ಕೊಪ್ಪಳ: ಚೀಲ ಹೊತ್ತು ಬೆಟ್ಟವೇರ್ತಿರೋ ಯುವಕ. ಬೆಟ್ಟ ಏರಿ ಪಡೆದ ನೋಡಿ ಆಂಜನೇಯನ ಆಶೀರ್ವಾದ. ಯಲಬುರ್ಗಾದ ತಾಲೂಕಿನ ಹಿರೇಮ್ಯಾಗೇರಿಯ ಯುವಕ ಹನುಮಂತಪ್ಪ ಪೂಜಾರ ಬರೋಬ್ಬರಿ 105 ಕೆಜಿ ತೂಕದ ಈ ಚೀಲ ಏರಿ ಅಂಜನಾದ್ರಿ ಬೆಟ್ಟ (Anjandri Temple) ಏರಿ ಸಾಹಸ ಮೆರೆದರು. ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾರ 105 ಕೆಜಿ ತೂಕದ ಚೀಲ ಹೊತ್ತು 570 ಮೆಟ್ಟಿಲು ಹತ್ತಿದ್ದಾರೆ. ಈ ಮೂಲಕ ಸಾಹಸ ಮೆರೆದಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಹನುಮ ಭಕ್ತರೊಬ್ಬರು 101 ಕೆಜಿಯ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ (Anjanadri Temple) ಸಾಹಸ ಮೆರೆದಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನದಲ್ಲಿ ರಾಮ ನವಮಿಯ ದಿನ (Ram Navami) 46 ವರ್ಷದ ವ್ಯಕ್ತಿ ರಾಯಪ್ಪ ದಪೇದಾರ್ ಎಂಬ ಭಕ್ತರೇ ಈ ಸಾಹಸ ಮೆರೆದಿದ್ದರು.
ವೈರಲ್ ಆಗಿತ್ತು ಹಿಂದಿನ ವಿಡಿಯೋ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ರಾಯಪ್ಪ ಅವರ ಈ ಸಾಹಸ ಇದೀಗ ಭಾರೀ ವೈರಲ್ ಆಗ್ತಿದೆ. 1 ಗಂಟೆ 10 ನಿಮಿಷದಲ್ಲಿ 101 ಕೆಜಿಯ ಜೋಳದ ಚೀಲ ಹೊತ್ತು 575 ಮೆಟ್ಟಿಲು ಏರಿದ್ದಾರೆ ರಾಯಪ್ಪ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ