ಹುಡುಗೀರು ಡೇಟಿಂಗ್ ಹೋಗೋದ್ಯಾಕೆ?; ಅಧ್ಯಯನದಲ್ಲಿ ಬಹಿರಂಗವಾಯ್ತು ಅಚ್ಚರಿಯ ಸಂಗತಿ!

ಇಂದಿನ ಕಾಲದ ಹುಡುಗಿಯರು ತಮ್ಮ ಪ್ರಿಯಕರನನ್ನು ಅರ್ಥಮಾಡಿಕೊಳ್ಳಲು ಅಥವಾ ರೊಮ್ಯಾಂಟಿಕ್ ಆಗಿ ಸಮಯವನ್ನು ಕಳೆಯಲು ಡೇಟಿಂಗ್​ಗೆ ಹೋಗುವುದಿಲ್ಲವಂತೆ. ಹಾಗಾದರೆ ಡೇಟಿಂಗ್ ಮಾಡಲು ಕಾರಣವೇನು? ಇಲ್ಲಿದೆ ಕುತೂಹಲಕಾರಿ ಸಂಗತಿ.

Sushma Chakre | news18
Updated:June 24, 2019, 3:35 PM IST
ಹುಡುಗೀರು ಡೇಟಿಂಗ್ ಹೋಗೋದ್ಯಾಕೆ?; ಅಧ್ಯಯನದಲ್ಲಿ ಬಹಿರಂಗವಾಯ್ತು ಅಚ್ಚರಿಯ ಸಂಗತಿ!
ಸಾಂದರ್ಭಿಕ ಚಿತ್ರ
  • News18
  • Last Updated: June 24, 2019, 3:35 PM IST
  • Share this:
ಮೊದಲೆಲ್ಲ ಹುಡುಗಿಯರಿಗೆ ತಾವು ಇಷ್ಟ ಪಡುವ ಹುಡುಗನಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಕೂಡ ಕಷ್ಟದ ವಿಷಯವಾಗಿತ್ತು. ತಾವೇ ಮುಂದೆಹೋಗಿ ಪ್ರೀತಿಸುತ್ತಿರುವ ವಿಷಯ ಹೇಳಿಕೊಂಡರೆ ಏನಂದುಕೊಳ್ಳುತ್ತಾರೋ ಎಂಬ ಹಿಂಜರಿಕೆಯಿಂದ ಸುಮ್ಮನಾಗಿಬಿಡುತ್ತಿದ್ದರು. ಆದರೀಗ, ಪ್ರೀತಿಯನ್ನು ಹೇಳಿಕೊಳ್ಳುವ ವಿಚಾರದಲ್ಲಿ ಹುಡುಗ-ಹುಡುಗಿ ಎಂಬ ಭೇದವೇನಿಲ್ಲ. ತಮ್ಮ ಮನಸಲ್ಲಿರುವುದನ್ನು ಮುಲಾಜಿಲ್ಲದೆ ಹೇಳಿಕೊಳ್ಳುವ ಮಟ್ಟಿಗೆ ಹುಡುಗಿಯರ ಮನಸ್ಥಿತಿ ಬದಲಾಗಿದೆ.

ತಾವು ಇಷ್ಟಪಡುವವರನ್ನು ಕದ್ದುಮುಚ್ಚಿ ಪ್ರೀತಿ ಮಾಡಿಕೊಂಡಿರಲು ಇದು ಹಳೆಯ ಕಾಲವಲ್ಲ. ಪ್ರೀತಿಯೆಂದ ಮೇಲೆ ಡೇಟಿಂಗ್ ಇದ್ದಿದ್ದೇ. ಆದರೆ, ಡೇಟಿಂಗ್ ಬಗ್ಗೆ ಅಧ್ಯಯನ ನಡೆಸಿರುವ ಸಂಸ್ಥೆಯೊಂದು ಅಚ್ಚರಿಯ ಸಂಗತಿಯನ್ನು ಹೊರಹಾಕಿದೆ. ಇಂದಿನ ಕಾಲದ ಹುಡುಗಿಯರು ತಮ್ಮ ಪ್ರಿಯಕರನನ್ನು ಅರ್ಥಮಾಡಿಕೊಳ್ಳಲು ಅಥವಾ ರೊಮ್ಯಾಂಟಿಕ್ ಆಗಿ ಸಮಯವನ್ನು ಕಳೆಯಲು ಡೇಟಿಂಗ್​ಗೆ ಹೋಗುವುದಿಲ್ಲವಂತೆ. ಹಾಗಾದರೆ ಡೇಟಿಂಗ್ ಮಾಡಲು ಕಾರಣವೇನು? ಇಲ್ಲಿದೆ ಕುತೂಹಲಕಾರಿ ಸಂಗತಿ.

ಎಚ್ಚರ: ನೀವು ಸೇವಿಸುವ ಈ ಆಹಾರಗಳಿಂದ ಕ್ಯಾನ್ಸರ್ ಬರುತ್ತದೆ..!

ಡೇಟಿಂಗ್ ಹೋಗುವ ಇಂದಿನ ಪೀಳಿಗೆಯ ಯುವತಿಯರಲ್ಲಿ 4ರಲ್ಲಿ ಒಬ್ಬರು ಯುವತಿಯರು ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲೆಂದು ಹೋಗುವುದಿಲ್ಲ. ಬಾಯ್​ಫ್ರೆಂಡ್ ಜೊತೆ ಡೇಟಿಂಗ್ ಹೋದರೆ ಖರ್ಚಿಲ್ಲದೆ ಒಳ್ಳೆಯ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಡೇಟಿಂಗ್ ಹೋಗುತ್ತಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಅಧ್ಯಯನ ಹೊರಹಾಕಿದೆ. ಆನ್​ಲೈನ್​ ಮೂಲಕ ಮಾಡಲಾದ ಅಧ್ಯಯನವೊಂದರಲ್ಲಿ ಈ ಮಾಹಿತಿ ಲಭ್ಯವಾಗಿದೆ.

ಆನ್​ಲೈನ್​ ಸಮೀಕ್ಷೆಯಲ್ಲಿಶೇ. 22ರಿಂದ 33ರಷ್ಟು ಯುವತಿಯರು ತಾವು ಉಚಿತ ಊಟಕ್ಕಾಗಿ ಡೇಟಿಂಗ್ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಕ್ಯಾಲಿಫೋರ್ನಿಯ ಮೂಲದ ಅಜುಸಾ ಪೆಸಿಫಿಕ್ ಯುನಿವರ್ಸಿಟಿ ಮತ್ತು ಯುನಿವರ್ಸಿಟಿ ಆಫ್​ ಕ್ಯಾಲಿಫೋರ್ನಿಯ- ಮೆರ್ಸೆಡ್​ ನಡೆಸಿದ ಅಧ್ಯಯನದಲ್ಲಿ ಈ ವಿಷಯ ತಿಳಿದುಬಂದಿದೆ.

ಮೊದಲ ಸಮೀಕ್ಷೆಯಲ್ಲಿ 820 ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. ಆ ಗುಂಪಿನ ಶೇ. 23ರಷ್ಟು ಮಹಿಳೆಯರು ತಾವು ಫುಡ್​ಗಾಗಿಯೇ ಡೇಟಿಂಗ್​ಗೆ ಒಪ್ಪಿಕೊಂಡಿದ್ದಾಗಿ ಒಪ್ಪಿಕೊಂಡರು. ಎರಡನೇ ಸಮೀಕ್ಷೆಯಲ್ಲಿ 357 ಮಹಿಳೆಯರನ್ನು ಒಳಗೊಳ್ಳಲಾಗಿತ್ತು. ಅದರಲ್ಲಿ ಶೇ. 33ರಷ್ಟು ಮಹಿಳೆಯರು ಫುಡ್​ಗಾಗಿ ಡೇಟಿಂಗ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

First published:June 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ