ಕೊಪ್ಪಳ: ರಸ್ತೆಮೇಲೆ ಆಚೀಚೆ ಓಡುತ್ತಿರೋ ದಷ್ಟಪುಷ್ಟ ಕೋಣ, ಕೋಣವನ್ನು ಹಿಡಿಯೋಕೆ ಬೆನ್ನುಬಿದ್ದಿರೋ ಗ್ರಾಮಸ್ಥರು, ಇವರೆಲ್ಲಾ ಸೇರ್ಕೊಂಡು ಇದೇನ್ ಮಾಡ್ತಿದ್ದಾರೆ ಅಂದ್ಕೊಂಡ್ರಾ? ದೇವರಿಗೆ ಬಿಟ್ಟ ಹರಕೆ ಕೋಣವನ್ನು (Gods Bison) ಹಿಡಿಯೋಕೆ ಇವರು ಶತಪ್ರಯತ್ನ ಮಾಡ್ತಿರೋದು. ಕೊಪ್ಪಳದ (Koppal News) ಹಳೇ ಬಂಡಿಹರ್ಲಾಪುರದ ಗ್ರಾಮದೇವಿ ಕಂಠಿ ದುರ್ಗಮ್ಮಳಿಗೆ ಹರಕೆ ಬಿಟ್ಟ ಕೋಣವನ್ನು ಮಾರಾಟ ಮಾಡಲಾಗಿದೆ. 45,000 ರೂಪಾಯಿಗೆ ದೇವಸ್ಥಾನ ಕಮಿಟಿ ಹರಕೆ ಕೋಣವನ್ನು ಮಾರಾಟ ಮಾಡಿದೆ.
ಇದನ್ನೂ ಓದಿ: Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ
ಬೈದರೆ ಅಟ್ಟಾಡಿಸಿಕೊಂಡು ಬರ್ತಿತ್ತು!
ಅಷ್ಟಕ್ಕೂ ಹರಕೆ ಕೋಣವನ್ನ ಮಾರಾಟ ಮಾಡಿದ್ದಾದ್ರೂ ಯಾಕೆ ಅಂತ ಹುಡುಕ್ತಾ ಹೋದ್ರೆ ವಿಚಿತ್ರವೇ ತೆರೆದುಕೊಳ್ಳುತ್ತೆ! ಈ ಕೋಣಕ್ಕೆ ಯಾರಾದ್ರೂ ಬೈದರೆ ಅಟ್ಟಾಡಿಸಿಕೊಂಡು ಬರ್ತಿತ್ತಂತೆ, ಅವ್ರನ್ನ ಅಟ್ಟಾಡ್ಸಿಕೊಂಡು ಹೋಗ್ತಿತ್ತಂತೆ. ಬೈದವರ ಮನೆ ಮುಂದೆ ಹೋಗಿ ಜಪ್ಪಂತ ನಿಲ್ತಿತ್ತಂತೆ!
ಇದನ್ನೂ ಓದಿ: Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ
ಯಾರಿಗೂ ಅಪಾಯ ಆಗದಿರಲಿ ಎಂದು ಮಾರಾಟ
ಇದ್ರಿಂದ ಗಾಬರಿಯಾದ ಗ್ರಾಮಸ್ಥರು ಕೋಣ ಯಾರಿಗಾದ್ರೂ ಅಪಾಯ ಮಾಡಬಹುದು ಅಂತ ಮಾರಾಟ ಮಾಡಿದ್ದಾರೆ. ಹರಕೆ ಕೋಣವನ್ನ ಮಾರಾಟ ಮಾಡೋದು ತಪ್ಪು ಅನ್ನೋ ಸಂಪ್ರದಾಯವಿದ್ರೂ ಯಾರಿಗೂ ಅಪಾಯ ಆಗದಿರ್ಲಿ ಅಂತ ಮಾರಾಟ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ