Koppal Summer: ಎಷ್ಟು ಹಣ ಕೊಟ್ರು ಸಿಗ್ತಿಲ್ಲ ಎಳನೀರು, ಮನೆಯಿಂದ ಆಚೆ ಬರುವುದೇ ಕಷ್ಟ

ಎಳನೀರು (ಸಾಂದರ್ಭಿಕ ಚಿತ್ರ)

ಎಳನೀರು (ಸಾಂದರ್ಭಿಕ ಚಿತ್ರ)

ಕಳೆದ ಮೂರು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ 42.5 ರಿಂದ 43 ಡಿಗ್ರಿ ಸೆಲ್ಸಿಯಸ್​ವರೆಗೂ ತಾಪಮಾನ ದಾಖಲಾಗಿದೆ.

  • News18 Kannada
  • 5-MIN READ
  • Last Updated :
  • Koppal, India
  • Share this:

ಕೊಪ್ಪಳ: ಕಳೆದ ನಾಲ್ಕೈದು ವರ್ಷಕ್ಕೆ ಹೊಲಿಸಿದರೆ ಈ ಭಾರಿ ಅತ್ಯಧಿಕ ತಾಪಮಾನವಿದೆ. ಬಿಸಿಲು ನಾಡು ಕೊಪ್ಪಳವು (Koppal Summer) ಈ ನಿಗಿನಿಗಿ ಕೆಂಡವಾಗಿದೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಆಗದಷ್ಟು ಬಿಸಿಲಿನ ಝಳವಿದೆ. ಈ ಸಂದರ್ಭದಲ್ಲಿ ಜನ ತಂಪು ಪಾನೀಯಕ್ಕೆ (Cold Drinks In Summer) ಮೊರೆ ಹೋಗಿದ್ದಾರೆ. ಈ ಮಧ್ಯೆ ಬೇಸಿಗೆಯ ಕಾಲದಲ್ಲಿ ಕೊಪ್ಪಳದಲ್ಲಿ ಎಳನೀರು (Tender Coconut) ಮಾರಾಟ ಸ್ಥಗಿತಗೊಂಡಿದೆ. ಎಳನೀರಿಗಾಗಿ ಜನ ಪರದಾಡುವಂತಾಗಿದೆ.


ಕೊಪ್ಪಳ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ 37-28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ 42.5 ರಿಂದ 43 ಡಿಗ್ರಿ ಸೆಲ್ಸಿಯಸ್​ವರೆಗೂ ತಾಪಮಾನ ದಾಖಲಾಗಿದೆ.


ಮನೆಯಿಂದ ಹೊರಗೆ ಬರೋಕೆ ಹೆದರಿಕೆ
ಮುಂಜಾನೆಯಿಂದ ಬಿಸಿಲಿನ ಝಳಕ್ಕೆ ಜನ ತತ್ತರಿಸಿದ್ದಾರೆ. ಬಹಳಷ್ಟು ಜನ ಮಧ್ಯಾಹ್ನದ ವೇಳೆ ಮನೆಯಿಂದ ಹೊರ ಬರುತ್ತಿಲ್ಲ. ಇನ್ನೂ ಹೊರಬಂದವರು ತಂಪು ಪಾನೀಯಗಳ ಸೇವನೆ ಮಾಡಿ ಬಿಸಿಲಿನ ಸಂದರ್ಭದಲ್ಲಿ ತಂಪು ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ಬಿಸಿಲಿನ ಝಳಕ್ಕೆ ವೃದ್ದರು ಹಾಗು ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿದೆ.


ಎಳನೀರಿಗಾಗಿ ಪರದಾಟ
ಕೊಪ್ಪಳದಲ್ಲಿ ಈಗ ಅಧಿಕ ವ್ಯಾಪಾರವಾಗುತ್ತಿರುವುದು ತಂಪು ಪಾನೀಯಗಳು. ಆದರೆ ಕಳೆದ ಮೂರು ದಿನಗಳಿಂದ ಕೊಪ್ಪಳ ನಗರದಲ್ಲಿ ಎಳನೀರು ಸಿಗುತ್ತಿಲ್ಲ. ಆರೋಗ್ಯಕ್ಕಾಗಿ ಎಳನೀರು ಕುಡಿಯಲು ಇಚ್ಚಿಸುವವರು ಎಳನೀರಿಗಾಗಿ ಪರದಾಡುವಂತಾಗಿದೆ.


ಇದನ್ನೂ ಓದಿ: Koppal News: ಇಡೀ ಊರಿನ ಸುತ್ತ ಹಾಲೆರೆದ ಗ್ರಾಮಸ್ಥರು! ಅನ್ನ ನೀಡುವ ತಾಯಿಗೆ ವಿಶಿಷ್ಟ ಪೂಜೆ


ಕೊಪ್ಪಳ ನಗರದಲ್ಲಿ ಬೇಸಿಗೆಯ ಕಾಲದಲ್ಲಿ ಸರಿ ಸುಮಾರು 4-5 ಲಾರಿಗಳಲ್ಲಿ ಸಾವಿರಾರು ಎಳನೀರು ಮಾರಾಟವಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ನಗರದ ಎಳನೀರು ಮಾರಾಟ ಅಂಗಡಿಗಳು ಬಂದ್ ಆಗಿವೆ. ಕಾರಣ ಕೇಳಿದರೆ ಮದ್ದೂರು,  ದಾವಣಗೆರೆಯಿಂದ ಬರುತ್ತಿದ್ದ ಎಳನೀರು ಬರುತ್ತಿಲ್ಲ. ಅಲ್ಲದೇ ಈ ಊರುಗಳಲ್ಲು ದುಬಾರಿಯಾಗಿದೆ. ಇದರಿಂದಾಗಿ ಎಳನೀರುಗಳನ್ನು ಖರೀದಿಸಿ ಮಾರಾಟ ಮಾಡುವದನ್ನು ಸ್ಥಗಿತಗೊಳಿಸಲಾಗಿದೆ ಎಂದು ಎಳನೀರು ವ್ಯಾಪಾರಿ ಹೇಳಿದ್ದಾರೆ.




ಇದನ್ನೂ ಓದಿ: Amavasya In Koppal: ನರೇಗಾ ಕಾರ್ಮಿಕರ ಅಮವಾಸ್ಯೆ, ಮಣ್ಣಿನ ಈಶ್ವರ ಲಿಂಗ ತಯಾರಿಸಿ ಪೂಜೆ


ಮೇ ತಿಂಗಳಲ್ಲಿ ದಾಖಲೆಯ ಬಿಸಿಲಿನ ತಾಪಮಾನ ದಾಖಲಾಗಿದೆ. ಇನ್ನೂ ನಾಲ್ಕೈದು ದಿನ ಬಿಸಿಲು ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆಯು ಸೂಚಿಸಿದೆ. ಇದರಿಂದಾಗಿ ಬಿಸಿಲು ನಾಡಿನ ಜನ ಕೆಂಡದಂಥ ಬಿಸಿಲಿಗೆ ತತ್ತರಿಸಿ ಮುಂದೆ ಹೇಗೆ ಎಂಬ ಆತಂಕದಲ್ಲಿದ್ದಾರೆ.


ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕೊಪ್ಪಳ

top videos
    First published: