ಶಿಕ್ಷಕರೋರ್ವರು ಕೋತಿಗೆ (Monkey Viral Video) ಊಟ ಮಾಡಿಸಿದ ಅಪರೂಪದ ಘಟನೆಯೊಂದು ಕೊಪ್ಪಳ ತಾಲೂಕಿನ (Koppal News) ಜಬ್ಬಲಗುಡ್ಡದಲ್ಲಿ ನಡೆದಿದೆ. ಜಬ್ಬಲಗುಡ್ಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಇಬ್ರಾಹಿಂ ಅವರೇ ಕೋತಿಗೆ ಊಟ ಮಾಡಿಸಿದವರು. ಹೌದು, ಶಾಲೆಯಲ್ಲಿ ಮಕ್ಕಳ ಜೊತೆಗೂಡಿ ಬಿಸಿಯೂಟ (Mid Day Meal) ಮಾಡುತ್ತಿರುವಾಗ ಸ್ವಲ್ಪ ದೂರದಲ್ಲಿ ಕೋತಿಯೊಂದು ಕುಳಿತು ನೋಡುತ್ತಿತ್ತು. ಆದರೆ ಇನ್ನೂ ಮುಂದುವರೆದು ಶಿಕ್ಷಕರ ಕೈಯಿಂದ ಕೋತಿ ಬಿಸಿಯೂಟ ಉಂಡ ಘಟನೆಯೊಂದು ಇದೀಗ ವೈರಲ್ (Koppal Viral Video) ಆಗುತ್ತಿದೆ.
ಮಕ್ಕಳು ತುತ್ತು ಅನ್ನ ಹಾಕಿದಾಗ ತಿಂದ ಕೋತಿ
ಮಕ್ಕಳು ಮಂಗಕ್ಕೆ ಒಂದು ತುತ್ತು ಅನ್ನ ಹಾಕಿದ್ದಾರೆ. ಆಗ ಕೋತಿ ಆ ಅನ್ನವನ್ನು ಸೇವಿಸಿದೆ. ಅಲ್ಲದೇ ಸ್ವಲ್ಪ ಹತ್ತಿರಕ್ಕೂ ಬಂದಿದೆ. ಇದನ್ನು ಕಂಡ ಶಿಕ್ಷಕ ಇಬ್ರಾಹಿಂ ಅವರು ಅನ್ನ ಸಾಂಬಾರು ಕಲೆಸಿ ಮಂಗಕ್ಕೆ ಉಣಬಡಿಸಿದ್ದಾರೆ. ಇಬ್ರಾಹಿಂ ಅವರ ಹತ್ತಿರದಲ್ಲೇ ಕುಳಿತು ಕೋತಿ ಅನ್ನವನ್ನು ಉಂಡಿದೆ.
ಇದನ್ನೂ ಓದಿ: Ghante Ganapati: ಈ ಗಣಪತಿಗೆ ಘಂಟೆ ಅಂದ್ರೆ ಇಷ್ಟ! ಹಸಿರು ಕಾಡಿನ ನಡುವೆ ಸಿದ್ಧಿ ವಿನಾಯಕನ ತಾಣ
ಧೈರ್ಯ ಮಾಡಿದ ಶಿಕ್ಷಕ
ಧೈರ್ಯ ಮಾಡಿ ಊಟ ಮಾಡಿಸೋಕೆ ಹೋದಾಗ ಮಂಗ ಊಟ ಮಾಡಿತು. ಅದರ ಪಾಡಿಗೆ ಅದು ಊಟ ಮಾಡಿ ವಾಪಸ್ ಹೋಗಿದೆ ಎಂದು ನ್ಯೂಸ್ 18 ಕನ್ನಡ ಡಿಜಿಟಲ್ಗೆ ಪ್ರಭಾರಿ ಮುಖ್ಯ ಶಿಕ್ಷಕ ಇಬ್ರಾಹಿಂ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Udupi: ಹೋರಾಟಕ್ಕೆ ಸಜ್ಜಾಗ್ತಿದ್ದಾರೆ ಸಮುದ್ರದ ಮಕ್ಕಳು! ಉಡುಪಿ ಮೀನುಗಾರರ ಜೀವಕ್ಕೆ ಬೇಕಿದೆ ರಕ್ಷಣೆ
ಸದ್ಯ ಈ ಶಿಕ್ಷಕರು ಕೋತಿಗೆ ಶಾಲೆಯ ಬಿಸಿಊಟ ಮಾಡಿಸುವ ವಿಡಿಯೋ ಭಾರೀ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ