ಕೊಪ್ಪಳ: ಕಠಿಣ ಅಭ್ಯಾಸ, ಸತತ ಪರಿಶ್ರಮ ಯಶಸ್ಸಿಗೆ ಮೂಲ ಕಾರಣ ಎಂಬುದನ್ನು ಸಾಧನೆಯ ಹಾದಿಯಲ್ಲಿ ಮುನ್ನುಗುತ್ತಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ದಾಸನಾಳ್ ಎಂಬ ಪುಟ್ಟ ಗ್ರಾಮದಲ್ಲಿ ಸಂಗಮೇಶ್ತೋರಿಸಿಕೊಟ್ಟಿದ್ದಾರೆ. ಅಂದಹಾಗೆ ಇವರನ್ನು ಸುಗ್ರೀವಾ ಎಂದೂ ಸ್ಥಳೀಯರು ಗುರುತಿಸುತ್ತಾರಂತೆ. ಅವರ ಮಾಡಿರುವ ಸಾಧನೆ ಹಾಗೂ ಸಮಾಜ ಸೇವೆಯೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತರ ಕರ್ನಾಟಕದಲ್ಲಿ (Uttara Karnataka) ಯಾವುದೋ ಒಂದು ಪುಟ್ಟ ಹಳ್ಳಿಯಲ್ಲಿ ಎಲೆಮರಿಯ ಕಾಯಿಯಂತೆ ಇರುವವರಿಗೆ ಸಮಾಜದಲ್ಲಿ ತಮಗೆ ಒಂದು ಗೌರವದ ಸ್ಥಾನ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಸಾಮಾಜಿಕ ಕಳಕಳಿ, ಯಾವುದೇ ಲಾಭವನ್ನು ಆಶಿಸದೇ ಮಾಡುವ ಸಮಾಜ ಸೇವೆಗಳೇ (Social Service) ತಮ್ಮ ಗೌರವಕ್ಕೆ ಮೂಲಕ ಕಾರಣ.
ಸಂಗಮೇಶ್ ಅವರು 2010 ರಿಂದಲೇ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಕೊಡಗಿಸಿಕೊಂಡಿದ್ದಾರೆ. ಸಹಾಯ ಹಸ್ತ ಬೇಡುವವರಿಗೆ, ವಿಶೇಷವಾಗಿ ಟಿವಿ ಕಾರ್ಯಕ್ರಮಗಳಲ್ಲಿ ತೋರಿಸುವ ಕಡುಬಡವರಿಗೆ, ರೋಗಿಗಳಿಗೆ ಮತ್ತು ಪ್ರಕೃತಿ ವಿಕೋಪಕ್ಕೆ ತುತ್ತಾದಂತಹ ಫಲಾನುಭವಿಗಳನ್ನು ಸಂಪರ್ಕಿಸಿ ಅವರ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸುತ್ತಾರೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉದಾರವಾಗಿ ಕೊಡುಗೆ ನೀಡುತ್ತಾರೆ.
ನೀರಿನ ಅರವಟ್ಟಿಗೆ ಇಡ್ತಾರೆ!
ಅಲ್ಲದೇ ಸಂಗಮೇಶ್ ಅವರು ದೇಣಿಗೆ ರೂಪದಲ್ಲಿಯು ಸಹಾಯ ಮಾಡುತ್ತಾರೆ. ಇತ್ತೀಚಿಗೆ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ತಾಲೂಕಿನಾದ್ಯಂತ ನೀರಿನ ಅರವಟ್ಟಿಗೆಯನ್ನು ಪ್ರಾರಂಭಿಸಿ ಸಾಮಾನ್ಯರ ನೀರಿನ ದಾಹ ನೀಗಿಸುವಂತಹ ಕೆಲಸಗಳನ್ನು ಅನೇಕ ಮಾಡಿದ್ದಾರೆ.
ಉಚಿತವಾಗಿ ಮದುವೆ ಮಾಡಿಸ್ತಾರೆ!
ಅಲ್ಲದೇ ಕಡುಬಡವರು ಯಾರಾದರೂ ಬಂದು ಮದುವೆಗೆ ಸಹಾಯ ಹಸ್ತ ಚಾಚಿದವರನ್ನು ಎಂದು ಬರಿಗೈಯಲ್ಲಿ ಕಳಿಸದೆ ಅವರ ಮದುವೆಯ ಖರ್ಚು ನೋಡಿಕೊಂಡು ಮಾನವಿಯತೆ ಮೆರೆದ್ದಾರೆ. ಗಂಗಾವತಿಯ ಹಮಾಲರ ಕಾಲೋಮಿ ನಿವಾಸಿಯಾದ ಗೌಸಿಯಾ ಬೇಗಂ ಹಾಗೂ ಖಾಸಿಂ ಭಾನು ಎಂಬುವವರ ವಿವಾಹ ವೆಚ್ಚವನ್ನು ಭರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಅಲ್ಲದೇ, ನಿತ್ಯ ಇವರ ಬಳಿ ಸಮಸ್ಯೆ ಎಂದು ಬರುವವರ ಸಮಸ್ಯೆ ನೀಗಿಸುತ್ತಾ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆಗಳ ಉಳಿಸಿ ಬೆಳೆಸಿ ಅಭಿಯಾನ
ಕನ್ನಡ ಶಾಲೆಗಳಿಗೆ ಮಕ್ಕಳು ರೀತಿಯಲ್ಲಿ ಬರಬೇಕು ಹಾಗೂ ಕನ್ನಡ ಶಾಲೆಗಳನ್ನು ಬೆಳಸಬೇಕು ಎನ್ನುವ ನಿಟ್ಟಿನಲ್ಲಿ ತಾಲೂಕಿನ ಅನೇಕ ಸರ್ಕಾರಿ ಶಾಲೆಗಳ ಗೋಡೆಗೆ ಬಣ್ಣ ಹಚುವುದು, ಮಕ್ಕಳನ್ನು ಆಕರ್ಷಿಸುವ ಅಂದದ ಚಿತ್ರಗಳನ್ನು ಬಿಡಿಸುವುದು ಹೀಗೆ ಹಲವು ಕಾರ್ಯಗಳನ್ನು ಮಾಡಿ ತಮ್ಮ ಸೇವಾ ಕಾರ್ಯವನ್ನು ಮೆರೆದಿದ್ದಾರೆ.
ಸಮಾಜ ಸೇವೆಗೆ ಪ್ರಮುಖ ಕಾರಣ
ತಾವು ತೀರಿ ಬಡ ಕುಟುಂಬದಿಂದ ಬಂದವರು ಹಾಗಾಗಿ ಕಷ್ಟ ಎಂದರೇನು ಎಂಬುದು ಅವರಿಗೆ ಚೆನ್ನಾಗಿಯೇ ಅರಿವಿದೆ. ಅವರ ಶಾಲಾ ಕಾಲೇಜು ಹಂತದಲ್ಲಿ ಒಂದು ಹೊತ್ತಿನ ಊಟ ಮಾಡಬೇಕು ಎಂದರೂ ಅದಕ್ಕಿರುವ ಕಷ್ಟ ಎಷ್ಟಿತ್ತು ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಹಾಗಾಗಿ ನಮ್ಮಂತೆ ಸಾಕಷ್ಟು ಜನರು ಅನೇಕ ತೊಂದರೆಯಲ್ಲಿ ಇದ್ದೇ ಇರುತ್ತಾರೆ. ಅವರ ಕಷ್ಟಕ್ಕೆ ನಮ್ಮಿಂದಾದ ಸಹಾಯ ಮಾಡಬೇಕು ಎಂದುಕೊಂಡು ಅವರು 2010 ರಿಂದ ಸಮಾಜ ಸೆವೆಯಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: ಹಗಲುವೇಷಧಾರಿಗಳೇ, ನೀವೆಲ್ಲಿ ಹೋದಿರಿ? 71 ವರ್ಷದ ಕಲಾವಿದರ ಕಥೆ ಕೇಳಿ
ಪ್ರಶಸ್ತಿ ಮತ್ತು ಸನ್ಮಾನ:
ಇಂತಹ ಅನೇಕ ಸಾಮಾಜಿಕ ಸೇವೆಯನ್ನು ಮನಗಂಡು ಅನೇಕ ಸಂಘ, ಸಂಸ್ಥೆಗಳು ಇವರನ್ನು ಕರೆದು ಸನ್ಮಾನಿಸಿವೆ. ಅನೇಕ ರೀತಿಯ ಕಟ್ಟಡ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಮುಂದೆ ತಮ್ಮದೇ ಆದ ವಿಎಸ್ಆರ್ ಬಿಲ್ಡ್ರ್ಸ್ ಎಂಬ ಸಂಸ್ಥೆ ಹುಟ್ಟುಹಾಕಿ ಅನೇಕ ಕಟ್ಟಡ ನಿರ್ಮಾಣ ಮಾಡಿದ್ದಾರೆ.
ನೆಮ್ಮದಿ ಸಿಗುತ್ತೆ!
"ಸಮಾಜಸೇವೆಯನ್ನು ಮಾಡಿದರೆ ನನಗೆ ನೆಮ್ಮದಿ ಸಿಗುತ್ತದೆ. ಯಾವುದೋ ಪ್ರಚಾರದ ಗೀಳಿಗೆ ನಾನು ಸಮಾಜ ಸೇವೆ ಮಾಡುತ್ತಿಲ್ಲ. ಯಾರಾದರು ಕಷ್ಟ ಎಂದು ಬಂದರೆ ಅವರಲ್ಲಿ ನನ್ನ ಬಾಲ್ಯದ ಜೀವನ ನೆನಪಾಗುತ್ತದೆ ಹಾಗಾಗಿ ನಾನು ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವೆ ಅಂತಾರೆ" ಸಂಗಮೇಶ್.
ಸಂಗಮೇಶ್ ಅವರ ಸಂಪರ್ಕ ಸಂಖ್ಯೆ: +918453640428
ಇದನ್ನೂ ಓದಿ: Inspiration Story: ಕೊರೊನಾ ಇರಲಿ, ಏನೇ ಬರಲಿ; ನಾನು ಗೆದ್ದೇ ಗೆಲ್ಲುವೆ! ಓದಿ ಕೊಪ್ಪಳದ ಯುವಕನ ರೋಚಕ ಕಥೆ
ಸಂಗಮೇಶ್ರವರು ಮನೆಯಿಲ್ಲದ ನಮಗೆ ಮನೆ ಕಟ್ಟಿಸಿಕೊಡುತ್ತಿದ್ದಾರೆ. ನಮ್ಮಂತ ಅನೇಕ ಜನರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ನೂರುಕಾಲ ದೇವರು ಅವರಿಗೆ ಚೆನ್ನಾಗಿಟ್ಟಿರಲಿ ಎಂದು ಅವರನ್ನು ಹರಿಸುತ್ತೇವೆ ಎಂದು ಹೊನ್ನಮ್ಮ ಎಂಬ ಆನೇಗುಂದಜ ಗ್ರಾಮಸ್ಥೆಯಾದ ಫಲಾನುಭವಿಯೋರ್ವರು ತಿಳಿಸಿದರು.
ವರದಿ: ರಾಘವೇಂದ್ರ ಜಂಗ್ಲಿ, ಕೊಪ್ಪಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ