• Home
 • »
 • News
 • »
 • koppala
 • »
 • Koppal: ದರ್ಗಾ ಮೌಲ್ವಿಯಿಂದ ದೇವಿಗೆ ನಮನ, ಬೃಹತ್ ಹಾರ ಹಾಕಿ ಪೂಜೆ

Koppal: ದರ್ಗಾ ಮೌಲ್ವಿಯಿಂದ ದೇವಿಗೆ ನಮನ, ಬೃಹತ್ ಹಾರ ಹಾಕಿ ಪೂಜೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನೂರಾರು ಮುಸ್ಲಿಂ ಬಾಂಧವರು ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಕರ್ನೂಲಸಾಬ ದರ್ಗಾದ ಮೌಲ್ವಿಯಿಂದ ದೇವಿಗೆ ನಮನ ಸಲ್ಲಿಸಲಾಯಿತು.

 • Share this:

  ಕೊಪ್ಪಳ: ರಾಜ್ಯದಲ್ಲಿ ನಡೆಯುತ್ತಿರೋ ಧರ್ಮ ದಂಗಲ್ ಮಧ್ಯೆ ದೇವಿ ಜಾತ್ರೆಯೊಂದು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಹೌದು, ಕೆಲವೆಡೆ ಧರ್ಮದ ವಿಚಾರದಲ್ಲಿ ಸಂಘರ್ಷ ಏರ್ಪಡುತ್ತಿದೆ. ಆದ್ರೆ ಇಲ್ಲಿ ನಾವೆಲ್ಲಾ ಒಂದೆ ತಾಯಿಯ ಮಕ್ಕಳು ಎಂದು ಸಾರಲು ಹಿಂದೂ-ಮುಸ್ಲಿಂ ಧರ್ಮದವರು ಸೇರಿ ತಾಯಿ ದೇವಿಯ ಜಾತ್ರೆ ಮಾಡಿದ್ದಾರೆ. ಕೊಪ್ಪಳದ (Koppal News) ಗಂಗಾವತಿ ನಗರದ ಶ್ರೀದುರ್ಗಾದೇವಿ ಜಾತ್ರೆ (Shri Durga Devi Jatra) ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಮುಸ್ಲಿಂ ಧರ್ಮೀಯರು ದೇವಿ ಜಾತ್ರೆಯಲ್ಲಿ (Communal Harmony) ದೇವಿಗೆ ಬೃಹತ್ ಹಾರ ಸಮರ್ಪಿಸಿದರು.


  ದರ್ಗಾದ ಮೌಲ್ವಿಯಿಂದ ದೇವಿಗೆ ನಮನ
  ಜಾತ್ರೆಯ ಪ್ರಯುಕ್ತ ಕೊಪ್ಪಳದ ಕರ್ನೂಲಸಾಬ ದರ್ಗಾದಿಂದ ದುರ್ಗಾದೇವಿ ದೇವಸ್ಥಾನದವರೆಗೂ ಮೆರವಣಿಗೆ ನಡೆಯಿತು. ನೂರಾರು ಮುಸ್ಲಿಂ ಬಾಂಧವರು ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಕರ್ನೂಲಸಾಬ ದರ್ಗಾದ ಮೌಲ್ವಿಯಿಂದ ದೇವಿಗೆ ನಮನ ಸಲ್ಲಿಸಲಾಯಿತು.


  ಇದನ್ನೂ ಓದಿ: King Cobra Viral Video: ಮನೆಗೇ ಬಂದ ಭಯಂಕರ ಕಾಳಿಂಗ! ಇಲ್ಲಿದೆ ನೋಡಿ ವಿಡಿಯೋ


  ಐದು ವರ್ಷಕ್ಕೊಮ್ಮೆ ನಡೆಯುತ್ತೆ ಜಾತ್ರೆ
  ಐದು ವರ್ಷಕ್ಕೊಮ್ಮೆ ನಡೆಯುವ ಈ ದುರ್ಗಾದೇವಿ ಜಾತ್ರೆಗೆ ಪ್ರತಿವರ್ಷ ಸಂಪ್ರದಾಯದಂತೆ ದರ್ಗಾಗಳಿಂದ ಹೂವು ಹಾರ, ಕಾಯಿ ಕಳುಹಿಸಲಾಗುತ್ತೆ. ದರ್ಗಾಗಳಲ್ಲಿ ನಡೆಯುವ ಉರುಸುಗಳ ಸಂದರ್ಭದಲ್ಲಿ ದೇವಸ್ಥಾನದಿಂದ ಚಾದರ ಕಳುಹಿಸುವ ಸಂಪ್ರದಾಯವೂ ಇಲ್ಲಿದೆ.


  ಇದನ್ನೂ ಓದಿ: Uttara Kannada: ಈ ಜಾತ್ರೆಯಲ್ಲಿ ರಂಗೋಲಿಯೇ ಆಕರ್ಷಣೆ! ಕಾಂತಾರ, ಗಂಧದಗುಡಿ ವೈಭವ ನೋಡಿ


  ಕೊಪ್ಪಳದ ಗಂಗಾವತಿ ನಗರದ ಶ್ರೀದುರ್ಗಾದೇವಿ ಜಾತ್ರೆಲ್ಲಿ ಹಿಂದೂ ಮುಸ್ಲಿಂ ಧರ್ಮೀಯರು ಒಟ್ಟಾಗಿ ಭಾಗವಹಿಸಿ ಕೋಮು ಸಾಮರಸ್ಯ ಸಾರಿದರು.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು