶಿಣ ಹಾಲಿನಲ್ಲಿರುವ ಎರಡು ಪ್ರಮುಖ ಪದಾರ್ಥಗಳಾದ ದಾಲ್ಚಿನ್ನಿ ಮತ್ತು ಶುಂಠಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಪ್ರಮಾಣವನ್ನು ಸಹ ಸುಧಾರಿಸುವಂತೆ ಮಾಡುತ್ತದೆ.


    ಕ್ಯಾನ್ಸರ್‌ ಅಪಾಯ ಕಡಿಮೆ ಮಾಡುತ್ತದೆ
    ಕ್ಯಾನ್ಸರ್ ಎನ್ನುವುದು ಅನಿಯಂತ್ರಿತ ಕೋಶಗಳ ಬೆಳವಣಿಗೆಯಿಂದ ಗುರುತಿಸಲ್ಪಟ್ಟ ಒಂದು ಕಾಯಿಲೆಯಾಗಿದೆ. ಎಂತಹ ಚಿಕಿತ್ಸೆ ನೀಡಿದರೂ ಕ್ಯಾನ್ಸರ್ ಜೀವಕೋಶಗಳು ಬೆಳೆಯುತ್ತಲೇ ಹೋಗುತ್ತದೆ. ಇದನ್ನು ತಡೆಗಟ್ಟುವ ಗುಣ ಈ ಅರಿಶಿಣದ ಹಾಲಿಗಿದೆ. ಇದರಲ್ಲಿನ ದಾಲ್ಚಿನ್ನಿ, ಶುಂಠಿ ಮತ್ತು ಅರಿಶಿಣವು ಕ್ಯಾನ್ಸರ್ ವಿರುದ್ಧ ಸ್ವಲ್ಪ ರಕ್ಷಣೆ ನೀಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.


    ಜೀರ್ಣಕ್ರಿಯೆ ಸುಧಾರಣೆಗೆ ಸಹಾಯ ಮಾಡುತ್ತದೆ
    ಇದರಲ್ಲಿನ ಶುಂಠಿ ಮತ್ತು ಅರಿಶಿಣವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಅಲ್ಸರೇಟಿವ್ ಕೊಲೈಟಿಸ್ ರೋಗ ನಿವಾರಣೆಗೆ ಅರಿಶಿಣವು ಸಹಾಯ ಮಾಡುತ್ತದೆ.




    ಮೂಳೆಗಳ ಶಕ್ತಿ ಹೆಚ್ಚಳ
    ಅರಿಶಿಣದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಿಗುತ್ತದೆ. ಇವು ಮೂಳೆಗಳ ಶಕ್ತಿ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಮೂಳೆ ಸಂಬಂಧಿತ ಕಾಯಿಲೆಗಳಿಂದ ದೂರವಿಡುತ್ತದೆ.


    Published by:Latha CG
    First published: