ಎದೆಹಾಲುಣಿಸುವುದರಿಂದ ತಾಯಿ-ಮಗುವಿಗೆ ಸಿಗುವ ಪ್ರಯೋಜನಗಳು

zahir | news18
Updated:August 1, 2018, 6:23 PM IST
ಎದೆಹಾಲುಣಿಸುವುದರಿಂದ ತಾಯಿ-ಮಗುವಿಗೆ ಸಿಗುವ ಪ್ರಯೋಜನಗಳು
zahir | news18
Updated: August 1, 2018, 6:23 PM IST
-ನ್ಯೂಸ್ 18 ಕನ್ನಡ

ಮಗುವಿನ ಉತ್ತಮ ಬೆಳವಣಿಗೆಗೆ ತಾಯಿಯ ಎದೆಹಾಲು ಅತ್ಯಗತ್ಯ. ಹೀಗಾಗಿ ಆಗಸ್ಟ್​ 1 ರಿಂದ 7ರ ತನಕ ವಿಶ್ವದ ಎದೆಹಾಲುಣಿಸುವ ದಿನಗಳನ್ನಾಗಿ ಆಚರಿಸಿಕೊಳ್ಳಲಾಗುತ್ತದೆ. ಶಿಶುಗಳ ಆರೋಗ್ಯ ಸುಧಾರಿಸುವಲ್ಲಿ ಸ್ತನಪಾನದ ಅರಿವು ಅಗತ್ಯ. ಈ ಕುರಿತು ಅರಿವು ಮೂಡಿಸಲು ವಿಶ್ವದಾದ್ಯಂತ ಒಂದು ವಾರಗಳ ಕಾಲ ವರ್ಲ್ಡ್​ ಬ್ರೀಸ್ಟ್​ಫೀಡಿಂಗ್ ವೀಕ್ ಆಚರಿಸಲಾಗುತ್ತದೆ. ಎದೆಹಾಲು ಉಣಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಅವುಗಳಲ್ಲಿ ಮುಖ್ಯವಾಗಿರುವ ಕೆಲ ಪ್ರಯೋಜನಗಳು ಇಲ್ಲಿ ತಿಳಿಸಲಾಗಿದೆ.

- ನವಜಾತ ಶಿಶುಗಳಿಗೆ ಸೂಕ್ತವಾದ ಆಹಾರ ತಾಯಿಯ ಎದೆಹಾಲು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಸಾರಿ ಹೇಳಿದೆ. ಮಗುವಿನ ಬೆಳವಣಿಗೆಗೆ ಅತ್ಯವಿರುವ ಪೌಷ್ಠಿಕಾಂಶಗಳು ಎದೆಹಾಲಿನಲ್ಲಿರುತ್ತದೆ. ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ ಕಂಡು ಬರುವ ಅತಿಸಾರ ಮತ್ತು ನ್ಯುಮೋನಿಯಾಗಳಿಂದ ಶಿಶುಗಳನ್ನು ರಕ್ಷಿಸುವಲ್ಲಿ ಇದು ಸಹಾಯ ಮಾಡುತ್ತದೆ.

- 2007-2014ರ ನಡುವೆ ನಡೆಸಲಾದ ಸಮೀಕ್ಷೆ ಪ್ರಕಾರ ಪ್ರಪಂಚದಾದ್ಯಂತ 0-6 ವಯಸ್ಸಿನ ಶಿಶುಗಳಿಗೆ ಕೇವಲ 36% ಮಂದಿ ಮಾತ್ರ ಎದೆಹಾಲುಣಿಸಿದ್ದರು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 0-23 ತಿಂಗಳುಗಳ ಕಾಲ ಸ್ತನಪಾನ ನೀಡಿದರೆ ಪ್ರತಿವರ್ಷ 820000 ಮಕ್ಕಳ ಜೀವ ಉಳಿಸಬಹುದು ಎಂದು ಅಂಕಿ ಅಂಶಗಳು ತಿಳಿಸುತ್ತದೆ.

- ಮಗು ಹುಟ್ಟಿದ ಬಳಿಕ ಒಂದು ಗಂಟೆಯೊಳಗೆ ಹಾಲುಣಿಸುವುದನ್ನು WHO ಶಿಫಾರಸ್ಸು ಮಾಡುತ್ತದೆ. ಇದು ಮುಂದಿನ ಆರು ತಿಂಗಳುಗಳ ಕಾಲ ಮುಂದುವರೆಸುವುದು ಶಿಶುವಿನ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದು.

- ಶಿಶುಗಳಲ್ಲಿ ಕಾಣಿಸುವ ಕೊಲೊಸ್ಟ್ರಮ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಎದೆಹಾಲು ಮೊದಲ ಲಸಿಕೆ ಎನ್ನಲಾಗುತ್ತದೆ. ಎದೆಹಾಲಿನ ಮೂಲಕ ಪೋಷಕಾಂಶಗಳು ಮತ್ತು ರೋಗ ನಿರೋಧಕ ಶಕ್ತಿ ಮಗುವಿಗೆ ಸಿಗುತ್ತದೆ.

- ಕನಿಷ್ಠ ಪಕ್ಷ 6 ತಿಂಗಳ ಕಾಲ ಶಿಶುವಿಗೆ ಹಾಲುಣಿಸಬೇಕು. ಬಳಿಕ ಮಗುವಿನ ಆರೋಗ್ಯಕ್ಕನುಗುಣವಾಗಿ ಸುರಕ್ಷಿತ ಆಹಾರಗಳನ್ನು ನೀಡಬಹುದು. ಆದರೆ 2 ವರ್ಷದವರಗೆ ಸ್ತನಪಾನ ಮಾಡಿದರೆ ಅಂತಹ ಮಕ್ಕಳು ಉತ್ತಮ ಆರೋಗ್ಯದಿಂದ ಕೂಡಿರುತ್ತಾರೆ.
Loading...

- ಎದೆಹಾಲು ನೀಡುವುದರಿಂದ ಮಗುವಿಗೆ ದೇಹಕ್ಕೆ ಬೇಕಾದ ಶಕ್ತಿ  6 ರಿಂದ 12 ತಿಂಗಳುಗಳ ಕಾಲ ಲಭಿಸುತ್ತದೆ. 12 ರಿಂದ 24 ತಿಂಗಳವರಗೆ ಇದರ ಮೂರನೆ ಒಂದು ಭಾಗದ ಶಕ್ತಿ ಮಗುವಿಗೆ ಅವಶ್ಯಕತೆ ಇರುತ್ತದೆ. ನವಜಾತ ಶಿಶುಗಳಲ್ಲಿ ಅನಾರೋಗ್ಯ ಉಂಟಾಗುತ್ತಿದ್ದರೆ ಪೊಷಕಾಂಶಗಳ ಮತ್ತು ಶಕ್ತಿಯ ಅವಶ್ಯಕತೆ ಹೆಚ್ಚಿರುತ್ತದೆ.

-ಸ್ತನಪಾನದಿಂದ ಮಕ್ಕಳ ಭವಿಷ್ಯದಲ್ಲಿ ಬೊಜ್ಜಿನ ಸಮಸ್ಯೆ ಮತ್ತು ಮಧುಮೇಹ ಕಾಯಿಲೆ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಅಲ್ಲದೆ ಮಕ್ಕಳ ಬುದ್ದಿಶಕ್ತಿ ವೃದ್ದಿಸಲು ಮತ್ತು ಚಟುವಟಿಕೆಯಿಂದ ಕೂಡಿರಲು ಶಿಶುವಾಗಿದ್ದಾಗ ಎದೆಹಾಲುಣಿಸುವುದು ಅತ್ಯಗತ್ಯ.

- ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್, ಟೈಪ್ II ಮಧುಮೇಹ, ಪ್ರಸವದ ನಂತರದ ಖಿನ್ನತೆಯನ್ನು ದೂರ ಮಾಡುವಲ್ಲಿ ಸ್ತನಪಾನ ಪ್ರಮುಖ ಪಾತ್ರವಹಿಸುತ್ತದೆ.

- ಶಿಶುವಿಗೆ ಹಾಲುಣಿಸುವುದರಿಂದ ತಾಯಿಯ ಹಾರ್ಮೋನುಗಳ ಸಮಸ್ಯೆಯನ್ನು ನೈಸರ್ಗಿಕವಾಗಿ ಹೋಗಲಾಡಿಸಬಹುದು. ಮೊದಲ ಆರು ತಿಂಗಳ ಕಾಲ ಸ್ತನಪಾನ ಮಾಡುವುದರಿಂದ ಶೇ.98 ರಷ್ಟು ಗರ್ಭಧಾರಣೆ ಸಮಸ್ಯೆಗೆ ಪರಿಹಾರ ಕಾಣಬಹುದು.

- ಎಚ್​ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಶಿಶುಗಳಿಗೆ ಆರು ತಿಂಗಳು ಕಾಲ ಹಾಣಿಸಲು ಪ್ರತ್ಯೇಕ ಆಂಟಿರೆಟ್ರೊವೈರಲ್ ಔಷಧಿಗಳು ಸಿಗುತ್ತಿದೆ. ಹೆಚ್​ಐವಿಯ ಅಪಾಯ ಕಡಿಮೆಯಿದ್ದರೆ ವೈದ್ಯರ ಸಲಹೆ ಮೇರೆಗೆ 12 ತಿಂಗಳು ಕಾಲ ಮಗುವಿಗೆ ಹಾಲುಣಿಸಬಹುದು.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...